Adani Shares: ತಿರುಗಿ ನಿಂತ ಅದಾನಿ ಷೇರುಗಳು; ಮಾರದೇ ಬಿಟ್ಟವರಿಗೆ ಹೊಡೆಯುತ್ತಾ ಜಾಕ್​ಪಾಟ್?

Stock Market and Adani Companies: ಅದಾನಿ ಎಂಟರ್ಪ್ರೈಸಸ್, ಅದಾನಿ ಟ್ರಾನ್ಸ್​ಮಿಶನ್, ಅದಾನಿ ಗ್ರೀನ್ ಎನರ್ಜಿ, ಅದಾನಿ ವಿಲ್ಮರ್, ಅದಾನಿ ಪವರ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಪೋರ್ಟ್ಸ್, ಎನ್​ಡಿಟಿವಿ, ಅಂಬುಜಾ ಸಿಮೆಂಟ್ಸ್, ಎಸಿಸಿ ಸಿಮೆಂಟ್ಸ್ ಈ ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ವೃದ್ಧಿಕಂಡಿವೆ.

Adani Shares: ತಿರುಗಿ ನಿಂತ ಅದಾನಿ ಷೇರುಗಳು; ಮಾರದೇ ಬಿಟ್ಟವರಿಗೆ ಹೊಡೆಯುತ್ತಾ ಜಾಕ್​ಪಾಟ್?
ಗೌತಮ್ ಅದಾನಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 02, 2023 | 10:31 AM

ನವದೆಹಲಿ: ಹಿಂಡನ್ಬರ್ಗ್ ವಿವಾದಕ್ಕೆ (Hindenburg Research Report) ಸಿಲುಕಿ ಷೇರುಪೇಟೆಯಲ್ಲಿ ಲಕ್ಷಾಂತರ ಕೋಟಿ ರೂ ನಷ್ಟ ಮಾಡಿಕೊಂಡಿರುವ ಅದಾನಿ ಗ್ರೂಪ್ ಕಂಪನಿಗಳ ಷೇರುಗಳು (Adani Group Company Shares) ನಿನ್ನೆ ಬುಧವಾರ ತುಸು ಏರಿಕೆ ಕಾಣುವಲ್ಲಿ ಸಫಲವಾಗಿವೆ. ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಎಲ್ಲಾ ಅದಾನಿ ಕಂಪನಿಗಳ ಷೇರುಬೆಲೆ ಹೆಚ್ದಿವೆ. ಹಿಂದಿನ ಎರಡು ದಿನಗಳಿಂದಲೂ ಅದಾನಿ ಮಾಲಿಕತ್ವದ ಕಂಪನಿಗಳಿಗೆ ಕಳೆಗಟ್ಟಿದಂತಿದೆ. ಅದಾನಿ ಎಂಟರ್ಪ್ರೈಸಸ್, ಅದಾನಿ ಟ್ರಾನ್ಸ್​ಮಿಶನ್, ಅದಾನಿ ಗ್ರೀನ್ ಎನರ್ಜಿ, ಅದಾನಿ ವಿಲ್ಮರ್, ಅದಾನಿ ಪವರ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಪೋರ್ಟ್ಸ್, ಎನ್​ಡಿಟಿವಿ, ಅಂಬುಜಾ ಸಿಮೆಂಟ್ಸ್, ಎಸಿಸಿ ಸಿಮೆಂಟ್ಸ್ ಈ ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ವೃದ್ಧಿಕಂಡಿವೆ.

ಅದಾನಿ ಎಂಟರ್ಪ್ರೈಸಸ್ ಕಂಪನಿಯಂತೂ ನಿನ್ನೆ ವಹಿವಾಟಿನಲ್ಲಿ ಒಂದು ಹಂತದಲ್ಲಿ ಶೇ. 15.83ರಷ್ಟು ಮೌಲ್ಯ ಹೆಚ್ಚಿಸಿಕೊಂಡಿತ್ತು. ಅದರ ಷೇರು ಬೆಲೆ 1,564.55 ರೂ ಮಟ್ಟಕ್ಕೆ ಹೋಗಿತ್ತು. ಎರಡು ದಿನದಲ್ಲಿ ಅದಾನಿ ಎಂಟರ್​ಪ್ರೈಸಸ್​ನ ವ್ಯಾಲುಯೇಶನ್ ಬರೋಬ್ಬರಿ 42 ಸಾವಿರ ಕೋಟಿ ರೂಗಿಂತ ಹೆಚ್ಚಾಗಿ ಹೋಗಿತ್ತು. ಅದಾನಿ ಗ್ರೂಪ್​ನ ಎಲ್ಲಾ ಲಿಸ್ಟೆಡ್ 10 ಕಂಪನಿಗಳ ಒಟ್ಟಾರೆ ಮಾರ್ಕೆಟ್ ವ್ಯಾಲ್ಯುಯೇಶನ್ 7.56 ಲಕ್ಷ ಕೋಟಿಯಷ್ಟಾಗಿತ್ತು.

