March 1 Rules Change: ಮಾರ್ಚ್ 1ರಿಂದ ಹೊಸ ಬದಲಾವಣೆಗಳು; ಜನಸಾಮಾನ್ಯರಿಗೆ ಮುಖ್ಯವಾದದ್ದೇನು?

LPG Cylinder Hike and Other Changes: ಮಾರ್ಚ್ ತಿಂಗಳಿಂದ ಕೆಲ ಹೊಸ ನಿಯಮಗಳು ಚಾಲನೆಗೆ ಬರಲಿವೆ. ಕೆಲವು ನಮ್ಮ ಕೌಟುಂಬಿಕ ಬಜೆಟ್​ಗೆ ಹೊರೆ ಆಗಬಹುದು, ಕೆಲ ಬದಲಾವಣೆಗಳು ನಮ್ಮ ಹೊರೆ ತಗ್ಗಿಸಲೂ ಬಹುದು. ನಿಮ್ಮ ಸಾಮಾಜಿಕ ಜೀವನದ ಮೇಲೂ ಪರಿಣಾಮ ಬೀರುವಂತಹ ಸಂಗತಿಯೂ ಇರಬಹುದು.

March 1 Rules Change: ಮಾರ್ಚ್ 1ರಿಂದ ಹೊಸ ಬದಲಾವಣೆಗಳು; ಜನಸಾಮಾನ್ಯರಿಗೆ ಮುಖ್ಯವಾದದ್ದೇನು?
ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 27, 2023 | 12:13 PM

ಸರ್ಕಾರಗಳು ಆಗಾಗ್ಗೆ ತಮ್ಮ ಹಣಕಾಸು ಮತ್ತು ಆರ್ಥಿಕ ನೀತಿಗಳನ್ನು (Economic and Monetary Policy) ಪರಿಷ್ಕರಿಸುತ್ತಿರುತ್ತವೆ. ಬೆಲೆ ಏರಿಳಿತ ಆಗುವಂತಹ ಕೆಲ ಕ್ರಮಗಳನ್ನು ಕೈಗೊಳ್ಳುತ್ತಿರುತ್ತವೆ. ಫೆಬ್ರುವರಿ 1ರಂದು ಕೇಂದ್ರ ಬಜೆಟ್ ಕೂಡ ಆಗಿದೆ. ಮಾರ್ಚ್ ತಿಂಗಳಿಂದ ಕೆಲ ಹೊಸ ನಿಯಮಗಳು ಚಾಲನೆಗೆ ಬರಲಿವೆ. ಕೆಲವು ನಮ್ಮ ಕೌಟುಂಬಿಕ ಬಜೆಟ್​ಗೆ ಹೊರೆ ಆಗಬಹುದು, ಕೆಲ ಬದಲಾವಣೆಗಳು ನಮ್ಮ ಹೊರೆ ತಗ್ಗಿಸಲೂ ಬಹುದು. ನಿಮ್ಮ ಸಾಮಾಜಿಕ ಜೀವನದ ಮೇಲೂ ಪರಿಣಾಮ ಬೀರುವಂತಹ ಸಂಗತಿಯೂ ಇರಬಹುದು.

ಎಲ್​ಪಿಜಿ ಸಿಲಿಂಡರ್ ದರ, ಬ್ಯಾಂಕ್ ಸಾಲ, ಸೋಷಿಯಲ್ ಮೀಡಿಯಾ ನಿಯಮಾವಳಿ, ರೈಲು ವೇಳಾಪಟ್ಟಿ ಇತ್ಯಾದಿಯಲ್ಲಿ ಬದಲಾವಣೆಗಳಾಗುತ್ತಿವೆ. ಮಾರ್ಚ್ 1ರಿಂದ ಇಂಥ ಕೆಲ ಮಹತ್ವದ ಬದಲಾವಣೆಗಳ ಬಗ್ಗೆ ಮಾಹಿತಿ ಇಲ್ಲಿದೆ.

ಸೋಷಿಯಲ್ ಮೀಡಿಯಾ ಬಳಸುವಾಗ ಎಚ್ಚರ

ಕೇಂದ್ರ ಸರ್ಕಾರ ಐಟಿ ನಿಯಮಾವಳಿಗಳಲ್ಲಿ ಇತ್ತೀಚೆಗೆ ಕೆಲ ಬದಲಾವಣೆ ಮಾಡಿದೆ. ಫೇಸ್​ಬುಕ್, ಯೂಟ್ಯೂಬ್, ಟ್ವಿಟ್ಟರ್, ಇನ್ಸ್​ಟಾಗ್ರಾಮ್ ಮೊದಲಾದ ಸೋಷಿಯಲ್ ಮೀಡಿಯಾ ತಾಣಗಳು ಕೇಂದ್ರ ಸರ್ಕಾರದ ನಿಯಮಾವಳಿಗಳಿಗೆ ಬದ್ಧವಾಗಿರಬೇಕಾಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ನಾವು ಹಾಕುವ ಪೋಸ್ಟ್​ಗಳಿಂದ ಧಾರ್ಮಿಕ ಭಾವನೆ ಉದ್ರೇಕಗೊಳ್ಳುವಂತಿದ್ದರೆ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಸುಳ್ಳು ಮಾಹಿತಿ ಪ್ರಸಾರ ಮಾಡುವ ಜನರಿಗೆ ದಂಡ ಬೀಳಬಹುದು. ಮಾರ್ಚ್ ತಿಂಗಳಿಂದ ಇದು ಜಾರಿಗೆ ಬರುತ್ತದೆ.

