Aadhaar Updation: ಆನ್​ಲೈನ್​ನಲ್ಲಿ ಆಧಾರ್ ಅಪ್​ಡೇಶನ್; ಜೂನ್ 14ರವರೆಗೂ ಉಚಿತ; ಅಪ್​ಡೇಟ್ ಮಾಡುವುದು ಹೇಗೆ?

Update Aadhaar Free Offer: ಆಧಾರ್ ಕಾರ್ಡ್​ನಲ್ಲಿರುವ ನಮ್ಮ ವಿವರವನ್ನು ಅಪ್​ಡೇಟ್ ಮಾಡುವುದಕ್ಕೆ 50 ರೂ ಶುಲ್ಕ ಇರುತ್ತದೆ. ಆದರೆ, ಯುಐಡಿಎಐನ ಅಧಿಕೃತ ವೆಬ್​ಸೈಟ್​ನಲ್ಲಿ ಜೂನ್ 14ರವರೆಗೂ ಉಚಿತವಾಗಿ ನಮ್ಮ ಆಧಾರ್​ನ ಡೆಮೋಗ್ರಾಫಿಕ್ ವಿವರಗಳನ್ನು ಅಪ್​ಡೇಟ್ ಮಾಡಬಹುದು.

Aadhaar Updation: ಆನ್​ಲೈನ್​ನಲ್ಲಿ ಆಧಾರ್ ಅಪ್​ಡೇಶನ್; ಜೂನ್ 14ರವರೆಗೂ ಉಚಿತ; ಅಪ್​ಡೇಟ್ ಮಾಡುವುದು ಹೇಗೆ?
ಅಧಾರ್ ಕಾರ್ಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 23, 2023 | 5:27 PM

ಬೆಂಗಳೂರು: ಆಧಾರ್ ಕಾರ್ಡ್ (Aadhaar Card) ಭಾರತೀಯರ ಪಾಲಿಗೆ ಪ್ರಮುಖ ದಾಖಲೆಯಾಗಿದೆ. ಇದು ಗುರುತಿನ ಚೀಟಿಯೂ ಹೌದು, ವಿಳಾಸಕ್ಕೆ ಸಾಕ್ಷ್ಯವೂ ಹೌದು, ಹಾಗೆಯೇ, ಸರ್ಕಾರಿ ಸ್ಕೀಮ್​ಗಳ ಲಾಭ ರವಾನಿಸುವ ವಾಹಕವೂ ಹೌದು. ಎಲ್ಲದಕ್ಕೂ ಆಧಾರ್ ಕಡ್ಡಾಯ ಮಾಡಬೇಡಿ ಎಂದು ಸುಪ್ರೀಂಕೋರ್ಟ್ ಹೇಳಿದ್ದರೂ ಆಧಾರ್ ಕಾರ್ಡ್ ಭಾರತೀಯರಿಗೆ ಒಂದು ಪ್ರಮುಖ ಡಾಕ್ಯುಮೆಂಟ್ ಎನ್ನುವುದು ನಿರ್ವಿವಾದ. ಹೀಗಾಗಿ, ಆಧಾರ್ ಕಾರ್ಡ್ ವಿಚಾರದಲ್ಲಿ ಯಾವುದೇ ಬೆಳವಣಿಗೆ ನಡೆದರೂ ಬಹುತೇಕ ಭಾರತೀಯರಿಗೆ ಮುಖ್ಯ ಎನಿಸುತ್ತದೆ. ಇದೀಗ ಯುಐಡಿಎಐ ಸಂಸ್ಥೆ ಆಧಾರ್ ದಾಖಲೆಗಳ ಆನ್​ಲೈನ್ ಅಪ್​ಡೇಶನ್ ಕಾರ್ಯವನ್ನು ಉಚಿತವಾಗಿ ಮಾಡುವ ಅವಕಾಶ ಜೂನ್ 14ರವರೆಗೂ ಕಲ್ಪಿಸಿದೆ.

