AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

EPF Withdrawal: ಇಪಿಎಫ್ ಖಾತೆಯಿಂದ ಹಣ ಯಾವಾಗೆಲ್ಲಾ ಹಿಂಪಡೆಯಬಹುದು? ಇಲ್ಲಿದೆ ವಿವರ

Instances To Take EPF Advance: ಒಬ್ಬ ಉದ್ಯೋಗಿ 55 ವರ್ಷ ವಯಸ್ಸಾದ ಬಳಿಕ ಇಪಿಎಫ್ ಖಾತೆಯಿಂದ ಹಣ ಹಿಂಪಡೆಯಬಹುದು. ಅದಕ್ಕಿಂತ ಕಡಿಮೆ ವಯಸ್ಸಿನ ಉದ್ಯೋಗಿಗಳು ಇಪಿಎಫ್ ಹಣ ಹಿಂಪಡೆಯುವುದು ಕಷ್ಟಸಾಧ್ಯವಾದರೂ ಅದಕ್ಕಾಗಿ ಕೆಲ ಮಾರ್ಗೋಪಾಯಗಳಿವೆ.

EPF Withdrawal: ಇಪಿಎಫ್ ಖಾತೆಯಿಂದ ಹಣ ಯಾವಾಗೆಲ್ಲಾ ಹಿಂಪಡೆಯಬಹುದು? ಇಲ್ಲಿದೆ ವಿವರ
ಪಿಎಫ್ ಹಣ ಹಿಂಪಡೆಯುವುದು
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 20, 2023 | 4:19 PM

Share

ಎಂಪ್ಲಾಯೀ ಪ್ರಾವಿಡೆಂಟ್ ಫಂಡ್ ಅಥವಾ ಉದ್ಯೋಗಿ ಭವಿಷ್ಯ ನಿಧಿ ಯೋಜನೆ (EPF) ಕೇಂದ್ರ ಸರ್ಕಾರದಿಂದ ನಡೆಸಲಾಗುತ್ತಿದ್ದು, ಇದು ಪ್ರತಿಯೊಬ್ಬ ಉದ್ಯೋಗಿಗಳ ನಿವೃತ್ತಿ ಜೀವನದ ಭದ್ರತೆಗೆಂದು ರೂಪಿಸಲಾಗಿದೆ. ಉದ್ಯೋಗಿ ನಿವೃತ್ತರಾಗುವವರೆಗೂ ಅವರ ಪಿಎಫ್ ಖಾತೆಗೆ ಪ್ರತೀ ತಿಂಗಳೂ ನಿರ್ದಿಷ್ಟ ಮೊತ್ತದ ಹಣ ಜಮೆಯಾಗುತ್ತಾ ಹೋಗುತ್ತದೆ. ಉದ್ಯೋಗಿ, ಸಂಸ್ಥೆ ಹಾಗೂ ಸರ್ಕಾರ ಈ ಮೂರರಿಂದಲೂ ಪಿಎಫ್ ಖಾತೆಗೆ ಹಣ ಬೀಳುತ್ತಿರುತ್ತದೆ. ನಿವೃತ್ತಿ ನಂತರ ಈ ಪಿಎಫ್ ಖಾತೆಯಲ್ಲಿರುವ ಹಣವನ್ನು ಪಿಂಚಣಿಯಂತೆ (Pension) ಬಳಸಿಕೊಳ್ಳಬಹುದು. ಅಥವಾ ಒಟ್ಟಿಗೆ ಎಲ್ಲಾ ಹಣವನ್ನೂ ಪಡೆಯಬಹುದು. ಒಬ್ಬ ಉದ್ಯೋಗಿ 55 ವರ್ಷ ವಯಸ್ಸಾದ ಬಳಿಕ ಇಪಿಎಫ್ ಖಾತೆಯಿಂದ ಹಣ ಹಿಂಪಡೆಯಬಹುದು. ಅದಕ್ಕಿಂತ ಕಡಿಮೆ ವಯಸ್ಸಿನ ಉದ್ಯೋಗಿಗಳು ಇಪಿಎಫ್ ಹಣ ಹಿಂಪಡೆಯುವುದು ಕಷ್ಟಸಾಧ್ಯವಾದರೂ ಅದಕ್ಕಾಗಿ ಕೆಲ ಮಾರ್ಗೋಪಾಯಗಳಿವೆ.

