ಈಗ 2022-23ರ ಹಣಕಾಸು ವರ್ಷಕ್ಕೆ ಐಟಿ ರಿಟರ್ನ್ಸ್ (IT Returns) ಸಲ್ಲಿಸುವ ಸಮಯ ಬಂದಿದೆ. ಆದಾಯ ತೆರಿಗೆಯ ಇ–ಫೈಲಿಂಗ್ ಪೋರ್ಟಲ್ ಮೂಲಕ ರಿಟರ್ನ್ಸ್ ಫೈಲ್ ಮಾಡಬಹುದು. ಬಹಳ ಸಾಮಾನ್ಯವಾಗಿ ಬಳಕೆಯಾಗುವ ಐಟಿಆರ್ 1 ಮತ್ತು ಐಟಿಆರ್ 4 ಫಾರ್ಮ್ಗಳನ್ನು ಪೋರ್ಟಲ್ನಲ್ಲಿ ಆನ್ಲೈನ್ ಸಲ್ಲಿಕೆಗೆ ಎನೇಬಲ್ ಮಾಡಲಾಗಿದೆ. ಇತರ ಐಟಿಆರ್ ಫಾರ್ಮ್ಗಳನ್ನು ಶೀಘ್ರದಲ್ಲೇ ಎನೇಬಲ್ ಮಾಡಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಅತಿ ಹೆಚ್ಚಿನ ಸಂಖ್ಯೆಯ ತೆರಿಗೆ ಪಾವತಿದಾರರಿಗೆ ಈ ಐಟಿಆರ್-1 ಅನ್ವಯ ಆಗುತ್ತದೆ. ಭಾರತದ ನಿವಾಸಿಗಳಲ್ಲದವರು ಈ ಫಾರ್ಮ್ ಬಳಸುವಂತಿಲ್ಲ. ಒಂದು ವರ್ಷದಲ್ಲಿ ತೆರಿಗೆ ಅನ್ವಯ ಆಗುವಂತಹ 50 ಲಕ್ಷ ರೂವರೆಗಿನ ಅದಾಯ ಇರುವ ಭಾರತೀಯ ಪ್ರಜೆಗಳು ಐಟಿಆರ್ 1 ಅನ್ನು ಬಳಸಬೇಕು. ಈ ಫಾರ್ಮ್ ಅನ್ನು ಸಹಜ್ ಎಂದೂ ಹೆಸರಿಸಲಾಗಿದೆ. ಇಲ್ಲಿ ಸಂಸ್ಥೆಗಳಲ್ಲ ವ್ಯಕ್ತಿಗಳಿಗೆ ಮಾತ್ರ ಈ ಅರ್ಜಿ ಇರುವುದು.
ಇದನ್ನೂ ಓದಿ: Aadhaar Updation: ಆನ್ಲೈನ್ನಲ್ಲಿ ಆಧಾರ್ ಅಪ್ಡೇಶನ್; ಜೂನ್ 14ರವರೆಗೂ ಉಚಿತ; ಅಪ್ಡೇಟ್ ಮಾಡುವುದು ಹೇಗೆ?
ಒಟ್ಟು 50 ಲಕ್ಷ ರೂವರೆಗೆ ಆದಾಯ ಇರುವ ಹಾಗೂ ಐಟಿ ಕಾಯ್ದೆ 44ಎಡಿ, 44ಎಡಿಎ, 44ಎಇ ಅಡಿ ವ್ಯವಹಾರ ಮತ್ತು ವೃತ್ತಿಗಳಿಂದ ಆದಾಯ ಇರುವ ವ್ಯಕ್ತಿಗಳು, ಸಂಸ್ಥೆಗಳು ಐಟಿಆರ್ 4 ಫಾರ್ಮ್ ಅನ್ನು ಸಲ್ಲಿಸಬಹುದು. ಇದಕ್ಕೆ ಸುಗಮ್ ಎಂದೂ ಕರೆಯಲಾಗುತ್ತದೆ.
ಮೊದಲಿಗೆ ಆದಾಯ ತೆರಿಗೆಯ ಪೋರ್ಟಲ್ incometax.gov.in/iec/foportal ಗೆ ಹೋಗಿ ಪ್ಯಾನ್ ನಂಬರ್ ಬಳಸಿ ಲಾಗಿ ಆಗಬೇಕು.
ಅಲ್ಲಿ ‘ಇ–ಫೈಲ್’ ಮೇಲೆ ಕ್ಲಿಕ್ ಮಾಡಿ
ನಂತರ ‘ಇನ್ಕಮ್ ಟ್ಯಾಕ್ಸ್ ರಿಟರ್ನ್’ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸಬ್ಮಿಶನ್ ಮೋಡ್ ಅನ್ನು ‘ಪ್ರಿಪೇರ್ ಅಂಡ್ ಸಬ್ಮಿಟ್ ಆನ್ಲೈನ್’ ಆಗಿ ಆಯ್ಕೆ ಮಾಡಿ
ಐಟಿಆರ್ ಫಾರ್ಮ್ನಲ್ಲಿ ಎಲ್ಲಾ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ. ಆದರೆ, ಮಾಡುವಾಗ ಸ್ವಲ್ಪ ಜಾಗ್ರತೆ ಇರಲಿ.
‘ಟ್ಯಾಕ್ಸಸ್ ಪೇಯ್ಡ್ ಅಂಡ್ ವೆರಿಫಿಕೇಶನ್’ ಟ್ಯಾಬ್ನಲ್ಲಿರುವ ಸೂಕ್ತ ಆಯ್ಕೆ ಆರಿಸಿಕೊಳ್ಳಿ. ಬಳಿಕ ಫಾರ್ಮ್ ಸಬ್ಮಿಟ್ ಮಾಡಿ.
ಇದನ್ನೂ ಓದಿ: ITR: ವೃದ್ಧರಿಗೆ ಐಟಿ ರಿಟರ್ನ್ ಸಲ್ಲಿಸಲು ವಿನಾಯಿತಿ ಇದೆಯೇ? ಆದಾಯ ತೆರಿಗೆ ಇಲಾಖೆಯ ನಿಯಮಗಳೇನಿವೆ?
ಈಗ ಐಟಿ ರಿಟರ್ನ್ಸ್ ಸಲ್ಲಿಸಲಾಗುತ್ತಿರುವುದು 2022-23ರ ಹಣಕಾಸು ವರ್ಷಕ್ಕೆ. ಈ ಅವಧಿಯನ್ನು 2023-24ರ ಅಸೆಸ್ಮೆಂಟ್ ವರ್ಷ ಎಂದೂ ಪರಿಗಣಿಸಲಾಗುತ್ತದೆ. ಈಗ ಐಟಿ ರಿಟರ್ನ್ಸ್ ಸಲ್ಲಿಸಲು 2023 ಜುಲೈ 31ರವರೆಗೆ ಗಡುವು ಇದೆ. ಆಡಿಟಿಂಗ್ ಅಗತ್ಯ ಇಲ್ಲದ ಸಂಬಳ ಪಡೆಯುವ ವ್ಯಕ್ತಿಗಳು ಮತ್ತು ತೆರಿಗೆಪಾವತಿದಾರರಿಗೆ ಈ ಗಡುವು ಇದೆ. ಆಡಿಟಿಂಗ್ ಮಾಡಬೇಕಾಗಿರುವಂತಹ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಹೆಚ್ಚಿನ ಕಾಲಾವಕಾಶ ಕೊಡಲಾಗುತ್ತದೆ.