PPF Account: ಪಿಪಿಎಫ್​ ಖಾತೆಯಲ್ಲಿ ಹೂಡಿಕೆ ಮಾಡಿ 1 ಕೋಟಿ ರೂ. ಗಳಿಸುವುದು ಹೇಗೆ?

15 ವರ್ಷಗಳ ಲಾಕ್​ ಇನ್ ಅವಧಿ ಇದ್ದರೂ ಅದರ ನಂತರ ಖಾತೆಯನ್ನು ಮುಂದುವರಿಸಲು ಅವಕಾಶವಿದೆ. ಅಂದರೆ ಪಿಪಿಎಫ್ ಖಾತೆದಾರರು 15 ವರ್ಷ ಕಳೆದ ಮೇಲೂ ಹೂಡಿಕೆ ಮುಂದುವರಿಸುತ್ತಾ ಹೋಗಬಹುದಾಗಿದೆ.

PPF Account: ಪಿಪಿಎಫ್​ ಖಾತೆಯಲ್ಲಿ ಹೂಡಿಕೆ ಮಾಡಿ 1 ಕೋಟಿ ರೂ. ಗಳಿಸುವುದು ಹೇಗೆ?
ಸಾಂದರ್ಭಿಕ ಚಿತ್ರImage Credit source: Reuters
Follow us
Ganapathi Sharma
|

Updated on: Mar 19, 2023 | 9:00 AM

ದೀರ್ಘಾವಧಿಗೆ ಹಣವನ್ನು ಠೇವಣಿ ಇಡುವ ಮೂಲಕ ನಿವೃತ್ತಿಯ ನಂತರದ ಜೀವನಕ್ಕಾಗಿ ಆರ್ಥಿಕ ದೃಢತೆಯನ್ನು ಹೊಂದುವುದಕ್ಕಿರುವ ಹಣಕಾಸು ಯೋಜನೆಯೇ ಸಾರ್ವಜನಿಕ ಭವಿಷ್ಯ ನಿಧಿ (PPF). ಯಾವುದೇ ಬ್ಯಾಂಕ್ ಅಥವಾ ಹತ್ತಿರದ ಅಂಚೆ ಕಚೇರಿಯಲ್ಲಿ 100 ರೂ. ಠೇವಣಿ ಇಡುವ ಮೂಲಕ ಪಿಪಿಎಫ್ ಖಾತೆ ತೆರೆಯಬಹುದು. ಈ ಯೋಜನೆಯಡಿ ವಾರ್ಷಿಕ ಕನಿಷ್ಠ 500 ರೂ. ಹೂಡಿಕೆ ಮಾಡಲೇಬೇಕು. ಪಿಪಿಎಫ್ ಯೋಜನೆಯಡಿ ತೆರೆದ ಖಾತೆಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿ ವಾರ್ಷಿಕ 1.5 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ ಪಡೆಯಲೂ ಅವಕಾಶವಿದೆ. 15 ವರ್ಷಗಳ ಲಾಕ್​ ಇನ್ ಅವಧಿ ಇರುವ ಈ ಖಾತೆಗೆ ವಾರ್ಷಿಕ ಒಂದೇ ಬಾರಿ 1.5 ಲಕ್ಷ ರೂ. ಅಥವಾ 12 ಕಂತುಗಳಲ್ಲಿ ಪಾವತಿ ಮಾಡಲು ಅವಕಾಶವಿದೆ.

ಪಿಪಿಎಫ್ ಖಾತೆಯಡಿ ಠೇವಣಿ ಇಟ್ಟ ಮೊತ್ತಕ್ಕೆ ಪ್ರಸ್ತುತ ವಾರ್ಷಿಕ ಶೇ 7.1ರ ಬಡ್ಡಿ ದರವಿದೆ. ಪ್ರತಿ ವರ್ಷ ಶಿಸ್ತಿನಿಂದ ಹಣ ಹೂಡಿಕೆ ಮಾಡಿದರೆ, ಮೆಚ್ಯೂರಿಟಿ ಅವಧಿಗಾಗುವಾಗ 1 ಕೋಟಿ ರೂ. ವರೆಗೆ ಗಳಿಸಲೂ ಈ ಖಾತೆಯಲ್ಲಿ ಅವಕಾಶವಿದೆ.

