ಅಬ್ಬಬ್ಬಾ..! ಈ ಬ್ಯಾಂಕ್​ನ ಎಫ್​ಡಿಗಳಿಗೆ ಸಿಗುತ್ತದೆ ಬರೋಬ್ಬರಿ ಶೇ. 9.50 ರವರೆಗೆ ಬಡ್ಡಿ; ಇದರ ಮುಂದೆ ಯಾವ ಸ್ಕೀಮೂ ಡಮ್ಮಿ

FD Rates Upto 9.50%: ಮುಂಬೈನಲ್ಲಿ ಮುಖ್ಯ ಕಚೇರಿ ಹೊಂದಿರುವ ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕಿನಲ್ಲಿ ಸಾಮಾನ್ಯ ಗ್ರಾಹಕರ ಎಫ್​ಡಿಗಳಿಗೆ ಶೇ. 9ರವರೆಗೆ ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಶೇ. 9.50ರವರೆಗೆ ಬಡ್ಡಿ ಬರುತ್ತದೆ.

ಅಬ್ಬಬ್ಬಾ..! ಈ ಬ್ಯಾಂಕ್​ನ ಎಫ್​ಡಿಗಳಿಗೆ ಸಿಗುತ್ತದೆ ಬರೋಬ್ಬರಿ ಶೇ. 9.50 ರವರೆಗೆ ಬಡ್ಡಿ; ಇದರ ಮುಂದೆ ಯಾವ ಸ್ಕೀಮೂ ಡಮ್ಮಿ
ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 19, 2023 | 2:20 PM

Unity Small Finance Bank: ಹಣ ಮಾಡಬೇಕೆಂದರೆ ನಾವು ಉಳಿಸಿದ ಹಣವನ್ನು ಬೆಳೆಸುವ ಸಮರ್ಪಕ ಮಾರ್ಗವೂ ತಿಳಿದಿರಬೇಕು. ಷೇರು, ಚಿನ್ನ, ರಿಯಲ್ ಎಸ್ಟೇಟ್ ಎಂಬ ಓಡುವ ಕುದುರೆಗಳನ್ನು ಇದಕ್ಕಾಗಿ ಹಲವರು ಬೆನ್ನತ್ತುತ್ತಾರೆ. ಆದರೆ, ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ ಎಫ್​ಡಿ ಇಟ್ಟರೆ ನೆಮ್ಮದಿಯಾಗಿ ಹಣ ಬೆಳೆಸಿಕೊಂಡು ಹೋಗಬಹುದು. ಯೂನಿಟಿ ಸ್ಮಾಲ್ ಫೈನಾನ್​ ಬ್ಯಾಂಕ್​ನಲ್ಲಿರುವ ಎಫ್​ಡಿ ದರಗಳು (Unity Small Finance Bank FD Rates) ಭಾರತದಲ್ಲೇ ಗರಿಷ್ಠತಮ ದರಗಳ ಸಾಲಿನಲ್ಲಿ ನಿಲ್ಲುತ್ತವೆ. ಠೇವಣಿಗಳಿಗೆ ಅತಿ ಹೆಚ್ಚು ಬಡ್ಡಿ ನೀಡುತ್ತದೆ ಈ ಬ್ಯಾಂಕು. ವಾರ್ಷಿಕ ಶೇ. 9.50ರವರೆಗೆ ಬಡ್ಡಿ ಪಡೆದು ನೆಮ್ಮದಿಯಾಗಿರಬಹುದು.

ಸರ್ಕಾರದ ಯಾವುದೆ ಸ್ಕೀಮುಗಳಾಗಲೀ, ಇನ್ಷೂರೆನ್ಸ್ ಯೋಜನೆಯಾಗಲಿ ವಾರ್ಷಿಕ ಶೇ. 8.50ಗಿಂತ ಹೆಚ್ಚು ರಿಟರ್ನ್ಸ್ ಕೊಡೋದಿಲ್ಲ. ಬೇರೆ ದೊಡ್ಡ ದೊಡ್ಡ ಬ್ಯಾಂಕುಗಳೂ ಕೂಡ ತಮ್ಮಲ್ಲಿನ ಠೇವಣಿಗಳಿಗೆ ಗರಿಷ್ಠ ಶೇ. 9ರವರೆಗೆ ಮಾತ್ರ ಬಡ್ಡಿ ಕೊಡುತ್ತವೆ. ಈ ಹಿನ್ನೆಲೆಯಲ್ಲಿ ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕು ಗಮನ ಸೆಳೆಯುತ್ತದೆ.

ಇದನ್ನೂ ಓದಿPPF Account: ಪಿಪಿಎಫ್​ ಖಾತೆಯಲ್ಲಿ ಹೂಡಿಕೆ ಮಾಡಿ 1 ಕೋಟಿ ರೂ. ಗಳಿಸುವುದು ಹೇಗೆ?

ಇಲ್ಲಿ ವಯೋವೃದ್ಧರಿಗೆ, ಅಂದರೆ 60 ವರ್ಷ ವಯಸ್ಸು ದಾಟಿದ ಹಿರಿಯ ನಾಗರಿಕರ ನಿರ್ದಿಷ್ಟ ಫಿಕ್ಸೆಡ್ ಡೆಪಾಸಿಟ್​ಗೆ ಶೇ. 9.50 ಬಡ್ಡಿಯನ್ನು ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನೀಡುತ್ತದೆ. ಇತರ ಸಾಮಾನ್ಯ ಠೇವಣಿದಾರರಿಗೆ ಶೇ. 9ರವರೆಗೆ ಬಡ್ಡಿ ಸಿಗುತ್ತದೆ.

ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನ ಶಗುನ ಸ್ಕೀಮ್

ಮುಂಬೈನಲ್ಲಿ ಮುಖ್ಯ ಕಚೇರಿ ಹೊಂದಿರುವ ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನ ಎಫ್​ಡಿ ದರಗಳು ಶೇ. 4.50ರಿಂದ ಆರಂಭವಾಗಿ ಶೇ. 9.50ರವರೆಗೂ ಇವೆ. ಶಗುನ್ ಡೆಪಾಸಿಟ್ ಸ್ಕೀಮ್​ನಲ್ಲಿ ಈ ಬ್ಯಾಂಕು ಗರಿಷ್ಠ ಬಡ್ಡಿಯ ಆಫರ್ ಮಾಡಿದೆ.

ಇದನ್ನೂ ಓದಿPMVVY: ಪಿಎಂ ವಿವಿವೈ ಸ್ಕೀಮ್, ಮಾರ್ಚ್ 31ರವರೆಗೂ ಆಫರ್; ರಿಟರ್ನ್ಸ್, ಪಿಂಚಣಿ ಎಷ್ಟು? ವಿವರ ಇಲ್ಲಿದೆ

181ರಿಂದ 201 ದಿನಗಳ ಅವಧಿ; 501 ದಿನಗಳಿಗೆ ಠೇವಣಿ ಮತ್ತು 1001 ದಿನಗಳ ಠೇವಣಿಗಳಿಗೆ ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಆಕರ್ಷಕ ಬಡ್ಡಿ ಕೊಡುತ್ತದೆ. 181-201 ದಿನಗಳು ಹಾಗೂ 501 ದಿನಗಳಿಗೆ ಠೇವಣಿ ಇಡುವ ಹಿರಿಯ ನಾಗರಿಕರಿಗೆ ಶೇ. 9.25ರಷ್ಟು ಬಡ್ಡಿ ಸಿಗುತ್ತದೆ. ಇತರರಿಗೆ ಶೇ. 8.75ರಷ್ಟು ಬಡ್ಡಿ ಬರುತ್ತದೆ. ಇನ್ನು, 1001ದಿನಗಳ ಅವಧಿ ಠೇವಣಿಗೆ ಹಿರಿಯ ನಾಗರಿಕರಿಗೆ ಶೇ. 9.50ರಷ್ಟು ಬಡ್ಡಿ ಸಿಗುತ್ತದೆ. ಇತರ ಠೇವಣಿದಾರರಿಗೆ ಶೇ. 9ರಷ್ಟು ಬಡ್ಡಿ ಬರುತ್ತದೆ.

Unity Small finance bank fd rates

ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಉದ್ಯೋಗಿಗಳ ಎಫ್​ಡಿಗಳಿಗೆ ಶೇ. 10 ಬಡ್ಡಿ

ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ ಎಫ್​ಡಿಗಳಿಗೆ ಕನಿಷ್ಠ ಮೊತ್ತ 1,000 ರು ಇದೆ. ಠೇವಣಿ ಅವಧಿ 7 ದಿನದಿಂದ ಆರಂಭವಾಗುತ್ತದೆ. ಎಫ್​ಡಿಯ ಗರಿಷ್ಠ ಅವಧಿ 10 ವರ್ಷ ಇದೆ. ಒಂದು ವೇಳೆ ನಿಶ್ಚಿತ ಠೇವಣಿಯನ್ನು ಮುಂಚಿತವಾಗಿ ಹಿಂಪಡೆದುಕೊಂಡರೆ ಶೇ. 1ರ ಮೊತ್ತದಷ್ಟು ದಂಡ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿMutual Fund: ಮ್ಯೂಚುವಲ್ ಫಂಡ್​ಗಳಿಗೆ ನೆಚ್ಚಿನ ಮತ್ತು ಲಾಭದ ಕುದುರೆಗಳಾಗಿರುವ ಷೇರುಗಳಿವು…

ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನ ಉದ್ಯೋಗಿಗಳಿಗಂತೂ ಇನ್ನೂ ಶೇ. 1ರಷ್ಟು ಹೆಚ್ಚು ಬಡ್ಡಿ ದರಗಳು ಸಿಗುತ್ತವೆ. ಅಂದರೆ 60 ವರ್ಷದೊಳಗಿನ ವಯಸ್ಸಿನ ಈ ಬ್ಯಾಂಕ್ ಸಿಬ್ಬಂದಿ ಇರಿಸುವ ನಿಶ್ಚಿತ ಠೇವಣಿಗಳಿಗೆ ಶೇ. 10ರವರೆಗೆ ಬಡ್ಡಿ ಸಿಗುತ್ತದೆ.

ಇನ್ನು, ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನ ಸೇವಿಂಗ್ ಡೆಪಾಸಿಟ್​ಗಳಿಗೂ ಒಳ್ಳೆಯ ಬಡ್ಡಿ ಸಿಗುತ್ತದೆ. ಇದರ ಉಳಿತಾಯ ಖಾತೆಗಳಲ್ಲಿರುವ ಹಣಕ್ಕೆ ಶೇ. 7ರವರೆಗೂ ಬಡ್ಡಿ ಸಿಗುತ್ತದೆ. 1 ಲಕ್ಷ ರೂ ಒಳಗಿನ ಹಣಕ್ಕೆ ಶೇ. 6ರಷ್ಟು ಬಡ್ಡಿ ಜಮೆಯಾಗುತ್ತದೆ. ಅದಕ್ಕಿಂತ ಮೇಲ್ಪಟ್ಟ ಹಣಕ್ಕೆ ಶೇ. 7ರಷ್ಟು ಹಣ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:20 pm, Sun, 19 March 23

‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