
ಸರಿಯಾದ ಸ್ಥಳದಲ್ಲಿ ಮಾಡುವ ಸಣ್ಣ ಸಣ್ಣ ಹೂಡಿಕೆಯೂ ಭವಿಷ್ಯದಲ್ಲಿ ಮಹತ್ತರ ಎನಿಸುತ್ತದೆ. ಮ್ಯೂಚುವಲ್ ಫಂಡ್ ಮತ್ತು ಷೇರು ಮಾರುಕಟ್ಟೆ ಕಳೆದ ಒಂದು ವರ್ಷದಲ್ಲಿ ತೆವಳುತ್ತಾ ಸಾಗುತ್ತಿದೆಯಾದರೂ ಹೆಚ್ಚಿನ ವರ್ಷಗಳಲ್ಲಿ ಬಹಳ ವೇಗದಲ್ಲಿ ಬೆಳವಣಿಗೆ ಹೊಂದುತ್ತವೆ. ಅಂತೆಯೇ, ಮ್ಯೂಚುವಲ್ ಫಂಡ್ಗಳು (Mutual Funds) ದೀರ್ಘಾವಧಿ ಹೂಡಿಕೆಗೆ ಹೇಳಿ ಮಾಡಿಸಿರುವಂಥವು.
ಸುಮಾರು 30 ವರ್ಷಗಳಷ್ಟು ದೀರ್ಘಾವಧಿಯನ್ನು ತೆಗೆದು ನೋಡಿದರೆ ಹೆಚ್ಚಿನ ಮ್ಯೂಚುವಲ್ ಫಂಡ್ಗಳು ಶೇ. 12ರ ಸಿಎಜಿಆರ್ನಲ್ಲಿ ಲಾಭ ತಂದಿವೆ. ಕೆಲ ಫಂಡ್ಗಳು ಸೂಪರ್ ಸ್ಟಾರ್ ಪಟ್ಟ ಪಡೆಯುತ್ತವೆ. ಅಂಥ ಸೂಪರ್ ಸ್ಟಾರ್ ಫಂಡ್ಗಳಲ್ಲಿ ನಿಪ್ಪಾನ್ ಇಂಡಿಯಾ ಗ್ರೋತ್ ಮಿಡ್ ಕ್ಯಾಪ್ ಫಂಡ್ ಒಂದು ಇದು ಕಳೆದ 30 ವರ್ಷದಲ್ಲಿ ಶೇ. 22.5 ಸಿಎಜಿಆರ್ ದರದಲ್ಲಿ ಲಾಭ ತಂದಿದೆ. ಶೇ. 22 ಸಿಎಜಿಆರ್ ಎಂದರೆ ಸಾಮಾನ್ಯವಲ್ಲ. ಸಣ್ಣ ಮೊತ್ತವನ್ನೂ ಅಗಾಧವಾಗಿ ಬೆಳೆಸಬಲ್ಲ ದರ.
ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಸ್ಕೀಮ್ನಲ್ಲಿ ತಿಂಗಳಿಗೆ 10,000 ರೂ ಹೂಡಿಕೆಯಿಂದ 7 ಲಕ್ಷ ರೂ ರಿಟರ್ನ್
ಮೂವತ್ತು ವರ್ಷಗಳ ಕೆಳಗೆ ಯಾರಾದರೂ ಕೂಡ ನಿಪ್ಪಾನ್ ಇಂಡಿಯಾ ಗ್ರೋತ್ ಮಿಡ್ ಕ್ಯಾಪ್ ಫಂಡ್ನಲ್ಲಿ ತಿಂಗಳಿಗೆ ಕೇವಲ 2,000 ರೂನಂತೆ ಎಸ್ಐಪಿ ಆರಂಭಿಸಿದ್ದರೆ, ಇವತ್ತು ಅವರ ಹೂಡಿಕೆ 5 ಕೋಟಿ ರೂಗೆ ಬೆಳೆಯುತ್ತಿತ್ತು. ಈ 30 ವರ್ಷದಲ್ಲಿ ನೀವು ಕಟ್ಟುವುದು 7.2 ಲಕ್ಷ ರೂ ಮಾತ್ರ. ಅಷ್ಟಕ್ಕೆ 5 ಕೋಟಿ ರೂ ಲಾಭ ಎಣಿಸುವುದು ರೋಮಾಂಚನಕಾರಿ ಎನಿಸಬಹುದು.
ಅಕಸ್ಮಾತ್ ನೀವು ಈ ನಿಪ್ಪಾನ್ ಇಂಡಿಯಾ ಗ್ರೋತ್ ಮಿಡ್ ಕ್ಯಾಪ್ ಫಂಡ್ನಲ್ಲಿ 30 ವರ್ಷದ ಕೆಳಗೆ 10,000 ರೂಗಳ ಎಸ್ಐಪಿ ಆರಂಭಿಸಿದ್ದರೆ, ಇವತ್ತು ನೀವು ಕಟ್ಟಿದ್ದ ಹಣ 36 ಲಕ್ಷ ರೂ ಆಗುತ್ತಿತ್ತು. ಶೇ. 22.50 ಸಿಎಜಿಆರ್ನಲ್ಲಿ ಫಂಡ್ ಬೆಳೆದಿರುವ ಫಲವಾಗಿ ನಿಮ್ಮ ಹೂಡಿಕೆ ಬರೋಬ್ಬರಿ 43 ಕೋಟಿ ರೂ ಆಗುತ್ತಿತ್ತು.
ಇದನ್ನೂ ಓದಿ: ಪಿಎಂ ವಿದ್ಯಾಲಕ್ಷ್ಮೀ ಯೋಜನೆ; ಕಡಿಮೆ ಬಡ್ಡಿದರದಲ್ಲಿ 10 ಲಕ್ಷ ರೂವರೆಗೆ ಸಾಲ; ಇದು ಕೇಂದ್ರ ಪ್ರಾಯೋಜಿತ ಸ್ಕೀಮ್
ಈ ಫಂಡ್ ಸದ್ಯ ಆಟೊಮೊಬೈಲ್, ಬ್ಯಾಂಕ್, ಕನ್ಸೂಮರ್ ಡುರಬಲ್, ಫಾರ್ಮಾ, ಬಯೋಟೆಕ್ ಕ್ಷೇತ್ರದ ಕಂಪನಿಗಳಲ್ಲಿ ಹೆಚ್ಚಾಗಿ ಹೂಡಿಕೆ ಮಾಡಿದೆ. ಇದರ ಫಂಡ್ ಮ್ಯಾನೇಜರ್ ಅವರು ಭವಿಷ್ಯದಲ್ಲಿ ಚೆನ್ನಾಗಿ ಬೆಳೆಯಬಲ್ಲ ಕಂಪನಿಗಳನ್ನು ಮೊದಲೇ ಗುರುತಿಸಿ ಹೂಡಿಕೆ ಮಾಡಬಲ್ಲ ನೈಪುಣ್ಯತೆಯನ್ನು ಸತತವಾಗಿ ತೋರುತ್ತಾ ಬಂದಿದ್ದಾರೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