ಇದನ್ನೂ ಓದಿ: PM Kisan 13th Installment: ಪಿಎಂ ಕಿಸಾನ್ 13ನೇ ಕಂತು ಇಂದು ಬಿಡುಗಡೆ; ಹಣ ಬಂದಿಲ್ಲವಾ? ಹೀಗೆ ಮಾಡಿ

ಗ್ಯಾಸ್ ಬೆಲೆ ಏರಿಕೆ

ಎಲ್​ಪಿಜಿ, ಸಿಎನ್​ಜಿ ಮತ್ತು ಪಿಎನ್​ಜಿ ಅನಿಲಗಳ ಬೆಲೆ ಮಾರ್ಚ್ ತಿಂಗಳಲ್ಲಿ ವ್ಯತ್ಯಯವಾಗಲಿದೆ. ಜನಸಾಮಾನ್ಯರ ಅಗತ್ಯವಸ್ತುವೆನಿಸಿದ ಎಲ್​ಪಿಜಿ ಸಿಲಿಂಡರ್ ಬೆಲೆ ಮಾರ್ಚ್ ತಿಂಗಳು ಹೆಚ್ಚುವುದು ನಿಶ್ಚಿತ ಎನ್ನುತ್ತಿವೆ ವರದಿಗಳು. ಎಲ್​ಪಿಜಿ ಸಿಲಿಂಡರ್ ಬೆಲೆಗಳನ್ನು ಪ್ರತೀ ತಿಂಗಳ ಆರಂಭದಲ್ಲಿ ಪರಿಷ್ಕರಿಸಲಾಗುತ್ತದೆ. ಫೆಬ್ರುವರಿಯಲ್ಲಿ ಬೆಲೆ ಹೆಚ್ಚಳವಾಗಿರಲಿಲ್ಲ. ಮಾರ್ಚ್ ತಿಂಗಳಲ್ಲಿ ಬೆಲೆ ಹೆಚ್ಚಳವಾಗುವ ಸಾಧ್ಯತೆ ದಟ್ಟವಾಗಿದೆ. ಹಾಗೆಯೇ, ಸಿಎನ್​ಜಿ ಮತ್ತು ಪಿಎನ್​ಜಿ ಗ್ಯಾಸ್ ದರಗಳೂ ಏರುವ ಸಾಧ್ಯತೆ ಇದೆ.

ಬ್ಯಾಂಕ್ ಸಾಲ ದುಬಾರಿ

ಆರ್​ಬಿಐ ಇತ್ತೀಚೆಗೆ ಬಡ್ಡಿ ದರಗಳನ್ನು ಹೆಚ್ಚಿಸಿತು. ಅದಕ್ಕೆ ಅನುಗುಣವಾಗಿ ಬಹುತೇಕ ಬ್ಯಾಂಕುಗಳು ತಮ್ಮ ಬಡ್ಡಿ ದರಗಳನ್ನು ಹೆಚ್ಚಿಸಿವೆ. ಠೇವಣಿಗಳಿಗೆ ಹೆಚ್ಚಿನ ಬಡ್ಡಿ ಸಿಗುತ್ತಿದೆ. ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೆ ಅನುಕೂಲವಾಗಿದೆ. ಹಾಗೆಯೇ ಸಾಲದ ಮೇಲಿನ ಬಡ್ಡಿ ದರಗಳೂ ಏರಿಕೆ ಆಗಿವೆ. ಪರಿಣಾಮವಾಗಿ ಲೋನ್ ಇಎಂಐಗಳ ಮೊತ್ತ ಏರಿಕೆ ಆಗಿದೆ. ಗೃಹ ಸಾಲ ಪಡೆದವರಿಗೆ ಹೆಚ್ಚಿನ ಹೊರೆಯಾಗಿದೆ.

ಇದನ್ನೂ ಓದಿPAN Alert! ಪಾನ್ ಕಾರ್ಡ್​ದಾರರೇ ಗಮನಿಸಿ, ಉಚಿತವಾಗಿ ಆಗಬೇಕಾದ ಕೆಲಸಕ್ಕೆ ಸಾವಿರ ರೂ ತೆರಬೇಕಾದೀತು; 10 ಸಾವಿರ ದಂಡ ಬಿದ್ದೀತು

ಇನ್ನು, ಮಾರ್ಚ್ ತಿಂಗಳು ವಿವಿಧ ಹಬ್ಬಗಳು ಇರುವ ಹಿನ್ನೆಲೆಯಲ್ಲಿ ಬ್ಯಾಂಕುಗಳು 12 ದಿನಗಳ ಕಾಲ ಬಾಗಿಲು ಮುಚ್ಚಲಿವೆ. ಇದರಲ್ಲಿ ನಾಲ್ಕು ಭಾನುವಾರ ಹಾಗೂ ಎರಡು ಶನಿವಾರದ ರಜೆಗಳು ಒಳಗೊಂಡಿವೆ.

ರೈಲು ವೇಳಾಪಟ್ಟಿ ಬದಲು:

ಬೇಸಿಗೆ ರಜಾ ದಿನಗಳು ಬರುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ತನ್ನ ರೈಲುಗಳ ವೇಳಾಪಟ್ಟಿ ಬದಲಿಸಿದೆ. ಮಾರ್ಚ್ 1ರಿಂದ 5 ಸಾವಿರ ಸರಕು ಸಾಗಣೆ ರೈಲುಗಳ ವೇಳಾಪಟ್ಟಿ ಬದಲಾಗಲಿದೆ. ಹಾಗೆಯೇ, ಸಾವಿರಾರು ಪ್ಯಾಸೆಂಜರ್ ರೈಲುಗಳ ವೇಳಾಪಟ್ಟಿಯೂ ಬದಲಾಗಲಿದೆ. ಫೆಬ್ರುವರಿ 28ರಂದು ರೈಲ್ವೆ ಇಲಾಖೆ ಈ ಬದಲಾವಣೆಗಳನ್ನು ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆ ಇದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್