AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PAN Alert! ಪಾನ್ ಕಾರ್ಡ್​ದಾರರೇ ಗಮನಿಸಿ, ಉಚಿತವಾಗಿ ಆಗಬೇಕಾದ ಕೆಲಸಕ್ಕೆ ಸಾವಿರ ರೂ ತೆರಬೇಕಾದೀತು; 10 ಸಾವಿರ ದಂಡ ಬಿದ್ದೀತು

Rs 1000 for linking PAN and Aadhaar After March 31st: 2023 ಮಾರ್ಚ್ 31ರ ನಂತರ ನೀವು ಆಧಾರ್ ನಂಬರ್ ಮತ್ತು ಪಾನ್ ನಂಬರ್ ಲಿಂಕ್ ಮಾಡಬೇಕಾದರೆ ಒಂದು ಸಾವಿರ ರೂ ಶುಲ್ಕ ಪಾವತಿಸಬೇಕಾಗುತ್ತದೆ. ಒಂದು ವೇಳೆ ನಿಷ್ಕ್ರಿಯಗೊಂಡ ಪಾನ್ ನಂಬರ್ ಅನ್ನು ಯಾವುದಾದರೂ ವಹಿವಾಟಿನಲ್ಲಿ ಬಳಕೆ ಮಾಡಿದಲ್ಲಿ 10 ಸಾವಿರ ರೂ ದಂಡ ಕಟ್ಟಬೇಕಾದೀತು.

PAN Alert! ಪಾನ್ ಕಾರ್ಡ್​ದಾರರೇ ಗಮನಿಸಿ, ಉಚಿತವಾಗಿ ಆಗಬೇಕಾದ ಕೆಲಸಕ್ಕೆ ಸಾವಿರ ರೂ ತೆರಬೇಕಾದೀತು; 10 ಸಾವಿರ ದಂಡ ಬಿದ್ದೀತು
ಪ್ಯಾನ್ ಕಾರ್ಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 26, 2023 | 6:48 PM

Share

ನಮ್ಮ ಹಣಕಾಸು ವಹಿವಾಟಿಗೆ ಪಾನ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ. ಪಾನ್ ಕಾರ್ಡ್ ದುರುಪಯೋಗ ತಡೆಯಲು ಮತ್ತು ಹೆಚ್ಚು ಸಮರ್ಪಕವಾಗಿ ಅದರ ಉಪಯೋಗವಾಗಲೆಂದು ಆಧಾರ್ ಕಾರ್ಡ್ ಜೊತೆ ಅದನ್ನು ಲಿಂಕ್ ಮಾಡಲು (Linking Aadhaar and PAN number) ತಿಳಿಸಲಾಗುತ್ತಿದೆ. ಆಧಾರ್ ಮತ್ತು ಪಾನ್ ನಂಬರ್​ಗಳ ಜೋಡಣೆಗೆ ಆದಾಯ ತೆರಿಗೆ ಇಲಾಖೆ ಸಾಕಷ್ಟು ಬಾರಿ ಡೆಡ್​ಲೈನ್ ವಿಸ್ತರಿಸಿದೆ. ಇದೀಗ ಮಾರ್ಚ್ 31ಕ್ಕೆ ಗಡುವು ಕೊಟ್ಟಿದೆ. ಮೂಲಗಳ ಪ್ರಕಾರ ಇದು ಅಂತಿಮ ಗಡುವು. ಇಷ್ಟರೊಳಗೆ ನೀವು ಆಧಾರ್ ಜೊತೆ ಪಾನ್ ಅನ್ನು ಲಿಂಕ್ ಮಾಡಿಲ್ಲದೇ ಹೋದಲ್ಲಿ ನಿಮ್ಮ ಪಾನ್ ನಂಬರ್ ನಿಷ್ಕ್ರಿಯಗೊಳ್ಳಲಿದೆ.

ಮಾರ್ಚ್ 31ರ ಬಳಿಕ ನೀವು ಪಾನ್ ಮತ್ತು ಆಧಾರ್ ನಂಬರ್​ಗಳನ್ನು ಜೋಡಿಸಲು ಅವಕಾಶ ಇರುತ್ತದೆ. ಆದರೆ, ಅದಕ್ಕೆ 1000 ರೂ ಶುಲ್ಕ ತೆರಬೇಕಾಗುತ್ತದೆ. ಈಗ ನೀವು ಲಿಂಕ್ ಮಾಡಲು ಯಾವುದೇ ಶುಲ್ಕ ಇರುವುದಿಲ್ಲ.

