ನವದೆಹಲಿ: ಇನ್ಕಮ್ ಟ್ಯಾಕ್ ರಿಟರ್ನ್ ಅಥವಾ ಐಟಿ ರಿಟರ್ನ್ (IT Return) ಫೈಲ್ ಮಾಡುವ ಸಮಯ ಸಮೀಪಿಸಿದೆ. 2022-23ರ ಹಣಕಾಸು ವರ್ಷದ ಐಟಿ ರಿಟರ್ನ್ ಫೈಲ್ ಮಾಡಲು ಜುಲೈ 31ರವರೆಗೂ ಮಾತ್ರ ಸಮಯಾವಕಾಶ ಇದೆ. ನಮ್ಮ ಒಟ್ಟು ತೆರಿಗೆ ಬಾಕಿ, ಟ್ಯಾಕ್ಸ್ ಡಿಡಕ್ಷನ್ಗಳು, ತೆರಿಗೆ ಅನ್ವಯವಾಗುವ ಆದಾಯ ಇವುಗಳನ್ನು ಘೋಷಿಸಲು ಆದಾಯ ತೆರಿಗೆ ಇಲಾಖೆ ವಿವಿಧ ನಮೂನೆಯ ಫಾರ್ಮ್ಗಳನ್ನು ನೀಡಿದೆ. ಪ್ರತಿಯೊಂದು ಸಂಸ್ಥೆ ಹಾಗೂ ಪ್ರತಿಯೊಬ್ಬ ತೆರಿಗೆ ಪಾವತಿದಾರರೂ ತಮಗೆ ಅನ್ವಯ ಆಗುವ ಫಾರ್ಮ್ ಅನ್ನು ಭರ್ತಿ ಮಾಡಬೇಕು. ವೃತ್ತಿಪರರು, ಸ್ವಂತ ಉದ್ಯೋಗಿಗಳು, ಸಂಬಳ ಪಡೆಯುವ ಉದ್ಯೋಗಿಗಳು ಇವರೆಲ್ಲರೂ ಐಟಿ ರಿಟರ್ನ್ ಸಲ್ಲಿಸಬೇಕು. ನಿಗದಿತ ಹಣಕಾಸು ವರ್ಷದಲ್ಲಿ ತಾನು ಗಳಿಸಿದ ಒಟ್ಟೂ ಆದಾಯವನ್ನು ಈ ಐಟಿ ರಿಟರ್ನ್ನಲ್ಲಿ ದಾಖಲಿಸಬೇಕು.
ಇನ್ಕಮ್ ಟ್ಯಾಕ್ಸ್ನ ಇ–ಫೈಲಿಂಗ್ ಪೋರ್ಟಲ್ ಮೂಲಕ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡಬಹುದು. ಆದರೆ, ಐಟಿಆರ್ ತುಂಬುವ ಮುನ್ನ ಎಲ್ಲಾ ತೆರಿಗೆ ಪಾವತಿದಾರರೂ ಕೂಡ ತಮ್ಮ ಪಾನ್ ನಂಬರ್ ಅನ್ನು ಆಧಾರ್ಗೆ ಲಿಂಕ್ ಮಾಡಿರಬೇಕು. ಆದಾಯ ತೆರಿಗೆ ಇಲಾಖೆ ಈ ಕ್ರಮವನ್ನು ಕಡ್ಡಾಯಪಡಿಸಿದೆ. ಐಟಿಆರ್ನಲ್ಲಿ ಐಟಿಆರ್-1, ಐಟಿಆರ್-2 ಇತ್ಯಾದಿ 7ಫಾರ್ಮ್ಗಳಿವೆ. ಇದರಲ್ಲಿ ತಮಗೆ ಅನ್ವಯವಾಗುವ ಅರ್ಜಿಯನ್ನು ಆಯ್ಕೆ ಮಾಡಿಕೊಂಡು ಭರ್ತಿ ಆಡಬೇಕು.
ಇದನ್ನೂ ಓದಿ: Income Tax: ಸೆಲ್ಫ್ ಅಸೆಸ್ಮೆಂಟ್ ಮತ್ತು ಅಡ್ವಾನ್ಸ್ ಟ್ಯಾಕ್ಸ್ ಪಾವತಿಸುವುದು ಹೇಗೆ? ಇಲ್ಲಿದೆ ವಿವರ
ಐಟಿಆರ್-1 ಅರ್ಜಿ ಯಾವ ವ್ಯಕ್ತಿಗೆ ಅನ್ವಯ ಅಗುತ್ತದೆ ಎಂಬ ವಿವರ ಇಲ್ಲಿದೆ…
ಹಣಕಾಸು ವರ್ಷದಲ್ಲಿ ವ್ಯಕ್ತಿಯ ಆದಾಯ 50 ಲಕ್ಷ ಮೀರಿರಬಾರದು.
ಸಂಬಳದಾರರು, ಗೃಹ ಆಸ್ತಿ, ಕುಟುಂಬ ಪಿಂಚಣಿ ಆದಾಯ, 5,000 ರುವರೆಗೂ ಕೃಷಿ ಆದಾಯ ಹೊಂದಿರುವವರು
ಉಳಿತಾಯ ಖಾತೆಯ ಬಡ್ಡಿ, ಠೇವಣಿಗಳಿಂದ ಬಡ್ಡಿ, ಐಟಿ ರೀಫಂಡ್ನಿಂದ ಬಡ್ಡಿ, ಕುಟುಂಬ ಪಿಂಚಣಿ, ಇತರೆಡೆಯಿಂದ ಬಡ್ಡಿ ಪಡೆಯುತ್ತಿರುವವರು ಈ ಐಟಿಆರ್-1 ಫಾರ್ಮ್ ಪಡೆಯಬೇಕು.
ಇಲ್ಲಿ ಮೇಲೆ ತಿಳಿಸಿದ ವ್ಯಕ್ತಿಗಳಿಗೆ ಐಟಿಆರ್ನ ಬೇರೆ ಫಾರ್ಮ್ಗಳಿವೆ. ಅವರಿಗೆ ಅನ್ವಯ ಆಗುವ ಫಾರ್ಮ್ ಅನ್ನು ಆಯ್ಕೆ ಮಾಡಿಕೊಂಡು ಭರ್ತಿ ಮಾಡಿ ಸಲ್ಲಿಸಬೇಕು.
Published On - 3:18 pm, Mon, 20 March 23