ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್: ಬ್ಯಾಂಕ್ ಎಫ್​ಡಿಗಿಂತ ಹೆಚ್ಚು ಆದಾಯ ತರುವ ಸರ್ಕಾರಿ ಯೋಜನೆ

|

Updated on: Jul 12, 2024 | 12:51 PM

National Savings Certificate: ಅಂಚೆ ಕಚೇರಿಯಲ್ಲಿ ಮಾಡಿಸಬಹುದಾದ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಸುರಕ್ಷಿತ ಹೂಡಿಕೆ ಮತ್ತು ಅಧಿಕ ಬಡ್ಡಿ ಕೊಡುವ ಸ್ಕೀಮ್ ಆಗಿದೆ. ಇತರ ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳಂತೆ ಎನ್​ಎಸ್​ಸಿಗೂ ಮೂರು ತಿಂಗಳಿಗೊಮ್ಮೆ ಬಡ್ಡಿದರ ಪರಿಷ್ಕರಣೆ ಮಾಡಲಾಗುತ್ತದೆ. ಸದ್ಯ ಶೇ. 7.7ರಷ್ಟು ವಾರ್ಷಿಕ ಬಡ್ಡಿದರ ನಿಗದಿ ಮಾಡಲಾಗಿದೆ.

ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್: ಬ್ಯಾಂಕ್ ಎಫ್​ಡಿಗಿಂತ ಹೆಚ್ಚು ಆದಾಯ ತರುವ ಸರ್ಕಾರಿ ಯೋಜನೆ
ಹೂಡಿಕೆ
Follow us on

ಸರ್ಕಾರದಿಂದ ನಡೆಸಲಾಗುವ ಸಣ್ಣ ಉಳಿತಾಯ ಯೋಜನೆಗಳಲ್ಲಿ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಅಥವಾ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಸ್ಕೀಮ್ ಕೂಡ ಒಂದು. ಅಂಚೆ ಕಚೇರಿಯಲ್ಲಿ ಲಭ್ಯ ಇರುವ ಈ ಯೋಜನೆಯಲ್ಲಿ ಸರ್ಕಾರ ಸದ್ಯ ಪ್ರಸಕ್ತ ಕ್ವಾರ್ಟರ್​ಗೆ ಶೇ. 7.7ರ ವಾರ್ಷಿಕ ಬಡ್ಡಿದರ ಫಿಕ್ಸ್ ಮಾಡಿದೆ. ಪ್ರತೀ ಕ್ವಾರ್ಟರ್​ಗೆ ಹಣಕಾ ಸಚಿವಾಲಯ ಈ ಬಡ್ಡಿದರ ಪರಿಷ್ಕರಿಸುತ್ತದೆ. ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಯೋಜನೆಯಲ್ಲಿ ಯಾರು ಬೇಕಾದರೂ ಹಣ ಹೂಡಿಕೆ ಮಾಡಬಹುದು. ಮಾರುಕಟ್ಟೆಗೆ ಜೋಡಿತವಾಗಿಲ್ಲದ ಈ ಹೂಡಿಕೆ ಸುರಕ್ಷಿತವೂ ಹೌದು, ಲಾಭದಾಯಕವೂ ಹೌದು.

ಎನ್​ಎಸ್​ಸಿಯಲ್ಲಿ ಎಷ್ಟು ಹೂಡಿಕೆ ಮಾಡಬಹುದು?

ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಫಿಕ್ಸೆಡ್ ಡೆಪಾಸಿಟ್ ರೀತಿಯದ್ದು. ಕನಿಷ್ಠ 1,000 ರೂ ಹೂಡಿಕೆ ಇದೆ. ಗರಿಷ್ಠ ಮಿತಿ ಇಲ್ಲ. ಒಂದು ಸರ್ಟಿಫಿಕೇಟ್ ಐದು ವರ್ಷಕ್ಕೆ ಮೆಚ್ಯೂರ್ ಆಗುತ್ತದೆ. ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ ಎನ್​ಎಸ್​ಸಿ ಸರ್ಟಿಫಿಕೇಟ್ ಪಡೆಯಬಹುದು. ಅಂದರೆ ಎಷ್ಟು ಖಾತೆಗಳನ್ನು ಬೇಕಾದರೂ ತೆರೆಯಬಹುದು.

