ಕೇವಲ 30,000 ರೂ ಸಂಬಳವಾ? 2 ಕೋಟಿ ರೂ ಹಣ ಮಾಡಲು ಈ ಟ್ರಿಕ್ಸ್ ಬಳಸಿ

Know the tricks to build Rs 2 corpus with as low as Rs 30,000 salary: ಕಡಿಮೆ ಸಂಬಳದಲ್ಲಿ ಹೆಚ್ಚು ಹಣ ಕೂಡಿಡುವುದು ಮೊದಲಿಗೆ ಅಸಾಧ್ಯದ ಮಾತೆನಿಸಬಹುದು. ಆದರೆ, ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ಸ್ವಲ್ಪ ಶಿಸ್ತು ತೋರಿದರೆ ಹಣ ಒಲಿಯುತ್ತದೆ. ವೆಚ್ಚ ಕಡಿಮೆ ಮಾಡಿ ಹೆಚ್ಚು ಹಣ ಉಳಿಸುವುದು ಪರಿಣಾಮಕಾರಿಯಾಗಿರುವ ಮಾರ್ಗ.

ಕೇವಲ 30,000 ರೂ ಸಂಬಳವಾ? 2 ಕೋಟಿ ರೂ ಹಣ ಮಾಡಲು ಈ ಟ್ರಿಕ್ಸ್ ಬಳಸಿ
ಹಣ

Updated on: Sep 15, 2025 | 7:25 PM

ದೊಡ್ಡ ಮೊತ್ತದ ಹಣ ಕೂಡಿಡಲು (Investment) ದೊಡ್ಡ ಸಂಬಳವೇ ಆಗಬೇಕೆಂದಿಲ್ಲ. ಹೆಚ್ಚೆಚ್ಚು ಹಣ ಸಂಪಾದನೆ ಅಗತ್ಯ. ಆದರೆ, ಹಣ ಉಳಿಸುವುದು ಕೂಡ ಹಣ ಗಳಿಕೆಗೆ ಸಮ. ಎರಡು ಕೋಟಿ ರೂ ಕಾರ್ಪಸ್ ಸೃಷ್ಟಿಸಲು ನಿಮಗೆ ಒಂದು ಲಕ್ಷ ರೂ ಸಂಬಳವೇ ಆಗಬೇಕೆಂದಿಲ್ಲ. 50,000 ರೂ ಸಂಬಳ ಇದ್ದರೂ ಕೋಟ್ಯಾಧೀಶ್ವರ ಆಗಬಹುದು. ಕೇವಲ 30,000 ರೂ ಸಂಬಳ ಹೊಂದಿದವರೂ ಕೂಡ ಸ್ವಲ್ಪ ಶಿಸ್ತು ತೋರಿದರೆ ಒಳ್ಳೆಯ ಕಾರ್ಪಸ್ ಸೃಷ್ಟಿಸಲು ಸಾಧ್ಯ.

30,000 ರೂ ಸಂಪಾದನೆಯಿಂದ 2 ಕೋಟಿ ರೂ ಗಳಿಸುವುದು ಹೇಗೆ?

ನಿಮಗೆ ಈಗ 30,000 ರೂ ಸಂಬಳ ಬರುತ್ತಿದ್ದರೆ, ಅದರಲ್ಲಿ 5,000 ರೂ ಹಣವನ್ನು ಉಳಿಸಿರಿ. ಈ ಹಣವನ್ನು ಮ್ಯುಚುವಲ್ ಫಂಡ್ ಎಸ್​ಐಪಿಯಲ್ಲಿ ಹೂಡಿಕೆ ಮಾಡುತ್ತಾ ಹೋಗಿ. ಈ ಫಂಡ್ ವರ್ಷಕ್ಕೆ ಶೇ. 12ರಷ್ಟು ಸಿಎಜಿಆರ್​ನಲ್ಲಿ ಬೆಳೆಯಬಲ್ಲುದೆಂದರೆ ಎರಡು ಕೋಟಿ ರೂ ಕಾರ್ಪಸ್ ಸೃಷ್ಟಿಯಾಗಲು 31 ವರ್ಷ ಬೇಕಾಗುತ್ತದೆ.

ನಿಮ್ಮ ವಯಸ್ಸು ಈಗ 25 ವರ್ಷ ಆಗಿದ್ದು, ಈಗ ನೀವು 5,000 ರೂ ಎಸ್​ಐಪಿ ಆರಂಭಿಸಿದರೆ 56 ವರ್ಷ ವಯಸ್ಸಿಗೆ ನೀವು 2 ಕೋಟಿ ರೂ ಹಣವಂತರಾಗಿರುತ್ತೀರಿ.

