AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adani: ಪೆಟ್ರೋಕೆಮಿಕಲ್ ಪ್ರಾಜೆಕ್ಟ್ ಕೈಬಿಟ್ಟ ಅದಾನಿ; ಭಾರತಕ್ಕೆ ಮುಂದುವರಿಯಲಿರುವ ಪಿವಿಸಿ ಆಮದು ತಲೆನೋವು

Mandra Petrochem Project Suspended: ಭಾರತದಲ್ಲಿ ಬಹಳ ಬೇಡಿಕೆಯಲ್ಲಿರುವ ಪಿವಿಸಿ ಉತ್ಪಾದನೆಗೆಂದು ಗುಜರಾತ್​ನಲ್ಲಿ ಸ್ಥಾಪನೆಯಾಗಬೇಕಿದ್ದ 34,900 ಕೋಟಿ ರೂ ಮೊತ್ತದ ಪೆಟ್ರೋಕೆಮಿಕಲ್ ಯೋಜನೆಯನ್ನು ಅದಾನಿ ಗ್ರೂಪ್ ತಾತ್ಕಾಲಿಕವಾಗಿ ನಿಲ್ಲಿಸಿರುವುದು ತಿಳಿದುಬಂದಿದೆ.

Adani: ಪೆಟ್ರೋಕೆಮಿಕಲ್ ಪ್ರಾಜೆಕ್ಟ್ ಕೈಬಿಟ್ಟ ಅದಾನಿ; ಭಾರತಕ್ಕೆ ಮುಂದುವರಿಯಲಿರುವ ಪಿವಿಸಿ ಆಮದು ತಲೆನೋವು
ಅದಾನಿ ಗ್ರೂಪ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 19, 2023 | 4:14 PM

Share

ನವದೆಹಲಿ: ಹಿಂಡನ್ಬರ್ಗ್ ರಿಸರ್ಚ್ ವರದಿಯ (Hindenburg Research Report) ಪರಿಣಾಮ ಎಂಬಂತೆ ಅದಾನಿ ಗ್ರೂಪ್ ತನ್ನ ಪ್ರತಿಷ್ಠೆ 34,900ಕೋಟಿ ರೂ ಮೊತ್ತದ ಪೆಟ್ರೋಕೆಮಿಕಲ್ ಯೋಜನೆಯನ್ನು (Mandra Petrochem Project) ತಾತ್ಕಾಲಿಕವಾಗಿ ನಿಲ್ಲಿಸಿದೆ. ಗುಜರಾತ್​ನ ಕಚ್ಛ್ ಚಿಲ್ಲೆಯ ಮಂದ್ರಾ ಬಂದರಿನ ಬಳಿ ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಝೋನ್ (APSEZ) ಜಾಗದಲ್ಲಿ ಸ್ಥಾಪನೆಯಾಗುತ್ತಿರುವ ಪಿವಿಸಿ ತಯಾರಿಕಾ (PVC Production) ಕಾರ್ಯವನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಅದಾನಿ ಗ್ರೂಪ್​ಗೆ ಸೇರಿದ ಅದಾನಿ ಎಂಟರ್​ಪ್ರೈಸಸ್​ನ (ಎಇಎಲ್) ಅಂಗಸಂಸ್ಥೆ ಮಂದ್ರಾ ಪೆಟ್ರೋಕೆಮ್ ಲಿ ಈ ಯೋಜನೆಯನ್ನು ಆರಂಭಿಸಿತ್ತು. ಈಗ ಈ ಯೋಜನೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದ್ದು, ಸಂಬಂಧಿತ ಎಲ್ಲಾ ಸರಬರಾಜುದಾರರು (Suppliers) ಮತ್ತು ಮಾರಾಟಗಾರರಿಗೆ (Vendors) ತತ್​ಕ್ಷಣವೇ ಎಲ್ಲಾ ಚಟುವಟಿಕೆ ನಿಲ್ಲಿಸಬೇಕೆಂದು ಅದಾನಿ ಗ್ರೂಪ್ ಇಮೇಲ್​ಗಳನ್ನು ಕಳುಹಿಸಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳಿಂದ ತಿಳಿದುಬಂದಿದೆ.

