ಬ್ಯಾಂಕ್ನಿಂದ ನೀವು ನಾನಾ ರೀತಿಯಲ್ಲಿ ಹಣ ಗಳಿಸಬಹುದು. ಬ್ಯಾಂಕುಗಳು ಹಲವು ರೀತಿಯ ಸೇವೆಗಳನ್ನು ಗ್ರಾಹಕರಿಗೆ ಆಫರ್ ಮಾಡುತ್ತವೆ. ಭಾರತದಲ್ಲಿ ಈಗಲೂ ಕೂಡ ಹೆಚ್ಚಿನ ಜನರಿಗೆ ಎಲ್ಲಾ ಬ್ಯಾಂಕಿಂಗ್ ಸೇವೆಗಳು (Banking services) ಲಭ್ಯ ಇಲ್ಲ. ಬ್ಯಾಂಕ್ ಖಾತೆ ಹೊಂದಿದ್ದರೂ ಅದರ ಅನೇಕ ಸೇವೆಗಳ ಬಗ್ಗೆ ಬಹಳ ಮಂದಿಗೆ ಮಾಹಿತಿ ಇಲ್ಲ. ಬ್ಯಾಂಕುಗಳು ತಮ್ಮ ಸೇವೆಗಳನ್ನು ಪ್ರಚುರಪಡಿಸಲು ಮತ್ತು ಗ್ರಾಹಕರಿಗೆ ಮುಟ್ಟಿಸಲು ಸಿಬ್ಬಂದಿ ಹೊಂದಿರುತ್ತದೆ, ಅಥವಾ ಅಂಥ ಕೆಲಸಗಳಿಗೆ ಕಮಿಷನ್ ಆಧಾರದ ಮೇಲೆ ಮಧ್ಯವರ್ತಿಗಳನ್ನು (Middlemen) ಬಳಸಿಕೊಳ್ಳುತ್ತದೆ. ಈ ರೀತಿ ನೀವು ಬ್ಯಾಂಕ್ ಪರವಾಗಿ ಏಜೆಂಟ್ ಆಗಿ ಕೆಲಸ ಮಾಡುತ್ತಾ ಹಣ ಸಂಪಾದನೆ ಮಾಡಬಹುದು.
ಬ್ಯಾಂಕಿಗೆ ಹೊಸ ಗ್ರಾಹಕರನ್ನು ತಂದು ಸೇವಿಂಗ್ಸ್ ಅಕೌಂಟ್ ತೆರೆಸಿದರೆ ಕಮಿಷನ್ ಸಿಗುತ್ತದೆ. ಬ್ಯಾಂಕಿನಲ್ಲಿ ಆರ್ಡಿ, ಎಫ್ಡಿ, ಕಿಸಾನ್ ಕ್ರೆಡಿಟ್ ಇತ್ಯಾದಿಯನ್ನು ಗ್ರಾಹಕರಿಂದ ತೆರೆಸಿದರೆ ಕಮಿಷನ್ ಸಿಗುತ್ತದೆ.
ಬ್ಯಾಂಕ್ನ ಕಸ್ಟಮರ್ ಸರ್ವಿಸ್ ಸೆಂಟರ್ಗಳಲ್ಲಿ ಅಥವಾ ಮಿನಿ ಬ್ಯಾಂಕುಗಳಲ್ಲಿ ಬ್ಯಾಂಕ್ ಪರವಾಗಿ ಗ್ರಾಹಕರಿಗೆ ಇನ್ಷೂರೆನ್ಸ್ ಪಾಲಿಸಿಗಳನ್ನು ಮಾರಿ ಕಮಿಷನ್ ಪಡೆಯಬಹುದು. ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಿಸಿ ಹಣ ಪಡೆಯಬಹುದು.
ಇದನ್ನೂ ಓದಿ: ದೀರ್ಘಾವಧಿ ಹೂಡಿಕೆಗೆ ಪಿಪಿಎಫ್ ಉತ್ತಮವೋ, ಮ್ಯುಚುವಲ್ ಫಂಡ್ ಓಕೆಯಾ? ಇಲ್ಲಿದೆ ಒಂದು ಹೋಲಿಕೆ
ಬ್ಯಾಂಕ್ನ ಯಾವುದೇ ಇನ್ಷೂರೆನ್ಸ್ ಪಾಲಿಸಿ ಮಾಡಿಸಿದರೆ ಒಬ್ಬ ಏಜೆಂಟ್ಗೆ ಶೇ. 20ರಷ್ಟು ಕಮಿಷನ್ ಸಿಗುತ್ತದೆ. ಒಂದು ಲಕ್ಷ ರೂ ಮೊತ್ತದ ಇನ್ಷೂರೆನ್ಸ್ ಪಾಲಿಸಿ ಪ್ರೀಮಿಯಮ್ಗಳ ಪಾವತಿಯಾದರೆ ನಿಮಗೆ 20,000 ರೂ ಕಮಿಷನ್ ಸಿಗುತ್ತದೆ. ಅಂದರೆ, ನಿಮ್ಮ ವತಿಯಿಂದ ಇನ್ಷೂರೆನ್ಸ್ ಪಾಲಿಸಿ ಪಡೆಯುವ ಗ್ರಾಹಕ ಪಾವತಿಸುವ ಪ್ರೀಮಿಯಮ್ನಿಂದ ನಿಮಗೆ ಕಮಿಷನ್ ಬರುತ್ತದೆ.
