AIS: ನಿಮ್ಮ ಆದಾಯ, ತೆರಿಗೆಗಳ ಪೂರ್ಣ ವಿವರ ಎಐಎಸ್​ನಲ್ಲಿ; ಐಟಿಆರ್ ಸಲ್ಲಿಸುವ ಮುನ್ನ ಒಮ್ಮೆ ಕಣ್ಣಾಡಿಸಿ

Annual Information Statement: ಪ್ಯಾನ್ ಕಾರ್ಡ್ ಜೋಡಿತವಾದ ಎಲ್ಲಾ ಬ್ಯಾಂಕುಗಳಲ್ಲಿ ನೀವು ನಡೆಸುವ ಎಲ್ಲಾ ವಹಿವಾಟುಗಳೂ ದಾಖಲಾಗುತ್ತಿರುತ್ತವೆ. ಠೇವಣಿಗೆ ಸಿಗುವ ಬಡ್ಡಿಯೂ ದಾಖಲಾಗುತ್ತವೆ. ಇವೆಲ್ಲವನ್ನೂ ನೀವು ಫಾರ್ಮ್26ಎಎಸ್ ಮತ್ತು ಎಐಎಸ್​ನಲ್ಲಿ ನೋಡಬಹುದು.

AIS: ನಿಮ್ಮ ಆದಾಯ, ತೆರಿಗೆಗಳ ಪೂರ್ಣ ವಿವರ ಎಐಎಸ್​ನಲ್ಲಿ; ಐಟಿಆರ್ ಸಲ್ಲಿಸುವ ಮುನ್ನ ಒಮ್ಮೆ ಕಣ್ಣಾಡಿಸಿ
ಇನ್ಕಮ್ ಟ್ಯಾಕ್ಸ್
Follow us
|

Updated on: Jul 28, 2023 | 10:51 AM

ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಲು ಮೂರೇ ದಿನ ಬಾಕಿ ಇದೆ. ಇನ್ನೂ ಬಹಳ ಮಂದಿ ಐಟಿಆರ್ ಸಲ್ಲಿಸುವುದು ಬಾಕಿ ಇದೆ. ನೀವು ಇನ್ನೂ ರಿಟರ್ನ್ ಫೈಲ್ ಮಾಡದೇ ಇದ್ದರೆ ಸಾಧ್ಯವಾದಷ್ಟೂ ಬೇಗ ಮಾಡಿ. ಆಗಸ್ಟ್ 1ರಿಂದ ಅನಗತ್ಯವಾಗಿ ದಂಡ ಕಟ್ಟಬೇಕಾಗಬಹುದು. ಐಟಿಆರ್ ಸಲ್ಲಿಸುವ ಪ್ರಕ್ರಿಯೆ ತುಸು ಸರಳವೇ ಇದೆ. ನೀವು ರಿಟರ್ನ್ ಸಲ್ಲಿಸುವ ಮುನ್ನ ಫಾರ್ಮ್ 26ಎಎಸ್ ಮತ್ತು ಎಐಎಸ್ ಅನ್ನು ಖಂಡಿತವಾಗಿ ಪರಿಶೀಲಿಸಿ. ಇದರಿಂದ ರಿಟರ್ನ್ ಫೈಲ್ ಮಾಡುವಾಗ ಯಾವ ಮಾಹಿತಿ ಕೈಬಿಟ್ಟುಹೋಗುವುದನ್ನು ತಡೆಯಬಹುದು. ಐಟಿಆರ್ ಸಲ್ಲಿಸಲು ಮಾತ್ರವಲ್ಲ, ಯಾವುದೇ ಸಂದರ್ಭದಲ್ಲೂ ತೆರಿಗೆ ಪಾವತಿದಾರನಿಗೆ ಈ ಎಐಎಸ್ ಎಂಬುದು ಟ್ಯಾಕ್ಸ್ ಟ್ರ್ಯಾಕಿಂಗ್ ಸಾಧನ ಇದ್ದಂತೆ. ಈಗ ಎಐಎಸ್ ಅಥವಾ ಆ್ಯನುಯಲ್ ಇನ್ಫಾರ್ಮೇಶನ್ ಸ್ಟೇಟ್ಮೆಂಟ್​ನ ಮೊಬೈಲ್ ಆ್ಯಪ್ ಕೂಡ ಲಭ್ಯ ಇದೆ. ನೀವು ಯಾವಾಗ ಬೇಕಾದರೂ ನಿಮ್ಮ ಆದಾಯ ಮತ್ತು ತೆರಿಗೆ ಬಾಧ್ಯತೆಗಳನ್ನು ಗಮನಿಸುತ್ತಿರಬಹುದು. ಅಗತ್ಯಬಿದ್ದಲ್ಲಿ ನಿರ್ದಿಷ್ಟ ತೆರಿಗೆ ವಿಚಾರದಲ್ಲಿ ನಿಮ್ಮ ಆದಾಯದ ಬಗ್ಗೆ ಸ್ಪಷ್ಟೀಕರಣ ಕೊಡಲೂ ಬಹುದು.

