Aditya Vision: ಮೂರೇ ವರ್ಷದಲ್ಲಿ 1ಲಕ್ಷ ರೂ 83 ಲಕ್ಷ ಆಯ್ತು; ಕೋಟ್ಯಾಧಿಪತಿಗಳಾದರು ಆದಿತ್ಯ ವಿಶನ್ ಷೇರುದಾರರು

Multibagger Stock Aditya Vision: ಪಾಟ್ನಾದಲ್ಲಿ ಮುಖ್ಯ ಕಚೇರಿ ಹೊಂದಿರುವ ಎಲೆಕ್ಟ್ರಾನಿಕ್ ರೀಟೇಲ್ ಚೈನ್ ಸಂಸ್ಥೆ ಆದಿತ್ಯ ವಿಶನ್ ಇದೀಗ ಷೇರುಪೇಟೆಯಲ್ಲಿ ಭರ್ಜರಿ ಲಾಭದ ಕುದುರೆಯಾಗಿದೆ. 3 ವರ್ಷಗಳ ಹಿಂದೆ ಇದರಲ್ಲಿ ಹಣ ಹೂಡಿಕೆ ಮಾಡಿದ್ದವರಿಗೆ ಈಗ ಸುಗ್ಗಿಯೋ ಸುಗ್ಗಿ.

Aditya Vision: ಮೂರೇ ವರ್ಷದಲ್ಲಿ 1ಲಕ್ಷ ರೂ 83 ಲಕ್ಷ ಆಯ್ತು; ಕೋಟ್ಯಾಧಿಪತಿಗಳಾದರು ಆದಿತ್ಯ ವಿಶನ್ ಷೇರುದಾರರು
ಷೇರುಪೇಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 19, 2023 | 12:04 PM

ಷೇರುಪೇಟೆಯ ವ್ಯವಹಾರವೇ ಸೋಜಿಗದ ಸಂಗತಿ. ಜಾಗತಿಕ ವಿದ್ಯಮಾನಗಳೊಂದಿಗೆ ಅನೇಕ ವ್ಯವಹಾರಗಳು ತಳುಕುಹಾಕಿಕೊಂಡಿರುವುದರಿಂದ ಸಂಸ್ಥೆಗಳ ಆದಾಯ, ನಷ್ಟ ಇವೆಲ್ಲವೂ ದಿಢೀರನೇ ಬದಲಾಗಬಹುದು. ಅಂತೆಯೇ, ಷೇರುಪೇಟೆಯಲ್ಲಿ (Stock Markets) ಅದರ ಷೇರುಗಳ ಬೆಲೆಯಲ್ಲೂ ಭಾರೀ ವ್ಯತ್ಯಯಗಳಾಗಬಹುದು. ಸರ್ವಕಾಲದಲ್ಲೂ ಬೇಡಿಕೆ ಇರುವ ಕ್ಷೇತ್ರಗಳ ಪ್ರಮುಖ ಸಂಸ್ಥೆಗಳ ಮೇಲೆ ಮ್ಯೂಚುವಲ್ ಫಂಡ್​ಗಳು ಹೂಡಿಕೆ ಮಾಡಿ ಸೇಫ್ ಆಗುತ್ತವೆ. ಅದೇ ದೊಡ್ಡ ಮಟ್ಟಿಗೆ ಹೆಸರು ಮಾಡದಿದ್ದರೂ ಷೇರುಪೇಟೆಯಲ್ಲಿ ಮಿಂಚಿನ ಸಂಚಾರ ಮಾಡುವ ಸ್ಟಾಕ್​ಗಳು (Multibagger stocks) ಹಲವಿವೆ. ಅವರನ್ನು ಗುರುತಿಸಿ ಹಿಂದೆಬಿದ್ದವರು ಕೋಟ್ಯಾಧಿಪತಿಗಳಾಗುವ ಸುಯೋಗ ಸಿಗುತ್ತದೆ. ಅಂಥ ಲಾಭದ ಕುದುರೆಗಳಾಗಿರುವ ಷೇರುಗಳಲ್ಲಿ ಆದಿತ್ಯ ವಿಶನ್ ಒಂದು.

