ನಿವೃತ್ತ ಸರ್ಕಾರಿ ನೌಕರರಿಗೆ ಸಿಗುವ ಪಿಂಚಣಿ ಮುಂದುವರಿಯಬೇಕಾದರೆ ಪ್ರತೀ ವರ್ಷವೂ ಜೀವಂತ ಇರುವುದಾಗಿ (life certificate) ಖಾತ್ರಿಪಡಿಸಬೇಕು. ಲೈಫ್ ಸರ್ಟಿಫಿಕೇಟ್ (Jeevan Pramaanpatra) ಪ್ರತೀ ವರ್ಷವೂ ಸಲ್ಲಿಸಬೇಕು. ಇಲ್ಲದಿದ್ದರೆ ಪಿಂಚಣಿ ನಿಂತುಹೋಗುತ್ತದೆ. ಪ್ರತೀ ವರ್ಷದ ನವೆಂಬರ್ನಲ್ಲಿ ಲೈಫ್ ಸರ್ಟಿಫಿಕೇಟ್ ಸಲ್ಲಿಸುವ ಅವಕಾಶ ಕೊಡಲಾಗುತ್ತದೆ. ನವೆಂಬರ್ 30ರವರೆಗೂ ಗಡುವು ಇದೆ. 60ರಿಂದ 80 ವರ್ಷ ವಯಸ್ಸಿನ ಹಿರಿಯ ನಾಗರಿಕರಿಗೆ ನವೆಂಬರ್ 1ರಿಂದ 30ರವರೆಗೂ ಅವಕಾಶ ಇದೆ. 80 ವರ್ಷ ಮೇಲ್ಪಟ್ಟ ವಯಸ್ಸಿನ ಸೂಪರ್ ಸೀನಿಯರ್ಗಳಿಗೆ ಅಕ್ಟೋಬರ್ 1ರಿಂದಲೇ ಅವಕಾಶ ನೀಡಲಾಗಿದೆ.
ಪಿಂಚಣಿದಾರ ಜೀವಂತವಾಗಿರುವುದನ್ನು ಖಾತ್ರಿಪಡಿಸಲು ಅವರು ಪಿಂಚಣಿ ವಿತರಣೆ ಅಧಿಕಾರಿಯ ಮುಂದೆ ಹಾಜರಾಗಬೇಕು. ಪ್ರಮಾಣಪತ್ರವನ್ನು ಬ್ಯಾಂಕ್, ಅಂಚೆ ಕಚೇರಿ ಇತ್ಯಾದಿ ನಿಗದಿತ ಪೆನ್ಷನ್ ವಿತರಣೆ ಕಚೇರಿಗೆ ಹೋಗಬೇಕಾಗುತ್ತದೆ. ನಿವೃತ್ತರಾದ ವ್ಯಕ್ತಿಗಳಿಗೆ ಈ ಪ್ರಕ್ರಿಯೆ ತ್ರಾಸ ತರಬಹುದು. ಅದರಲ್ಲೂ 80 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಹೊರಗೆ ಹೋಗಿ ಸರದಿಯಲ್ಲಿ ನಿಂತು ಲೈಫ್ ಸರ್ಟಿಫಿಕೇಟ್ ಸಲ್ಲಿಸುವುದು ನಿಜಕ್ಕೂ ಕಿರಿಕಿರಿಯ ಕೆಲಸ.
ಇದನ್ನು ತಪ್ಪಿಸಲು ಸರ್ಕಾರ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸೌಲಭ್ಯ ಜಾರಿಗೆ ತಂದಿದೆ. ಕಚೇರಿಗೆ ಹೋಗದೇ ಮನೆಯಲ್ಲೇ ಕೂತು ಲೈಫ್ ಸರ್ಟಿಫಿಕೇಟ್ ಸಲ್ಲಿಸಬಹುದು.
ಇದನ್ನೂ ಓದಿ: ಬ್ಯಾಂಕ್ ಸಾಲ ಸಿಗುತ್ತಿಲ್ಲವಾ? ಪರ್ಸನಲ್ ಲೋನ್ಗಿಂತಲೂ ಕಡಿಮೆ ದರಕ್ಕೆ ನಿಮಗೆ ಸುಲಭವಾಗಿ ಸಿಗುತ್ತದೆ ಈ ಸಾಲ
ಈ ಪ್ರಕ್ರಿಯೆಗಳಾದ ಬಳಿಕ, ಜೀವನ್ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡುವ ಲಿಂಕ್ ಸಮೇತ ಎಸ್ಸೆಮ್ಮೆಸ್ ನಿಮ್ಮ ಮೊಬೈಲ್ ನಂಬರ್ಗೆ ಬರುತ್ತದೆ.
ಕೇಂದ್ರ ಸರ್ಕಾರ ನವೆಂಬರ್ 1ರಿಂದ ದೇಶದ 10 ನಗರಗಳಲ್ಲಿನ 500 ಸ್ಥಳಗಳಲ್ಲಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಕ್ಯಾಂಪ್ಗಳನ್ನು ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಎಸ್ಬಿಐ ಮತ್ತು ಕೆನರಾ ಬ್ಯಾಂಕ್ ನೇತೃತ್ವದಲ್ಲಿ ಈ ಶಿಬಿರಗಳು ನಡೆಯುತ್ತಿವೆ.
ಎಸ್ಬಿಐನಿಂದ ಬೆಂಗಳೂರಿನ ಇಸ್ರೋ, ಯಲಹಂಕ ನ್ಯೂ ಟೌನ್, ಏರ್ ಫೋರ್ಸ್ ಸ್ಟೇಶನ್ ಯಲಹಂಕ, ಹೆಸರಘಟ್ಟ ಇಲ್ಲಿ ಡಿಎಲ್ಸಿ ಕ್ಯಾಂಪ್ಗಳಿವೆ.
ಇನ್ನು, ಕೆನರಾ ಬ್ಯಾಂಕ್ ವಿಜಯನಗರ, ಬಸವೇಶ್ವರನಗರ, ಹನುಮಂತನಗರ, ಮಲ್ಲೇಶ್ವರ, ರಾಜಾಜಿನಗರ 2ನೇ ಬ್ಲಾಕ್ ಪ್ರದೇಶಗಳಲ್ಲಿ ಕ್ಯಾಂಪ್ ಹಾಕಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