ಒಂದು ವೇಳೆ ನೀವು ನಿಷ್ಕ್ರಿಯಗೊಂಡ ಪಾನ್ ನಂಬರ್ ಅನ್ನು ಬಳಕೆ ಮಾಡಿದಲ್ಲಿ ತೀವ್ರ ದಂಡ ತೆರಬೇಕಾಗುತ್ತದೆ. ಐಟಿ ಕಾಯ್ದೆಯ ಸೆಕ್ಷನ್ 272ಎನ್ ಅಡಿಯಲ್ಲಿ ನಿಮಗೆ 10,000 ರೂ ದಂಡ ಬೀಳಬಹುದು.

ಇದನ್ನೂ ಓದಿHyundai ಮತ್ತು KIA ಕಾರುಗಳಿಂದ ಭಾರತಕ್ಕೆ ಭಾರೀ ನಷ್ಟ? ಕೊರಿಯನ್ ಕಂಪನಿಗಳ ಬಗ್ಗೆ ಸಚಿವ ಗೋಯಲ್ ಅಸಮಾಧಾನ

ಇನ್ನೂ ಒಂದು ಸಂಗತಿ ಎಂದರೆ ನೀವು ಅಕಸ್ಮಾತ್ ಆಗಿ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಬಳಸಿದರೆ ಕನಿಷ್ಠ 10 ಸಾವಿರ ರೂ ದಂಡ ಬೀಳುವುದರ ಜೊತೆಗೆ 6 ವರ್ಷ ಜೈಲುಶಿಕ್ಷೆಗೂ ಒಳಗಾಗಬೇಕಾಗಬಹುದು.

ಆಧಾರ್ ಮತ್ತು ಪಾನ್ ನಂಬರ್ ಜೋಡಣೆ ಹೇಗೆ?

ಆದಾಯ ತೆರಿಗೆ ವೆಬ್​ಸೈಟ್​ಗೆ ಹೋದರೆ ಆಧಾರ್ ಮತ್ತು ಪಾನ್ ನಂಬರ್ ಅನ್ನು ಸುಲಭವಾಗಿ ಲಿಂಕ್ ಮಾಡಬಹುದು. ಎಸ್ಸೆಮ್ಮೆಸ್ ಮೂಲಕವೂ ಇದು ಸಾಧ್ಯ. ನೀವು ಎಸ್ಸೆಮ್ಮೆಸ್ ಮೂಲಕ ಮಾಡುವುದಾದರೆ ನೊಂದಾಯಿತ ಮೊಬೈಲ್ ನಂಬರ್​ನಿಂದ ಈ ಕೆಳಗಿನ ರೀತಿ ಮೆಸೇಜ್ ಕಳುಹಿಸಬೇಕು:

ಯುಐಡಿಪಿಎನ್ ಎಂದು ಟೈಪ್ ಮಾಡಿ, ಒಂದು ಸ್ಪೇಸ್ ಕೊಟ್ಟು 12 ಅಂಕಿ ಆಧಾರ್ ನಂಬರ್ ಟೈಪಿಸಬೇಕು. ಮತ್ತೆ ಸ್ಪೇಸ್ ಕೊಟ್ಟು 10 ಅಂಕಿಗಳ ಪಾನ್ ಸಂಖ್ಯೆ ಬರೆಯಬೇಕು. ಬಳಿಕ ಇದನ್ನು 567678 ಅಥವಾ 56161 ನಂಬರ್​ಗೆ ಮೆಸೇಜ್ ಆಗಿ ಕಳುಇಸಬೇಕು.

ಒಂದು ವೇಳೆ ನಿಮ್ಮ ಪಾನ್ ನಂಬರ್ ನಿಷ್ಕ್ರಿಯಗೊಂಡಿದ್ದರೆ ಎಸ್ಸೆಮ್ಮೆಸ್ ಮೂಲಕ ಅದನ್ನು ಆ್ಯಕ್ಟಿವೇಟ್ ಮಾಡಲು ಸಾಧ್ಯ. ನಿಮ್ಮ ನೊಂದಾಯಿತ ಮೊಬೈಲ್ ನಂಬರ್​ನಿಂದ 10 ಅಂಕಿ ಪಾನ್ ನಂಬರ್ ಹಾಗೂ 12 ಅಂಕಿ ಆಧಾರ್ ನಂಬರ್ ಅನ್ನು ಟೈಪಿಸಿ 567678 ಅಥವಾ 56161 ನಂಬರ್​ಗೆ ಮೆಸೇಜ್ ಕಳುಹಿಸಬೇಕು.

ಹೆಚ್ಚಿನ ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