AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Income Tax: ಸೆಲ್ಫ್ ಅಸೆಸ್ಮೆಂಟ್ ಮತ್ತು ಅಡ್ವಾನ್ಸ್ ಟ್ಯಾಕ್ಸ್ ಪಾವತಿಸುವುದು ಹೇಗೆ? ಇಲ್ಲಿದೆ ವಿವರ

How To Pay Advance Tax, SAT: ಆದಾಯ ತೆರಿಗೆಯ ಒಂದು ಭಾಗವಾಗಿರುವ ಅಡ್ವಾನ್ಸ್ ಟ್ಯಾಕ್ಸ್ ಒಬ್ಬ ವ್ಯಕ್ತಿ ಒಂದು ಹಣಕಾಸು ವರ್ಷದ ತನ್ನ ಒಟ್ಟು ಆದಾಯಕ್ಕೆ ಮುಂಗಡವಾಗಿ ಪಾವತಿಸುವ ತೆರಿಗೆಯಾಗಿದೆ. ವ್ಯವಹಾರ ಅಥವಾ ವೃತ್ತಿಪರ ಉದ್ಯೋಗದಿಂದ ಗಳಿಸಿದ ಆದಾಯಕ್ಕೆ ಮುಂಗಡವಾಗಿ ಕಟ್ಟುವ ತೆರಿಗೆ ಇದು.

Income Tax: ಸೆಲ್ಫ್ ಅಸೆಸ್ಮೆಂಟ್ ಮತ್ತು ಅಡ್ವಾನ್ಸ್ ಟ್ಯಾಕ್ಸ್ ಪಾವತಿಸುವುದು ಹೇಗೆ? ಇಲ್ಲಿದೆ ವಿವರ
ಐಟಿಆರ್ ಸಲ್ಲಿಕೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 20, 2023 | 2:25 PM

Share

ಅದಾಯ ತೆರಿಗೆ ಪಾವತಿದಾರರು ಐಟಿ ರಿಟರ್ನ್ಸ್ ಫೈಲ್ ಮಾಡುವ ಮುನ್ನ ಅಡ್ವಾನ್ಸ್ ಟ್ಯಾಕ್ಸ್ (ಮುಂಗಡ ತೆರಿಗೆ) ಮತ್ತು ಸೆಲ್ಫ್ ಅಸೆಸ್ಮೆಂಟ್ ಟ್ಯಾಕ್ಸ್ (ಸ್ವ ಮೌಲ್ಯಮಾಪನ ತೆರಿಗೆ) ಪಾವತಿಸಬೇಕಾಗುತ್ತದೆ. ಇವುಗಳನ್ನು ಪಾವತಿಸದಿದ್ದಲ್ಲಿ ದಂಡ ತೆರಬೇಕಾದೀತು. ಮುಂಗಡ ತೆರಿಗೆ ಪಾವತಿಸದ ವ್ಯಕ್ತಿ ದಂಡವಾಗಿ ನಿರ್ದಿಷ್ಟ ಬಡ್ಡಿ ಸೇರಿಸಿ ಕಟ್ಟಬೇಕಾಗುತ್ತದೆ. ಆದಾಯ ತೆರಿಗೆ ಸೆಕ್ಷನ್ 234ಬಿ ಮತ್ತು 243ಸಿ ಅಡಿಯಲ್ಲಿ ಪಾವತಿಯಾಗದೇ ಉಳಿದ ಮುಂಗಡ ತೆರಿಗೆ ಬಾಕಿ ಮೊತ್ತಕ್ಕೆ ಶೇ. 1ರಷ್ಟು ಬಡ್ಡಿಯ ಹಣವನ್ನು ದಂಡವಾಗಿ ಕಟ್ಟಬೇಕು. ಇನ್ನು ವ್ಯಕ್ತಿಯು ಬೇರೆ ಮೂಲಗಳಿಂದ ಆದಾಯ ಗಳಿಸುತ್ತಿದ್ದರೆ ಅದಕ್ಕೆ ಸೆಲ್ಫ್ ಅಸೆಸ್ಮೆಂಟ್ ಟ್ಯಾಕ್ಸ್ (SAT- Self Assessment Tax)) ಕಟ್ಟಬೇಕಾಗುತ್ತದೆ.