ಕೆಲವೊಮ್ಮೆ ಸಮಯ ಸಂದರ್ಭಗಳು ಕ್ಲಿಷ್ಟಕರಗೊಂಡು ನಮಗೆ ತುರ್ತು ಹಣದ ಅಗತ್ಯ ಬೀಳಬಹುದು. ಅಂಥ ಸಂದರ್ಭದಲ್ಲಿ ಇಪಿಎಫ್ ಖಾತೆಯಲ್ಲಿರುವ ಹಣವನ್ನು ಉಪಯೋಗಿಸಿಕೊಳ್ಳಲು ಸರ್ಕಾರ ಅವಕಾಶ ಕೊಟ್ಟಿದೆ. ಪೂರ್ತಿ ಹಣ ಹಿಂಪಡೆಯಲು ಸಾಧ್ಯವಿಲ್ಲವಾದರೂ ಮುಂಗಡವಾಗಿ ಹೆಚ್ಚು ಮೊತ್ತವನ್ನು ವಿತ್​ಡ್ರಾ ಮಾಡಿಕೊಳ್ಳಬಹುದು. ಅಂಥ ವಿಶೇಷ ಸಂದರ್ಭಗಳು ಈ ಕೆಳಕಂಡಂತಿವೆ:

ಗೃಹ ಸಾಲ: ಮನೆ ಅಥವಾ ನಿವೇಶನ ಖರೀದಿಸಲು, ಮನೆಯ ದುರಸ್ತಿ ಮಾಡಲು, ಗೃಹ ಸಾಲದ ಮರುಪಾವತಿ ಮಾಡಲು ಇಪಿಎಫ್ ಖಾತೆಯಿಂದ ಅಡ್ವಾನ್ಸ್ ಮೊತ್ತ ಪಡೆಯಬಹುದು. ಪ್ರತಿಯೊಂದು ಉದ್ದೇಶಕ್ಕೂ ನಿರ್ದಿಷ್ಟ ಮೊತ್ತದ ಹಣವನ್ನು ಹಿಂಪಡೆಯುವ ಅವಕಾಶ ಇರುತ್ತದೆ. ಉದಾಹರಣೆಗೆ, ನಿವೇಶನ ಖರೀದಿಸುವಾಗ ನಾವು ನಮ್ಮ ಬೇಸಿಕ್ ಸ್ಯಾಲರಿ ಮತ್ತು ಡಿಎ ಮೊತ್ತದ 24 ಪಟ್ಟು ಹೆಚ್ಚು ಮೊತ್ತಕ್ಕಿಂತ ಕಡಿಮೆ ಹಣವನ್ನು ಮಾತ್ರ ಹಿಂಪಡೆಯಬಹುದು. ಮನೆ ಖರೀದಿಸುವುದಾದರೆ ಇದು 36 ಪಟ್ಟು ಹೆಚ್ಚು ಹಣದ ಮಿತಿ ಇದೆ.

ಇದನ್ನೂ ಓದಿITR-1 Form: ಐಟಿ ರಿಟರ್ನ್ಸ್ ಸಮಯ; ಐಟಿಆರ್1 ಯಾರು ಫೈಲ್ ಮಾಡಬೇಕು, ಮಾಡಬಾರದು? ಇಲ್ಲಿದೆ ವಿವರ

ಉದ್ಯೋಗ ನಷ್ಟ: ಒಂದು ವೇಳೆ ಉದ್ಯೋಗಿ ಕೆಲಸ ಕಳೆದುಕೊಂಡರೆ ಒಟ್ಟೂ ಪಿಎಫ್ ಹಣದ ಶೇ 75ರಷ್ಟು ಭಾಗವನ್ನು ಹಿಂಪಡೆಯಬಹುದು. ಎರಡು ತಿಂಗಳು ಬೇರೆ ಕೆಲಸ ಸಿಕ್ಕದೇ ನಿರುದ್ಯೋಗಿಯಾಗಿ ಮುಂದುವರಿದರೆ ಬಾಕಿ ಇರುವ ಪಿಎಫ್ ಹಣವನ್ನೂ ವಿತ್​ಡ್ರಾ ಮಾಡಬಹುದು.

ಮದುವೆ: ಮದುವೆ ಕಾರ್ಯಕ್ಕಾಗಿ ಪಿಎಫ್ ಹಣದಲ್ಲಿ ಮುಂಗಡ ಪಡೆಯುವ ಅವಕಾಶ ಇರುತ್ತದೆ. ಸ್ವತಃ ಉದ್ಯೋಗಿಯ ಮದುವೆಯೋ, ಅಥವಾ ಅವರ ಕುಟುಂಬದ ಇತರ ಸದಸ್ಯರ ಮದುವೆಯೋ ಆ ಸಂದರ್ಭದಲ್ಲಿ ಪಿಎಫ್ ಅಡ್ವಾನ್ಸ್ ಪಡೆದುಕೊಳ್ಳಬಹುದು. ಪಿಎಫ್ ಖಾತೆಯಲ್ಲಿ ಉದ್ಯೋಗಿಯ ಕೊಡುಗೆಯ ಹಣದಲ್ಲಿ ಶೇ. 50ರಷ್ಟು ಮೊತ್ತ ಮಾತ್ರ ಸಿಕ್ಕುತ್ತದೆ.

