EPF Nomination: ನಿಮ್ಮ ಪಿಎಫ್ ಖಾತೆಗೆ ನಾಮಿನೇಶನ್ ಮಾಡಿಲ್ಲವಾ? ಆನ್​ಲೈನ್ ಮೂಲಕ ಸುಲಭವಾಗಿ ನಾಮಿನೇಟ್ ಮಾಡಬಹುದು

|

Updated on: May 29, 2023 | 10:53 AM

Step-by-step Process For EPFO E-Nomination: ಪಿಡಿಎಫ್​ಗೆ ಇ-ಸಹಿ ಬೀಳದೇ ಕೇವಲ ಇ-ನಾಮಿನೇಶನ್ ಮಾಡಿದ್ದರೆ ಅದನ್ನು ಪರಿಗಣಿಸಲಾಗುವುದಿಲ್ಲ. ಅಂದರೆ, ನೀವು ಮೃತಪಟ್ಟಾಗ ನಾಮಿನಿಗಳಿಗೆ ನಿಮ್ಮ ಹಣ ರವಾನೆಯಾಗುವುದು ಕಷ್ಟವಾಗಬಹುದು. ಆದ್ದರಿಂದ ಇ-ನಾಮಿನೇಶನ್ ಮಾಡಿದ ಬಳಿಕ ಪಿಡಿಎಫ್ ಫೈಲ್ ಜನರೇಟ್ ಮಾಡಿ ಅದಕ್ಕೆ ಇ-ಸೈನ್ ಹಾಕಿರಲೇಬೇಕು.

EPF Nomination: ನಿಮ್ಮ ಪಿಎಫ್ ಖಾತೆಗೆ ನಾಮಿನೇಶನ್ ಮಾಡಿಲ್ಲವಾ? ಆನ್​ಲೈನ್ ಮೂಲಕ ಸುಲಭವಾಗಿ ನಾಮಿನೇಟ್ ಮಾಡಬಹುದು
ಇಪಿಎಫ್
Follow us on

ಇಪಿಎಫ್ ಖಾತೆಗೆ ನಾಮಿನೇಶನ್ (EPF e Nomination) ಮಾಡಬೇಕೆಂದು ಇಪಿಎಫ್​ಒ ತಿಳಿಸಿದ್ದು, ಬಹಳ ಮಂದಿ ಇನ್ನೂ ಅಪ್​ಡೇಟ್ ಮಾಡಿಲ್ಲ. ನಾಮಿನೇಶನ್ ಎಂಬುದು ಬಹಳ ಮುಖ್ಯ ಅಂಶ. ಬ್ಯಾಂಕ್ ಖಾತೆ, ಲೈಫ್ ಇನ್ಷೂರೆನ್ಸ್ ಇತ್ಯಾದಿ ಯಾವುದೇ ಸ್ಕೀಮ್, ಹೂಡಿಕೆ ಇತ್ಯಾದಿ ಹಣಕಾಸು ಯೋಜನೆಗಳಲ್ಲಿ ನಾಮಿನೇಶನ್ ಕಡ್ಡಾಯ ಇರುತ್ತದೆ. ನೀವು ಆಕಸ್ಮಿಕವಾಗಿ ಸಾವನ್ನಪ್ಪಿದಾಗ ಖಾತೆಯಲ್ಲಿರುವ ಹಣ ನೀವು ನಾಮಿನೇಟ್ ಮಾಡಿದವರಿಗೆ ಹೋಗುತ್ತದೆ. ಹೀಗಾಗಿ, ನಾಮಿನೇಶನ್ ಎಂಬುದು ಬಹಳ ಮುಖ್ಯ ಎನಿಸುತ್ತದೆ. ನೀವು ಬೇಕೆಂದಾಗ ನಾಮಿನಿಗಳನ್ನು ಬದಲಾಯಿಸುವ ಅವಕಾಶವೂ ಇದೆ. ಆದರೆ, ನಾಮಿನೇಶನ್ ಫೈಲ್ ಮಾಡಲು ಯಾವುದೇ ಗಡುವು ನೀಡಲಾಗಿಲ್ಲ. ಹೀಗಾಗಿ ಆತುರವಿಲ್ಲದೇ ಆರಾಮವಾಗಿ ನಾಮಿನಿ ಸೇರಿಸಿ. ಈಗ ನಿಮ್ಮ ಇಪಿಎಫ್ ಖಾತೆಗೆ ನಾಮಿನಿಗಳನ್ನು ಹೆಸರಿಸುವುದು ಹೇಗೆಂಬ ವಿವರ ಇಲ್ಲಿದೆ.

