ಭಾರತೀಯ ಜೀವ ವಿಮಾ ನಿಗಮ (LIC) ಆಗಾಗ್ಗೆ ಹೊಸ ಸ್ಕೀಮ್ಗಳನ್ನ ಪ್ರಕಟಿಸುತ್ತಿರುತ್ತದೆ. ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ವಿಮಾ ಪಾಲಿಸಿಗಳನ್ನು ಎಲ್ಐಸಿ ಹೊಂದಿದೆ. ಇದೀಗ ಎಲ್ಐಸಿ ಜೀವನ್ ಕಿರಣ್ (Jeevan Kiran) ಎಂಬ ಹೊಸ ಲೈಫ್ ಇನ್ಷೂರೆನ್ಸ್ ಪಾಲಿಸಿ ಬಿಡುಗಡೆ ಮಾಡಿದೆ. ಇದು ನಾನ್ ಲಿಂಕ್ಡ್, ನಾನ್ ಪಾರ್ಟಿಸಿಪೇಟಿಂಗ್ ಪಾಲಿಸಿಯಾಗಿದ್ದು, ಜೀವ ವಿಮೆಗೆ (Life Risk Coverage) ಹೇಳಿ ಮಾಡಿಸಿದ್ದಾಗಿದೆ. 18 ವರ್ಷದಿಂದ 65 ವರ್ಷದ ವಯೋಮಾನದ ಜನರು ಎಲ್ಐಸಿ ಜೀವನ್ ಕಿರಣ್ ಪಾಲಿಸಿ ಮಾಡಿಸಬಹುದು.
ಎಲ್ಐಸಿ ಜೀವನ್ ಕಿರಣ್ ಪಾಲಿಸಿಯ ಅವಧಿ 10 ವರ್ಷದಿಂದ ಆರಂಭವಾಗಿ 40 ವರ್ಷಗಳವರೆಗೂ ಇದೆ. ಕನಿಷ್ಠ ಭರವಸೆ ಮೊತ್ತ (ಬೇಸಿಕ್ ಸಮ್ ಅಶೂರ್ಡ್) 15 ಲಕ್ಷ ರೂ ಇದೆ. ಅದಕ್ಕೂ ಮೇಲ್ಪಟ್ಟ ಮೊತ್ತವನ್ನೂ ಆಯ್ಕೆ ಮಾಡಿಕೊಳ್ಳಬಹುದು. ವಯಸ್ಸು, ಪಾಲಿಸಿ ಅವಧಿಯ ಮೇಲೆ ಪ್ರೀಮಿಯಮ್ ಹಣ ನಿಗದಿಯಾಗುತ್ತದೆ. ಕನಿಷ್ಠ ಪ್ರೀಮಿಯಮ್ ತಿಂಗಳಿಗೆ 3,000 ರೂ ಇದೆ. ಇದರಲ್ಲಿ ಸಿಂಗಲ್ ಪ್ರೀಮಿಯಮ್ ಪಾಲಿಸಿಯೂ ಇದೆ. ಇದರಲ್ಲಿ ಕನಿಷ್ಠ ಪ್ರೀಮಿಯಮ್ 30,000 ರೂನದ್ದಾಗಿದೆ.
ಇನ್ನು ರೆಗ್ಯುಲರ್ ಪ್ರೀಮಿಯಮ್ನ ಪಾಲಿಸಿಯಲ್ಲಿ 20 ಲಕ್ಷ ಬೇಸಿಕ್ ಸಮ್ ಅಶೂರ್ಡ್ ಮೊತ್ತವನ್ನು ಆಯ್ಕೆ ಮಾಡಿಕೊಂಡಿದ್ದೀರಿ ಎಂದಿಟ್ಟುಕೊಳ್ಳಿ. ನಿಮ್ಮ ವಯಸ್ಸು 40 ವರ್ಷವಾಗಿದ್ದು, 10 ವರ್ಷದ ಪಾಲಿಸಿ ಪಡೆದರೆ ನೀವು ವರ್ಷಕ್ಕೆ 22,500 ರೂ ಕಟ್ಟಬೇಕಾಗುತ್ತದೆ.
ಜೀವನ್ ಕಿರಣ್ ಪಾಲಿಸಿ ಅವಧಿಯಲ್ಲಿ ಪಾಲಿಸಿದಾರ ಮೃತಪಟ್ಟಾಗ 3 ಅಂಶಗಳನ್ನು ಪರಿಗಣಿಸಲಾಗುತ್ತದೆ.
ಈ ಮೂರರಲ್ಲಿ ಯಾವುದು ಹೆಚ್ಚಿರುತ್ತದೋ ಅದನ್ನು ವಾರಸುದಾರರಿಗೆ ಕೊಡಲಾಗುತ್ತದೆ. ಒಂದು ವೇಳೆ ಸಿಂಗಲ್ ಪ್ರೀಮಿಯಮ್ ಪಾಲಿಸಿಯಾದರೆ ಪ್ರೀಮಿಯಮ್ ಮೊತ್ತದ ಶೇ. 125ರಷ್ಟು ಹಣವನ್ನು ನೀಡಲಾಗುತ್ತದೆ. ಅಥವಾ ಬೇಸಿಕ್ ಸಮ್ ಅಶೂರ್ಡ್ ಮೊತ್ತ ಕೊಡಲಾಗುತ್ತದೆ.
ಇದನ್ನೂ ಓದಿ: LIC Loan: ಎಲ್ಐಸಿ ಪಾಲಿಸಿ ಮೇಲೆ ಸಾಲ ಪಡೆಯುವುದು ಹೇಗೆ? ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಧಾನ
ಧೂಮಪಾನಿಗಳಲ್ಲದ ಸಾಮಾನ್ಯ ಗ್ರಾಹಕರಿಗೆ ಪ್ರೀಮಿಯಮ್ ಕಡಿಮೆ ಇರುತ್ತದೆ. ಧೂಮಪಾನಿಗಳಿಗೆ ಹೆಚ್ಚಿನ ಪ್ರೀಮಿಯಮ್ ಇರುತ್ತದೆ. ಹಾಗೆಯೇ, ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳದವರಿಗೂ ಧೂಮಪಾನಿಗಳಷ್ಟೇ ಹೆಚ್ಚಿನ ಪ್ರೀಮಿಯಮ್ ನಿಗದಿ ಮಾಡಲಾಗುತ್ತದೆ.
ಒಂದು ವೇಳೆ, ಪಾಲಿಸಿದಾರ ಪಾಲಿಸಿ ಮೆಚ್ಯೂರ್ ಆಗುವುದರೊಳಗೆ ಸಾಯದಿದ್ದರೆ ಆಗ ಮೆಚ್ಯೂರಿಟಿ ಬಳಿಕ ಒಟ್ಟು ಪ್ರೀಮಿಯಮ್ ಮೊತ್ತವನ್ನು ಮರಳಿಸಲಾಗುತ್ತದೆ.
ಈ ಪಾಲಿಸಿಯಿಂದ ಬಡ್ಡಿ ಬರುವುದಿಲ್ಲವಾದರೂ ಡೆತ್ ಕವರೇಜ್ ಇರುವುದರಿಂದ ಉಪಯುಕ್ತ ಹೂಡಿಕೆ ಎನಿಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