ಪಿವಿಸಿ ತಯಾರಿಕೆಯ ಮಂದ್ರಾ ಯೋಜನೆಯನ್ನು ಎಷ್ಟು ದಿನಗಳವರೆಗೆ ಸ್ಥಗಿತಗೊಳಿಸಲಾಗಿದೆ ಎಂಬುದು ಗೊತ್ತಾಗಿಲ್ಲ. ಈ ಕ್ರಮದಿಂದ ಅದಾನಿ ಗ್ರೂಪ್​ಗೆ ಹಾಗೂ ಅದರ ಸರಬರಾಜುದಾರರಿಗೆ ಎಷ್ಟು ನಷ್ಟ ಅಗುತ್ತದೆ ಎಂಬ ಮಾಹಿತಿಯೂ ಸದ್ಯಕ್ಕೆ ಗೊತ್ತಾಗಿಲ್ಲ.

ಅದಾನಿ ಗ್ರೂಪ್ ಮಂದ್ರಾ ಪೆಟ್ರೋಕೆಮಿಕಲ್ ಯೋಜನೆಯನ್ನು ಸ್ಥಗಿತಗೊಳಿಸಿದ್ದು ಯಾಕೆ?

ಮೂಲಗಳನ್ನು ಉಲ್ಲೇಖಿಸಿ ಈ ವರದಿ ಪ್ರಕಟಿಸಿರುವ ಫೈನಾನ್ಷಿಯಲ್ ಟೈಮ್ಸ್ ಪ್ರಕಾರ ಅದಾನಿ ಗ್ರೂಪ್ ವಿರುದ್ಧ ಹಿಂಡನ್​ಬರ್ಗ್ ರಿಸರ್ಚ್ ಕೆಲ ತಿಂಗಳ ಹಿಂದೆ ಬಿಡುಗಡೆ ಮಾಡಿದ ವರದಿಯ ಪರೋಕ್ಷ ಪರಿಣಾಮ ಇದು ಎನ್ನಲಾಗಿದೆ. ಹಿಂಡನ್ಬರ್ಗ್ ವರದಿ ಬಳಿಕ ಅದಾನಿ ಗ್ರೂಪ್ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆವರಿಸಿರುವ ಅನುಮಾನದ ಛಾಯೆಯನ್ನು ಹೋಗಲಾಡಿಸುವತ್ತ ಮತ್ತು ಕಡಿಮೆ ಆಗಿರುವ ಹೂಡಿಕೆದಾರರ ವಿಶ್ವಾಸವನ್ನು ಮರಳಿ ಗಿಟ್ಟಿಸುವತ್ತ ಗಮನ ಹರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮುಂಗಡವಾಗಿ ಸಾಲ ಮರುಪಾವತಿ ಇತ್ಯಾದಿ ಹಲವು ಹೆಜ್ಜೆಗಳನ್ನು ಅದಾನಿ ಗ್ರೂಪ್ ಇಡುತ್ತಿದೆ. ಹೀಗಾಗಿ, ಗುಜರಾತ್​ನಲ್ಲಿನ ಪೆಟ್ರೋಕೆಮಿಕಲ್ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಅದಾನಿ ಸಮೂಹ ಬಂದಿದೆ ಎಂದು ಎರಡು ಮೂಲಗಳನ್ನು ಉಲ್ಲೇಖಿಸಿ ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ.

ಇದನ್ನೂ ಓದಿEconomic Crisis: ಫೋರೆಕ್ಸ್ ರಿಸರ್ವ್ ಮತ್ತೆ ಕುಸಿತ; ವಿನಾಶದತ್ತ ಆರ್ಥಿಕತೆ- ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಎಚ್ಚರಿಕೆ

ಅನಿರೀಕ್ಷಿತ ಸಂದರ್ಭ ಎದುರಾಗಿರುವುದರಿಂದ ಹಲವು ಯೋಜನೆಗಳ ಮರುಮೌಲ್ಯಮಾಪನ ಮಾಡಲಾಗುತ್ತಿದೆ. ಭವಿಷ್ಯದ ಹಣದ ಹರಿವಿನ ಆಧಾರದ ಮೇಲೆ ಕೆಲ ಯೋಜನೆಗಳನ್ನು ಮುಂದುವರಿಸಬೇಕೋ ಅಥವಾ ಸ್ಥಗಿತಗೊಳಿಸಬೇಕೋ ಎಂದು ಪರಿಶೀಲಿಸಲಾಗುತ್ತಿದೆ. ನಮ್ಮ ವ್ಯವಹಾರ ಸಂಬಂಧಿತರಿಗೆ ಮೌಲ್ಯ ತಂದುಕೊಡುವ ಕಾರ್ಯತಂತ್ರವನ್ನು ಜಾರಿಗೆ ತರಲು ಗಮನ ಕೊಟ್ಟಿದ್ದೇವೆ ಎಂದು ಅದಾನಿ ಗ್ರೂಪ್​ನ ವಕ್ತಾರರು ಸ್ಪಷ್ಟಪಡಿಸಿದ್ದಾರೆನ್ನಲಾಗಿದೆ.

