India’s 1st e-Tipper: ಒಲೆಕ್ಟ್ರಾ ಗರಿಮೆ; ಭಾರತದ ಮೊದಲ ಎಲೆಕ್ಟ್ರಿಕ್ ಟಿಪ್ಪರ್ ಲಾರಿಗೆ ಪ್ರಾಧಿಕಾರಗಳ ಅನುಮೋದನೆ

Olectra Produces India's First Electric Truck: ಇ-ಬಸ್ಸುಗಳ ತಯಾರಕ ಒಲೆಕ್ಟ್ರಾ ಗ್ರೀನ್​ಟೆಕ್ ಇದೀಗ ಎಲೆಕ್ಟ್ರಿಕ್ ಟ್ರಕ್ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ಭಾರತದ ಮೊದಲ ಇ-ಟಿಪ್ಪರ್ ತಯಾರಿಸಿದೆ. ವಿವಿಧ ಆಟೊಮೊಬೈಲ್ ಪ್ರಾಧಿಕಾರಗಳ ಅನುಮೋದನೆ ಕೂಡ ಸಿಕ್ಕಿದೆ.

India's 1st e-Tipper: ಒಲೆಕ್ಟ್ರಾ ಗರಿಮೆ; ಭಾರತದ ಮೊದಲ ಎಲೆಕ್ಟ್ರಿಕ್ ಟಿಪ್ಪರ್ ಲಾರಿಗೆ ಪ್ರಾಧಿಕಾರಗಳ ಅನುಮೋದನೆ
ಒಲೆಕ್ಟ್ರಾ ಇ-ಟಿಪ್ಪರ್
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Mar 01, 2023 | 4:15 PM

ಬೆಂಗಳೂರು: ಒಲೆಕ್ಟ್ರಾ ಗ್ರೀನ್​ಟೆಕ್ ಸಂಸ್ಥೆ (Olectra Greentech) ತಯಾರಿಸಿರುವ ಎಲೆಕ್ಟ್ರಿಕ್ ಟಿಪ್ಪರ್ ಲಾರಿಗೆ (Electric Tipper) ಭಾರತದ ವಾಹನ ನಿಯಂತ್ರಣ ಪ್ರಾಧಿಕಾರಗಳಿಂದ ಅನುಮೋದನೆ ದೊರೆತಿದೆ. 20 ಇ-ಟಿಪ್ಪರ್​ಗಳ ಸರಬರಾಜು ಮಾಡುವ ಮೊದಲ ಆರ್ಡರ್ ಸದ್ಯದಲ್ಲೇ ಸಿಗಲಿದೆ ಎಂದು ಒಲೆಕ್ಟ್ರಾ ಹೇಳಿಕೊಂಡಿದೆ. ಒಲೆಕ್ಟ್ರಾದ ಈ ವಾಹನವು ಭಾರತದ ಮೊದಲ ಹೆವಿ ಡ್ಯೂಟಿ 6X4 ಟಿಪ್ಪರ್ ಎಲೆಕ್ಟ್ರಿಕ್ ಟಿಪ್ಪರ್ ಎನಿಸಿದೆ.

ಬೆಂಗಳೂರು ಮತ್ತು ದೆಹಲಿಯಲ್ಲಿ ಇತ್ತೀಚೆಗೆ ನಡೆದಿದ್ದ ಆಟೋ ಪ್ರದರ್ಶನದಲ್ಲಿ ಹೆವಿ ಟ್ಯೂಟಿ ಎಲೆಕ್ಟ್ರಿಕ್ ಟ್ರಕ್​ನ ಪ್ರೋಟೋಟೈಪ್ ಅನ್ನು ಒಲೆಕ್ಟ್ರಾ ಪ್ರದರ್ಶಿಸಿತ್ತು. ಬಹಳಷ್ಟು ಸರ್ಕಾರಿ ಮತ್ತು ಖಾಸಗಿ ವ್ಯಕ್ತಿಗಳು ಈ ಪ್ರೋಟೋಟೈಪ್ ಬಗ್ಗೆ ಕುತೂಹಲಗೊಂಡಿದ್ದರೆನ್ನಲಾಗಿದೆ. ಒಲೆಕ್ಟ್ರಾ ಗ್ರೀನ್​ಟೆಕ್ ಸಂಸ್ಥೆಯ ಛೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಈ ಬಗ್ಗೆ ಮಾತನಾಡಿ, ತಮ್ಮ ಕಂಪನಿಗೆ 20 ಇ-ಟಿಪ್ಪರ್​ಗಳ ತಯಾರಿಕೆಯ ಮೊದಲ ಆರ್ಡರ್ ಬರಲಿದ್ದು, ಮಾತುಕತೆ ಅಂತಿಮ ಹಂತದಲ್ಲಿದೆ ಎಂದಿದ್ದಾರೆ.

