AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhaar-PAN Linking: ಡೆಡ್​ಲೈನ್​ಗೆ ಕೆಲವೇ ದಿನ ಬಾಕಿ; ಆಧಾರ್-ಪಾನ್ ಲಿಂಕ್ ಆಗಿದೆಯಾ ತಿಳಿಯುವುದು ಹೇಗೆ? ಇಲ್ಲಿದೆ ಡೀಟೇಲ್ಸ್

How To Check Aadhaar and PAN Link Status: ಆಧಾರ್ ನಂಬರ್ ಜೊತೆಗೆ ಪಾನ್ ನಂಬರ್ ಜೋಡಣೆ ಮಾಡುವುದು ಕಡ್ಡಾಯವಾಗಿದೆ. 2023, ಮಾರ್ಚ್ 31ಕ್ಕೆ ಗಡುವು ಕೊಡಲಾಗಿದೆ. ನಿಮ್ಮ ಆಧಾರ್ ಮತ್ತು ಪಾನ್ ಲಿಂಕ್ ಆಗಿದೆಯಾ ಎಂದು ಪರಿಶೀಲಿಸುವುದು ಹೇಗೆ, ವಿವರ ಇಲ್ಲಿದೆ....

Aadhaar-PAN Linking: ಡೆಡ್​ಲೈನ್​ಗೆ ಕೆಲವೇ ದಿನ ಬಾಕಿ; ಆಧಾರ್-ಪಾನ್ ಲಿಂಕ್ ಆಗಿದೆಯಾ ತಿಳಿಯುವುದು ಹೇಗೆ? ಇಲ್ಲಿದೆ ಡೀಟೇಲ್ಸ್
ಆಧಾರ್ ಪಾನ್ ಲಿಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 19, 2023 | 6:49 PM

ಆದಾಯ ತೆರಿಗೆಯಿಂದ ನೀಡಲಾಗುವ ಪಾನ್ ನಂಬರ್ (PAN- Permanent Account Number) ಅನ್ನು ಆಧಾರ್ ನಂಬರ್​ಗೆ ಜೋಡಿಸಬೇಕೆಂದು (Aadhaar and PAN linking) ವರ್ಷಗಳಿಂದಲೂ ಸರ್ಕಾರ ಸೂಚಿಸುತ್ತಾ ಬಂದಿದೆ. ಇದೀಗ ಆಧಾರ್ ಮತ್ತು ಪಾನ್ ಲಿಂಕ್ ಮಾಡಲು ಮಾರ್ಚ್ 31ರವರೆಗೆ ಮಾತ್ರ ಕಾಲಾವಕಾಶ ಇದೆ. ಏಪ್ರಿಲ್ 1ರಿಂದ ಆಧಾರ್ ಜೊತೆ ಜೋಡಣೆಯಾಗದ ಪಾನ್ ನಂಬರ್ ನಿಷ್ಕ್ರಿಯಗೊಳ್ಳುತ್ತದೆ. ಆ ಬಳಿಕ ಆಧಾರ್ ನಂಬರ್​ಗೆ ಪಾನ್ ಲಿಂಕ್ ಮಾಡಲು ಅವಕಾಶ ಇರುತ್ತದೆಯಾದರೂ ದುಬಾರಿ ಶುಲ್ಕ ತೆರಬೇಕಾಗುತ್ತದೆ. ಅಲ್ಲದೇ, ನಿಷ್ಕ್ರಿಯಗೊಂಡ ಪಾನ್ ಕಾರ್ಡನ್ನು ನೀವು ಗೊತ್ತಿದ್ದೋ ಗೊತ್ತಿಲ್ಲದೆಯೇ ಹಣಕಾಸು ವಹಿವಾಟುಗಳಲ್ಲಿ ಬಳಕೆ ಮಾಡಿದ್ದೇ ಆದಲ್ಲಿ ಭಾರೀ ದಂಡ ಕಟ್ಟಬೇಕಾಗುತ್ತದೆ. ಹಣಕಾಸು ಅಪರಾಧ ಆರೋಪದ ಮೇಲೆ ಜೈಲಿಗೂ ಹೋಗಬೇಕಾಗಬಹುದು.

