Personel Finance: ಹಣವನ್ನು ಹೀಗೆ ಖರ್ಚು ಮಾಡುತ್ತಿದ್ದರೆ ಆದಾಯ ತೆರಿಗೆ ಇಲಾಖೆ ನೋಟಿಸ್ ನಿಮ್ಮನ್ನು​ ಹಿಂಬಾಲಿಸುತ್ತದೆ! ಏನದರ ಲೆಕ್ಕಾಚಾರ?

ನಿಮ್ಮ ಖರ್ಚು ಬಾಬತ್ತು ಒಂದು ಮಿತಿ ಮೀರುತ್ತಿದೆ ಎಂದರೆ ಆದಾಯ ತೆರಿಗೆ ಪಾವತಿಸುವುದು ಕಡ್ಡಾಯವಾಗುತ್ತದೆ. ಯಾವುದೇ ಸಬೂಬು ಹೇಳಿದರೂ ಸುಂಕದವನ ಮುಂದೆ ಸುಖ ದುಃಖ ಹೇಳಿಕೊಂಡಂತಾಗುತ್ತದೆ ಅಷ್ಟೆ. ಹಾಗಾಗಿ ನಿಮ್ಮ ಖರ್ಚು ವೆಚ್ಚಗಳ ಮೇಲೆ ನೀವೂ ನಿಗಾ ಇಡುವುದು ನಿಮ್ಮ ಆರ್ಥಿಕ ಆರೋಗ್ಯಕ್ಕೆ ಒಳ್ಳೆಯದು. ಹಾಗಾದರೆ ಬನ್ನೀ ಯಾವುವು ಆ ಖರ್ಚು ಬಾಬತ್ತುಗಳು? ಏನಿದರ ಲೆಕ್ಕಾಚಾರ? ಇಲ್ಲಿ ವಿವರವಾಗಿ ಅರ್ಥೈಸಿಕೊಳ್ಳೋಣ.

Personel Finance: ಹಣವನ್ನು ಹೀಗೆ ಖರ್ಚು ಮಾಡುತ್ತಿದ್ದರೆ ಆದಾಯ ತೆರಿಗೆ ಇಲಾಖೆ ನೋಟಿಸ್ ನಿಮ್ಮನ್ನು​ ಹಿಂಬಾಲಿಸುತ್ತದೆ! ಏನದರ ಲೆಕ್ಕಾಚಾರ?
ಈ 5 ಜಾಗದಲ್ಲಿ ಹಣ ಖರ್ಚು ಮಾಡಿದರೆ ಆದಾಯ ತೆರಿಗೆ ನೋಟಿಸ್​ ಹಿಂಬಾಲಿಸುತ್ತದೆ

