Sign In

By signing in or creating an account, you agree with Associated Broadcasting Company's Terms & Conditions and Privacy Policy.

5 Day Work: ಬ್ಯಾಂಕ್ ನೌಕರರಿಗೆ ವಾರದಲ್ಲಿ 2 ದಿನ ರಜಾ ಭಾಗ್ಯ? ದಿನಕ್ಕೆ ಹೆಚ್ಚು ಹೊತ್ತು ಕೆಲಸ ಮಾಡುವ ಟೆನ್ಷನ್

Bank Employees May Get 2 Week Offs: ಬ್ಯಾಂಕ್ ಉದ್ಯೋಗಿಗಳು ವಾರದಲ್ಲಿ ಭಾನುವಾರದ ರಜೆ ಹಾಗೂ ತಿಂಗಳಲ್ಲಿ ಎರಡು ಶನಿವಾರದ ರಜೆ ಸೌಲಭ್ಯ ಹೊಂದಿದ್ದಾರೆ. ಅಂದರೆ ತಿಂಗಳಲ್ಲಿ ಪ್ರತೀ ಭಾನುವಾರ ಹಾಗೂ 2ನೇ ಹಾಗೂ 4ನೇ ಶನಿವಾರ ರಜೆ ಪಡೆಯುತ್ತಿದ್ದಾರೆ. ಈಗ ಹೊಸ ಸೌಲಭ್ಯ ಜಾರಿಯಾದಲ್ಲಿ ಭಾನುವಾರದ ಜೊತೆಗೆ ಶನಿವಾರವೂ ರಜಾ ದಿನವಾಗಿ ಘೋಷಣೆ ಆಗಬಹುದು.

5 Day Work: ಬ್ಯಾಂಕ್ ನೌಕರರಿಗೆ ವಾರದಲ್ಲಿ 2 ದಿನ ರಜಾ ಭಾಗ್ಯ? ದಿನಕ್ಕೆ ಹೆಚ್ಚು ಹೊತ್ತು ಕೆಲಸ ಮಾಡುವ ಟೆನ್ಷನ್
ಬ್ಯಾಂಕ್ ಉದ್ಯೋಗಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 01, 2023 | 6:40 PM

ನವದೆಹಲಿ: ವಾರದಲ್ಲಿ ಎರಡು ದಿನ ವೀಕಾಫ್ ಸಿಗಬೇಕೆಂಬ ಬ್ಯಾಂಕ್ ಉದ್ಯೋಗಿಗಳ (Bank Employees) ಬಹುದಿನದ ಬೇಡಿಕೆ ಈಡೇರುವ ಸಾಧ್ಯತೆ ಇದೆ. ಬ್ಯಾಂಕ್ ಒಕ್ಕೂಟದ (Bank Unions) ಒತ್ತಾಯಕ್ಕೆ ಮಣಿದು ಭಾರತೀಯ ಬ್ಯಾಂಕುಗಳ ಸಂಘ (Indian Banks Association) ಐದು ದಿನಗಳ ವರ್ಕ್ ವೀಕ್​ಗೆ (5 Day Work Week) ಅನುಮೋದನೆ ಕೊಡಬಹುದು ಎಂದು ವರದಿಗಳು ಹೇಳುತ್ತಿವೆ. ಇದು ನಿಜವಾದಲ್ಲಿ ಬ್ಯಾಂಕ್ ನೌಕರರು ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡಬಹುದು. ವಾರದಲ್ಲಿ ಎರಡು ರಜಾ ದಿನಗಳ ಸೌಲಭ್ಯ ಪ್ರಾಪ್ತವಾಗುತ್ತದೆ.