2017ರ ಹಣಕಾಸು ಕಾಯ್ದೆಯು 1961ರ ಆದಾಯ ತೆರಿಗೆ ಕಾಯ್ದೆಗೆ 139ಎಎ ಎಂಬ ಹೊಸ ಸೆಕ್ಷನ್ ಸೇರಿಸಿತ್ತು. ಅದರಂತೆ ಪಾನ್ ಕಾರ್ಡ್​ಗೆ ಅರ್ಜಿ ಸಲ್ಲಿಸುವ ಪ್ರತಿಯೊಬ್ಬರೂ ಕೂಡ ಆಧಾರ್ ನಂಬರ್ ನೀಡುವುದು ಕಡ್ಡಾಯ ಮಾಡಲಾಯಿತು. ಇದು 2017 ಜುಲೈ 1ರಿಂದ ಅನ್ವಯಕ್ಕೆ ಬಂದಿದೆ. ಹೊಸದಾಗಿ ಪಾನ್ ಕಾರ್ಡ್ ಪಡೆಯುವವರಷ್ಟೇ ಅಲ್ಲ, ಈ ಹಿಂದೆಯೂ ಪಾನ್ ಕಾರ್ಡ್ ಪಡೆದಿರುವವರೂ ಕೂಡ ಆಧಾರ್ ನಂಬರ್ ಜೊತೆ ಜೋಡಿಸಬೇಕು.

ಇದನ್ನೂ ಓದಿAadhaar-PAN Link: ಈ ವ್ಯಕ್ತಿಗಳಿಗೆ ಆಧಾರ್-ಪಾನ್ ನಂಬರ್ ಲಿಂಕ್ ಬೇಕಾಗಿಲ್ಲ; ಯಾರಿಗೆಲ್ಲಾ ಇದೆ ವಿನಾಯಿತಿ? ಇಲ್ಲಿದೆ ವಿವರ

ಪಾನ್ ಎಂಬುದು ಆದಾಯ ತೆರಿಗೆ ಇಲಾಖೆ ನೀಡುವ 10 ಅಂಕಿಗಳ ನಂಬರ್ ಇರುವ ಕಾರ್ಡ್. ಇದು ತೆರಿಗೆ ಟ್ರ್ಯಾಕಿಂಗ್​ಗೋಸ್ಕರ ಮಾಡಿರುವ ವಿಶೇಷ ವ್ಯವಸ್ಥೆ. ಪ್ರತಿಯೊಬ್ಬ ವ್ಯಕ್ತಿ ಮತ್ತು ಸಂಸ್ಥೆ ಪ್ರತ್ಯೇಕವಾಗಿ ಪ್ಯಾನ್ ಕಾರ್ಡ್ ಮಾಡಿಸಬೇಕು. ಯಾರೇ ಆದರೂ ಒಂದಕ್ಕಿಂತ ಹೆಚ್ಚು ಪಾನ್ ನಂಬರ್ ಹೊಂದುವಂತಿಲ್ಲ. ಹಾಗೆ ಮಾಡಿದರೆ ಅದು ಆರ್ಥಿಕ ಅಪರಾಧವಾಗುತ್ತದೆ. ಹಾಗೆಯೇ, ಬ್ಯಾಂಕ್ ಖಾತೆ ತೆರೆಯಲು ಪಾನ್ ಕಾರ್ಡ್ ಈಗ ಅಗತ್ಯ ದಾಖಲೆಯಾಗಿದೆ. 50 ಸಾವಿರ ರುಪಾಯಿಗಿಂತ ಹೆಚ್ಚು ಮೊತ್ತದ ನಗದು ಹಣವನ್ನು ಬ್ಯಾಂಕಿಗೆ ಜಮೆ ಮಾಡಬೇಕೆಂದಿದ್ದರೂ ಪ್ಯಾನ್ ದಾಖಲೆ ಬೇಕು.

ಆಧಾರ್ ಮತ್ತು ಪಾನ್ ಲಿಂಕ್ ಮಾಡುವುದು ಹೇಗೆ?