Updated on: Aug 28, 2024 | 9:27 AM

Income tax ಅಂದರೆ ಆದಾಯ ತೆರಿಗೆ ಆಂದರೆ ಸಾಮಾನ್ಯ ಜನತೆಯನ್ನು ಹೆಚ್ಚು ಬಾಧಿಸದು. ಆದರೆ ಅವರಿರುತ್ತಾರಲ್ಲಾ ಧನಿಕರು… ಅವರಿಗೆ ನಿದ್ದೆಯಲ್ಲೂ ಆದಾಯ ತೆರಿಗೆಯ ಭೀತಿ ಕಾಡುತ್ತಿರುತ್ತದೆ. ಇನ್ನೂ ಕಾಲಕ್ಕೆ ತಕ್ಕಂತೆ ಇತ್ತೀಚೆಗೆ ಬಡತನ ಕಡಿಮೆಯಾಗಿ ಸಿರಿತನ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಕೊಳ್ಳುಬಾಕ ಸಂಸ್ಕೃತಿ ವಿಪರೀತವೆನಿಸುವಷ್ಟು ಹೆಚ್ಚಾಗಿದೆ. ಜೊತೆಗೆ ಹೂಡಿಕೆಗಳಲ್ಲು ಜನ ನಾಮುಂದು ತಾ ಮುಂದು ಎಂದು ಹಣ ಹೂಡುತ್ತಿದ್ದಾರೆ. ಸರಿಯಾಗಿ ಇದೇ ಸಮಯದಲ್ಲಿ ಆದಾಯ ತೆರಿಗೆ ಇಲಾಖೆ ಟೊಂಕಕಟ್ಟಿ ನಿಂತಿದೆ. ಮಿತಿ ಮೀರಿದ ಆದಾಯದ ಹಣ ಖರ್ಚಾಗುತ್ತಿದೆ ಎಂಬ ಸುಳಿವು ಸಿಕ್ಕರೆ ಮುಲಾಜಿಲ್ಲದೆ ತಕ್ಷಣ ಇಂತಹವರ ಮೇಲೆ ಮುಗಿಬೀಳುತ್ತಿದೆ. ಈ ಹಿಂದೆಯಾಗಿದ್ದರೆ ಆದಾಯ ತೆರಿಕೆ ಇಲಾಖೆಗೆ ತನ್ನದೇ ಮೂಲಗಳು ಕೆಲಸ ಮಾಡುತ್ತಿದ್ದವು. ಮಾಹಿತಿದಾರರೂ ನಿಗಾ ವಹಿಸುತ್ತಿದ್ದರು. ಆದರೆ ಈಗ ಆ ಕೆಲಸವನ್ನು ಮಾಹಿತಿ ತಂತ್ರಜ್ಞಾನ ಸಾಥ್ ನೀಡುತ್ತಿದೆ. ಅಂದರೆ ಎಲ್ಲ ವ್ಯವಹಾರಗಳು ವೆಬ್​ ಪೋರ್ಟಲ್​​ಗಳ ಮನಿ ಗೇಟ್ ವೇ ಮೂಲಕ ಎಲ್ಲವೂ ದಾಖಲಾಗುತ್ತಿದೆ. ಹಾಗಾಗಿ ನಿಮ್ಮ ಖರ್ಚು ಬಾಬತ್ತು ಒಂದು ಮಿತಿ ಮೀರುತ್ತಿದೆ ಎಂದರೆ ಆದಾಯ ತೆರಿಗೆ ಪಾವತಿಸುವುದು ಕಡ್ಡಾಯವಾಗಿದೆ. ಯಾವುದೇ ಸಬೂಬು ಹೇಳಿದರೂ ಸುಂಕದವನ ಮುಂದೆ ಸುಖ ದುಃಖ ಹೆಳಿಕೊಂಡಂತಾಗುತ್ತದೆ ಅಷ್ಟೆ. ಹಾಗಾಗಿ ನಿಮ್ಮ ಖರ್ಚು ವೆಚ್ಚಗಳ ಮೇಲೆ ನೀವೂ ನಿಗಾ ಇಡುವುದು ನಿಮ್ಮ ಆರ್ಥಿಕ ಆರೋಗ್ಯಕ್ಕೆ ಒಳ್ಳೆಯದು. ಹಾಗಾದರೆ ಬನ್ನೀ ಯಾವುವು ಆ ಖರ್ಚು ಬಾಬತ್ತುಗಳು? ಏನಿದರ ಲೆಕ್ಕಾಚಾರ? ಇಲ್ಲಿ ವಿವರವಾಗಿ ಅರ್ಥೈಸಿಕೊಳ್ಳೋಣ. ಅಂತರ್ಜಾಲ ಆಧಾರಿತ ಮನಿ ಗೇಟ್ ವೇ ಮೂಲಕ ನಡೆಸುವ ವಹಿವಾಟುಗಳನ್ನು ಆದಾಯ ತೆರಿಗೆ ಇಲಾಖೆ ಪತ್ತೆಹಚ್ಚುವುದು ಕಡಿಮೆ ಎಂಬ...

Published On - 9:18 am, Wed, 28 August 24

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