ಮುಂದಿನ ವರ್ಷ 5,000 ರೂ ಡಾಲರ್​ಗೆ ಏರಲಿದೆ ಚಿನ್ನದ ಬೆಲೆ; ಭಾರತದಲ್ಲಿ ಎಷ್ಟು ಹೆಚ್ಚಬಹುದು ಇದರ ಬೆಲೆ?

Gold rate prediction for 2026: ಚಿನ್ನದ ಬೆಲೆ ಈ ವರ್ಷ (2025) ಶೇ. 54ರಷ್ಟು ಹೆಚ್ಚಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಅದು ಕಂಡ ದಾಖಲೆ ಏರಿಕೆ. ಈ ವರ್ಷ ಚಿನ್ನದ ಬೆಲೆ ಔನ್ಸ್​ಗೆ 4,000 ಡಾಲರ್ ಗಡಿ ದಾಟಿದೆ. 2026ರಲ್ಲಿ ಅದು 5,000 ಡಾಲರ್ ಮುಟ್ಟಬಹುದು. ಭಾರತದಲ್ಲಿ ಚಿನ್ನದ ಬೆಲೆ ಇನ್ನೊಂದು ವರ್ಷದೊಳಗೆ 3,000 ರೂ ಆದರೂ ಏರಬಹುದು ಎಂದು ನಿರೀಕ್ಷಿಸಲಾಗಿದೆ.

ಮುಂದಿನ ವರ್ಷ 5,000 ರೂ ಡಾಲರ್​ಗೆ ಏರಲಿದೆ ಚಿನ್ನದ ಬೆಲೆ; ಭಾರತದಲ್ಲಿ ಎಷ್ಟು ಹೆಚ್ಚಬಹುದು ಇದರ ಬೆಲೆ?
ಚಿನ್ನ

Updated on: Nov 25, 2025 | 2:46 PM

ನವದೆಹಲಿ, ನವೆಂಬರ್ 25: ಚಿನ್ನದ ಬೆಲೆ (gold rate) ಕಳೆದ ಒಂದು ಮತ್ತು ಎರಡು ವರ್ಷಗಳಿಂದ ಸಹಜಕ್ಕಿಂತ ಹೆಚ್ಚು ಏರಿದೆ. ಅದರಲ್ಲೂ ಒಂದು ವರ್ಷದಲ್ಲಿ ಅರ್ಧದಷ್ಟು ಬೆಲೆ ಹೆಚ್ಚಳ ಆಗಿದೆ. ಕಳೆದ ಎರಡು ವಾರಗಳಿಂದ ಹೊಯ್ದಾಡುತ್ತಿದ್ದ ಸ್ವರ್ಣ ಬೆಲೆ ಮತ್ತೆ ಏರಿಕೆಯ ಹಾದಿಗೆ ಬಂದಂತಿದೆ. ಅಮೆರಿಕದ ಫೆಡರಲ್ ರಿಸರ್ವ್ ಈ ಬಾರಿಯ ಸಭೆಯಲ್ಲಿ ಬಡ್ಡಿದರ ಕಡಿತಗೊಳಿಸುವ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಮತ್ತೊಮ್ಮೆ ಚಿನ್ನದ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಹಳದಿ ಲೋಹದ ಬೆಲೆ ಏರುವ ಸಾಧ್ಯತೆ ದಟ್ಟವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಔನ್ಸ್​ಗೆ 4,175 ಡಾಲರ್ ಇದೆ. ಈ ವರ್ಷ ಸ್ವರ್ಣವು ಮೊತ್ತಮೊದಲ ಬಾರಿಗೆ 4,000 ಡಾಲರ್ ಗಡಿ ದಾಟಿತು. ಮುಂದಿನ ವರ್ಷ (2026) ಇದರ ಬೆಲೆ 5,000 ಡಾಲರ್ ಮೈಲಿಗಲ್ಲು ಮುಟ್ಟುವ ಸಾಧ್ಯತೆ ಇದೆ ಎಂದು ಪರಿಣಿತರು ಅಭಿಪ್ರಾಯಪಡುತ್ತಿದ್ದಾರೆ.

ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಹೆಚ್ಚಳ; ಇಲ್ಲಿದೆ ಪಟ್ಟಿ

2025ರಲ್ಲಿ ಚಿನ್ನದ ಬೆಲೆ ಶೇ. 54ರಷ್ಟು ಹೆಚ್ಚಿದೆ. ಕಳೆದ ಹಲವು ವರ್ಷಗಳನ್ನು ಅವಲೋಕಿಸಿದರೆ, ಒಂದು ವರ್ಷದಲ್ಲಿ ಚಿನ್ನದ ಬೆಲೆ ಕಂಡ ಗರಿಷ್ಠ ಹೆಚ್ಚಳ ಇದು. ಬ್ಯಾಂಕ್ ಆಫ್ ಅಮೆರಿಕದ (ಬಿಒಎಫ್​ಎ) ಪ್ರಕಾರ 2026ರಲ್ಲೂ ಚಿನ್ನದ ಬೆಲೆಯ ಈ ಏರಿಕೆ ಓಟ ಮುಂದುವರಿಯಬಹುದು. ಮುಂದಿನ ವರ್ಷದ ಚಿನ್ನದ ಸರಾಸರಿ ಬೆಲೆ ಔನ್ಸ್​ಗೆ 4,538 ಡಾಲರ್ ಆಗಬಹುದು.

ಅಮೆರಿಕ ಸರ್ಕಾರದ ಸಾಲ ಮತ್ತು ಹಣದುಬ್ಬರ ಹೆಚ್ಚಿನ ಮಟ್ಟದಲ್ಲೇ ಇರುವುದು, ಹಾಗೂ ಬಡ್ಡಿದರ ಕಡಿಮೆಗೊಳ್ಳುವುದು ಇತ್ಯಾದಿ ಅಂಶಗಳು ಚಿನ್ನಕ್ಕೆ ಹೆಚ್ಚಿನ ಬೇಡಿಕೆ ತಂದುಕೊಡಬಹುದು.

ಇದನ್ನೂ ಓದಿ: ವಿಶ್ವದ ಪ್ರಬಲ ಉದ್ಯಮಿ ಲಕ್ಷ್ಮಿ ಮಿಟ್ಟಲ್ ದೇಶ ಬಿಟ್ಟು ಹೋಗುವಂತೆ ಮಾಡಿದ ಬ್ರಿಟನ್​ನ ಹೊಸ ಟ್ಯಾಕ್ಸ್ ನಿಯಮಗಳೇನು?

ಭಾರತದಲ್ಲಿ ಎಷ್ಟಾಗಬಹುದು ಚಿನ್ನದ ಬೆಲೆ

ತಜ್ಞರ ಪ್ರಕಾರ 2026ರಲ್ಲಿ ಚಿನ್ನದ ಬೆಲೆ 1 ಔನ್ಸ್​ಗೆ 5,000 ಡಾಲರ್ ಮುಟ್ಟಬಹುದು. ಒಂದು ಔನ್ಸ್​ಗೆ 28.35 ಗ್ರಾಮ್ ಆಗುತ್ತದೆ. ಈ ಲೆಕ್ಕಾಚಾರದಲ್ಲಿ ಒಂದು ಗ್ರಾಮ್ ಚಿನ್ನದ ಬೆಲೆ 2026ರಲ್ಲಿ ಸುಲಭವಾಗಿ 15,000-16,0000 ರೂ ಶ್ರೇಣಿಯಲ್ಲಿ ಇರಬಹದು. ಸದ್ಯ ಭಾರತದಲ್ಲಿ ಚಿನ್ನದ ಬೆಲೆ 12,700 ರೂ ಇದೆ. ಇನ್ನೊಂದು ವರ್ಷದಲ್ಲಿ ಬೆಲೆ ಗ್ರಾಮ್​ಗೆ 3,000 ರೂನಷ್ಟಾದರೂ ಏರಬಹುದು. 10 ಗ್ರಾಮ್ ಒಡವೆ ಮಾಡಿಸಲು ಮುಂದಿನ ವರ್ಷದ 30,000 ರೂ ಹೆಚ್ಚಿಗೆ ಕೊಡಬೇಕಾಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