ಆದಾಯ ತೆರಿಗೆ ಇಲಾಖೆಯ ವೆಬ್​ಸೈಟ್ https://www.incometax.gov.in/iec/foportal/ ಪ್ರವೇಶಿಸಿ

ಎಡಬದಿಯಲ್ಲಿ Quick Liks ಕಾಣಿಸುತ್ತದೆ. ಅಲ್ಲಿ Link Aadhaar Status ಮೇಲೆ ಕ್ಲಿಕ್ ಮಾಡಿ

ನಿಮ್ಮ ಪಾನ್ ಮತ್ತು ಆಧಾರ್ ನಂಬರ್ ಅನ್ನು ನಮೂದಿಸಿ, ಬಳಿಕ View Link Aadhaar Status ಮೇಲೆ ಕ್ಲಿಕ್ ಮಾಡಿ

ನಿಮ್ಮ ಆಧಾರ್ ಮತ್ತು ಪಾನ್ ಜೋಡಣೆ ಆಗಿದ್ದರೆ, “Your PAN is already linked to given Aadhaar” (ನಿಮ್ಮ ಪಾನ್ ಈಗಾಗಲೇ ಈ ಆಧಾರ್ ಜೊತೆ ಲಿಂಕ್ ಆಗಿದೆ) ಎಂಬಂತಹ ಸಂದೇಶ ಬರುತ್ತದೆ.

ಈ ಪ್ರಕ್ರಿಯೆಯನ್ನು ನೀವು ಇನ್ಕಮ್ ಟ್ಯಾಕ್ಸ್ ವೆಬ್​ಸೈಟ್​ಗೆ ಲಾಗಿನ್ ಅಗದೆಯೇ ಪಡೆಯಬಹುದಾದ ಸೇವೆ.

ಇದನ್ನೂ ಓದಿಅಬ್ಬಬ್ಬಾ..! ಈ ಬ್ಯಾಂಕ್​ನ ಎಫ್​ಡಿಗಳಿಗೆ ಸಿಗುತ್ತದೆ ಬರೋಬ್ಬರಿ ಶೇ. 9.50 ರವರೆಗೆ ಬಡ್ಡಿ; ಇದರ ಮುಂದೆ ಯಾವ ಸ್ಕೀಮೂ ಡಮ್ಮಿ

ಇನ್ನು, ಇನ್ಕಮ್ ಟ್ಯಾಕ್ಸ್ ಇ ಫೈಲಿಂಗ್ ಪೋರ್ಟಲ್​ಗೆ https://incometaxindiaefiling.gov.in/ ಹೋಗಿ ಅಲ್ಲಿ ನೀವು ಲಾಗಿನ್ ಆಗಬೇಕು. ಅಲ್ಲಿ ಲಿಂಕ್ ಆಧಾರ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ ಪರಿಶೀಲನೆ ನಡೆಸಬಹುದು.

ಪಾನ್ ಜೊತೆ ನಿಮ್ಮ ಆಧಾರ್ ಲಿಂಕ್ ಅಗಿದ್ದರೆ ಆಧಾರ್ ನಂಬರ್ ಕಾಣುತ್ತದೆ. ಇಲ್ಲದಿದ್ದರೆ ಲಿಂಕ್ ಆಧಾರ್ ಸ್ಟೇಟಸ್ ಕಾಣುತ್ತದೆ. ನೀವು ಆಧಾರ್ ಮತ್ತು ಪಾನ್ ಅನ್ನು ಲಿಂಕ್ ಮಾಡಬೇಕಾಗುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:43 pm, Sun, 19 March 23

