ಜೀವ ವಿಮಾ ನಿಗಮ (LIC) ಭಾರತದ ನಂಬರ್ ಒನ್ ಇನ್ಷೂರೆನ್ಸ್ ಕಂಪನಿ ಎನಿಸಿದೆ. ವಿವಿಧ ಜನರ ಅನುಕೂಲತೆಗೆ ತಕ್ಕಂತಹ ಮತ್ತು ಸಂದರ್ಭಗಳಿಗೆ ತಕ್ಕಂತಹ ಇನ್ಷೂರೆನ್ಸ್ ಪಾಲಿಸಿಗಳನ್ನು ಎಲ್ಐಸಿ ಆಫರ್ ಮಾಡುತ್ತದೆ. ಜೀವಕ್ಕೆ ವಿಮೆ ಒದಗಿಸುವುದಲ್ಲದೇ, ಭವಿಷ್ಯಕ್ಕೆ ಹಣಕಾಸು ಭದ್ರತೆಯೂ ಆಗಿದೆ. ಜೊತೆಗೆ, ನಿಮಗೆ ನಡುವಿನಲ್ಲಿ ಹಣಕಾಸು ಕಷ್ಟ ಬಂದರೆ ಸಾಲದ ಸೌಲಭ್ಯವನ್ನೂ ಅದು ಕೊಡುತ್ತದೆ. ನೀವು ಎಲ್ಐಸಿ ಪಾಲಿಸಿಯ ಆಧಾರದ ಮೇಲೆ ಸಾಲ ಪಡೆಯಬಹುದಾಗಿದೆ. ಅದಕ್ಕೆ ಬಡ್ಡಿ ದರವೂ ಬಹಳ ಕಡಿಮೆ. ಗೃಹಸಾಲಕ್ಕೆ ಸಿಗುವ ಬಡ್ಡಿದರಕ್ಕಿಂತಲೂ ಕಡಿಮೆ ಬಡ್ಡಿಗೆ ಎಲ್ಐಸಿ ಸಾಲ ಸಿಗುತ್ತದೆ.
ಎಲ್ಐಸಿ ಪಾಲಿಸಿಯಲ್ಲಿ ನೀವು ಎಷ್ಟು ಪ್ರೀಮಿಯಮ್ ಕಟ್ಟಿದ್ದೀರೋ ಅದರ ಆಧಾರದ ಮೇಲೆ ಲೋನ್ ಮೊತ್ತ ಇರುತ್ತದೆ. ಎಲ್ಐಸಿ ಪಾಲಿಸಿ ಮೇಲೆ ಲೋನ್ ಪಡೆಯಲು ಕನಿಷ್ಠ 3 ವರ್ಷ ಪ್ರೀಮಿಯಮ್ ಪಾವತಿಸಿರಬೇಕು. ಪಾಲಿಸಿ ಈಗಲೂ ಚಾಲನೆಯಲ್ಲಿರಬೇಕು. ನೀವು 5 ವರ್ಷಗಳ ಹಿಂದೆ ಎಲ್ಐಸಿ ಪಾಲಿಸಿ ಮಾಡಿಸಿದ್ದು ಈವರೆಗೂ 2 ಲಕ್ಷ ರೂನಷ್ಟು ಪ್ರೀಮಿಯಮ್ ಪಾವತಿಸಿರುವಿರಿ ಎಂದು ಭಾವಿಸಿ. ಆಗ ನಿಮಗೆ ಶೇ. 70ರಿಂದ 80ರಷ್ಟು ಪ್ರೀಮಿಯಮ್ ಮೊತ್ತದಷ್ಟು ಸಾಲ ಸಿಗುತ್ತದೆ. ಅಂದರೆ 1.4ರಿಂದ 1.6 ಲಕ್ಷ ರೂವರೆಗೂ ಸಾಲ ಪಡೆಯಬಹುದು.
ಇದನ್ನೂ ಓದಿ: LIC: ಎಲ್ಐಸಿ ಪಾಲಿಸಿ ಧಮಾಕ; ದಿನಕ್ಕೆ 45 ರೂ ಕಟ್ಟಿ, 25 ಲಕ್ಷ ಪಡೆಯಿರಿ; ನೋಡಿ ಈ ಪಾಲಿಸಿ ಡೀಟೇಲ್ಸ್
ಎಲ್ಐಸಿ ಇ ಸರ್ವಿಸಸ್ ಪೋರ್ಟಲ್ಗೆ ಹೋಗಿ ಅಲ್ಲಿ ಸೈನ್ ಅಪ್ ಮೂಲಕ ಅಕೌಂಟ್ ತೆರೆಯಿರಿ.