Olectra e-tipper

ಒಲೆಕ್ಟ್ರಾ ಇ-ಟ್ರಕ್

ಭಾರತದ ಎಲೆಕ್ಟ್ರಿಕ್ ಹೆವಿ ಟ್ರಕ್ ವಿಭಾಗದಲ್ಲಿ ಒಲೆಕ್ಟ್ರಾ ಮುಂಚೂಣಿಯಲ್ಲಿರುವುದು ಖುಷಿ ತಂದಿದೆ. ದೇಶೀಯವಾಗಿಯೇ ವಿನ್ಯಾಸಗೊಂಡು ತಯಾರಿಸಲಾಗಿರುವ ಭಾರತದ ಮೊದಲ ಸರ್ಟಿಫೈಡ್ ಹೆವಿ ಡ್ಯೂಟಿ ಎಲೆಕ್ಟ್ರಿಕ್ ಟಿಪ್ಪರ್ ನಮ್ಮದು. ಇ-ಟಿಪ್ಪರ್ ಮತ್ತು ಎಲೆಕ್ಟ್ರಿಕ್ ಟ್ರಕ್​ನ ಇನ್ನಷ್ಟು ಆವೃತ್ತಿಗಳನ್ನು ನಾವು ಶೀಘ್ರದಲ್ಲೇ ಹೊರತರುತ್ತಿದ್ದೇವೆ. ಇದು ನಮ್ಮ ಪ್ರಯಾಣದ ಆರಂಭಿಕ ಹೆಜ್ಜೆ ಮಾತ್ರ ಎಂದು ಒಲೆಕ್ಟ್ರಾ ಗ್ರೀನ್​ಟೆಕ್ ಛೇರ್ಮನ್ ಕೆ.ವಿ. ಪ್ರದೀಪ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Olectra e truck

ಒಲೆಕ್ಟ್ರಾ ಇ-ಟ್ರಕ್

ಹೆವಿ ಡ್ಯೂಟಿ ಟ್ರಕ್​ಗಳು ಕಟ್ಟಡ ನಿರ್ಮಾಣ, ಇನ್​ಫ್ರಾಸ್ಟ್ರಕ್ಚರ್ ನಿರ್ಮಾಣ, ಗಣಿಗಾರಿಕೆ, ಕ್ವಾರಿ ಕೆಲಸಗಳಲ್ಲಿ ಹೆಚ್ಚು ಬಳಕೆಯಾಗುತ್ತವೆ. ಇಲ್ಲಿ ಭಾರೀ ತೂಕದ ಸಾಮಗ್ರಿಗಳನ್ನು ಸಾಗಿಸಬೇಕಾಗುತ್ತದೆ. ಇಲ್ಲಿ ಒಲೆಕ್ಟ್ರಾ ಎಲೆಕ್ಟ್ರಿಕ್ ಟಿಪ್ಪರ್ ಬಹಳ ಉಪಯುಕ್ತ ಎನಿಸುತ್ತದೆ. ಅಲ್ಲದೇ, ಇ-ಟಿಪ್ಪರ್ ಹೆಚ್ಚು ಸದ್ದು ಮಾಡುವುದಿಲ್ಲ, ವಾಯು ಮಾಲಿನ್ಯವೂ ಇರುವುದಿಲ್ಲ. ಇದರ ಮಾಲೀಕರಿಗೆ ಸಾಕಷ್ಟು ಹಣ ಉಳಿತಾಯಕ್ಕೂ ಕಾರಣವಾಗುತ್ತದೆ ಎಂಬುದು ಸಂಸ್ಥೆಯ ಅಭಿಪ್ರಾಯ.

ಭಾರತೀಯ ರಸ್ತೆ ಮತ್ತು ದುರ್ಗಮ ಪ್ರದೇಶಗಳಲ್ಲಿ ಇದನ್ನು ಪರೀಕ್ಷೆಗೊಳಪಡಿಸಲಾಗಿದೆ. ಬೆಟ್ಟದ ಎತ್ತರದ ದಾರಿಗಳು, ಮೈನಿಂಗ್ ಮಾಡುವ ಅಳದ ಸ್ಥಳಗಳು, ಕ್ವಾರಿ ನಡೆಯುವ ಸ್ಥಳಗಳಲ್ಲೆಲ್ಲಾ ಇದರ ಕಾರ್ಯಾಚರಣೆಯನ್ನು ಪರೀಕ್ಷಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

Olectra e truck

ಒಲೆಕ್ಟ್ರಾ ಇ-ಟ್ರಕ್

ಒಲೆಕ್ಟ್ರಾ ಗ್ರೀನ್​ಟೆಕ್ ಕಂಪನಿಯು ಮೇಘಾ ಎಂಜಿನಿಯರಿಂಗ್ ಅಂಡ್ ಇನ್​ಫ್ರಾಸ್ಟ್ರಕ್ಚರ್ಸ್ ಲಿ (ಎಂಇಐಎಲ್) ಅಂಗಸಂಸ್ಥೆಯಾಗಿದೆ. 2000ರಲ್ಲಿ ಆರಂಭವಾದ ಒಲೆಕ್ಟ್ರಾ ಗ್ರೀನ್​ಟೆಕ್ ಭಾರತದಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ತಯಾರಿಕೆಯಲ್ಲಿ ಸಿದ್ಧಹಸ್ತವಾಗಿದೆ. ಇದೀಗ ಅದರ ವ್ಯಾಪ್ತಿ ಇ-ಟ್ರಕ್​ಗೂ ವಿಸ್ತರಣೆ ಆಗಿದೆ.

Olectra e truck

ಒಲೆಕ್ಟ್ರಾ ಇ-ಟ್ರಕ್

ಗ್ರೀನ್ ಟೆಕ್ ಸಂಸ್ಥೆ ಭಾರತದ ಅತಿದೊಡ್ಡ ಸಿಲಿಕೋನ್ ರಬ್ಬರ್ ಮತ್ತು ಕಾಂಪೋಸಿಟ್ ಇನ್ಸುಲೇಟರ್​ಗಳ ತಯಾರಕ ಕಂಪನಿಯೂ ಹೌದು. ಈ ಇನ್ಸುಲೇಟರ್​ಗಳನ್ನು ವಿದ್ಯುತ್ ಪ್ರಸರಣ ಮತ್ತು ವಿತರಣಾ ಜಾಲಗಳಿಗೆ ಉಪಯೋಗಿಸಲಾಗುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:04 pm, Wed, 1 March 23