ಇಪಿಎಫ್​ಒಗೆ ಇನಾಮಿನೇಶನ್ ಮಾಡುವ ವಿಧಾನಗಳು

  • ಇಪಿಎಫ್​ಒ ಸದಸ್ಯರ ಪೋರ್ಟಲ್​ಗೆ ಲಾಗಿನ್ ಆಗಿ
  • ಕುಟುಂಬದ ಎಲ್ಲ ಸದಸ್ಯರ ಹೆಸರನ್ನು ಸೇರಿಸಿ
  • ಕುಟುಂಬ ಸದಸ್ಯರ ಫೋಟೋ ಮತ್ತು ಆಧಾರ್ ಅನ್ನು ಸೇರಿಸಿ
  • ಕುಟುಂಬದವರ ಹೆಸರು ಇತ್ಯಾದಿ ವಿವರಗಳು ಅವರವರ ಆಧಾರ್ ಕಾರ್ಡ್ ಮಾಹಿತಿಯೊಂದಿಗೆ ತಾಳೆಯಾಗಬೇಕು. ಹಾಗಿದ್ದಾಗ ಮಾತ್ರ ಹೆಸರು ಸೇರ್ಪಡೆ ಯಶಸ್ವಿಯಾಗುವುದು.
  • ಕುಟುಂಬ ಸದಸ್ಯರ ಬ್ಯಾಂಕ್ ಖಾತೆ ಸೇರಿಸುವುದು ಐಚ್ಛಿಕ ಮಾತ್ರ, ಕಡ್ಡಾಯವಲ್ಲ.
  • ಇದಾದ ಮೇಲೆ ಪಿಡಿಎಫ್ ಫೈಲ್ ಸಿದ್ಧವಾಗುತ್ತದೆ. ನಿಮ್ಮ ಆಧಾರ್​ಗೆ ಜೋಡಿತವಾದ ಮೊಬೈಲ್ ನಂಬರ್​ಗೆ ಬರುವ ಒಟಿಪಿ ಮೂಲಕ ಈ ಪಿಡಿಎಫ್ ಫೈಲ್​ಗೆ ಇಸೈನ್ ಹಾಕಬೇಕು.

ಇದನ್ನೂ ಓದಿPF Advance: ಮನೆ ನಿರ್ಮಾಣಕ್ಕೆ ಪಿಎಫ್ ಅಡ್ವಾನ್ಸ್ ಪಡೆಯುವುದು ಹೇಗೆ? ಇಲ್ಲಿದೆ ವಿಧಾನ

ಪಿಡಿಎಫ್​ಗೆ ಇಸಹಿ ಬೀಳದೇ ಕೇವಲ ಇನಾಮಿನೇಶನ್ ಮಾಡಿದ್ದರೆ ಅದನ್ನು ಪರಿಗಣಿಸಲಾಗುವುದಿಲ್ಲ. ಅಂದರೆ, ನೀವು ಮೃತಪಟ್ಟಾಗ ನಾಮಿನಿಗಳಿಗೆ ನಿಮ್ಮ ಹಣ ರವಾನೆಯಾಗುವುದು ಕಷ್ಟವಾಗಬಹುದು. ಆದ್ದರಿಂದ ಇನಾಮಿನೇಶನ್ ಮಾಡಿದ ಬಳಿಕ ಪಿಡಿಎಫ್ ಫೈಲ್ ಜನರೇಟ್ ಮಾಡಿ ಅದಕ್ಕೆ ಇಸೈನ್ ಹಾಕಿರಲೇಬೇಕು.

ನೀವು ಸರಿಯಾದ ರೀತಿಯಲ್ಲಿ ನಾಮಿನೇಶನ್ ಮಾಡಿದ್ದರೆ ನಿಮ್ಮ ಕುಟುಂಬ ಸದಸ್ಯರು ತಮ್ಮ ಆಧಾರ್ ಜೋಡಿತ ಮೊಬೈಲ್ ಮೂಲಕ ಇಪಿಎಫ್​ಒ ಖಾತೆಗೆ ಲಾಗಿನ್ ಆಗಿ ಹಣ ಕ್ಲೇಮ್ ಮಾಡಲು ಸಾಧ್ಯವಾಗುತ್ತದೆ.

ಪಿಡಿಎಫ್ ಫೈಲ್​ಗೆ ಇಸೈನ್ ಹೇಗೆ ಹಾಕುವುದು?

