New Tax Regime: ಹೊಸ ಪದ್ಧತಿಯಲ್ಲಿ ತೆರಿಗೆ ವಿನಾಯಿತಿಗಳು; ಹೆಚ್ಚಿನ ಜನಕ್ಕೆ ಗೊತ್ತಿಲ್ಲದ ಸಂಗತಿ

Tax Exemptions In New Regime: 2020ರ ಬಜೆಟ್​ನಲ್ಲಿ ಮೊದಲು ಘೋಷಣೆಯಾದ ಹೊಸ ತೆರಿಗೆ ವ್ಯವಸ್ಥೆಯನ್ನು ಅಪ್ಪಿಕೊಳ್ಳುವಂತೆ ಜನರನ್ನು ಉತ್ತೇಜಿಸಲು ಈ ಬಾರಿಯ ಬಜೆಟ್​ನಲ್ಲಿ ಕೆಲವೊಂದಿಷ್ಟು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ.

New Tax Regime: ಹೊಸ ಪದ್ಧತಿಯಲ್ಲಿ ತೆರಿಗೆ ವಿನಾಯಿತಿಗಳು; ಹೆಚ್ಚಿನ ಜನಕ್ಕೆ ಗೊತ್ತಿಲ್ಲದ ಸಂಗತಿ
ಆದಾಯ ತೆರಿಗೆ
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Feb 27, 2023 | 2:35 PM

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಆದಾಯ ತೆರಿಗೆ ವ್ಯವಸ್ಥೆ (New Income Tax Regime) ಬಗ್ಗೆ ಹಲವರಿಗೆ ಇನ್ನೂ ಕೆಲ ಸಂದೇಹಗಳು, ಪ್ರಶ್ನೆಗಳು ಉಳಿದುಕೊಂಡಿವೆ. ಹಳೆಯ ತೆರಿಗೆ ಪದ್ಧತಿ ಮುಂದುವರಿದಿರುವುದು ಈ ಗೊಂದಲಕ್ಕೆ ಹೆಚ್ಚಿನ ಕಾರಣ ಎನ್ನುವುದು ಹೌದು. 2020ರ ಬಜೆಟ್​ನಲ್ಲಿ (Union Budget) ಮೊದಲು ಘೋಷಣೆಯಾದ ಹೊಸ ತೆರಿಗೆ ವ್ಯವಸ್ಥೆಯನ್ನು ಅಪ್ಪಿಕೊಳ್ಳುವಂತೆ ಜನರನ್ನು ಉತ್ತೇಜಿಸಲು ಈ ಬಾರಿಯ ಬಜೆಟ್​ನಲ್ಲಿ ಕೆಲವೊಂದಿಷ್ಟು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಇರುವಷ್ಟಲ್ಲವಾದರೂ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಆಕರ್ಷಕ ಎನಿಸುವ ಒಂದಷ್ಟು ತೆರಿಗೆ ವಿನಾಯಿತಿ, ತೆರಿಗೆ ರಿಯಾಯಿತಿಗಳು ಇವೆ.

ಹಳೆಯ ತೆರಿಗೆ ವ್ಯವಸ್ಥೆಗಿಂತ ಹೊಸದು ಹೇಗೆ ಭಿನ್ನ, ಎಷ್ಟು ಭಿನ್ನ? ಸರ್ಕಾರ ಹೊಸ ತೆರಿಗೆ ವ್ಯವಸ್ಥೆಯನ್ನು ಡೀಫಾಲ್ಟ್ ತೆರಿಗೆ ಪದ್ಧತಿಯಾಗಿ ಮಾಡಿದೆ. ಅಂದರೆ, ನೀವು ಹಳೆದ ತೆರಿಗೆ ಪದ್ಧತಿಯಲ್ಲಿ ಐಟಿ ರಿಟರ್ನ್ ಫೈಲ್ ಮಾಡಬೇಕು ಎಂದರೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಬೇಕು. ಇಲ್ಲದಿದ್ದರೆ ಹೊಸ ತೆರಿಗೆ ವ್ಯವಸ್ಥೆಯ ಅಡಿಯಲ್ಲಿಯೇ ರಿಟರ್ನ್ಸ್ ಸಲ್ಲಿಕೆ ಮಾಡಬೇಕಾಗುತ್ತದೆ. ಇದು ಒಂದು ಮಹತ್ತರ ಬದಲಾವಣೆ.

ಇದನ್ನೂ ಓದಿ: March 1 Rules Change: ಮಾರ್ಚ್ 1ರಿಂದ ಹೊಸ ಬದಲಾವಣೆಗಳು; ಜನಸಾಮಾನ್ಯರಿಗೆ ಮುಖ್ಯವಾದದ್ದೇನು?