ಮುಂಗಡ ತೆರಿಗೆ ಎಂದರೇನು?

ಆದಾಯ ತೆರಿಗೆಯ ಒಂದು ಭಾಗವಾಗಿರುವ ಅಡ್ವಾನ್ಸ್ ಟ್ಯಾಕ್ಸ್ ಒಬ್ಬ ವ್ಯಕ್ತಿ ಒಂದು ಹಣಕಾಸು ವರ್ಷದ ತನ್ನ ಒಟ್ಟು ಆದಾಯಕ್ಕೆ ಮುಂಗಡವಾಗಿ ಪಾವತಿಸುವ ತೆರಿಗೆಯಾಗಿದೆ. ವ್ಯವಹಾರ ಅಥವಾ ವೃತ್ತಿಪರ ಉದ್ಯೋಗದಿಂದ ಗಳಿಸಿದ ಆದಾಯಕ್ಕೆ ಮುಂಗಡವಾಗಿ ಕಟ್ಟುವ ತೆರಿಗೆ ಇದು. ವ್ಯಕ್ತಿಯ ಆದಾಯಕ್ಕೆ ಪಾವತಿಸಬೇಕಾದ ತೆರಿಗೆ ಮೊತ್ತ ಮತ್ತು ನಿಜವಾಗಿ ಆತ ಪಾವತಿಸುವ ಮೊತ್ತದ ನಡುವಿನ ವ್ಯತ್ಯಾಸ 10 ಸಾವಿರ ರೂ ಮೀರಿದಾಗ ಅದನ್ನು ತೆರಿಗೆ ಬಾಕಿ (Tax Liabilities) ಎಂದು ಪರಿಗಣಿಸಲಾಗುತ್ತದೆ.

ಸೆಲ್ಫ್ ಅಸೆಸ್ಮೆಂಟ್ ಟ್ಯಾಕ್ಸ್ ಎಂದರೇನು?

ಅಗಲೆ ಹೇಳಿದಂತೆ ಇದು ಒಬ್ಬ ವ್ಯಕ್ತಿಯ ಇತರ ಮೂಲದ ಆದಾಯಗಳಿಗೆ ಕಟ್ಟುವ ತೆರಿಗೆಯಾಗಿದೆ. ಹಣಕಾಸು ವರ್ಷದಲ್ಲಿ ಒಬ್ಬ ವ್ಯಕ್ತಿಯ ಅದಾಯ ಮೂಲದಿಂದ ಟಿಡಿಎಸ್ ಕಡಿತಗೊಂಡ ಬಳಿಕ ಉಳಿಯುವ ಅದಾಯ ತೆರಿಗೆ ಬಾಕಿ ಮೊತ್ತ ಹಾಗು ಅಡ್ವಾನ್ಸ್ ಟ್ಯಾಕ್ಸ್ ಇವುಗಳ ಲೆಕ್ಕಾಚಾರದಲ್ಲಿ ಎಸ್​ಎಟಿ ನಿರ್ಧರಿಸಲಾಗುತ್ತದೆ. ಐಟಿ ರಿಟರ್ನ್ ಸಲ್ಲಿಸುವ ಮುನ್ನ ಯಾವುದಾದರೂ ತೆರಿಗೆ ಬಾಕಿ ಉಳಿದಿದೆಯಾ ಎಂದು ಗಣಿಸಬೇಕಾಗುತ್ತದೆ.

ಇದನ್ನೂ ಓದಿಅಬ್ಬಬ್ಬಾ..! ಈ ಬ್ಯಾಂಕ್​ನ ಎಫ್​ಡಿಗಳಿಗೆ ಸಿಗುತ್ತದೆ ಬರೋಬ್ಬರಿ ಶೇ. 9.50 ರವರೆಗೆ ಬಡ್ಡಿ; ಇದರ ಮುಂದೆ ಯಾವ ಸ್ಕೀಮೂ ಡಮ್ಮಿ

ಅಡ್ವಾನ್ಸ್ ತೆರಿಗೆ ಅಥವಾ ಮುಂಗಡ ತೆರಿಗೆ ಪಾವತಿಸುವುದು ಹೇಗೆ?