ನಾಮಿನೇಶನ್ ಬಳಿಕ ಪಿಡಿಎಫ್ ಫೈಲ್ ಜನರೇಟ್ ಮಾಡಬೇಕು. ಬಳಿಕ ಇಸೈನ್ ಲಿಂಕ್ ಮೇಲ್ ಕ್ಲಿಕ್ ಮಾಡಿದರೆ ಹೊಸ ಪುಟ ತೆರೆದುಕೊಳ್ಳುತ್ತದೆ. ಚೆಕ್ ಬಾಕ್ಸ್ ಆಯ್ಕೆ ಮಾಡಿ. ಮಕುಂದಿನ ಪುಟದಲ್ಲಿ ಎರಡು ಆಯ್ಕೆಗಳಿರುತ್ತವೆ. ಆಧಾರ್ ಆಧಾರಿತವಾಗಿ ದೃಢೀಕರಣ ಮಾಡುವ ಆಯ್ಕೆಗಳು ಇವೆ. ಒಂದು ಆಧಾರ್ ನಂಬರ್, ಇನ್ನೊಂದು ವರ್ಚುವಲ್ ಐಡಿ.

ಆಧಾರ್ ನಂಬರ್ ಅಥವಾ ವರ್ಚುವಲ್ ಐಡಿ ಈ ಎರಡರಲ್ಲಿ ಯಾವುದಾದರೂ ಒಂದನ್ನು ನಮೂದಿಸಿ ವೆರಿಫೈ ಬಟನ್ ಒತ್ತಿರಿ. ಆಧಾರ್ ಜೋಡಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಅದನ್ನು ಹಾಕಿ ಸಲ್ಲಿಸಿದರೆ ನಿಮ್ಮ ನಾಮಿನೇಶನ್ ವಿವರಗಳು ಇಪಿಎಫ್​ಒ ಡಾಟಾಬೇಸ್​ನಲ್ಲಿ ಸಂಗ್ರಹವಾಗುತ್ತದೆ.

ಇದನ್ನೂ ಓದಿEPF Transfer: ಕಂಪನಿ ಬದಲಿಸಿದಾಗ ಇಪಿಎಫ್ ಖಾತೆ ವರ್ಗಾಯಿಸದಿದ್ದರೆ ಏನಾಗುತ್ತದೆ? ಈ ವಿಷಯ ತಿಳಿದಿರಲಿ

ಗಮನಿಸಿ: ನೀವು ಇನಾಮಿನೇಶನ್ ಪ್ರಕ್ರಿಯೆ ಆರಂಭಿಸುವ ಮುನ್ನ ಕುಟುಂಬ ಸದಸ್ಯರ ಫೋಟೋ, ಆಧಾರ್ ನಂಬರ್ ಅನ್ನು ಸಿದ್ಧವಾಗಿಟ್ಟುಕೊಳ್ಳಿ. ಫೋಟೋ ಜೆಪಿಜಿ ಫಾರ್ಮಾಟ್​ನಲ್ಲಿ ಇರಬೇಕು. 100 ಕೆಬಿಗಿಂತ ಕಡಿಮೆ ಗಾತ್ರದ್ದಾಗಿರಬೇಕು. ಫೋಟೋದಲ್ಲಿ ವ್ಯಕ್ತಿಯ ಚಹರೆ ಸ್ಪಷ್ಟವಾಗಿ ಕಾಣುವಂತಿರಬೇಕು.

ಇನ್ನೊಂದು ಸಂಗತಿ ಎಂದರೆ, ಇಪಿಎಫ್ ಖಾತೆದಾರ ವಿವಾಹಿತರಾಗಿದ್ದರೆ ಕುಟುಂಬ ಸದಸ್ಯರ ಪಟ್ಟಿಯಲ್ಲಿ ಪತ್ನಿ ಮತ್ತು ಮಕ್ಕಳ ಹೆಸರು ಇರಲೇಬೇಕು. ಪತ್ನಿ, ಮಕ್ಕಳು ಇಲ್ಲದಿದ್ದರೆ ಅಥವಾ ಖಾತೆದಾರ ಅವಿವಾಹಿತರಾಗಿದ್ದರೆ ಕುಟುಂಬ ಸದಸ್ಯರ ಪಟ್ಟಿಯಲ್ಲಿ ಯಾರ ಹೆಸರನ್ನು ಬೇಕಾದರೂ ಸೇರಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