ಆಪರೇಷನ್​ ಸಿಂಧೂರ್: ಇಂದೊಂದು ಸಂತೋಷದ ಸಂಗತಿ, ಮೃತ ಮಂಜುನಾಥ್​ ತಾಯಿ
ಆಪರೇಷನ್​ ಸಿಂಧೂರ್: ಇಂದೊಂದು ಸಂತೋಷದ ಸಂಗತಿ, ಮೃತ ಮಂಜುನಾಥ್​ ತಾಯಿ
ಭಾರತದ ದಾಳಿಯಿಂದ ಕಂಗಾಲಾದ ಪಾಕಿಸ್ತಾನದಿಂದ ಮತ್ತೊಮ್ಮೆ ಹೇಡಿತನ
ಭಾರತದ ದಾಳಿಯಿಂದ ಕಂಗಾಲಾದ ಪಾಕಿಸ್ತಾನದಿಂದ ಮತ್ತೊಮ್ಮೆ ಹೇಡಿತನ
ಆಪರೇಷನ್ ಸಿಂಧೂರ್: ಯುದ್ಧವಾದರೆ ನಾವೂ ಸಿದ್ಧ ಎಂದ ಬಾಗಲಕೋಟೆ ಮಾಜಿ ಯೋಧರು
ಆಪರೇಷನ್ ಸಿಂಧೂರ್: ಯುದ್ಧವಾದರೆ ನಾವೂ ಸಿದ್ಧ ಎಂದ ಬಾಗಲಕೋಟೆ ಮಾಜಿ ಯೋಧರು
ಭಾರತೀಯ ಸೇನೆಯಿರುವಾಗ ನಮಗ್ಯಾವ ಭಯವೂ ಇಲ್ಲ: ಪ್ರವಾಸಿಗರು
ಭಾರತೀಯ ಸೇನೆಯಿರುವಾಗ ನಮಗ್ಯಾವ ಭಯವೂ ಇಲ್ಲ: ಪ್ರವಾಸಿಗರು
ಆಪರೇಷನ್ ಸಿಂಧೂರವನ್ನು ಹಣೆಗೆ ತಿಲಕ ಇಟ್ಟುಕೊಂಡೇ ಹೊಗಳಿದ ಸಿಎಂ ಸಿದ್ದರಾಮಯ್ಯ
ಆಪರೇಷನ್ ಸಿಂಧೂರವನ್ನು ಹಣೆಗೆ ತಿಲಕ ಇಟ್ಟುಕೊಂಡೇ ಹೊಗಳಿದ ಸಿಎಂ ಸಿದ್ದರಾಮಯ್ಯ
ಮನೆಮಾಳಿಗೆ ಮೇಲೆ ನಿಂತು ಧ್ವಂಸಗೊಂಡಿರುವ ಮಸೀದಿಯನ್ನು ವೀಕ್ಷಿಸಿದ ಜನ
ಮನೆಮಾಳಿಗೆ ಮೇಲೆ ನಿಂತು ಧ್ವಂಸಗೊಂಡಿರುವ ಮಸೀದಿಯನ್ನು ವೀಕ್ಷಿಸಿದ ಜನ
ಎಚ್ಚರಿಕೆಯನ್ನು ಹಗುರವಾಗಿ ತೆಗೆದುಕೊಂಡ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ!
ಎಚ್ಚರಿಕೆಯನ್ನು ಹಗುರವಾಗಿ ತೆಗೆದುಕೊಂಡ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ!
‘ಭಾಷೆ-ಸಂಸ್ಕೃತಿಗೆ ಗೌರವಿಸಬೇಕು’; ಸೋನು ನಿಗಮ್​ಗೆ ರಾಗಿಣಿ ಕಿವಿಮಾತು
‘ಭಾಷೆ-ಸಂಸ್ಕೃತಿಗೆ ಗೌರವಿಸಬೇಕು’; ಸೋನು ನಿಗಮ್​ಗೆ ರಾಗಿಣಿ ಕಿವಿಮಾತು
Live: ಆಪರೇಷನ್ ಸಿಂಧೂರ್ ಬೆನ್ನಲ್ಲೇ ಸೇನಾಧಿಕಾರಿಗಳಿಂದ ಸುದ್ದಿಗೋಷ್ಠಿ
Live: ಆಪರೇಷನ್ ಸಿಂಧೂರ್ ಬೆನ್ನಲ್ಲೇ ಸೇನಾಧಿಕಾರಿಗಳಿಂದ ಸುದ್ದಿಗೋಷ್ಠಿ
ಭಾರತದ ಬಲಿಷ್ಠ ಸೇನೆಯನ್ನು ತಡವಿರುವ ಪಾಕ್ ಪತರುಗುಟ್ಟಿದೆ: ಮಾಜಿ ಸೈನಿಕರು
ಭಾರತದ ಬಲಿಷ್ಠ ಸೇನೆಯನ್ನು ತಡವಿರುವ ಪಾಕ್ ಪತರುಗುಟ್ಟಿದೆ: ಮಾಜಿ ಸೈನಿಕರು