ಹಣಕಾಸು ವರ್ಷದಲ್ಲಿ ಒಬ್ಬ ವ್ಯಕ್ತಿಯ ಒಟ್ಟು ಅಂದಾಜು ಆದಾಯ ಮತ್ತು ಅ ವ್ಯಕ್ತಿಯ ಆದಾಯಕ್ಕೆ ಅನ್ವಯ ಆಗುವ ಸ್ಲ್ಯಾಬ್ ರೇಟ್​ಗಳನ್ನು ಗಣಿಸಿ ಅಡ್ವಾನ್ಸ್ ಟ್ಯಾಕ್ಸ್ ಮೊತ್ತ ನಿರ್ಧಾರ ಆಗುತ್ತದೆ. ಇದನ್ನು ಆನ್​ಲೈನ್ ಮತ್ತು ಆಫ್​ಲೈನ್ ಎರಡು ವಿಧಾನದಲ್ಲಿ ಮಾಡಲು ಸಾಧ್ಯ.

ಅನ್​ಲೈನ್ ಮೂಲಕ ಅಡ್ವಾನ್ಸ್ ಟ್ಯಾಕ್ಸ್ ಕಟ್ಟುವ ವಿಧಾನ:

ತೆರಿಗೆ ಮಾಹಿತಿ ಪೋರ್ಟಲ್ ಆದ protean-tinpan.com/index.html ಗೆ ಹೋಗಿ ಅಲ್ಲಿ ಸರ್ವಿಸಸ್, ನಂತರ ಇಪೇಮೆಂಟ್ ಕ್ಲಿಕ್ ಮಾಡಿ

ಬಳಿಕ ಚಲನ್ ಐಟಿಎನ್​ಎಸ್280 ಅನ್ನು ಆರಿಸಿ

ಅಡ್ವಾನ್ಸ್ ಟ್ಯಾಕ್ಸ್ ಚೆಕ್ ಬಾಕ್ಸ್ ಆಯ್ಕೆ ಮಾಡಿಕೊಂಡು ಚಲನ್​ನಲ್ಲಿ ಅಗತ್ಯ ಮಾಹಿತಿ ಭರ್ತಿ ಮಾಡಿ

ಇದಾದ ನಂತರ ನಿಮ್ಮ ಬ್ಯಾಂಕ್​ನ ನೆಟ್​ಬ್ಯಾಂಕಿಂಗ್ ಸೈಟ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಹಣ ಪಾವತಿಸಬಹುದು. ಇದರ ಚಲನ್ ಅನ್ನು ನೀವು ರಸೀದಿಯಾಗಿ ಇಟ್ಟುಕೊಳ್ಳಬಹುದು.

ಆಫ್​ಲೈನ್ ಮೂಲಕ ಅಡ್ವಾನ್ಸ್ ಟ್ಯಾಕ್ಸ್ ಕಟ್ಟುವ ವಿಧಾನ:

ಈ ಕೆಳಗಿನ ಪಿಡಿಎಫ್ ಫೈಲ್ ಅನ್ನು ಓಪನ್ ಮಾಡಿ ಪ್ರಿಂಟೌಟ್ ಪಡೆಯಿರಿ.

https://incometaxindia.gov.in/forms/107010000000345598.pdf

ಚಲನ್ ಮಾಹಿತಿ ತುಂಬಿರಿ (ಅಡ್ವಾನ್ಸ್ ಟ್ಯಾಕ್ಸ್ ಚೆಕ್ ಬಾಕ್ಸ್ ಟಿಕ್ ಮಾಡಬೇಕು)

ಇನ್ಕಮ್ ಟ್ಯಾಕ್ಸ್ ಪೇಮೆಂಟ್ ಸ್ವೀಕರಿಸುವ ಯಾವುದಾದರೂ ಬ್ಯಾಂಕ್​ಗೆ ಹೋಗಿ ಹಣ ಪಾವತಿಸಿಯೂ, ಚೆಕ್ ನೀಡಿಯೋ ಚಲನ್ ಅನ್ನು ಸಲ್ಲಿಸಬೇಕು.