ನಿವೃತ್ತಿಗೆ 1 ವರ್ಷ ಮುನ್ನ: ಇಲ್ಲಿ ಇಪಿಎಫ್ ಹಣ ಹಿಂಪಡೆಯಲು ನಿವೃತ್ತಿ ವಯಸ್ಸನ್ನು 55 ವರ್ಷದವರೆಗೂ ಇಳಿಸಲಾಗಿದೆ. ಈ ವಯಸ್ಸಿನಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ಯಾವುದೇ ವಯಸ್ಸಿನಲ್ಲಿ ನಿವೃತ್ತರಾದರೂ ಒಂದು ವರ್ಷಕ್ಕೆ ಮುನ್ನ ಪಿಎಫ್ ಹಣ ಹಿಂಪಡೆಯಬಹುದು. ಅಂದರೆ 54 ವರ್ಷ ವಯಸ್ಸಿನಲ್ಲಿ ಬೇಕಾದರೆ ಪಿಎಫ್ ಖಾತೆಯಿಂದ ಶೇ. 90ರಷ್ಟು ಹಣವನ್ನು ವಿತ್​ಡ್ರಾ ಮಾಡಿಕೊಳ್ಳಬಹುದು.

ಇದನ್ನೂ ಓದಿIncome Tax: ಸೆಲ್ಫ್ ಅಸೆಸ್ಮೆಂಟ್ ಮತ್ತು ಅಡ್ವಾನ್ಸ್ ಟ್ಯಾಕ್ಸ್ ಪಾವತಿಸುವುದು ಹೇಗೆ? ಇಲ್ಲಿದೆ ವಿವರ

ವರಿಷ್ಠ ಬಿಮಾ ಯೋಜನೆಯಲ್ಲಿ ಹೂಡಿಕೆ: ಉದ್ಯೋಗಿಗಳು 55 ವರ್ಷ ವಯಸ್ಸು ತಲುಪಿದಾಗ ತಮ್ಮ ಪಿಎಫ್ ಖಾತೆಯಲ್ಲಿರುವ ಶೇ. 90ರಷ್ಟು ಮೊತ್ತವನ್ನು ವರಿಷ್ಠ ವಿಮಾ ಯೋಜನೆಯಲ್ಲಿ ಹೂಡಿಕೆಗೆ ಬಳಸಿಕೊಳ್ಳಬಹುದು.

ಸಾಂಕ್ರಾಮಿಕ ಕಾಯಿಲೆ ವೇಳೆ: ಮೂರು ವರ್ಷಗಳ ಹಿಂದೆ ಕೊರೋನಾ ವೈರಸ್ ಸೋಂಕು ಎಲ್ಲೆಡೆ ಪಸರಿಸಿ ಜನಜೀವನಕ್ಕೆ ಘಾಸಿ ಮಾಡಿತ್ತು. ಕೋಟ್ಯಂತರ ಮಂದಿ ಈ ರೋಗ ಹಾಗೂ ತತ್​ಸಂಬಂಧ ಲಾಕ್​ಡೌನ್​ನಿಂದ ಬಾಧಿತರಾಗಿದ್ದುಂಟು. ಈ ಹಿನ್ನೆಲೆಯಲ್ಲಿ ಇಂಥ ತುರ್ತು ಆರೋಗ್ಯ ಸಂದರ್ಭದಲ್ಲಿ ಪಿಎಫ್ ಹಣ ಹಿಂಪಡೆಯುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ.

ಹಾಗೆಯೇ, ನೈಸರ್ಗಿಕ ಅವಘಡಗಳು, ಕೆಲಸ ಮಾಡುವ ಕಾರ್ಖಾನೆ ಮುಚ್ಚಿದರೆ, ಉದ್ಯೋಗಿ ಅಥವಾ ಕುಟುಂಬದವರು ಅನಾರೋಗ್ಯಗೊಂಡರೆ ಹೀಗೆ ವಿವಿಧ ಕಾರಣಗಳಿಗೂ ಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಬಹುದಾಗಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:17 pm, Mon, 20 March 23

ಪಿಕ್​ಅಪ್ ವ್ಯಾನ್ ಮೇಲೆ ಬಿದ್ದ ನಿರ್ಮಾಣ ಹಂತದ ಮೇಲ್ಸೇತುವೆಯ ಗ್ರಿಡರ್
ಪಿಕ್​ಅಪ್ ವ್ಯಾನ್ ಮೇಲೆ ಬಿದ್ದ ನಿರ್ಮಾಣ ಹಂತದ ಮೇಲ್ಸೇತುವೆಯ ಗ್ರಿಡರ್
ದಾರಿಯಲ್ಲಿ ಸಿಕ್ಕ ಹಣ ರೈತನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್
ದಾರಿಯಲ್ಲಿ ಸಿಕ್ಕ ಹಣ ರೈತನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್
ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!
ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!
ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್
ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್
ಗಿಲ್ಲಿ-ಕಾವ್ಯಾ ನಡುವೆ ಇನ್ನೂ ಮುಗಿದಿಲ್ಲ ಹುಸಿಮುನಿಸು
ಗಿಲ್ಲಿ-ಕಾವ್ಯಾ ನಡುವೆ ಇನ್ನೂ ಮುಗಿದಿಲ್ಲ ಹುಸಿಮುನಿಸು
ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!
ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