ದೇಶದ ವಿವಿಧೆಡೆ, ಅದರಲ್ಲೂ ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ರೀಟೇಲ್ ಮಳಿಗೆಗಳನ್ನು ಹೊಂದಿರುವ ಬಿಹಾರ ಮೂಲದ ಆದಿತ್ಯ ವಿಶನ್ ಸಂಸ್ಥೆ (Aditya Vision) ಷೇರುಪೇಟೆಯಲ್ಲಿ ಕಳೆದ 3 ವರ್ಷಗಳಲ್ಲಿ ಧೂಳೆಬ್ಬಿಸುತ್ತಿದೆ. ಕಳೆದ ಒಂದು ವರ್ಷದಲ್ಲಿ ಇದರ ಷೇರುಬೆಲೆ ಎರಡು ಪಟ್ಟು ಅಧಿಕಗೊಂಡಿದೆ. 3 ವರ್ಷಗಳ ಹಿಂದೆ ಕೋವಿಡ್ ಬಿಕ್ಕಟ್ಟು ಸಂದರ್ಭ ಇದರ ಷೇರು ಬೆಲೆ ಕೇವಲ 18 ರುಪಾಯಿ ಇತ್ತು. ಇದೀಗ ಬರೋಬ್ಬರಿ 1,500 ರುಪಾಯಿ ಬೆಲೆಯ ಷೇರಾಗಿ ಬೆಳೆದುಹೋಗಿದೆ. 3 ವರ್ಷಗಳ ಹಿಂದೆ ಇದರ ಷೇರುಗಳ ಮೇಲೆ ಹಣ ಹೂಡಿಕೆ ಮಾಡಿದ್ದವರಿಗೆ ಅದೃಷ್ಟವೋ ಅದೃಷ್ಟ. 83 ಪಟ್ಟು ಹೆಚ್ಚು ಹಣ ಮಾಡಿಕೊಂಡಿದ್ದಾರೆ.

ಇದನ್ನೂ ಓದಿAdani Shares: ತಿರುಗಿ ನಿಂತ ಅದಾನಿ ಷೇರುಗಳು; ಮಾರದೇ ಬಿಟ್ಟವರಿಗೆ ಹೊಡೆಯುತ್ತಾ ಜಾಕ್​ಪಾಟ್?

ಕೋವಿಡ್ ಬಿಕ್ಕಟ್ಟಿನ ಬಳಿಕ ಒಂದು ವರ್ಷದಲ್ಲಿ ಆದಿತ್ಯ ವಿಶನ್ ಷೇರು ಬೆಲೆ 18 ರುನಿಂದ 190 ರುಪಾಯಿಗೆ ಏರಿತು. ಅಂದರೆ ಒಂದೇ ವರ್ಷದಲ್ಲಿ 10 ಪಟ್ಟು ಬೆಲೆ ದ್ವಿಗುಣಗೊಂಡಿತು. ನಂತರದ ಒಂದು ವರ್ಷದಲ್ಲಿ ಅದರ ಬೆಲೆ 190ರಿಂದ 700 ರುಪಾಯಿಗೆ ಏರಿದೆ. ಕಳೆದ ಒಂದು ವರ್ಷದಲ್ಲಿ ಆದಿತ್ಯ ವಿಶನ್ ಷೇರುಬೆಲೆ 1,500 ರು ಮುಟ್ಟಿದೆ. ಅಂದರೆ ಕಳೆದ ಒಂದು ವರ್ಷದಲ್ಲಿ ಅದರ ಷೇರುಬೆಲೆ ಎರಡು ಪಟ್ಟು ಹೆಚ್ಚಾಗಿದೆ. ಕಳೆದ ಆರು ತಿಂಗಳಿಂದೀಚೆ ಇದರ ವೇಗ ತುಸು ಕಡಿಮೆ ಆಗಿರುವುದು ಹೌದು. ಕಳೆದ ಕೆಲ ತಿಂಗಳಲ್ಲಿ ತುಸು ಮಟ್ಟಿಗೆ ಬೆಲೆ ಇಳಿದಿದೆ ಎನ್ನುವುದು ಬಿಟ್ಟರೆ ಮೂರು ವರ್ಷಗಳಲ್ಲಿ ಆದಿತ್ಯ ವಿಶನ್​ನದ್ದು ಷೇರುಪೇಟೆಯಲ್ಲಿ ಅಕ್ಷರಶಃ ಮಿಂಚಿನ ಸಂಚಾರ.

ಆದಿತ್ಯ ವಿಶನ್ ಕಂಪನಿಯ ಷೇರುಗಳ ಮೇಲೆ ಹಣ ಹಾಕಿದವರಿಗೆ ಸಿಕ್ಕಿದ್ದೆಷ್ಟು?