15 ವರ್ಷಗಳ ಲಾಕ್​ ಇನ್ ಅವಧಿ ಇದ್ದರೂ ಅದರ ನಂತರ ಖಾತೆಯನ್ನು ಮುಂದುವರಿಸಲು ಅವಕಾಶವಿದೆ. ಅಂದರೆ ಪಿಪಿಎಫ್ ಖಾತೆದಾರರು 15 ವರ್ಷ ಕಳೆದ ಮೇಲೂ ಹೂಡಿಕೆ ಮುಂದುವರಿಸುತ್ತಾ ಹೋಗಬಹುದಾಗಿದೆ.

ಇದನ್ನೂ ಓದಿ: PPF Investment Plan: ಪಿಪಿಎಫ್​ನಲ್ಲಿ ವಾರ್ಷಿಕ 1.5 ಲಕ್ಷ ರೂಪಾಯಿಗಿಂತ ಹೆಚ್ಚಿನ ಹೂಡಿಕೆಗೆ ಅವಕಾಶ ಇದೆಯೇ?

ಕೆಲವು ತಜ್ಞರು ಪಿಪಿಎಫ್​ ಖಾತೆ ಹೂಡಿಕೆಯನ್ನು ಲಾಕ್ ಇನ್ ಅವಧಿಯ ನಂತರವೈ ವಿಸ್ತರಿಸಲು ಸಲಹೆ ನೀಡುತ್ತಾರೆ. ಮೆಚ್ಯೂರಿಟಿ ವೇಳೆ ದೊರೆತ ಮೊತ್ತ ಹಾಗೂ ಅದಕ್ಕೆ ನಂತರದ ಹೂಡಿಕೆಯನ್ನು ಸೇರಿಸಿ ಠೇವಣಿ ಇಡುತ್ತಾ ಹೋಗಬೇಕು. ಆಗ ಹೆಚ್ಚು ಬಡ್ಡಿ ಸಿಗುತ್ತದೆ ಎಂದು ‘ಟ್ರಾನ್ಸ್​​ಕೆಂಡ್ ಕನ್ಸಲ್ಟಂಟ್​​’ನ ನಿರ್ದೇಶಕ ಕಾರ್ತಿಕ್ ಝಾವೇರಿ ತಿಳಿಸಿರುವುದಾಗಿ ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.

ತಜ್ಞರ ಸಲಹೆ ಆಧಾರದಲ್ಲಿ ಲೆಕ್ಕಾಚಾರ ಹಾಕಿದರೆ ಪಿಪಿಎಫ್ ಖಾತೆಯಲ್ಲಿ ಹೂಡಿಕೆ ಮಾಡಿ 1 ಕೋಟಿ ರೂ.ವರೆಗೆ ರಿಟರ್ನ್ಸ್ ಪಡೆಯಲು ಅವಕಾಶವಿದೆ. ಉದಾಹರಣೆಗೆ; 30ನೇ ವಯಸ್ಸಿನಲ್ಲಿ ಒಬ್ಬ ವ್ಯಕ್ತಿ ಪಿಪಿಎಫ್ ಖಾತೆ ತೆರೆಯುತ್ತಾರೆ ಎಂದಿಟ್ಟುಕೊಳ್ಳೋಣ. 15 ವರ್ಷಗಳ ಲಾಕ್​ ಇನ್ ಅವಧಿಯ ನಂತರ ಮತ್ತೆ ಅದನ್ನು 15 ವರ್ಷಗಳ ವರೆಗೆ ವಿಸ್ತರಣೆ ಮಾಡಬೇಕು. ಆಗ ಒಟ್ಟು 30 ವರ್ಷ ಹೂಡಿಕೆ ಮಾಡಿದಂತಾಗುತ್ತದೆ. ವರ್ಷಕ್ಕೆ 1.5 ಲಕ್ಷ ರೂ.ನಂತೆ ಹೂಡಿಕೆ ಮಾಡಿದರೆ 30 ವರ್ಷಗಳ ನಂತರ ಮೆಚ್ಯೂರಿಟಿ ಮೊತ್ತ (ವಾರ್ಷಿಕ ಬಡ್ಡಿ ಶೇ 7.10ರಷ್ಟಿದ್ದರೆ) 1.54 ಕೋಟಿ ರೂ. ಆಗಿರಲಿದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್