
ಇವತ್ತು ಮಾರ್ಚ್ 18, ಅಂತರರಾಷ್ಟ್ರೀಯ ಮಹಿಳೆಯರ ದಿನ (International Women’s Day). ಕೇಂದ್ರ ಸರ್ಕಾರ ಮಹಿಳೆಯರ ಅಭ್ಯುದಯ ದೃಷ್ಟಿಯಲ್ಲಿಟ್ಟುಕೊಂಡು ಹಲವು ಯೋಜನೆಗಳನ್ನು ಹಾಕಿದೆ. ಮಹಿಳೆಯರಿಗೆಂದೇ ಸೀಮಿತವಾದ ಸುಕನ್ಯಾ ಸಮೃದ್ದಿ ಯೋಜನೆಯಂತಹ ಸ್ಕೀಮ್ಗಳಿವೆ. ಹಾಗೆಯೇ, ಸರ್ವರಿಗೂ ಅನ್ವಯವಾಗುವಂತೆ ಸರ್ಕಾರ ರೂಪಿಸಿದ ಕೆಲ ಉತ್ತಮ ಹಣಕಾಸು ಯೋಜನೆಗಳೂ ಕೂಡ ಮಹಿಳೆಯರಿಗೆ ವರದಾನವಾಗಿವೆ. ಅಸಂಘಟಿತ ವಲಯದಲ್ಲಿರುವ ಮಹಿಳೆಯರಿಗೆ ಬಹಳ ಉಪಯುಕ್ತವಾಗಿರುವ ಮೂರು ಪ್ರಮುಖ ಹಣಕಾಸು ಯೋಜನೆಗಳ ವಿವರ ಇಲ್ಲಿದೆ.
ಹತ್ತು ವರ್ಷದ ಹಿಂದೆ ಆರಂಭವಾದ ಪಿಎಂ ಮುದ್ರಾ ಯೋಜನೆಯಲ್ಲಿ (PM Mudra Scheme) ಸಣ್ಣ ಉದ್ದಿಮೆಗಳಿಗೆ ಅಡಮಾನ ರಹಿತವಾದ ಸಾಲ ಕೊಡಲಾಗುತ್ತದೆ. 20 ಲಕ್ಷ ರೂವರೆಗೂ ಸಾಲ ಸಿಗುತ್ತದೆ. ಈ ರೀತಿ ಮುದ್ರಾ ಸಾಲ ಖಾತೆಗಳನ್ನು ಹೊಂದಿರುವ ಉದ್ದಿಮೆದಾರರಲ್ಲಿ ಮಹಿಳೆಯರೇ ಹೆಚ್ಚು. ಲಕ್ಷಾಂತರ ಮಹಿಳೆಯರು ಈ ಯೋಜನೆಯ ಲಾಭ ಪಡೆದು ಸ್ವಂತ ಉದ್ಯೋಗ ಮತ್ತು ಉದ್ದಿಮೆ ಆರಂಭಿಸಿರುವುದುಂಟು.
ಇದನ್ನೂ ಓದಿ: ಪಿಎಂ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತಿಂಗಳಿಗೆ 1,000 ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ರಿಟರ್ನ್? ಇಲ್ಲಿದೆ ಲೆಕ್ಕಾಚಾರ
2014ರಲ್ಲಿ ಶುರುವಾದ ಪಿಎಂ ಜನ್ ಧನ್ ಯೋಜನೆಯು (PM Jan Dhan Yojana)ಪ್ರತಿಯೊಬ್ಬ ವ್ಯಕ್ತಿಯನ್ನೂ ಬ್ಯಾಂಕಿಂಗ್ ವ್ಯವಸ್ಥೆಯ ಒಳಗೆ ತರುವ ಬೃಹದ್ ಉದ್ದೇಶ ಹೊಂದಿದೆ. ಸರ್ಕಾರದ ಸ್ಕೀಮ್ಗಳ ಲಾಭವು ಬ್ಯಾಂಕ್ ಖಾತೆ ಮೂಲಕ ನೇರವಾಗಿ ಫಲಾನುಭವಿಗೆ ದೊರಕಲು ಇದರಿಂದ ಸಹಾಯವಾಗುತ್ತದೆ. ಹಾಗೆಯೇ, ಹಣದ ಉಳಿತಾಯ ಇತ್ಯಾದಿಗೂ ಬ್ಯಾಂಕ್ ಖಾತೆ ನೆರವಾಗುತ್ತದೆ. ಹೀಗಾಗಿ, ಸರ್ಕಾರ ಜನ್ ಧನ್ ಖಾತೆಗಳನ್ನು ಆರಂಭಿಸಿತು. ಇದರಲ್ಲಿ 32 ಕೋಟಿಗೂ ಅಧಿಕ ಮಹಿಳೆಯರು ಜನ್ ಧನ್ ಅಕೌಂಟ್ ಹೊಂದಿದ್ದಾರೆ.
ಪಿಎಂ ಸ್ವನಿಧಿ (PM SVANidhi scheme) ಎಂದರೆ ಬೀದಿಬದಿ ಅಂಗಡಿಗಳ ಆತ್ಮನಿರ್ಭರ್ ನಿಧಿ. 2020ರಲ್ಲಿ ಆರಂಭವಾದ ಈ ಸ್ಕೀಮ್ನಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಅಡಮಾನರಹಿತವಾದ ಸಾಲ ನೀಡಲಾಗುತ್ತದೆ. 50,000 ರೂವರೆಗೂ ಸಾಲ ಪಡೆಯಲು ಅವಕಾಶ ಇರುತ್ತದೆ. ಬಡ್ಡಿಯಲ್ಲೂ ರಿಯಾಯಿತಿ ಇರುತ್ತದೆ. ಈ ಯೋಜನೆಯ ಹೆಚ್ಚಿನ ಫಲಾನುಭವಿಗಳು ಮಹಿಳೆಯರೇ ಆಗಿದ್ದಾರೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