ಅದಿತ್ಯ ವಿಶನ್ ಕಂಪನಿ ಷೇರುಪೇಟೆಯಲ್ಲಿ ವಿವಿಧ ಅವಧಿಯಲ್ಲಿ ವಿವಿಧ ರೀತಿಯ ವೇಗದಲ್ಲಿ ಬೆಳೆದಿದೆ. ಹೀಗಾಗಿ, ವಿವಿಧ ಹಂತಗಳಲ್ಲಿ ಹೂಡಿಕೆ ಮಾಡಿದವರಿಗೆ ವಿಭಿನ್ನ ರೀತಿಯಲ್ಲಿ ರಿಟರ್ನ್ಸ್ ಸಿಕ್ಕಿದೆ.

3 ವರ್ಷಗಳ ಹಿಂದೆ ಇದರ ಷೇರುಬೆಲೆ 18 ರೂ ಇದ್ದಾಗ ಹಣ ಹೂಡಿಕೆ ಮಾಡಿದವರಿಗೆ 83 ಪಟ್ಟು ಹೆಚ್ಚು ಲಾಭ ಸಿಕ್ಕಿದೆ. ಉದಾಹರಣೆಗೆ ಆ ಸಮಯದಲ್ಲಿ 1 ಲಕ್ಷ ರೂ ಹೂಡಿಕೆ ಮಾಡಿದವರು ಈಗ 83.50 ಲಕ್ಷ ರೂ ರಿಟರ್ನ್ಸ್ ಪಡೆದಿದ್ದಾರೆ.

ಇದನ್ನೂ ಓದಿPPF Account: ಪಿಪಿಎಫ್​ ಖಾತೆಯಲ್ಲಿ ಹೂಡಿಕೆ ಮಾಡಿ 1 ಕೋಟಿ ರೂ. ಗಳಿಸುವುದು ಹೇಗೆ?

ಎರಡು ವರ್ಷಗಳ ಹಿಂದೆ ಆದಿತ್ಯ ವಿಶನ್ ಷೇರಿನ ಮೇಲೆ 1 ಲಕ್ಷ ರೂ ಹೂಡಿಕೆ ಮಾಡಿದವರಿಗೆ ಈಗ 8 ಲಕ್ಷ ರೂ ಮಾಡಿಕೊಳ್ಳಬಹುದು. ಅಂತೆಯೇ, ಒಂದು ವರ್ಷದ ಹಿಂದೆ 1 ಲಕ್ಷ ರೂನಷ್ಟು ಆದಿತ್ಯ ವಿಶನ್​ನ ಷೇರು ಖರೀದಿಸಿದವರಿಗೆ ಈಗ 2.10 ಲಕ್ಷ ಸಿಗುತ್ತದೆ. ಕಳೆದ ಆರು ತಿಂಗಳಿಂದ ಆದಿತ್ಯ ವಿಶನ್​ನ ಷೇರುಗಳಲ್ಲಿ ಏರಿಳಿತಗಳಾಗುತ್ತಿರುವುದು ಹೌದು. ಕಳೆದ ಒಂದು ತಿಂಗಳಿಂದ ಈ ಕಂಪನಿಯ ಷೇರು ಮತ್ತೆ ಲಾಭದ ಹಳಿಗೆ ಬಂದಿರುವುದೂ ನಿಜ.

ಷೇರುಪೇಟೆಯಲ್ಲಿ ಸದ್ಯ ಇರುವ ಕೆಲವು ಮಲ್ಟಿಬ್ಯಾಗರ್ ಷೇರುಗಳಲ್ಲಿ ಆದಿತ್ಯ ವಿಶನ್ ಕೂಡ ಒಂದು. ಮಲ್ಟಿಬ್ಯಾಗರ್ ಎಂದರೆ ಬಹಳ ಲಾಭ ತಂದುಕೊಡುವ ಲೋಪ್ರೊಫೈಲ್ ಷೇರುಗಳು. ಇಂಥ ಮಲ್ಟಿಬ್ಯಾಗರ್ ಸ್ಟಾಕ್​ಗಳನ್ನು ಬಹಳ ಬೇಗ ಗುರುತಿಸಿಬಿಟ್ಟವರೇ ಜಾಣ.

ಇನ್ನಷ್ಟು ಷೇರುಪೇಟೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್