ಹಳೆಯದಕ್ಕೆ ಹೋಲಿಸಿದರೆ ಹೊಸ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಪ್ರಮಾಣ ಕಡಿಮೆ ಇದೆ. ಆದರೆ ಟ್ಯಾಕ್ಸ್ ಸ್ಲ್ಯಾಬ್ ಹೆಚ್ಚು ಇವೆ. ಐಟಿ ರೀಫಂಡ್​ನ ಮಿತಿಯನ್ನು 5ರಿಂದ 7 ಲಕ್ಷ ರೂಗೆ ಏರಿಸಲಾಗಿದೆ. ಹೊಸ ತೆರಿಗೆ ವ್ಯವಸ್ಥೆಯಲ್ಲಿ ಯಾವ್ಯಾವ ಆದಾಯ ಮೊತ್ತಕ್ಕೆ ಎಷ್ಟೆಷ್ಟು ತೆರಿಗೆ ಇದೆ, ವಿವರ ಇಲ್ಲಿದೆ:

3 ಲಕ್ಷ ರೂವರೆಗೆ: ಯಾವುದೇ ತೆರಿಗೆ ಇರುವುದಿಲ್ಲ

3-6 ಲಕ್ಷ ರೂ: ಶೇ. 5

6-9 ಲಕ್ಷ ರೂ: 15 ಸಾವಿರ ಮತ್ತು ಶೇ. 10

9-12 ಲಕ್ಷ ರೂ: 45 ಸಾವಿರ ಮತ್ತು ಶೇ. 15

12-15 ಲಕ್ಷ ರೂ: 90 ಸಾವಿರ ಮತ್ತು ಶೇ. 20

15 ಲಕ್ಷಕ್ಕಿಂತ ಹೆಚ್ಚು: 1.5 ಲಕ್ಷ ರೂ ಮತ್ತು ಶೇ. 30

ಇದನ್ನೂ ಓದಿ: PM Kisan 13th Installment: ಪಿಎಂ ಕಿಸಾನ್ 13ನೇ ಕಂತು ಇಂದು ಬಿಡುಗಡೆ; ಹಣ ಬಂದಿಲ್ಲವಾ? ಹೀಗೆ ಮಾಡಿ

ಪ್ರತಿಯೊಬ್ಬರೂ ಕೂಡ 50 ಸಾವಿರ ರೂವರೆಗೆ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು. ಟ್ಯಾಕ್ಸ್ ಡಿಡಕ್ಷನ್ ಮೊತ್ತವನ್ನು ಕಡಿಮೆ ಮಾಡಿದಾಗ ಉಳಿಯುವ ಆದಾಯವನ್ನು ಟ್ಯಾಕ್ಸಬಲ್ ಇನ್ಕಮ್ ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ 6.5 ಲಕ್ಷ ರೂ ವಾರ್ಷಿಕ ಆದಾಯ ಹೊಂದಿರುವ ತೆರಿಗೆ ಪಾವತಿದಾರರು 50 ಸಾವಿರ ರೂ ಡಿಡಕ್ಷನ್ ಪಡೆದರೆ ಅವರ ಟ್ಯಾಕ್ಸಬಲ್ ಇನ್ಕಮ್ 6 ಲಕ್ಷ ರೂ ಆಗುತ್ತದೆ. ಅದಕ್ಕೆ ಇದು 3-6 ಲಕ್ಷ ರೂ ಸ್ಲ್ಯಾಬ್​ಗೆ ಸೇರುತ್ತದೆ. 3 ಲಕ್ಷ ರೂ ಆದಾಯಕ್ಕೆ ಶೇ. 10ರಷ್ಟು ತೆರಿಗೆ ಬೀಳುತ್ತದೆ. ಸುಮಾರು 30 ಸಾವಿರ ರೂ ಆಗುತ್ತದೆ. ಗೃಹ ಸಾಲ ಇತ್ಯಾದಿ ವೆಚ್ಚ ಇದ್ದರೆ ತೆರಿಗೆ ಮೊತ್ತವನ್ನು ಇನ್ನಷ್ಟು ಇಳಿಸಬಹುದು.

ಇನ್ನು 2 ಕೋಟಿ ರೂಗೂ ಹೆಚ್ಚು ವಾರ್ಷಿಕ ಆದಾಯ ಇರುವ ಜನರಿಗೆ ವಿಧಿಸಲಾಗುವ ಸರ್ಚಾರ್ಜ್ ದರವನ್ನು ಶೇ. 37ರಿಂದ ಶೇ. 25ಕ್ಕೆ ಇಳಿಸಲಾಗಿದೆ. ಈ ಅಧಿಕ ಆದಾಯ ಗುಂಪಿನ ಜನರಿಗೆ ಅಂತಿಮವಾಗಿ ಹೇರಲಾಗುವ ತೆರಿಗೆಯು ಶೇ. 42.74ರಿಂದ ಶೇ. 39ಕ್ಕೆ ಇಳಿಯುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