ಇದನ್ನೂ ಓದಿ: ಪೋಸ್ಟ್ ಆಫೀಸ್​ನ ಈ ಸ್ಕೀಮ್​ನಲ್ಲಿ 25 ವರ್ಷಕ್ಕೆ 1 ಕೋಟಿ ರೂ ಗಳಿಕೆಗೆ ಅವಕಾಶ

ನಿಮ್ಮ ವೃತ್ತಿಜೀವನ ಬೆಳೆದಂತೆಲ್ಲಾ ಸಂಪಾದನೆಯೂ ಅಧಿಕಗೊಳ್ಳಬಹುದು. ಆಗ ಹೂಡಿಕೆಯನ್ನೂ ಕೂಡ ಹೆಚ್ಚಿಸುತ್ತಾ ಹೋಗಬಹುದು. ನೀವು ಈ ರೀತಿ ವರ್ಷಕ್ಕೆ ಶೇ. 10ರಷ್ಟು ಹೂಡಿಕೆ ಹೆಚ್ಚಿಸುತ್ತಾ ಹೋದರೆ 25 ವರ್ಷಕ್ಕೆ ನಿಮ್ಮ ಕಾರ್ಪಸ್ 2 ಕೋಟಿ ರೂ ಮುಟ್ಟುತ್ತದೆ.

50:30:10:10 ನಿಯಮ ತಿಳಿದಿರಿ…

ನಿಮ್ಮ ಸಂಬಳದಲ್ಲಿ ಎಷ್ಟು ಹಣವನ್ನು ವ್ಯಯಿಸಬೇಕು, ಎಷ್ಟನ್ನು ಉಳಿಸಬೇಕು, ಎಷ್ಟನ್ನು ಹೂಡಿಕೆ ಮಾಡಬೇಕು ಎನ್ನುವ ಗೊಂದಲ ಇದ್ದರೆ 50:30:10:10 ನಿಯಮ ತಿಳಿದಿರಿ. ಅಗತ್ಯ ವೆಚ್ಚ, ಇಚ್ಛೆಗೆ ವೆಚ್ಚ, ಹೂಡಿಕೆ ಹಾಗೂ ತುರ್ತು ವೆಚ್ಚಗಳಿಗೆ ನೀವು ಎತ್ತಿಡಬಹುದಾದ ಹಣ.

ಮನೆ ಬಾಡಿಗೆ, ಇಎಂಐ, ಕರೆಂಟ್ ಬಿಲ್, ನೀರಿನ ಬಿಲ್, ಫೋನ್ ಬಿಲ್, ದಿನಸಿ, ಸ್ಕೂಲ್ ಫೀಸ್ ಇತ್ಯಾದಿ ಅಗತ್ಯ ಖರ್ಚುಗಳು ನಿಮ್ಮ ಸಂಬಳದ ಶೇ. 50ರಷ್ಟನ್ನು ಮೀರದಂತೆ ನೋಡಿಕೊಳ್ಳಿ.

ಇನ್ನು ಶೇ. 30ರಷ್ಟು ಸಂಪಾದನೆಯನ್ನು ಸಿನಿಮಾಗೋ, ಆನ್ಲೈನ್ ಶಾಪಿಂಗೋ, ಹೋಟೆಲ್ ಊಟಕ್ಕೋ ಇತ್ಯಾದಿ ಮನರಂಜನಾ ಚಟುವಟಿಕೆಗಳಿಗೆ ವ್ಯಯಿಸಬಹುದು.

ಇದನ್ನೂ ಓದಿ: ಫೋನ್​ನಿಂದ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಕ್ಯಾಷ್ ವಿತ್​ಡ್ರಾ ಮಾಡಿ; ಸರ್ಕಾರದಿಂದ ಹೊಸ ಪ್ರಯತ್ನ

ಶೇ. 10ರಷ್ಟು ಹಣವನ್ನು ಎಮರ್ಜೆನ್ಸಿಗೆಂದು ತೆಗೆದಿರಿಸಬಹುದು. ಇನ್ನುಳಿದ ಶೇ. 10ರಷ್ಟನ್ನು ಹೂಡಿಕೆಗೆ ಬಳಸಬಹುದು.

ಇಲ್ಲಿ ಎಮರ್ಜೆನ್ಸಿಗೆಂದು ಐದಾರು ಲಕ್ಷ ರೂ ಕೂಡಿಟ್ಟ ಬಳಿಕ ಆ ಶೇ. 10ರಷ್ಟು ಹಣವನ್ನು ಹೂಡಿಕೆಗೆ ಬಳಸಬಹುದು. ಮನರಂಜನೆಗೆಂದು ಮೀಸಲಿರಿಸಿದ ಶೇ. 30ರಷ್ಟು ಹಣದಲ್ಲಿ ಎಷ್ಟು ಸಾಧ್ಯವೋ ಅಷ್ಟು ಹಣವನ್ನು ಉಳಿಸಿ ಅದನ್ನೂ ಹೂಡಿಕೆಗೆ ಬಳಸಬಹುದು.

ಈ ರೀತಿಯಾಗಿ ಹೆಚ್ಚೆಚ್ಚು ಹಣವನ್ನು ಹೂಡಿಕೆಗೆ ಬಳಸುತ್ತಾ ಹೋದಷ್ಟೂ ನಿಮ್ಮ ಭವಿಷ್ಯದ ಹಣಕಾಸು ಪರಿಸ್ಥಿತಿ ಹೆಚ್ಚು ಭದ್ರಗೊಳ್ಳುತ್ತಾ ಹೋಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