ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಆದಾಯ ತೆರಿಗೆ ವ್ಯವಸ್ಥೆ (New Income Tax Regime) ಬಗ್ಗೆ ಹಲವರಿಗೆ ಇನ್ನೂ ಕೆಲ ಸಂದೇಹಗಳು, ಪ್ರಶ್ನೆಗಳು ಉಳಿದುಕೊಂಡಿವೆ. ಹಳೆಯ ತೆರಿಗೆ ಪದ್ಧತಿ ಮುಂದುವರಿದಿರುವುದು ಈ ಗೊಂದಲಕ್ಕೆ ಹೆಚ್ಚಿನ ಕಾರಣ ಎನ್ನುವುದು ಹೌದು. 2020ರ ಬಜೆಟ್ನಲ್ಲಿ (Union Budget) ಮೊದಲು ಘೋಷಣೆಯಾದ ಹೊಸ ತೆರಿಗೆ ವ್ಯವಸ್ಥೆಯನ್ನು ಅಪ್ಪಿಕೊಳ್ಳುವಂತೆ ಜನರನ್ನು ಉತ್ತೇಜಿಸಲು ಈ ಬಾರಿಯ ಬಜೆಟ್ನಲ್ಲಿ ಕೆಲವೊಂದಿಷ್ಟು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಇರುವಷ್ಟಲ್ಲವಾದರೂ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಆಕರ್ಷಕ ಎನಿಸುವ ಒಂದಷ್ಟು ತೆರಿಗೆ ವಿನಾಯಿತಿ, ತೆರಿಗೆ ರಿಯಾಯಿತಿಗಳು ಇವೆ.
ಹಳೆಯ ತೆರಿಗೆ ವ್ಯವಸ್ಥೆಗಿಂತ ಹೊಸದು ಹೇಗೆ ಭಿನ್ನ, ಎಷ್ಟು ಭಿನ್ನ? ಸರ್ಕಾರ ಹೊಸ ತೆರಿಗೆ ವ್ಯವಸ್ಥೆಯನ್ನು ಡೀಫಾಲ್ಟ್ ತೆರಿಗೆ ಪದ್ಧತಿಯಾಗಿ ಮಾಡಿದೆ. ಅಂದರೆ, ನೀವು ಹಳೆದ ತೆರಿಗೆ ಪದ್ಧತಿಯಲ್ಲಿ ಐಟಿ ರಿಟರ್ನ್ ಫೈಲ್ ಮಾಡಬೇಕು ಎಂದರೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಬೇಕು. ಇಲ್ಲದಿದ್ದರೆ ಹೊಸ ತೆರಿಗೆ ವ್ಯವಸ್ಥೆಯ ಅಡಿಯಲ್ಲಿಯೇ ರಿಟರ್ನ್ಸ್ ಸಲ್ಲಿಕೆ ಮಾಡಬೇಕಾಗುತ್ತದೆ. ಇದು ಒಂದು ಮಹತ್ತರ ಬದಲಾವಣೆ.
ಇದನ್ನೂ ಓದಿ: March 1 Rules Change: ಮಾರ್ಚ್ 1ರಿಂದ ಹೊಸ ಬದಲಾವಣೆಗಳು; ಜನಸಾಮಾನ್ಯರಿಗೆ ಮುಖ್ಯವಾದದ್ದೇನು?
