ಸರ್ಕಾರ ಹೆಣ್ಮಕ್ಕಳಿಗೆ ಹಲವು ಸ್ಕೀಮ್ಗಳನ್ನು ಆರಂಭಿಸಿದೆ. ಅದರಲ್ಲಿ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ (Mahila Samman Saving Certificate) ಅಥವಾ ಮಹಿಳೆಯರ ಉಳಿತಾಯ ಪ್ರಮಾಣಪತ್ರವೂ ಒಂದು. ಕಳೆದ ಬಾರಿಯ ಬಜೆಟ್ನಲ್ಲಿ (union budget 2023) ಇದನ್ನು ಘೋಷಿಸಲಾಗಿತ್ತು. ಯಾವುದೇ ವಯಸ್ಸಿನ ಮಹಿಳೆಯರು ಈ ಸ್ಕೀಮ್ ಅಡಿಯಲ್ಲಿ ಖಾತೆ ತೆರೆಯಬಹುದು. ಎರಡು ವರ್ಷ ಕಾಲ ಈ ಸ್ಕೀಮ್ ಲಭ್ಯ ಇರುತ್ತದೆ. ಅಂದರೆ ಈ ಯೋಜನೆಯಲ್ಲಿ ಖಾತೆ ತೆರೆಯಬಯಸುವವರಿಗೆ 2025ರ ಮಾರ್ಚ್ 31ರವರೆಗೂ ಮಾತ್ರವೇ ಕಾಲಾವಕಾಶ ಇದೆ.
ಯಾವುದೇ ವಯಸ್ಸಿನ ಹೆಣ್ಮಕ್ಕಳು ಈ ಸ್ಕೀಮ್ ಅಡಿಯಲ್ಲಿ ಖಾತೆ ತೆರೆಯಬಹುದು. ಅಪ್ರಾಪ್ತ ಬಾಲಕಿಯಾಗಿದ್ದರೆ ಆಕೆಯ ಹೆಸರಿನಲ್ಲಿ ಕುಟುಂಬದ ಹಿರಿಯ ಸದಸ್ಯರು ಉಳಿತಾಯಪತ್ರ ತೆರೆಯಬಹುದು.
ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಎಂಬುದು ವಿಶೇಷ ಎಫ್ಡಿ ಯೋಜನೆ. ಎರಡು ವರ್ಷದ ಅವಧಿಯ ಠೇವಣಿ. ಇದಕ್ಕೆ ಶೇ. 7.5ರಷ್ಟು ಬಡ್ಡಿ ಸಿಗುತ್ತದೆ. ಇವತ್ತು ಉಳಿತಾಯಪತ್ರ ಪಡೆದರೆ ಸರಿಯಾಗಿ ಮುಂದಿನ ಎರಡು ವರ್ಷಕ್ಕೆ ಮೆಚ್ಯೂರ್ ಆಗುತ್ತದೆ.
ಇದನ್ನೂ ಓದಿ: Crore in 5 Years: ಸ್ಟೆಪಪ್ ಮ್ಯಾಜಿಕ್ ತಿಳಿಯಿರಿ; ಕೇವಲ 5 ವರ್ಷದಲ್ಲಿ 1 ಕೋಟಿ ಗಳಿಸಲು ಎಷ್ಟು ಹೂಡಿಕೆ ಬೇಕು?
