ITR-1 Form: ಐಟಿ ರಿಟರ್ನ್ಸ್ ಸಮಯ; ಐಟಿಆರ್1 ಯಾರು ಫೈಲ್ ಮಾಡಬೇಕು, ಮಾಡಬಾರದು? ಇಲ್ಲಿದೆ ವಿವರ

Know About ITR-1 form: ವೃತ್ತಿಪರರು, ಸ್ವಂತ ಉದ್ಯೋಗಿಗಳು, ಸಂಬಳ ಪಡೆಯುವ ಉದ್ಯೋಗಿಗಳು ಇವರೆಲ್ಲರೂ ಐಟಿ ರಿಟರ್ನ್ ಸಲ್ಲಿಸಬೇಕು. ನಿಗದಿತ ಹಣಕಾಸು ವರ್ಷದಲ್ಲಿ ತಾನು ಗಳಿಸಿದ ಒಟ್ಟೂ ಆದಾಯವನ್ನು ಈ ಐಟಿ ರಿಟರ್ನ್​ನಲ್ಲಿ ದಾಖಲಿಸಬೇಕು.

ITR-1 Form: ಐಟಿ ರಿಟರ್ನ್ಸ್ ಸಮಯ; ಐಟಿಆರ್1 ಯಾರು ಫೈಲ್ ಮಾಡಬೇಕು, ಮಾಡಬಾರದು? ಇಲ್ಲಿದೆ ವಿವರ
ಐಟಿಆರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 20, 2023 | 3:18 PM

ನವದೆಹಲಿ: ಇನ್ಕಮ್ ಟ್ಯಾಕ್ ರಿಟರ್ನ್ ಅಥವಾ ಐಟಿ ರಿಟರ್ನ್ (IT Return) ಫೈಲ್ ಮಾಡುವ ಸಮಯ ಸಮೀಪಿಸಿದೆ. 2022-23ರ ಹಣಕಾಸು ವರ್ಷದ ಐಟಿ ರಿಟರ್ನ್ ಫೈಲ್ ಮಾಡಲು ಜುಲೈ 31ರವರೆಗೂ ಮಾತ್ರ ಸಮಯಾವಕಾಶ ಇದೆ. ನಮ್ಮ ಒಟ್ಟು ತೆರಿಗೆ ಬಾಕಿ, ಟ್ಯಾಕ್ಸ್ ಡಿಡಕ್ಷನ್​ಗಳು, ತೆರಿಗೆ ಅನ್ವಯವಾಗುವ ಆದಾಯ ಇವುಗಳನ್ನು ಘೋಷಿಸಲು ಆದಾಯ ತೆರಿಗೆ ಇಲಾಖೆ ವಿವಿಧ ನಮೂನೆಯ ಫಾರ್ಮ್​ಗಳನ್ನು ನೀಡಿದೆ. ಪ್ರತಿಯೊಂದು ಸಂಸ್ಥೆ ಹಾಗೂ ಪ್ರತಿಯೊಬ್ಬ ತೆರಿಗೆ ಪಾವತಿದಾರರೂ ತಮಗೆ ಅನ್ವಯ ಆಗುವ ಫಾರ್ಮ್ ಅನ್ನು ಭರ್ತಿ ಮಾಡಬೇಕು. ವೃತ್ತಿಪರರು, ಸ್ವಂತ ಉದ್ಯೋಗಿಗಳು, ಸಂಬಳ ಪಡೆಯುವ ಉದ್ಯೋಗಿಗಳು ಇವರೆಲ್ಲರೂ ಐಟಿ ರಿಟರ್ನ್ ಸಲ್ಲಿಸಬೇಕು. ನಿಗದಿತ ಹಣಕಾಸು ವರ್ಷದಲ್ಲಿ ತಾನು ಗಳಿಸಿದ ಒಟ್ಟೂ ಆದಾಯವನ್ನು ಈ ಐಟಿ ರಿಟರ್ನ್​ನಲ್ಲಿ ದಾಖಲಿಸಬೇಕು.

ಇನ್ಕಮ್ ಟ್ಯಾಕ್ಸ್​ನ ಇಫೈಲಿಂಗ್ ಪೋರ್ಟಲ್ ಮೂಲಕ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡಬಹುದು. ಆದರೆ, ಐಟಿಆರ್ ತುಂಬುವ ಮುನ್ನ ಎಲ್ಲಾ ತೆರಿಗೆ ಪಾವತಿದಾರರೂ ಕೂಡ ತಮ್ಮ ಪಾನ್ ನಂಬರ್ ಅನ್ನು ಆಧಾರ್​ಗೆ ಲಿಂಕ್ ಮಾಡಿರಬೇಕು. ಆದಾಯ ತೆರಿಗೆ ಇಲಾಖೆ ಈ ಕ್ರಮವನ್ನು ಕಡ್ಡಾಯಪಡಿಸಿದೆ. ಐಟಿಆರ್​ನಲ್ಲಿ ಐಟಿಆರ್-1, ಐಟಿಆರ್-2 ಇತ್ಯಾದಿ 7ಫಾರ್ಮ್​ಗಳಿವೆ. ಇದರಲ್ಲಿ ತಮಗೆ ಅನ್ವಯವಾಗುವ ಅರ್ಜಿಯನ್ನು ಆಯ್ಕೆ ಮಾಡಿಕೊಂಡು ಭರ್ತಿ ಆಡಬೇಕು.

