ಆದಾಯ ತೆರಿಗೆ ರಿಟರ್ನ್ (Income Tax Return) ಸಲ್ಲಿಕೆ ಮಾಡಲು ಇನ್ನೊಂದೇ ದಿನ ಬಾಕಿ ಇದೆ. ಅನಗತ್ಯವಾಗಿ ದಂಡ ಕಟ್ಟುವುದನ್ನು ತಪ್ಪಿಸಲು ಜುಲೈ 31ರೊಳಗೆ ಐಟಿಆರ್ ಫೈಲ್ ಮಾಡಿ. ವಿವಿಧ ಫಾರ್ಮ್ಗಳಿದ್ದು, ರಿಟರ್ನ್ ಫೈಲಿಂಗ್ ಪ್ರಕ್ರಿಯೆ ಗೋಜಲಾಗಿರಬಹುದು ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಆದಾಯ ತೆರಿಗೆ ಇಲಾಖೆ ರೂಪಿಸಿರುವ ಹೊಸ ಪೋರ್ಟಲ್ನಲ್ಲಿ ಈಗ ತೆರಿಗೆ ಪಾವತಿ ಮತ್ತು ಐಟಿಆರ್ ಸಲ್ಲಿಕೆ ಸುಗಮವಾಗಿ ಆಗುತ್ತದೆ. ಹಿಂದೆ ಇದ್ದ ಇನ್ಕಮ್ ಟ್ಯಾಕ್ಸ್ ಇಫೈಲಿಂಗ್ ಪೋರ್ಟಲ್ನಲ್ಲಿ ಸಾಕಷ್ಟು ಮಾರ್ಪಾಡು ಮಾಡಲಾಗಿದ್ದು, ಅದೀಗ ಹೆಚ್ಚು ಬಳಕೆದಾರ ಸ್ನೇಹಿ (User Friendly) ಎನಿಸಿದೆ. ತೆರಿಗೆಪಾವತಿದಾರರಿಗೆ ನೆರವು, ಪ್ರಶ್ನೋತ್ತರಗಳು, ಬಳಕೆದಾರ ಕೈಪಿಡಿ (User Manual), ಚ್ಯಾಟ್ಬೋಟ್ ಇತ್ಯಾದಿ ಹೊಸ ಫೀಚರ್ಗಳನ್ನು ಸೇರಿಸಲಾಗಿದೆ. ಲೈವ್ ಎಜೆಂಟ್ ಸೇವೆಯೂ ಇದರಲ್ಲಿದೆ. ಪೋರ್ಟಲ್ನ ಮೊಬೈಲ್ ಅವತರಣಿಕೆಯೂ ಬಹುತೇಕ ಈ ಎಲ್ಲಾ ಫೀಚರ್ಗಳನ್ನು ಒಳಗೊಂಡಿದೆ.
ಇನ್ಕಮ್ ಟ್ಯಾಕ್ಸ್ ಇಫೈಲಿಂಗ್ ಪೋರ್ಟಲ್ನಲ್ಲಿ ನೊಂದಾಯಿಸಿಕೊಳ್ಳುವುದರಿಂದ ಹಿಡಿದು ತೆರಿಗೆ ರಿಟರ್ನ್ ಸಲ್ಲಿಕೆಯವರೆಗೂ ಕ್ರಮಗಳು ಬಹುತೇಕ ಸರಳವಾಗಿವೆ. ಯಾವುದೇ ಅನುಮಾನ ಇದ್ದರೂ ಸಮಾಧಾನ ಕೊಡಬಲ್ಲ ಚ್ಯಾಟ್ಬೋಟ್, ಎಫ್ಎಕ್ಯೂ ಇತ್ಯಾದಿ ಫೀಚರ್ಗಳಿವೆ.
ಇದನ್ನೂ ಓದಿ: AIS: ನಿಮ್ಮ ಆದಾಯ, ತೆರಿಗೆಗಳ ಪೂರ್ಣ ವಿವರ ಎಐಎಸ್ನಲ್ಲಿ; ಐಟಿಆರ್ ಸಲ್ಲಿಸುವ ಮುನ್ನ ಒಮ್ಮೆ ಕಣ್ಣಾಡಿಸಿ
ನೀವು ಪೋರ್ಟಲ್ನಲ್ಲಿ ನೊಂದಾವಣಿ ಮಾಡಿದ ಬಳಿಕ ಲಾಗಿನ್ ಆಗಬೇಕು. ಇಲ್ಲಿ ಪ್ಯಾನ್ ಸಂಖ್ಯೆಯೇ ನಿಮ್ಮ ಯೂಸರ್ ಐಡಿ ಆಗಿರುತ್ತದೆ. ಪಾಸ್ವರ್ಡ್ ಸೆಟ್ ಮಾಡಿ, ಲಾಗಿನ್ ಆಗಿ.
ನೀವು ಇನ್ಕಮ್ ಟ್ಯಾಕ್ಸ್ ಪೋರ್ಟಲ್ಗೆ ಲಾಗಿನ್ ಆದ ಬಳಿಕ ಇ-ಫೈಲ್ ಮೆನುಗೆ ಹೋಗಿ ಅಲ್ಲಿ ಡ್ರಾಪ್ ಡೌನ್ ಮೆನುನಲ್ಲಿರುವ ‘ಇನ್ಕಮ್ ಟ್ಯಾಕ್ಸ್ ರಿಟರ್ನ್’ ಅನ್ನು ಕ್ಲಿಕ್ ಮಾಡಿ. ತೆರಿಗೆ ಸಂಬಂಧಿತ ನಿಮ್ಮ ಚಟುವಟಿಕೆಗಳನ್ನು ಡ್ಯಾಶ್ಬೋರ್ಡ್ನಲ್ಲಿ ನೋಡಬಹುದು.
ಬಹುತೇಕ ಎಲ್ಲಾ ಪ್ರಕ್ರಿಯೆಗಳೂ ಸರಳವಾಗಿವೆ. ಆದರೆ, ತೆರಿಗೆ ವಿವರ ದಾಖಲಿಸುವಾಗ ಎಚ್ಚರ ಇರಲಿ. ಅದರಲ್ಲೂ ಹೊಸ ಆಸ್ತಿಪಾಸ್ತಿ ಖರೀದಿ ಮಾಡಿದ್ದರೆ, ದಿಢೀರ್ ಹೆಚ್ಚುವರಿ ಆದಾಯ ಸಿಕ್ಕಿದ್ದರೆ, ಇಂಥ ಸಂದರ್ಭಗಳಲ್ಲಿ ನಿಮಗೆ ಗೊಂದಲಗಳಿದ್ದರೆ ಸಿಎ ಇತ್ಯಾದಿ ಅಧಿಕೃತ ತೆರಿಗೆ ವೃತ್ತಿಪರರನ್ನು ಸಂಪರ್ಕಿಸಿ ಸಹಾಯ ಪಡೆದುಕೊಳ್ಳುವುದು ಉತ್ತಮ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