ಆಧಾರ್ ಕಾರ್ಡ್​ನಲ್ಲಿರುವ ನಮ್ಮ ವಿವರವನ್ನು ಅಪ್​ಡೇಟ್ ಮಾಡುವುದಕ್ಕೆ 50 ರೂ ಶುಲ್ಕ ಇರುತ್ತದೆ. ಆದರೆ, ಯುಐಡಿಎಐನ ಅಧಿಕೃತ ವೆಬ್​ಸೈಟ್​ನಲ್ಲಿ ಜೂನ್ 14ರವರೆಗೂ ಉಚಿತವಾಗಿ ನಮ್ಮ ಆಧಾರ್​ನ ಡೆಮೋಗ್ರಾಫಿಕ್ ವಿವರಗಳನ್ನು ಅಪ್​ಡೇಟ್ ಮಾಡಬಹುದು. ಡೆಮಾಗ್ರಾಫಿಕ್ ವಿವರ ಎಂದರೆ ನಮ್ಮ ವಿಳಾಸ, ಹೆಸರು, ಜನ್ಮದಿನಾಂಕ ಇತ್ಯಾದಿ. ಆದರೆ, ಈ ಉಚಿತ ಸೇವೆ ಕೇವಲ ಮೈ ಆಧಾರ್ ಪೋರ್ಟಲ್​ನಲ್ಲಿ ಮಾತ್ರವೇ.

ಉಳಿದಂತೆ, ಮಾಮೂಲಿಯ ರೀತಿಯಲ್ಲಿ ನೀವು ಆಧಾರ್ ಸೆಂಟರ್​ಗೆ ಹೋಗಿ ಆಧಾರ್ ವಿವರ ಅಪ್​ಡೇಟ್ ಮಾಡಿಸಬೇಕೆಂದರೆ 50 ರೂ ಶುಲ್ಕ ಪಾವತಿಸಲೇಬೇಕು. ಜೂನ್ 14ರ ನಂತರ ಮೈ ಆಧಾರ್ ಪೋರ್ಟಲ್​ನಲ್ಲೂ ನೀವು 50 ರೂ ಶುಲ್ಕ ಪಾವತಿಸಿಯೇ ಆಧಾರ್ ಅಪ್​ಡೇಶನ್ ಮಾಡಬೇಕಾಗುತ್ತದೆ.

ಇದನ್ನೂ ಓದಿAadhaar Linking: ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾ? ಲಿಂಕ್ ಅಗಿರುವುದನ್ನು ಖಾತ್ರಿಪಡಿಸಿಕೊಳ್ಳುವುದು ಹೇಗೆ?

10 ವರ್ಷ ಬಳಿಕ ಅಧಾರ್ ಕಾರ್ಡ್ ಅಪ್​ಡೇಟ್ ಆಗಬೇಕು ಎಂದಿದೆ ಸರ್ಕಾರ

ನಮ್ಮಲ್ಲಿ ಹೆಚ್ಚಿನ ಜನರು ಆಧಾರ್ ಕಾರ್ಡ್ ಮಾಡಿಸಿದಾಗಿನಿಂದ ಒಮ್ಮೆಯೂ ಅಪ್​ಡೇಟ್ ಮಾಡಿಲ್ಲ. 10 ವರ್ಷಗಳಿಂದ ಅಪ್​ಡೇಟ್ ಆಗದ ಆಧಾರ್ ಕಾರ್ಡ್ ಅನ್ನು ಅಪ್​ಡೇಟ್ ಮಾಡಬೇಕೆಂದು ಸರ್ಕಾರ ಜನಸಾಮಾನ್ಯರಿಗೆ ಸೂಚಿಸಿದೆ. ಐಡಿ ಪ್ರೂಫ್, ಅಡ್ರೆಸ್ ಪ್ರೂಫ್ ದಾಖಲೆಗಳನ್ನು ಆಧಾರ್​ಗೆ ಮತ್ತೊಮ್ಮೆ ಸಲ್ಲಿಸಬೇಕಾಗುತ್ತದೆ. ಇದರಿಂದ ಆಧಾರ್ ಡಾಟಾಬೇಸ್​ನಲ್ಲಿ ಸಮರ್ಪಕ ಮಾಹಿತಿ ಸಂಗ್ರಹವಾಗಿರುತ್ತದೆ.