ಅದಾನಿ ಟ್ರಾನ್ಸ್​ಮಿಶನ್, ಅದಾನಿ ಗ್ರೀನ್ ಎನರ್ಜಿ, ಅದಾನಿ ವಿಲ್ಮರ್, ಅದಾನಿ ಪವರ್, ಅದಾನಿ ಟೋಟಲ್ ಗ್ಯಾಸ್ ಮತ್ತು ಎನ್​ಡಿಟಿವಿಯ ಷೇರುಗಳು ನಿನ್ನೆ ಸುಮಾರು ಶೇ. 5ರಷ್ಟು ಬೆಲೆ ಹೆಚ್ಚಿಸಿಕೊಂಡಿದ್ದವು. ಇಂದು ಗುರುವಾರ ಕೂಡ ಅದಾನಿ ಕಂಪನಿಗಳ ಷೇರುಗಳಿಗೆ ಬೇಡಿಕೆ ಮುಂದುವರಿಯುವ ಸಾಧ್ಯತೆ ಇದೆ.

ಇದನ್ನೂ ಓದಿ: 5 Day Work: ಬ್ಯಾಂಕ್ ನೌಕರರಿಗೆ ವಾರದಲ್ಲಿ 2 ದಿನ ರಜಾ ಭಾಗ್ಯ? ದಿನಕ್ಕೆ ಹೆಚ್ಚು ಹೊತ್ತು ಕೆಲಸ ಮಾಡುವ ಟೆನ್ಷನ್

ಅದಾನಿ ಗ್ರೂಪ್ ಜೊತೆಗೆ ಷೇರುಪೇಟೆಯೂ ಕಳೆ ಪಡೆದಿದೆ. ಸತತವಾಗಿ ಇಳಿಕೆ ಕಂಡು ಜರ್ಝರಿತವಾಗಿದ್ದ ಷೇರುಮಾರುಕಟ್ಟೆ ನಿನ್ನೆ ಬುಧವಾರ ಉತ್ತಮ ರೀತಿಯಲ್ಲಿ ಚೇತರಿಕೆ ಕಂಡಿದೆ. ಬಿಎಸ್​ಇ ಸೆನ್ಸೆಕ್ಸ್ ಸೂಚ್ಯಂಕವು 448.96 ಅಂಕಗಳಷ್ಟು ಏರಿಕೆ ಪಡೆಯಿತು. ಇಂದು ಗುರುವಾರದ ಬೆಳಗಿನ ವಹಿವಾಟಿನಲ್ಲಿ ಮಾರುಕಟ್ಟೆ ಕೆಳಗಿಳಿದಿದೆಯಾದರೂ ದಿನಾಂತ್ಯದ ವೇಳೆಗೆ ಮತ್ತೆ ಗರಿಗೆದರುವ ಸಾಧ್ಯತೆ ಇದೆ. ಆದರೆ ಗುರುವಾರ ಷೇರುಪೇಟೆಯಲ್ಲಿ ಅದಾನಿ ಗ್ರೂಪ್​ನ 10 ಕಂಪನಿಗಳ ಪೈಕಿ ಅದಾನಿ ಎಂಟರ್ಪ್ರೈಸಸ್ ಮತ್ತು ಎಸಿಸಿ ಲಿ ಸಂಸ್ಥೆಗಳು ಮಾತ್ರ ಇಳಿಕೆ ಕಂಡಿವೆ. ಉಳಿದ ಎಂಟು ಕಂಪನಿಗಳು ಏರಿಕೆಯ ಹಾದಿಯಲ್ಲಿವೆ.