ಏನಿದು ವಾರ್ಷಿಕ ಮಾಹಿತಿ ವರದಿ (ಎಐಎಸ್)

ಇನ್ಕಮ್ ಟ್ಯಾಕ್ಸ್ ಪೋರ್ಟಲ್​ನಲ್ಲಿ ಇರುವ ಫಾರ್ಮ್ 26ಎಎಸ್​ನ ಮುಂದುವರಿದ ಭಾಗವಾಗಿ ಎಐಎಸ್ ಇದೆ. ಫಾರ್ಮ್ 26ಎಎಸ್​ನಲ್ಲಿ ನಿಮ್ಮ ಎಲ್ಲಾ ಆದಾಯ ಮತ್ತು ಹೂಡಿಕೆಗಳ ಮಾಹಿತಿ ಇರುತ್ತದೆ. ಒಂದು ಹಣಕಾಸು ವರ್ಷದ ಅವಧಿಯಲ್ಲಿ ಆಸ್ತಿ ಖರೀದಿ, ದೊಡ್ಡ ಮೊತ್ತದ ಹೂಡಿಕೆ, ಟಿಡಿಎಸ್ ಅಥವಾ ಟಿಸಿಎಸ್ ವಹಿವಾಟು ಇತ್ಯಾದಿ ವಿವರಗಳನ್ನು 26ಎಎಸ್ ಫಾರ್ಮ್​ನಲ್ಲಿ ನೋಡಬಹುದು.

ಇನ್ನು, ಎಐಎಸ್​ನಲ್ಲಿ ನಿಮ್ಮ ಎಸ್​ಬಿ ಖಾತೆಯಲ್ಲಿರುವ ಹಣಕ್ಕೆ ಸಿಕ್ಕಿರುವ ಬಡ್ಡಿ, ಡಿವಿಡೆಂಡ್, ಬಾಡಿಗೆ ಆದಾಯ, ಠೇವಣಿ ಮೇಲಿನ ಬಡ್ಡಿ, ಜಿಎಸ್​ಟಿ ಟರ್ನೋವರ್, ಆಸ್ತಿಗಳ ಖರೀದಿ ಮತ್ತು ಮಾರಾಟ, ವಿದೇಶಕ್ಕೆ ಕಳುಹಿಸಿದ ಹಣ ಇತ್ಯಾದಿ ವಿವರ ಲಭ್ಯ ಇರುತ್ತದೆ.

ಇದನ್ನೂ ಓದಿ: ITR: ಐಟಿಆರ್ ಫೈಲ್ ಮಾಡುತ್ತಿದ್ದೀರಾ? ಈ ಕೊನೆಯ ಹಂತ ಮರೆಯದಿರಿ; ಇವೆರಿಫಿಕೇಶನ್ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ರೀಫಂಡ್ ಸಿಗಲ್ಲ

ಎಐಎಸ್ ಹೇಗೆ ನೋಡುವುದು?