ಅಥವಾ ಎಲ್ಐಸಿ ಇಂಡಿಯಾ ವೆಬ್ಸೈಟ್ಗೆ ಹೋದರೆ ಅಲ್ಲಿ ನಡುಭಾಗದಲ್ಲಿ ನಾಲ್ಕು ಸೇವೆಗಳು ಲಭ್ಯ ಇದ್ದು, ಅದರಲ್ಲಿ ಲಾಗಿನ್ ಟು ಕಸ್ಟಮರ್ ಪೋರ್ಟಲ್ ಅನ್ನು ಕ್ಲಿಕ್ ಮಾಡಿ.
ಎಲ್ಐಸಿ ಇಂಡಿಯಾದ ಇಬಿಜ್ ಪುಟ ತೆರೆದುಕೊಳ್ಳುತ್ತದೆ: ebiz.licindia.in
ಇಲ್ಲಿ ಸೈನ್ ಅಪ್ ಕ್ಲಿಕ್ ಮಾಡಿ
ನಿಮ್ಮ ಪಾಲಿಸಿ ನಂಬರ್, ಇನ್ಷೂರೆನ್ಸ್ ನಂಬರ್ ಇತ್ಯಾದಿ ವಿವರ ತುಂಬಿ ಸಬ್ಮಿಟ್ ಕೊಡಿ
ರಿಜಿಸ್ಟ್ರೇಶನ್ ಆದ ಬಳಿಕ ನಿಮಗೆ ನಿಮ್ಮ ಇನ್ಷೂರೆನ್ಸ್ ವಿವರ ಎಲ್ಲವೂ ಸಿಗುತ್ತದೆ.
ನಿಮ್ಮ ಎಲ್ಐಸಿ ಪಾಲಿಸಿಗೆ ಸಾಲ ಸೌಲಭ್ಯ ಸಿಗುತ್ತಾ? ಎಷ್ಟು ಸಿಗಬಹುದು, ಬಡ್ಡಿ ದರ ಇತ್ಯಾದಿ ವಿವರ ಕಾಣುತ್ತದೆ.
ಸಾಲಕ್ಕೆ ನೀವು ಅರ್ಜಿ ಸಲ್ಲಿಸಬಹುದು.
ಸಮೀಪದ ಎಲ್ಐಸಿ ಕಚೇರಿಗೆ ಹೋಗಿ ಕೆವೈಸಿ ದಾಖಲೆಗಳನ್ನು ಕೊಡಬಹುದು. ಅಥವಾ ಅನ್ಲೈನ್ನಲ್ಲೇ ಕೆವೈಸಿ ದಾಖಲೆಗಳನ್ನು ಅಪ್ಲೋಡ್ ಮಾಡಬಹುದು.
ಇದನ್ನೂ ಓದಿ: LIC Saral Pension: ಲಕ್ಷ ರೂ ಆದಾಯ ಬರುವಂತಾಗಬೇಕಾ? ಇಲ್ಲಿದೆ ಎಲ್ಐಸಿ ಸರಳ್ ಪೆನ್ಷನ್ ಪ್ಲಾನ್
ನಿಮ್ಮ ಸಾಲದ ಅರ್ಜಿಗೆ ಅನುಮೋದನೆ ಸಿಕ್ಕ ಬಳಿಕ ಸಾಲ ಮರುಪಾವತಿ ವೇಳಾಪಟ್ಟಿಯನ್ನು ನಿಮಗೆ ಕಳುಹಿಸಿಕೊಡಲಾಗುತ್ತದೆ. ಎಲ್ಐಸಿ ಇಸರ್ವಿಸಸ್ ಪೋರ್ಟಲ್ ಮೂಲಕ ಆನ್ಲೈನ್ನಲ್ಲೂ ಲೋನ್ ರೀಪೇಮೆಂಟ್ ಸ್ಕೆಡ್ಯೂಲ್ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