ಭಾರತದ ಆಮದು ಅವಲಂಬನೆ ತಪ್ಪಿಸುತ್ತದೆ ಮಂದ್ರಾ ಪೆಟ್ರೋಕೆಮಿಕಲ್ ಯೋಜನೆ

ಗುಜರಾತ್​ನ ಮಂದ್ರಾ ಬಂದರಿನಲ್ಲಿ ಸ್ಥಾಪನೆಯಾಗಲಿರುವ ಪೆಟ್ರೋಕೆಮಿಕಲ್ ಘಟಕದಲ್ಲಿ ಪಾಲಿ ವಿನೈಲ್ ಕ್ಲೋರೈಡ್ (ಪಿವಿಸಿ) ಉತ್ಪಾದಿಸುವ ಯೋಜನೆ ಇದೆ. ಪ್ಸಾಸ್ಟಿಕ್ ಸಿಂಥೆಟಿಕ್ ಪಾಲಿಮರ್ ಕ್ಷೇತ್ರದಲ್ಲಿ ಅತಿ ಹೆಚ್ಚು ಉತ್ಪಾದನೆಯಾಗುವ ಪ್ಲಾಸ್ಟಿಕ್​ನಲ್ಲಿ ಪಿವಿಸಿ ಮೂರನೇಯದು. ಎಲೆಕ್ಟ್ರಿಕ್ ವೈರು, ಏಪ್ರಾನ್, ಫ್ಲೋರಿಂಗ್, ಚರಂಡಿ ಪೈಪು ಇತ್ಯಾದಿ ಹಲವು ಉತ್ಪನ್ನಗಳಿಗೆ ಪಿವಿಸಿ ಬಳಕೆಯಾಗುತ್ತದೆ. ಭಾರತದಲ್ಲಿ ಪಿವಿಸಿ ಪೈಪು ಮತ್ತಿತರ ವಸ್ತುಗಳಿಗೆ ಬಹಳ ಬೇಡಿಕೆ ಇದೆ. ಭಾರತಕ್ಕೆ ವಾರ್ಷಿಕವಾಗಿ 35 ಲಕ್ಷ ಟನ್ ಪಿವಿಸಿ ಬೇಕು. ಭಾರತದಲ್ಲಿ ಪಿವಿಸಿ ಉತ್ಪಾದನೆ ವರ್ಷಕ್ಕೆ 14 ಲಕ್ಷ ಟನ್ ಮಾತ್ರ ಇದೆ. ಉಳಿದ 17 ಲಕ್ಷ ಟನ್ ಪಿವಿಸಿಗೆ ಆಮದನ್ನೇ ಹೆಚ್ಚಾಗಿ ಅವಲಂಬಿಸಬೇಕಾಗಿದೆ. ಅಲ್ಲದೇ ಪಿವಿಸಿಗೆ ಇರುವ ಬೇಡಿಕೆ ಪ್ರತೀ ವರ್ಷ ಶೇ. 7ರಷ್ಟು ಹೆಚ್ಚುತ್ತಿದೆ.

ಇದನ್ನೂ ಓದಿAditya Vision: ಮೂರೇ ವರ್ಷದಲ್ಲಿ 1ಲಕ್ಷ ರೂ 83 ಲಕ್ಷ ಆಯ್ತು; ಕೋಟ್ಯಾಧಿಪತಿಗಳಾದರು ಆದಿತ್ಯ ವಿಶನ್ ಷೇರುದಾರರು