  • ಇನ್ಕಮ್ ಟ್ಯಾಕ್ಸ್ ಪೋರ್ಟಲ್​ಗೆ ಲಾಗಿನ್ ಆಗಿ: www.incometax.gov.in
  • ಲಾಗಿನ್ ಆದ ಬಳಿಕ ಡ್ಯಾಷ್​ಬೋರ್ಡ್​ನ ಮೆನುನಲ್ಲಿರುವ ಆನುವಲ್ ಇನ್ಫಾರ್ಮೇಶನ್ ಸ್ಟೇಟ್ಮೆಂಟ್ (ಎಐಎಸ್) ಅನ್ನು ಕ್ಲಿಕ್ ಮಾಡಿ, ಬಳಿಕ ಪ್ರೊಸೀಡ್ ಕ್ಲಿಕ್ ಮಾಡಿ.
  • ನಿಮಗೆ ಎಐಎಸ್ ಪೋರ್ಟಲ್​ಗೆ ಕೊಂಡೊಯ್ಯಲಾಗುತ್ತದೆ.
  • ಅಥವಾ ಇನ್ಕಮ್ ಟ್ಯಾಕ್ಸ್ ವೆಬ್​ಸೈಟ್​ನಲ್ಲಿ ಇ-ಫೈಲ್ ಮೆನು ಕ್ಲಿಕ್ ಮಾಡಿ
  • ಇನ್ಕಮ್ ಟ್ಯಾಕ್ಸ್ ರಿಟರ್ನ್ > ವೀವ್ ಎಐಎಸ್ ಅನ್ನು ಕ್ಲಿಕ್ ಮಾಡಿ
  • ನಂತರ ಪ್ರೊಸೀಡ್ ಕ್ಲಿಕ್ ಮಾಡಿ. ಈಗ ಎಐಎಸ್ ಪೋರ್ಟಲ್ ತೆರೆದುಕೊಳ್ಳುತ್ತದೆ.

ಈ ಪೋರ್ಟಲ್​ನಲ್ಲಿ ಆ್ಯನುಯಲ್ ಇನ್ಫಾರ್ಮೇಶನ್ ಸ್ಟೇಟ್ಮೆಂಟ್ ಅನ್ನು ವೀಕ್ಷಿಸಬಹುದು. ಟ್ಯಾಕ್ಸ್​ಪೇಯರ್ ಇನ್ಫಾರ್ಮೇಶನ್ ಸಮ್ಮರಿ (ಟಿಐಎಸ್) ಅನ್ನೂ ವೀಕ್ಷಿಸಬಹುದು.

ಇದನ್ನೂ ಓದಿ: IT Return: ಒಂದಿಷ್ಟು ತೆರಿಗೆ ಉಳಿಸಲು ಆದಾಯ ಕಡಿಮೆ ತೋರಿಸದಿರಿ; ಜೈಲಿಗೆ ಹೋಗಬೇಕಾದೀತು ಜೋಕೆ..!

ಎಐಎಸ್ ಮೊಬೈಲ್ ಆ್ಯಪ್ ಕೂಡ ಲಭ್ಯ

ಇದೇ ಮಾರ್ಚ್ ತಿಂಗಳಲ್ಲಿ ಎಐಎಸ್​ನ ಮೊಬೈಲ್ ಆ್ಯಪ್ ಅನ್ನೂ ಬಿಡುಗಡೆ ಮಾಡಲಾಗಿತ್ತು. ಪೋರ್ಟಲ್​ನಲ್ಲಿರುವ ಎಐಎಸ್​ನಲ್ಲಿ ಲಭ್ಯ ಇರುವ ಹೆಚ್ಚಿನ ಮಾಹಿತಿ ಮೊಬೈಲ್ ಅ್ಯಪ್​ನಲ್ಲೂ ಇರುತ್ತದೆ. ಗೂಗಲ್ ಪ್ಲೇಸ್ಟೋರ್ ಅಥವಾ ಆ್ಯಪ್ ಸ್ಟೋರ್​ನಿಂದ ಉಚಿತವಾಗಿ ಎಐಎಸ್ ಅ್ಯಪ್ ಅನ್ನು ಡೌನ್​ಲೋಡ್ ಮಾಡಿಕೊಳ್ಳಬಹುದು.

ಅ್ಯಪ್ ತೆರೆದು, ನಿಮ್ಮ ಪ್ಯಾನ್ ನಂಬರ್ ನೀಡಿ ನೊಂದಾಯಿಸಿಕೊಳ್ಳಬಹುದು. ಇದಕ್ಕೆ ನೀವು ಇಫೈಲಿಂಗ್ ಪೋರ್ಟಲ್​ನಲ್ಲಿ ಮೊಬೈಲ್ ನಂಬರ್ ಮತ್ತು ಇಮೇಲ್ ನೊಂದಾಯಿಸಿರಬೇಕು. ಎಐಎಸ್ ಆ್ಯಪ್​ನಲ್ಲಿ ಸೈನ್ ಅಪ್ ಆಗುವಾಗ ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ಮತ್ತು ಇಮೇಲ್​ಗೆ ಒಟಿಪಿ ಬರುತ್ತದೆ. ಅದನ್ನು ಬಳಸಿ ಆ್ಯಪ್​ಗೆ ಸೈನಪ್ ಅಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್