ಆನ್​ಲೈನ್​ನಲ್ಲಿ ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡುವುದು ಹೇಗೆ?

  • ಮೈ ಆಧಾರ್​ನ ಅಧಿಕೃತ ಪೋರ್ಟಲ್​ myaadhaar.uidai.gov.inಗೆ ಹೋಗಿ ಆಧಾರ್ ನಂಬರ್ ಬಳಸಿ ಲಾಗಿನ್ ಅಗಬೇಕು.
  • ಪ್ರೊಸೀಡ್ ಟು ಅಪ್​ಡೇಟ್ ಅಡ್ರೆಸ್ ಎಂಬ ಅಯ್ಕೆ ಆರಿಸಿಕೊಳ್ಳಿ
  • ಈಗ ನಿಮ್ಮ ಅಧಾರ್ ನೊಂದಾಯಿತ ಮೊಬೈಲ್​ಗೆ ಓಟಿಪಿ ಬರುತ್ತದೆ.
  • ಒಟಿಪಿ ಹಾಕಿದ ಬಳಿಕ ಡಾಕ್ಯುಮೆಂಟ್ ಅಪ್​ಡೆಟ್ ಮೇಲೆ ಕ್ಲಿಕ್ ಮಾಡಿ.
  • ಈಗ ವ್ಯಕ್ತಿಯ ವಿವರ ಕಾಣಿಸುತ್ತದೆ. ಅದು ಸರಿಯಾಗಿದ್ದರೆ ಮುಂದಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಬಳಿಕ ಐಡಿ ಮತ್ತು ಅಡ್ರೆಸ್ ಪ್ರೂಫ್ ದಾಖಲೆಗಳನ್ನು ಆಯ್ದುಕೊಳ್ಳಿ.
  • ನೀವು ಸ್ಕ್ಯಾನ್ ಮಾಡಿದ ಈ ದಾಖಲೆಗಳ ಪ್ರತಿತಿಯನ್ನು ಅಪ್​ಲೋಡ್ ಮಾಡಿ
  • ಈಗ ನಿಮ್ಮ ಮನವಿ ಸ್ವೀಕೃತವಾಗುತ್ತದೆ. 14 ಅಂಕಿಗಳ ಯುಆರ್​ಎನ್ ನಂಬರ್ ಜನರೇಟ್ ಆಗುತ್ತದೆ.

ಇದನ್ನೂ ಓದಿAadhaar: ಆಧಾರ್ ಕಾರ್ಡ್​ನಲ್ಲಿ ನಿಮ್ಮ ಫೋಟೋ ಬದಲಿಸಬೇಕಾ? ಇಲ್ಲಿದೆ ವಿಧಾನ

ಕೆಲ ದಿನಗಳ ಬಳಿಕ ಆಧಾರ್ ಕಾರ್ಡ್​ನಲ್ಲಿ ನಿಮ್ಮ ಹೊಸ ಮಾಹಿತಿ ಅಪ್​ಡೇಟ್ ಆಗಿರುತ್ತದೆ. ಅದನ್ನು ನೀವು ಯುಆರ್​ಎನ್ ನಂಬರ್ ಬಳಸಿ ಟ್ರ್ಯಾಕ್ ಮಾಡಬಹುದು. ಅಪ್​ಡೇಟ್ ಆದ ಆಧಾರ್ ಕಾರ್ಡ್​ನ ಪ್ರಿಂಟೌಟ್ ಪಡೆದು ನಿಮ್ಮ ಬಳಿ ಇಟ್ಟುಕೊಳ್ಳಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