ಇದನ್ನೂ ಓದಿ: ಎನ್​ಪಿಎಸ್ ಸ್ಕೀಮ್ ಮೂಲಕ ತಿಂಗಳಿಗೆ 1 ಲಕ್ಷ ರೂ ಪಿಂಚಣಿ ಪಡೆಯುವುದು ಹೇಗೆ?

ಪ್ರಮುಖ ಬ್ಯಾಂಕುಗಳಲ್ಲಿ ಐದು ವರ್ಷದ ಎಫ್​ಡಿಗೆ ಶೇ. 6.50ರಿಂದ ಶೇ. 7.40ರವರೆಗೂ ಬಡ್ಡಿ ಸಿಗುತ್ತದೆ. ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್​ನಲ್ಲಿನ ಹೂಡಿಕೆಗೆ ಇವಕ್ಕಿಂತಲೂ ಹೆಚ್ಚು ಬಡ್ಡಿ ಸಿಗುತ್ತದೆ.

ತೆರಿಗೆ ಲಾಭ ಕೊಡುವ ಎನ್​ಎಸ್​ಸಿ

ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಅಥವಾ ರಾಷ್ಟ್ರೀಯ ಉಳಿತಾಯ ಪತ್ರದಲ್ಲಿ ಮಾಡುವ ಹೂಡಿಕೆಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್ ಅವಕಾಶ ಇರುತ್ತದೆ. ಈ ಹೂಡಿಕೆಯಿಂದ ಸಿಗುವ ಬಡ್ಡಿ ಆದಾಯಕ್ಕೂ ಟ್ಯಾಕ್ಸ್ ಡಿಡಕ್ಷನ್ ಕ್ಲೇಮ್ ಮಾಡಬಹುದು.

ಮೂರು ತಿಂಗಳಿಗೊಮ್ಮೆ ಇದರಲ್ಲಿನ ಹೂಡಿಕೆಗೆ ಬಡ್ಡಿ ಜಮೆ ಆಗುತ್ತಿರುತ್ತದೆ. ಈ ಮೂಲಕ ಹಣಕ್ಕೆ ಚಕ್ರಬಡ್ಡಿ ಹೆಚ್ಚೆಚ್ಚಾಗಿ ಸೇರುತ್ತಾ ಹೋಗುತ್ತದೆ. ಐದು ವರ್ಷಕ್ಕೆ ಮೆಚ್ಯೂರಿಟಿ ಆದ ಬಳಿಕ ಬಡ್ಡಿ ಸಮೇತ ಇಡೀ ಮೊತ್ತ ನಿಮಗೆ ಸಿಗುತ್ತದೆ. ಅಷ್ಟೂ ಮೊತ್ತಕ್ಕೆ ಟಿಡಿಎಸ್ ಕಡಿತ ಮಾಡಲಾಗುವುದಿಲ್ಲ.

ಇದನ್ನೂ ಓದಿ: 2023-24ರ ಸಾಲಿನಲ್ಲಿ ಇಪಿಎಫ್ ಹಣಕ್ಕೆ ಶೇ. 8.25ರ ಬಡ್ಡಿ; ಹಣಕಾಸು ಸಚಿವಾಲಯದಿಂದ ಅನುಮೋದನೆ

ಉಳಿತಾಯ ಪತ್ರದ ಮೇಲೆ ಸಾಲ

ರಾಷ್ಟ್ರೀಯ ಉಳಿತಾಯ ಪತ್ರ ಒಂದು ಹಣಕಾಸು ಆಸ್ತಿಯಾಗಿದ್ದು, ಅದರ ಆಧಾರದ ಮೇಲೆ ಸಾಲ ಪಡೆಯಬಹುದು. ಬಹುತೇಕ ಬ್ಯಾಂಕುಗಳು ಮತ್ತು ಎನ್​ಬಿಎಫ್​ಸಿಗಳು ನ್ಯಾಷನಲ್ ಸೆಕ್ಯೂರಿಟಿ ಸರ್ಟಿಫಿಕೇಟ್​ಗಳನ್ನು ಅಡವಾಗಿ ಇಟ್ಟು ಸಾಲ ಒದಗಿಸುತ್ತವೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