ನವದೆಹಲಿ, ಮೇ 15: ಇಪಿಎಫ್ಒ ಸಂಸ್ಥೆ ತನ್ನ ಇಪಿಎಫ್ ಸದಸ್ಯರ ಅನುಕೂಲಕ್ಕಾಗಿ ಆಟೊ ಮೋಡ್ ಸೆಟಲ್ಮೆಂಟ್ ಸೌಲಭ್ಯವನ್ನು (Auto-mode Settlement facility) ಕೆಲ ವರ್ಷಗಳ ಹಿಂದೆ ಪರಿಚಯಿಸಿತ್ತು. ಇದರಲ್ಲಿ ಸುಲಭವಾಗಿ ಇಪಿಎಫ್ ಖಾತೆಯಿಂದ ಮುಂಗಡ ಹಣವನ್ನು ಹಿಂಪಡೆಯಬಹುದಾಗಿದೆ. 1952ರ ಇಪಿಎಫ್ ಸ್ಕೀಮ್ನ 68ಜೆ, 68ಕೆ ಮತ್ತು 68ಬಿ ಪ್ಯಾರಾ ಅಡಿಯಲ್ಲಿ ಸಲ್ಲಿಸಲಾಗುವ ಕ್ಲೇಮ್ಗಳನ್ನು ಸ್ವಯಂಚಾಲಿತವಾಗಿ ಸೆಟಲ್ ಮಾಡಲಾಗುತ್ತದೆ. ಅಂದರೆ ಇಪಿಎಫ್ಒನ ಅಧಿಕಾರಿಗಳ ಅನುಮೋದನೆಯ ಅಗತ್ಯ ಇರುವುದಿಲ್ಲ. ಎಲ್ಲವೂ ಯಾಂತ್ರಿಕವಾಗಿ ಪ್ರಕ್ರಿಯೆ ಮುಕ್ತಾಯವಾಗುತ್ತದೆ. ಈಗ ಇಂತಹ ಆಟೊ ಸೆಟಲ್ಮೆಂಟ್ ಸೌಲಭ್ಯದಲ್ಲಿ ಹಿಂಪಡೆಯಲಾಗುವ ಹಣದ ಮಿತಿಯನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. ಇಪಿಎಫ್ ಹಣಕ್ಕಾಗಿ ಸಲ್ಲಿಸಲಾದ ಕ್ಲೈಮ್ಗಳಲ್ಲಿ ಹೆಚ್ಚಿನವು ತಿರಸ್ಕೃತಗೊಳ್ಳುತ್ತಿವೆ ಎಂಬಂತಹ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಗಮನ ಸೆಳೆದಿದೆ.
ಇದನ್ನೂ ಓದಿ: ಇಪಿಎಫ್ಒ ಹೊಸ ಆದೇಶ: ವೈದ್ಯಕೀಯ ಚಿಕಿತ್ಸೆಗೆ 1 ಲಕ್ಷ ರೂವರೆಗೆ ಪಿಎಫ್ ಹಣ ಪಡೆಯುವ ಅವಕಾಶ
1952ರ ಇಪಿಎಫ್ ಸ್ಕೀಮ್ನ ಮೇಲಿನ ಮೂರು ಪ್ಯಾರಾಗಳಾದ 68ಬಿ, 68ಜೆ ಮತ್ತು 68ಕೆ ಅಡಿಯಲ್ಲಿ ಸಲ್ಲಿಸಲಾಗುವ ಕ್ಲೇಮ್ಗಳನ್ನು ಆಟೊ ಸೆಟ್ಲ್ ಮಾಡಲಾಗುತ್ತದೆ. ಈವರೆಗೆ ಇದಕ್ಕೆ 50,000 ರೂ ಮಿತಿ ಇತ್ತು. ಈಗ ಅದನ್ನು ಒಂದು ಲಕ್ಷ ರುಪಾಯಿಗೆ ಹೆಚ್ಚಿಸಲಾಗಿದೆ. ಅಂದರೆ ಒಂದು ಲಕ್ಷ ರೂವರೆಗಿನ ಹಣಕ್ಕೆ ಕ್ಲೇಮ್ ಮಾಡಿದರೆ ಅದು ಅಧಿಕಾರಿಯ ಮಧ್ಯಪ್ರವೇಶ ಇಲ್ಲದೇ ಯಾಂತ್ರಿಕವಾಗಿ ಸೆಟ್ಲ್ ಆಗುತ್ತದೆ.
ಪ್ಯಾರಾ 68ಕೆ ಪ್ರಕಾರ ಮದುವೆ ಎಂದರೆ ಇಪಿಎಫ್ ಸದಸ್ಯರ ಮದುವೆಯೇ ಎಂದಲ್ಲ, ಕುಟುಂಬದಲ್ಲಿ ಮಕ್ಕಳು, ಸಹೋದರ, ಸಹೋದರಿಯವರ ಮದುವೆ ನಡೆಯುವುದಿದ್ದರೆ ಅದಕ್ಕೂ ಪಿಎಫ್ ಹಣ ಹಿಂಪಡೆಯಲು ಸಾಧ್ಯ.
ಇದನ್ನೂ ಓದಿ: ಇಪಿಎಫ್ ಖಾತೆ ವಿಲೀನಗೊಳಿಸಬಹುದು, ಆದರೆ ಎರಡು ಯುಎಎನ್ ಸಂಖ್ಯೆ ಸೇರಿಸಲು ಸಾಧ್ಯವಾ? ಇಲ್ಲಿದೆ ಕ್ರಮ
ಗಮನಿಸಬೇಕಾದ ಸಂಗತಿ ಎಂದರೆ, ಈ ಮೇಲಿನ ಕಾರಣಗಳಿಗೆ ನೀವು ಪಿಎಫ್ ಹಣ ಕ್ಲೇಮ್ ಮಾಡುವುದಿದ್ದರೆ ಸಂಬಂಧಿತ ದೃಢೀಕರಣ ದಾಖಲೆಗಳನ್ನು ಕೊಡಬೇಕಾಗುತ್ತದೆ. ಉದಾಹರಣೆಗೆ, ಉನ್ನತ ಶಿಕ್ಷಣಕ್ಕೆ ಹಣ ಪಡೆಯುವುದಿದ್ದರೆ ಶಿಕ್ಷಣ ಸಂಸ್ಥೆಯಿಂದ ಕೋರ್ಸ್ನ ಅಂದಾಜು ವೆಚ್ಚದ ಪ್ರಮಾಣಪತ್ರ ಪಡೆದು ಅದರ ಫೋಟೋಕಾಪಿಯನ್ನು ಅಪ್ಲೋಡ್ ಮಾಡಬೇಕಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