ಇದನ್ನೂ ಓದಿIncome Tax: ಸೆಲ್ಫ್ ಅಸೆಸ್ಮೆಂಟ್ ಮತ್ತು ಅಡ್ವಾನ್ಸ್ ಟ್ಯಾಕ್ಸ್ ಪಾವತಿಸುವುದು ಹೇಗೆ? ಇಲ್ಲಿದೆ ವಿವರ

ಐಟಿ ರಿಟರ್ನ್ಸ್​ನಲ್ಲಿ ಐಟಿಆರ್-1 ಅರ್ಜಿ ಯಾರಿಗೆ ಅನ್ವಯವಾಗುತ್ತದೆ?

ಐಟಿಆರ್-1 ಅರ್ಜಿ ಯಾವ ವ್ಯಕ್ತಿಗೆ ಅನ್ವಯ ಅಗುತ್ತದೆ ಎಂಬ ವಿವರ ಇಲ್ಲಿದೆ

ಹಣಕಾಸು ವರ್ಷದಲ್ಲಿ ವ್ಯಕ್ತಿಯ ಆದಾಯ 50 ಲಕ್ಷ ಮೀರಿರಬಾರದು.

ಸಂಬಳದಾರರು, ಗೃಹ ಆಸ್ತಿ, ಕುಟುಂಬ ಪಿಂಚಣಿ ಆದಾಯ, 5,000 ರುವರೆಗೂ ಕೃಷಿ ಆದಾಯ ಹೊಂದಿರುವವರು

ಉಳಿತಾಯ ಖಾತೆಯ ಬಡ್ಡಿ, ಠೇವಣಿಗಳಿಂದ ಬಡ್ಡಿ, ಐಟಿ ರೀಫಂಡ್​ನಿಂದ ಬಡ್ಡಿ, ಕುಟುಂಬ ಪಿಂಚಣಿ, ಇತರೆಡೆಯಿಂದ ಬಡ್ಡಿ ಪಡೆಯುತ್ತಿರುವವರು ಈ ಐಟಿಆರ್-1 ಫಾರ್ಮ್ ಪಡೆಯಬೇಕು.

ಯಾರಿಗೆ ಐಟಿಆರ್-1 ಫಾರ್ಮ್ ಅನ್ವಯ ಆಗೊಲ್ಲ?

  • ಎನ್​ಆರ್​ಐಗಳು
  • 50 ಲಕ್ಷ ರೂಗಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವವರು
  • 5,000 ರೂಗಿಂತ ಹೆಚ್ಚು ಕೃಷಿ ಆದಾಯ ಹೊಂದಿರುವವರು
  • ಲಾಟರಿ, ಕುದುರೆ ರೇಸು, ಕಾನೂನಾತ್ಮಕ ಜೂಜು ಇತ್ಯಾದಿ ಮೂಲಗಳಿಂದ ಆದಾಯ ಪಡೆದವರು
  • ತೆರಿಗೆ ಅನ್ವಯವಾಗುವ ವಹಿವಾಟಿನಿಂದ ಲಾಭ ಪಡೆದವರು
  • ವ್ಯವಹಾರ ಅಥವಾ ವೃತ್ತಿಯಿಂದ ಸಂಪಾದನೆ ಮಾಡುತ್ತಿರುವವರು
  • ಕಂಪನಿಯ ನಿರ್ದೇಶಕರಾದವರು
  • ಐಟಿ ಕಾಯ್ದೆ ಸೆಕ್ಷನ್ 194ಎನ್ ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್​ಗೆ ಅರ್ಹರಾದವರು
  • ಒಂದಕ್ಕಿಂತ ಹೆಚ್ಚು ಗೃಹ ಆಸ್ತಿಯ ಮಾಲಿಕತ್ವ ಹೊಂದಿ, ಅದರಿಂದ ಆದಾಯ ಪಡೆಯುತ್ತಿರುವವರು

ಇಲ್ಲಿ ಮೇಲೆ ತಿಳಿಸಿದ ವ್ಯಕ್ತಿಗಳಿಗೆ ಐಟಿಆರ್​ನ ಬೇರೆ ಫಾರ್ಮ್​ಗಳಿವೆ. ಅವರಿಗೆ ಅನ್ವಯ ಆಗುವ ಫಾರ್ಮ್ ಅನ್ನು ಆಯ್ಕೆ ಮಾಡಿಕೊಂಡು ಭರ್ತಿ ಮಾಡಿ ಸಲ್ಲಿಸಬೇಕು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:18 pm, Mon, 20 March 23

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?