AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICICI Rates: ಐಸಿಐಸಿಐನ MCLR ದರ ಏರಿಕೆ; ಏನಿದರ ಪರಿಣಾಮ? ಬೇರೆ ಬ್ಯಾಂಕುಗಳಲ್ಲೆಷ್ಟಿದೆ ರೇಟು?

MCLR Rates Hiked by ICICI: ಎಂಸಿಎಲ್​ಆರ್ ದರ ಏರಿಕೆಯಿಂದ ಐಸಿಐಸಿಐನ ಗೃಹ ಸಾಲ, ವೈಯಕ್ತಿಕ ಸಾಲ ಮತ್ತು ವಾಹನ ಸಾಲಗಳ ಮೇಲೆ ಪರಿಣಾಮ ಬೀರಲಿದೆ. ಈಗಾಗಲೇ ಸಾಲ ಪಡೆದಿರುವವರು ತುಸು ಹೆಚ್ಚಿನ ಮೊತ್ತದ ಇಎಂಐ ಪಾವತಿಸಬೇಕಾಗಬಹುದು.

ICICI Rates: ಐಸಿಐಸಿಐನ MCLR ದರ ಏರಿಕೆ; ಏನಿದರ ಪರಿಣಾಮ? ಬೇರೆ ಬ್ಯಾಂಕುಗಳಲ್ಲೆಷ್ಟಿದೆ ರೇಟು?
ಐಸಿಐಸಿಐ ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 01, 2023 | 6:07 PM

Share

ಐಸಿಐಸಿಐ ಬ್ಯಾಂಕ್ ತನ್ನ ಎಂಸಿಎಲ್​ಆರ್ ದರಗಳನ್ನು (ICICI Hikes MCLR Rates) 10 ಬೇಸಿಸ್ ಪಾಯಿಂಟ್​ಗಳಷ್ಟು ಏರಿಕೆ ಮಾಡಿದೆ. ಇದು ಇವತ್ತಿನಿಂದ, ಅಂದರೆ ಮಾರ್ಚ್ 1ರಿಂದಲೇ ಅನ್ವಯ ಆಗುತ್ತದೆ. ಇದರೊಂದಿಗೆ ಐಸಿಐಸಿಐನ ಎಂಸಿಎಲ್​ಆರ್ ದರಗಳು ಶೇ. 8.5ರಿಂದ ಶೇ. 8.75ರವರೆಗಿನ ಶ್ರೇಣಿಯಲ್ಲಿ ಇರಲಿವೆ. ಐಸಿಐಸಿಐ ಬ್ಯಾಂಕ್​ನ ವೆಬ್​ಸೈಟ್​ನಲ್ಲಿರುವ ಮಾಹಿತಿ ಪ್ರಕಾರ 15 ದಿನಗಳಿಂದ 1 ತಿಂಗಳವರೆಗಿನ ಅವಧಿಗೆ ಇದ್ದ ಎಲ್​ಸಿಎಲ್​ಆರ್ ದರ ಶೇ. 8.4ರಿಂದ ಶೇ. 8.50ಕ್ಕೆ ಏರಿಕೆ ಆಗಿದೆ. 3 ತಿಂಗಳ ಅವಧಿಗೆ ಶೇ. 8.45ರಷ್ಟಿದ್ದ ಎಂಸಿಎಲ್​ಆರ್ ಇದೀಗ ಶೇ. 8.55ಕ್ಕೆ ಏರಿದೆ.

ಎಂಸಿಎಲ್​ಆರ್ ದರ ಎಂದರೇನು? ಎಂಸಿಎಲ್​ಆರ್ ಎಂದರೆ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್. ಇದು ಒಂದು ಹಣಕಾಸು ಸಂಸ್ಥೆ ತಾನು ನೀಡುವ ಸಾಲದ ಮೇಲೆ ವಿಧಿಸುವ ಕನಿಷ್ಠ ಬಡ್ಡಿ ದರ. ಸಾಮಾನ್ಯವಾಗಿ ಬ್ಯಾಂಕುಗಳು ಎಂಸಿಎಲ್​ಆರ್​ಗಿಂತ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವುದಿಲ್ಲ. ತೀರಾ ಮುಖ್ಯ ಗ್ರಾಹಕರಿಗೆ ಮಾತ್ರ ಎಂಸಿಎಲ್​ಆರ್ ದರಕ್ಕೆ ಸಾಲ ನೀಡಲಾಗುತ್ತದೆ.