ಹಳೆಯದಕ್ಕೆ ಹೋಲಿಸಿದರೆ ಹೊಸ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಪ್ರಮಾಣ ಕಡಿಮೆ ಇದೆ. ಆದರೆ ಟ್ಯಾಕ್ಸ್ ಸ್ಲ್ಯಾಬ್ ಹೆಚ್ಚು ಇವೆ. ಐಟಿ ರೀಫಂಡ್ನ ಮಿತಿಯನ್ನು 5ರಿಂದ 7 ಲಕ್ಷ ರೂಗೆ ಏರಿಸಲಾಗಿದೆ. ಹೊಸ ತೆರಿಗೆ ವ್ಯವಸ್ಥೆಯಲ್ಲಿ ಯಾವ್ಯಾವ ಆದಾಯ ಮೊತ್ತಕ್ಕೆ ಎಷ್ಟೆಷ್ಟು ತೆರಿಗೆ ಇದೆ, ವಿವರ ಇಲ್ಲಿದೆ:
3 ಲಕ್ಷ ರೂವರೆಗೆ: ಯಾವುದೇ ತೆರಿಗೆ ಇರುವುದಿಲ್ಲ
3-6 ಲಕ್ಷ ರೂ: ಶೇ. 5
6-9 ಲಕ್ಷ ರೂ: 15 ಸಾವಿರ ಮತ್ತು ಶೇ. 10
9-12 ಲಕ್ಷ ರೂ: 45 ಸಾವಿರ ಮತ್ತು ಶೇ. 15
12-15 ಲಕ್ಷ ರೂ: 90 ಸಾವಿರ ಮತ್ತು ಶೇ. 20
15 ಲಕ್ಷಕ್ಕಿಂತ ಹೆಚ್ಚು: 1.5 ಲಕ್ಷ ರೂ ಮತ್ತು ಶೇ. 30
ಇದನ್ನೂ ಓದಿ: PM Kisan 13th Installment: ಪಿಎಂ ಕಿಸಾನ್ 13ನೇ ಕಂತು ಇಂದು ಬಿಡುಗಡೆ; ಹಣ ಬಂದಿಲ್ಲವಾ? ಹೀಗೆ ಮಾಡಿ
ಪ್ರತಿಯೊಬ್ಬರೂ ಕೂಡ 50 ಸಾವಿರ ರೂವರೆಗೆ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು. ಟ್ಯಾಕ್ಸ್ ಡಿಡಕ್ಷನ್ ಮೊತ್ತವನ್ನು ಕಡಿಮೆ ಮಾಡಿದಾಗ ಉಳಿಯುವ ಆದಾಯವನ್ನು ಟ್ಯಾಕ್ಸಬಲ್ ಇನ್ಕಮ್ ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ 6.5 ಲಕ್ಷ ರೂ ವಾರ್ಷಿಕ ಆದಾಯ ಹೊಂದಿರುವ ತೆರಿಗೆ ಪಾವತಿದಾರರು 50 ಸಾವಿರ ರೂ ಡಿಡಕ್ಷನ್ ಪಡೆದರೆ ಅವರ ಟ್ಯಾಕ್ಸಬಲ್ ಇನ್ಕಮ್ 6 ಲಕ್ಷ ರೂ ಆಗುತ್ತದೆ. ಅದಕ್ಕೆ ಇದು 3-6 ಲಕ್ಷ ರೂ ಸ್ಲ್ಯಾಬ್ಗೆ ಸೇರುತ್ತದೆ. 3 ಲಕ್ಷ ರೂ ಆದಾಯಕ್ಕೆ ಶೇ. 10ರಷ್ಟು ತೆರಿಗೆ ಬೀಳುತ್ತದೆ. ಸುಮಾರು 30 ಸಾವಿರ ರೂ ಆಗುತ್ತದೆ. ಗೃಹ ಸಾಲ ಇತ್ಯಾದಿ ವೆಚ್ಚ ಇದ್ದರೆ ತೆರಿಗೆ ಮೊತ್ತವನ್ನು ಇನ್ನಷ್ಟು ಇಳಿಸಬಹುದು.
ಇನ್ನು 2 ಕೋಟಿ ರೂಗೂ ಹೆಚ್ಚು ವಾರ್ಷಿಕ ಆದಾಯ ಇರುವ ಜನರಿಗೆ ವಿಧಿಸಲಾಗುವ ಸರ್ಚಾರ್ಜ್ ದರವನ್ನು ಶೇ. 37ರಿಂದ ಶೇ. 25ಕ್ಕೆ ಇಳಿಸಲಾಗಿದೆ. ಈ ಅಧಿಕ ಆದಾಯ ಗುಂಪಿನ ಜನರಿಗೆ ಅಂತಿಮವಾಗಿ ಹೇರಲಾಗುವ ತೆರಿಗೆಯು ಶೇ. 42.74ರಿಂದ ಶೇ. 39ಕ್ಕೆ ಇಳಿಯುತ್ತದೆ.