ಒಂದು ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ಗೆ ಕನಿಷ್ಠ ಹೂಡಿಕೆ 1,000 ರೂ ಆಗಿದೆ. ಗರಿಷ್ಠ 2 ಲಕ್ಷ ರೂ ಇದೆ. ಒಬ್ಬ ಮಹಿಳೆ ಒಂದಕ್ಕಿಂತ ಹೆಚ್ಚು ಉಳಿತಾಯಪತ್ರಗಳನ್ನು ಪಡೆಯಬಹುದು. ಆದರೆ, ಅವುಗಳೆಲ್ಲವುಗಳಿಂದ ಒಟ್ಟು ಗರಿಷ್ಠ ಹೂಡಿಕೆ 2 ಲಕ್ಷ ರೂ ಮೀರಬಾರದು. ಎರಡು ಲಕ್ಷ ರೂನ ಉಳಿತಾಯಪತ್ರ ಪಡೆದರೆ ಎರಡು ವರ್ಷದ ಬಳಿಕ 2.15 ಲಕ್ಷ ರೂಗಿಂತ ತುಸು ಹೆಚ್ಚು ಹಣ ರಿಟರ್ನ್ ಸಿಗುತ್ತದೆ.
ಮಾಮೂಲಿಯ ಫಿಕ್ಸೆಡೆ ಡೆಪಾಸಿಟ್ ಪ್ಲಾನ್ಗಳಲ್ಲಿ ಬಡ್ಡಿ ಹಣಕ್ಕೆ ಟಿಡಿಎಸ್ ಕಡಿತ ಇರುತ್ತದೆ. ಹಾಗೆಯೇ, ಪೋಸ್ಟ್ ಆಫೀಸ್ ಉಳಿತಾಯ ಯೋಜನೆಯಲ್ಲಿ ಒಂದು ವರ್ಷದಲ್ಲಿ 40,000 ರೂಗಿಂತ ಹೆಚ್ಚು ಬಡ್ಡಿ ಆದಾಯ ಇದ್ದರೆ ಇನ್ಕಮ್ ಟ್ಯಾಕ್ಸ್ ಕಾಯ್ದೆಯ ಸೆಕ್ಷನ್ 194ಎ ಅಡಿಯಲ್ಲಿ ಟಿಡಿಎಸ್ ಕಡಿತ ಆಗುತ್ತದೆ. ಆದರೆ, ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ನಲ್ಲಿ ಗರಿಷ್ಠ ಹೂಡಿಕೆ 2 ಲಕ್ಷ ರೂ ಇರುವುದರಿಂದ ಬಡ್ಡಿ ಆದಾಯ 40,000 ರೂಗಿಂತ ಕಡಿಮೆ ಇರುತ್ತದೆ. ಹೀಗಾಗಿ ಟಿಡಿಎಸ್ ಕಡಿತದ ಸಾಧ್ಯತೆಯೇ ಇರುವುದಿಲ್ಲ.
ಇದನ್ನೂ ಓದಿ: LIC New Policy: ಎಲ್ಐಸಿ ಜೀವನ್ ಧಾರಾ-2 ಪಾಲಿಸಿ ಇಂದು ಬಿಡುಗಡೆ; ಇದರ ಅನುಕೂಲಗಳೇನು, ವಿವರ ತಿಳಿಯಿರಿ
ಅಂಚೆ ಕಚೇರಿ ಹಾಗೂ ಕೆಲ ಬ್ಯಾಂಕುಗಳಲ್ಲಿ ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಪಡೆಯಬಹುದು. ಪೋಸ್ಟ್ ಆಫೀಸ್ನ ಯಾವುದೇ ಕಚೇರಿಗೆ ಹೋಗಿ ಅಲ್ಲಿ ಸಂಬಂಧಿಸಿದ ಅರ್ಜಿ ಭರ್ತಿ ಮಾಡಿ ಆಧಾರ್, ಪ್ಯಾನ್ ಇತ್ಯಾದಿ ಕೆವೈಸಿ ದಾಖಲೆಗಳನ್ನು ಒದಗಿಸಿ ಸರ್ಟಿಫಿಕೇಟ್ ಪಡೆಯಬಹುದು.
ಎಲ್ಲಾ ಬ್ಯಾಂಕುಗಳಲ್ಲೂ ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಸಿಗುವುದಿಲ್ಲ. ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮಹಿಳಾ ಸಮ್ಮಾನ್ ಉಳಿತಾಯಪತ್ರ ಪಡೆಯಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