ಐಸಿಐಸಿಐ ಬ್ಯಾಂಕ್​ನ ದರ ಏರಿಕೆ ಪರಿಣಾಮ ಎಂಸಿಎಲ್​ಆರ್ ದರ ಏರಿಕೆಯಿಂದ ಐಸಿಐಸಿಐನ ಗೃಹ ಸಾಲ, ವೈಯಕ್ತಿಕ ಸಾಲ ಮತ್ತು ವಾಹನ ಸಾಲಗಳ ಮೇಲೆ ಪರಿಣಾಮ ಬೀರಲಿದೆ. ಈಗಾಗಲೇ ಸಾಲ ಪಡೆದಿರುವವರು ತುಸು ಹೆಚ್ಚಿನ ಮೊತ್ತದ ಇಎಂಐ ಪಾವತಿಸಬೇಕಾಗಬಹುದು. ಫ್ಲೋಟಿಂಗ್ ಇಂಟರೆಸ್ಟ್ ಅನ್ವಯದಲ್ಲಿ ಸಾಲ ಪಡೆದವರಿಗೆ ಈ ಬದಲಾವಣೆ ಆಗುತ್ತದೆ. ಅದಲ್ಲದವರಿಗೆ ಹಳೆಯ ಬಡ್ಡಿ ದರಗಳೇ ಅನ್ವಯ ಆಗುತ್ತವೆ.

ಇದನ್ನೂ ಓದಿ: Money Double: ಆ್ಯಕ್ಸಿಸ್ ಬ್ಯಾಂಕ್​ನಲ್ಲಿ ಠೇವಣಿ ಇಟ್ಟರೆ ಬೇಗ ಹಣ ಡಬಲ್; ಅತಿ ಹೆಚ್ಚು ಬಡ್ಡಿ ದರ; ಇಲ್ಲಿದೆ ವಿವರ

ಪ್ರಮುಖ ಬ್ಯಾಂಕುಗಳ ಪೈಕಿ ಆ್ಯಕ್ಸಿಸ್ ಬ್ಯಾಂಕ್​ನಲ್ಲಿ ಎಂಸಿಎಲ್​ಆರ್ ದರಗಳು ತುಸು ಕಡಿಮೆ ಇವೆ. ಇಲ್ಲಿ 15 ದಿನದ ಅವಧಿಗೆ ಎಂಸಿಎಲ್​ಆರ್ ದರ ಶೇ. 7.85 ಇದೆ. ಗರಿಷ್ಠ ಶೇ. 8.20ವರೆಗೂ ದರ ಇದೆ.

ವಿವಿಧ ಬ್ಯಾಂಕುಗಳ ಎಂಸಿಎಲ್​ಆರ್ ದರಗಳು ಐಸಿಐಸಿಐ ಬ್ಯಾಂಕ್: 15 ದಿನದಿಂದ 12 ತಿಂಗಳವರೆಗಿನ ಅವಧಿಗೆ ಶೇ. 8.50ರಿಂದ ಶೇ. 8.75. ಎಸ್​ಬಿಐ: 3 ತಿಂಗಳಿಂದ 24 ತಿಂಗಳವರೆಗಿನ ಅವಧಿಗೆ ಶೇ. 8.10ರಿಂದ ಶೇ. 8.60 ಎಚ್​ಡಿಎಫ್​ಸಿ ಬ್ಯಾಂಕ್: 15 ದಿನದಿಂದ 36 ತಿಂಗಳ ಅವಧಿಗಳು ಶೇ. 7.90 ರಿಂದ ಶೇ. 8.40 ಆ್ಯಕ್ಸಿಸ್ ಬ್ಯಾಂಕ್: 15ದಿನದಿಂದ 36 ತಿಂಗಳ ಅವಧಿಗೆ ಶೇ. 7.85 ರಿಂದ 8.20

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:00 pm, Wed, 1 March 23

ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