ಇದನ್ನೂ ಓದಿAadhaar-PAN Linking: ಡೆಡ್​ಲೈನ್​ಗೆ ಕೆಲವೇ ದಿನ ಬಾಕಿ; ಆಧಾರ್-ಪಾನ್ ಲಿಂಕ್ ಆಗಿದೆಯಾ ತಿಳಿಯುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ಸೆಲ್ಫ್ ಅಸೆಸ್ಮೆಂಟ್ ಟ್ಯಾಕ್ಸ್ ಪಾವತಿಸುವುದು ಹೇಗೆ?

  • ಇನ್ಕಂ ಟ್ಯಾಕ್ಸ್ ವೆಬ್​ಸೈಟ್​ಗೆ ಹೋಗಿ ಲಾಗಿನ್ ಆಗಿರಿ.
  • ಅಲ್ಲಿ ಇಪೇ ಟ್ಯಾಕ್ಸಸ್ ಮೇಲೆ ಕ್ಲಿಕ್ ಮಾಡಿ
  • ಆ ಬಳಿಕ ಎನ್​ಎಸ್​ಡಿಎಲ್ protean-tinpan.com/index.html ವೆಬ್​ಸೈಟ್​ಗೆ ರೀಡೈರೆಕ್ಟ್ ಆಗುತ್ತದೆ.
  • ನಂತರ ಚಲನ್ ನಂಬರ್/ಐಟಿಎನ್​ಎಸ್280 ಆಯ್ಕೆ ಮಾಡಿ. ಆ ಬಳಿಕ (0021) ಇನ್ಕಮ್ ಟ್ಯಾಕ್ಸ್ ಎಂಬುದನ್ನು ಆಯ್ಕೆ ಮಾಡಿ
  • ವ್ಯಕ್ತಿಯ ಹೆಸರು, ಪಾನ್ ಕಾರ್ಡ್, ವಿಳಾಸ, ಮೊಬೈಲ್ ನಂಬರ್ ಇತ್ಯಾದಿ ಮಾಹಿತಿಯನ್ನು ತುಂಬಿರಿ
  • ಯಾವ ವರ್ಷದ ಅಸೆಸ್ಮೆಂಟ್​ಗೆ ಹಣ ಪಾವತಿಸುತ್ತಿದ್ದೀರಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ
  • (300) ಸೆಲ್ಫ್ ಅಸೆಸ್ಮೆಂಟ್ ಟ್ಯಾಕ್ಸ್ ಆಯ್ಕೆ ಮಾಡಿಕೊಳ್ಳಿ
  • ಬಳಿಕ ನೀವು ಹಣ ಪಾವತಿಸಲಿರುವ ಬ್ಯಾಂಕ್ ಅನ್ನು ಆರಿಸಿಕೊಳ್ಳಿ
  • ಬ್ಯಾಂಕ್​ನ ನೆಟ್​ಬ್ಯಾಂಕಿಂಗ್ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ನೀವು ಪೆಮೆಂಟ್ ಮಾಡಬಹುದು.
  • ಇದಾದ ಬಳಿಕ ಚಲನ್ ಕಾಣುತ್ತದೆ. ಇದರ ಸ್ಕ್ಯಾನ್ ಕಾಪಿ ಅಥವಾ ಪ್ರಿಂಟೌಟ್ ಪಡೆದು ಇಟ್ಟುಕೊಂಡಿರಿ.
  • ಸೆಲ್ಫ್ ಅಸೆಸ್ಮೆಂಟ್ ಟ್ಯಾಕ್ಸ್ ಪಾವತಿ ಆದ ಬಳಿಕ ಕೆಲ ದಿನಗಳಲ್ಲಿ ಫಾರ್ಮ್ 26ಎಎಸ್ ಅಲ್ಲಿ ಅದು ಕಾಣುತ್ತದೆ. ಒಂದು ವೇಳೆ ಫಾರ್ಮ್​ನಲ್ಲಿ ಅದು ಕಾಣದಿದ್ದರೆ ಐಟಿ ರಿಟರ್ನ್ ಫೈಲ್ ಮಾಡುವಾಗ ಚಲನ್ ವಿವರಗಳನ್ನು ತುಂಬಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:23 pm, Mon, 20 March 23

ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!