ಸದ್ಯ ಬ್ಯಾಂಕ್ ಉದ್ಯೋಗಿಗಳು ವಾರದಲ್ಲಿ ಭಾನುವಾರದ ರಜೆ ಹಾಗೂ ತಿಂಗಳಲ್ಲಿ ಎರಡು ಶನಿವಾರದ ರಜೆ ಸೌಲಭ್ಯ ಹೊಂದಿದ್ದಾರೆ. ಅಂದರೆ ತಿಂಗಳಲ್ಲಿ ಪ್ರತೀ ಭಾನುವಾರ ಹಾಗೂ 2ನೇ ಹಾಗೂ 4ನೇ ಶನಿವಾರ ರಜೆ ಪಡೆಯುತ್ತಿದ್ದಾರೆ. ಈಗ ಹೊಸ ಸೌಲಭ್ಯ ಜಾರಿಯಾದಲ್ಲಿ ಭಾನುವಾರದ ಜೊತೆಗೆ ಶನಿವಾರವೂ ರಜಾ ದಿನವಾಗಿ ಘೋಷಣೆ ಆಗಬಹುದು.

ಹೆಚ್ಚು ಹೊತ್ತು ಕೆಲಸ: ವಾರದಲ್ಲಿ ಐದು ದಿನ ಕೆಲಸ ಮಾಡುವ ನಿಯಮ ಜಾರಿಗೆ ಬಂದಲ್ಲಿ ಬ್ಯಾಂಕ್ ಉದ್ಯೋಗಿಗಳು ಕೆಲಸದ ದಿನಗಳಲ್ಲಿ ಹೆಚ್ಚು ಹೊತ್ತು ಕೆಲಸ ಮಾಡಬೇಕಾಗಬಹುದು. ವರದಿಗಳ ಪ್ರಕಾರ, ಕೆಲಸದ ದಿನದಲ್ಲಿ 40 ಅಥವಾ 50 ನಿಮಿಷಗಳಷ್ಟು ಹೆಚ್ಚಿಗೆ ಕಾಲ ನೌಕರರು ಕೆಲಸ ಮಾಡಬೇಕೆನ್ನುವ ನಿಯಮ ರೂಪಿಸಲಾಗುತ್ತಿದೆ.

ಇದನ್ನೂ ಓದಿ: ICICI Rates: ಐಸಿಐಸಿಐನ MCLR ದರ ಏರಿಕೆ; ಏನಿದರ ಪರಿಣಾಮ? ಬೇರೆ ಬ್ಯಾಂಕುಗಳಲ್ಲೆಷ್ಟಿದೆ ರೇಟು?

ಇಂಡಿಯನ್ ಬ್ಯಾಂಕ್ ಅಸೋಸಿಯೇಶನ್ ಈ ಪ್ರಸ್ತಾವ ರೂಪಿಸಿದೆ ಎಂದು ಹೇಳಲಾಗುತ್ತಿದೆ. ಸರ್ಕಾರ ಮತ್ತು ಆರ್​ಬಿಐನಿಂದ ಈ ಪ್ರಸ್ತಾವಕ್ಕೆ ಅನುಮೋದನೆ ದೊರೆಯಬೇಕು. ಬಳಿಕ ಸರ್ಕಾರ ಈ ಸಂಬಂಧ ಅಧಿಸೂಚನೆ ಹೊರಡಿಸಿದ ಬಳಿಕ ಬ್ಯಾಂಕ್ ನೌಕರರಿಗೆ ವಾರದಲ್ಲಿ ಭಾನುವಾರ ಮತ್ತು ಶನಿವಾರ ಎರಡು ದಿನಗಳು ರಜಾದಿನವಾಗಿ ಸಿಗುತ್ತವೆ.

ಬ್ಯಾಂಕ್ ಉದ್ಯೋಗಿಗಳಿಗೆ ಸಾಮಾನ್ಯವಾಗಿ ಬಹಳಷ್ಟು ಇತರೆ ರಜೆಗಳೂ ಲಭ್ಯವಾಗುತ್ತವೆ. ಸಾರ್ವತ್ರಿಕ ರಜೆಗಳ ಜೊತೆಗೆ ಪ್ರಾದೇಶಿಕ ರಜೆಗಳೂ ಅವರಿಗೆ ಸಿಗುತ್ತವೆ. ಈ ಮಾರ್ಚ್ ತಿಂಗಳಲ್ಲಿ ವಾರದ ರಜೆಯೂ ಸೇರಿ ಬ್ಯಾಂಕ್ ನೌಕರರಿಗೆ 12 ರಜಾ ದಿನಗಳಿವೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿ ಶಾಸಕರು ಪೀಠಕ್ಕೆ ಆಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಆಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್