12 ಲಕ್ಷ ಕೋಟಿ ರೂ ನಷ್ಟ ಅದಾನಿ ಎಂಟರ್​ಪ್ರೈಸಸ್ ಸಂಸ್ಥೆ ಷೇರುಪೇಟೆಯಲ್ಲಿ ಕೃತಕ ಉಬ್ಬರ ಸೃಷ್ಟಿಸಿ ಹೂಡಿಕೆದಾರರಿಗೆ ವಂಚನೆ ಎಸಗಿದೆ ಎಂಬಿತ್ಯಾದಿ ಕೆಲ ಗುರುತರ ಆರೋಪಗಳನ್ನು ಹಿಂಡನ್ಬರ್ಗ್ ರಿಸರ್ಚ್ ಕಂಪನಿ ಮಾಡಿತ್ತು. ಅದಾದ ಬೆನ್ನಲ್ಲೇ ಅದಾನಿ ಗ್ರೂಪ್​ನ ವಿವಿಧ ಕಂಪನಿಗಳ ಷೇರುಗಳು ಭಾರೀ ಕುಸಿತ ಕಾಣತೊಡಗಿದವು. ಈ ಕಂಪನಿಗಳಲ್ಲಿ ಹಣ ಹಾಕಿದ್ದ ಜನರು ಗೊಂದಲಕ್ಕೊಳಗಾಗಿ ಸಿಕ್ಕಷ್ಟು ಬೆಲೆಗೆ ಮಾರತೊಡಗಿದರು. ಪರಿಣಾಮವಾಗಿ ಷೇರುಗಳ ಬೆಲೆ ಅರ್ಧಕ್ಕಿಂತ ಕೆಳಗೆ ಕುಸಿದಿವೆ. ಒಂದು ಅಂದಾಜು ಪ್ರಕಾರ ಅದಾನಿ ಗ್ರೂಪ್​ನ ಕಂಪನಿಗಳಿಗೆ ಆಗಿರುವ ಒಟ್ಟಾರೆ ನಷ್ಟ 12 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಎನ್ನಲಾಗಿದೆ.

ಇದನ್ನೂ ಓದಿ: India’s 1st e-Tipper: ಒಲೆಕ್ಟ್ರಾ ಗರಿಮೆ; ಭಾರತದ ಮೊದಲ ಎಲೆಕ್ಟ್ರಿಕ್ ಟಿಪ್ಪರ್ ಲಾರಿಗೆ ಪ್ರಾಧಿಕಾರಗಳ ಅನುಮೋದನೆ

ಪರಿಣಾಮವಾಗಿ, ವಿಶ್ವ ಶ್ರೀಮಂತರ ಟಾಪ್-3ಯಲ್ಲಿ ಇದ್ದ ಗೌತಮ್ ಅದಾನಿ ಇದೀಗ 30ನೇ ಸ್ಥಾನಕ್ಕೆ ಕುಸಿದಿದ್ದಾರೆ. ಭಾರತದ ಟಾಪ್-3ಯಲ್ಲೂ ಅವರಿಲ್ಲ.

ಆದರೆ, ಈಗ ಅದಾನಿ ಗ್ರೂಪ್​ನ ಷೇರುಗಳು ಮತ್ತೆ ಬೇಡಿಕೆ ಪಡೆಯುತ್ತಿವೆ. ಉಜ್ವಲ ಭವಿಷ್ಯ ಇರುವ ಕೆಲ ಕ್ಷೇತ್ರಗಳಲ್ಲಿ ಅದಾನಿಯ ಕಂಪನಿಗಳಿವೆ. ಹೀಗಾಗಿ, ಇವುಗಳಿಗೆ ಮುಂದೆ ಬೇಡಿಕೆ ಕುಸಿಯದು. ಮೇಲಾಗಿ ಹಿಂಡನ್ಬರ್ಗ್ ರಿಸರ್ಚ್​ನ ವರದಿ ಸದ್ಯಕ್ಕೆ ಇನ್ನಷ್ಟು ವ್ಯಾಪಕ ಪರಿಣಾಮ ಸೃಷ್ಟಿಸುವುದು ಅನುಮಾನ. ಹೀಗಾಗಿ ಕೆಲ ತಜ್ಞರು ಅದಾನಿ ಕಂಪನಿಗಳ ಷೇರುಗಳು ಮತ್ತೆ ಏರುಗತಿಗೆ ಬರುತ್ತವೆ ಎಂದು ಹಿಂದೆಯೇ ಅಂದಾಜು ಮಾಡಿದ್ದರು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:31 am, Thu, 2 March 23

ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