ಇನ್ನು, ಲೋನ್ ಏಜೆಂಟ್ ಆಗಿಯೂ ಕೆಲಸ ಮಾಡಬಹುದು. ಅನೇಕ ಮಂದಿಗೆ ಈಗಲೂ ಬ್ಯಾಂಕುಗಳಲ್ಲಿ ಸಾಲ ಪಡೆಯುವ ಪ್ರಕ್ರಿಯೆ ಸರಿಯಾಗಿ ಗೊತ್ತಿರುವುದಿಲ್ಲ. ಖಾಸಗಿ ಫೈನಾನ್ಷಿಯರ್ಗಳಿಂದ ಸಿಕ್ಕಾಪಟ್ಟೆ ಬಡ್ಡಿಗೆ ಸಾಲ ಪಡೆದು ಕಷ್ಟ ಅನುಭವಿಸುತ್ತಾರೆ. ಇಂಥ ವ್ಯಕ್ತಿಗಳನ್ನು ಗುರುತಿಸಿ, ಅವರಿಗೆ ಬ್ಯಾಂಕ್ನಿಂದ ಸಾಲ ಸಿಗುವಂತೆ ಮಾಡಬಹುದು. ಅದಕ್ಕೂ ಕೂಡ ಉತ್ತಮ ಕಮಿಷನ್ ಸಿಗುತ್ತದೆ.
ಬ್ಯಾಂಕ್ ಪರವಾಗಿ ನೀವು ಕ್ರೆಡಿಟ್ ಕಾರ್ಡ್ಗಳನ್ನೂ ಮಾರಬಹುದು. ಇದರಲ್ಲೂ ನಿಮಗೆ ಕಮಿಷನ್, ಇನ್ಸೆಂಟಿವ್ ಇತ್ಯಾದಿ ಸಿಗುತ್ತದೆ.
ಇದನ್ನೂ ಓದಿ: ಫುಯೆಲ್ ಕ್ರೆಡಿಟ್ ಕಾರ್ಡ್ನಿಂದ ಏನು ಪ್ರಯೋಜನ? ಸೂಕ್ತ ಎನಿಸುವ ಕಾರ್ಡ್ಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ?
ಮೇಲೆ ಹೇಳಿದ್ದು ನೀವು ಬ್ಯಾಂಕ್ ಪರವಾಗಿ ಏಜೆಂಟ್ ಆಗಿ ಕೆಲಸ ಮಾಡುತ್ತಾ ಗಳಿಸಬಹುದಾದ ಕಮಿಷನ್ ಹಣದ್ದಾಗಿತ್ತು. ಇದರ ಜೊತೆಗೆ ನೀವು ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಬ್ಯಾಂಕ್ನ ಷೇರಿನ ಮೇಲೆ ಹಣ ಹೂಡಿಕೆ ಮಾಡಬಹುದು. ಈಗ ಬ್ಯಾಂಕ್ ಷೇರುಗಳು ಸಾಕಷ್ಟು ಮೌಲ್ಯವೃದ್ಧಿಸಿಕೊಳ್ಳುತ್ತಿದ್ದು, ದೀರ್ಘಾವಧಿಯಲ್ಲಿ ಇವು ಒಳ್ಳೆಯ ಲಾಭ ತರಬಹುದು.
ಇದರ ಜೊತೆ, ನಿಮ್ಮ ಉಳಿತಾಯ ಹಣವನ್ನು ಬ್ಯಾಂಕ್ನಲ್ಲಿ ಆರ್ಡಿ, ಎಫ್ಡಿ ಇತ್ಯಾದಿಯಲ್ಲಿ ಹೂಡಿಕೆ ಮಾಡಬಹುದು. ಹೆಚ್ಚು ರಿಸ್ಕ್ ತೆಗೆದುಕೊಳ್ಳುವುದಾದರೆ ಮ್ಯುಚುವಲ್ ಫಂಡ್ಗಳಲ್ಲೂ ಹೂಡಿಕೆ ಮಾಡಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:19 pm, Wed, 6 September 23