ಮಂದ್ರಾ ಬಂದರಿನಲ್ಲಿರುವ ಅದಾನಿ ಗ್ರೂಪ್ ಸ್ಥಾಪಿಸಲಿರುವ ಘಟಕದಲ್ಲಿ 2,000 ಕಿಲೋ ಟನ್​ನಷ್ಟು ಪಿವಿಸಿ ಉತ್ಪಾದನಾ ಸಾಮರ್ಥ್ಯ ಇದೆ. ಅಂದರೆ ಸುಮಾರು 2 ಲಕ್ಷ ಟನ್ ಪಿವಿಸಿ ಉತ್ಪಾದನೆ ಮಾಡಬಹುದು. ಇಷ್ಟು ಪ್ರಮಾಣದ ಪಿವಿಸಿ ತಯಾರಿಕೆಗೆ ವರ್ಷಕ್ಕೆ 31ಲಕ್ಷ ಕಲ್ಲಿದ್ದಲು ಬೇಕಾಗುತ್ತದೆ. ಆಸ್ಟ್ರೇಲಿಯಾ, ರಷ್ಯಾ ಮತ್ತಿತರ ದೇಶಗಳಿಂದ ಈ ಕಲ್ಲಿದ್ದಲನ್ನು ಅದಾನಿ ಗ್ರೂಪ್ ಆಮದು ಮಾಡಿಕೊಳ್ಳಲು ಯೋಜಿಸಿತ್ತು. ಈಗ 34,900 ಕೋಟಿ ಮೊತ್ತದ ಈ ಪಿವಿಸಿ ಉತ್ಪಾದನಾ ಘಟಕ ಸ್ಥಾಪನೆಯನ್ನು ಅದಾನಿ ಗ್ರೂಪ್ ಅನಿರ್ದಿಷ್ಟಾವಧಿಯವರೆಗೆ ನಿಲ್ಲಿಸಿದೆ. ಎಲ್ಲವೂ ತಿಳಿಗೊಂಡ ಬಳಿಕ ಯೋಜನೆಯನ್ನು ಮತ್ತೆ ಮುಂದುವರಿಸುವ ಸಾಧ್ಯತೆ ಇದೆ.

ಅದಾನಿ ವಿರುದ್ಧ ಏನಿದು ಹಿಂಡನ್ಬರ್ಗ್ ರಿಪೋರ್ಟ್?

ಹಿಂಡನ್ಬರ್ಗ್ ರಿಸರ್ಚ್ ಎಂಬುದು ಅಮೆರಿಕದ ಶಾರ್ಟ್ ಸೆಲ್ಲರ್ ಸಂಸ್ಥೆ. ಅಂದರೆ, ಷೇರುಪೇಟೆಯಲ್ಲಿ ಸ್ಪೆಕ್ಯೂಲೇಟ್ ಮಾಡಿ ಷೇರುಗಳನ್ನು ಮಾರಾಟ ಮಾಡುವ ಸಂಸ್ಥೆ. ಜನವರಿ 24ರಂದು ಈ ಸಂಸ್ಥೆ ಮಾಧ್ಯಮಗಳಲ್ಲಿ ಸ್ಫೋಟಕ ವರದಿ ಬಿಡುಗಡೆ ಮಾಡಿತ್ತು. ಷೇರುಪೇಟೆಯಲ್ಲಿ ಅದಾನಿ ಗ್ರೂಪ್ ಕಂಪನಿಗಳು ಷೇರುದಾರರಿಗೆ ವಂಚಿಸುವಂತಹ ಕ್ರಮ ಕೈಗೊಂಡಿವೆ. ಕೃತಕವಾಗಿ ಷೇರುಗಳ ಮೌಲ್ಯ ಏರಿಸುವಂತೆ ಮಾಡಿವೆ. ಇವೇ ಮುಂತಾದ ಹಲವು ಗಂಭೀರ ಆರೋಪಗಳನ್ನು ಹಿಂಡನ್ಬರ್ಗ್ ತನ್ನ ವರದಿಯಲ್ಲಿ ಮಾಡಿತ್ತು. ಇದಾದ ಬೆನ್ನಲ್ಲೇ ಷೇರುಪೇಟೆಯಲ್ಲಿ ಅದಾನಿ ಗ್ರೂಪ್​ನ ವಿವಿಧ ಕಂಪನಿಗಳ ಷೇರುಗಳು ಪ್ರಪಾತಕ್ಕೆ ಬಿದ್ದವು. ಅದಾನಿಯ ಷೇರು ಸಂಪತ್ತು ಹಲವು ಲಕ್ಷಕೋಟಿಗಳಷ್ಟು ಕರಗಿಹೋಗಿತ್ತು. ವಿಶ್ವದ ಶ್ರೀಮಂತರಲ್ಲಿ 2ನೇ ಸ್ಥಾನದಲ್ಲಿದ್ದ ಗೌತಮ್ ಅದಾನಿ ಇದೀಗ 30ರ ನಂತರದ ಸ್ಥಾನಕ್ಕೆ ಬಿದ್ದುಹೋಗಿದ್ದಾರೆ. ಇತ್ತಿಚಿನ ದಿನಗಳಲ್ಲಿ ಅದಾನಿ ಗ್ರೂಪ್​ನ ಕೆಲ ಕಂಪನಿಗಳ ಷೇರುಗಳು ಚೇತರಿಸಿಕೊಳ್ಳುತ್ತಿರುವುದು ಹೌದು.

ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