ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು: ಅಕ್ಟೋಬರ್-ಡಿಸೆಂಬರ್ ಬಡ್ಡಿದರ ಪರಿಷ್ಕರಣೆ

Post Office small savings schemes, interest rates announced: ಪೋಸ್ಟ್ ಆಫೀಸ್​ನಲ್ಲಿ ಸಿಗುವ ವಿವಿಧ ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳಿಗೆ ಬಡ್ಡಿದರ ಪರಿಷ್ಕರಿಸಲಾಗಿದೆ. ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ಇದ್ದ ಬಡ್ಡಿದರಗಳನ್ನೇ ಅಕ್ಟೋಬರ್-ಡಿಸೆಂಬರ್ ಅವಧಿಗೂ ಮುಂದುವರಿಸಲಾಗಿದೆ. ಪೋಸ್ಟ್ ಆಫೀಸ್​ನ ವಿವಿಧ ಯೋಜನೆಗಳ ಪೈಕಿ ಸೀನಿಯರ್ ಸಿಟಿಜನ್ಸ್ ಸ್ಕೀಮ್ ಮತ್ತು ಸುಕನ್ಯಾ ಸಮೃದ್ಧಿ ಸ್ಕೀಮ್​ಗಳಿಗೆ ಗರಿಷ್ಠ ಬಡ್ಡಿ ಸಿಗುತ್ತದೆ.

ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು: ಅಕ್ಟೋಬರ್-ಡಿಸೆಂಬರ್ ಬಡ್ಡಿದರ ಪರಿಷ್ಕರಣೆ
ಪೋಸ್ಟ್ ಆಫೀಸ್

Updated on: Oct 02, 2025 | 5:55 PM

ನವದೆಹಲಿ, ಅಕ್ಟೋಬರ್ 2: ಹಣಕಾಸು ಸಚಿವಾಲಯವು ಪೋಸ್ಟ್ ಆಫೀಸ್ ಸಣ್ಣ ಉಳಿತಾಯ ಯೋಜನೆಗಳಿಗೆ (Post Office Small Savings Schemes) ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕಕ್ಕೆ ಬಡ್ಡಿದರಗಳನ್ನು ಪರಿಷ್ಕರಿಸಿದೆ. ಮಾಧ್ಯಮಕ್ಕೆ ಬಂದ ಮಾಹಿತಿ ಪ್ರಕಾರ ಹಿಂದಿನ ತ್ರೈಮಾಸಿಕದಲ್ಲಿ ಇದ್ದ ದರಗಳನ್ನೇ ಮುಂದುವರಿಸಲಾಗಿದೆ. ಹಿಂದಿನ ಬಡ್ಡಿದರಗಳೇ ಮುಂದುವರಿಯಲಿವೆ.

ಪೋಸ್ಟ್ ಆಫೀಸ್ ಸ್ಕೀಮ್ಸ್ ಮತ್ತು ಬಡ್ಡಿದರಗಳು (2025ರ ಅಕ್ಟೋಬರ್-ಡಿಸೆಂಬರ್)

  • ಸೇವಿಂಗ್ಸ್ ಡೆಪಾಸಿಟ್: ಶೇ. 4 ಬಡ್ಡಿ
  • ಟರ್ಮ್ ಡೆಪಾಸಿಟ್ 1 ವರ್ಷ: ಶೇ. 6.90 ಬಡ್ಡಿ
  • ಟರ್ಮ್ ಡೆಪಾಸಿಟ್ 2 ವರ್ಷ: ಶೇ. 7 ಬಡ್ಡಿ
  • ಟರ್ಮ್ ಡೆಪಾಸಿಟ್ 3 ವರ್ಷ: ಶೇ. 7.10 ಬಡ್ಡಿ
  • ಟರ್ಮ್ ಡೆಪಾಸಿಟ್ 5 ವರ್ಷ: ಶೇ. 7.50 ಬಡ್ಡಿ
  • ಪೋಸ್ಟ್ ಆಫೀಸ್ ಆರ್​ಡಿ 5 ವರ್ಷ: ಶೇ. 6.70 ಬಡ್ಡಿ
  • ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್, 5 ವರ್ಷ: ಶೇ. 6.70 ಬಡ್ಡಿ
  • ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ: ಶೇ. 7.40 ಬಡ್ಡಿ
  • ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಪಿಪಿಎಫ್: ಶೇ. 7.10 ಬಡ್ಡಿ
  • ಕಿಸಾನ್ ವಿಕಾಸ್ ಪತ್ರ: ಶೇ. 7.50 ಬಡ್ಡಿ
  • ಸುಕನ್ಯಾ ಸಮೃದ್ಧಿ ಯೋಜನೆ: ಶೇ. 8.20 ಬಡ್ಡಿ
  • ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್​ಸಿಎಸ್​ಎಸ್): ಶೇ. 8.20 ಬಡ್ಡಿ

ಇದನ್ನೂ ಓದಿ: ಎಲ್ಲಾ ಪೋಸ್ಟ್ ಆಫೀಸ್ ಯೋಜನೆಗಳೂ ತೆರಿಗೆಮುಕ್ತವಲ್ಲ; ಟಿಡಿಎಸ್ ಕಡಿತವಾಗುವ ಕೆಲ ಸ್ಕೀಮ್​ಗಳಿವು

ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗಳಿಗೆ ಗರಿಷ್ಠ ಬಡ್ಡಿ ಸಿಗುತ್ತದೆ. ಇತರ ಪ್ರಮುಖ ಬ್ಯಾಂಕುಗಳಲ್ಲಿ ಹಿರಿಯ ನಾಗರಿಕರಿಗೆ ಸಿಗುವ ಠೇವಣಿ ದರಕ್ಕೆ ಹೋಲಿಸಿದರೆ ಎಸ್​ಸಿಎಸ್​ಎಸ್​ನಲ್ಲಿ ಹೆಚ್ಚಿನ ಬಡ್ಡಿ ಸಿಗುತ್ತದೆ. ಐದು ವರ್ಷದ ಠೇವಣಿ ವಿಚಾರದಲ್ಲಿ ಪ್ರಮುಖ ಬ್ಯಾಂಕುಗಳಿಗಿಂತ ಪೋಸ್ಟ್ ಆಫೀಸ್ ಹೆಚ್ಚಿನ ಬಡ್ಡಿ ಆಫರ್ ಮಾಡುತ್ತದೆ.

ದೀರ್ಘಾವಧಿ ಹೂಡಿಕೆಗೆ ಪಿಪಿಎಫ್ ಸೂಕ್ತ

ಪಿಪಿಎಫ್ ಅಥವಾ ಪಬ್ಲಿಕ್ ಪ್ರಾವಿಡೆಂಟ್ ಫಂಡ್​ನಲ್ಲಿ ಠೇವಣಿಗೆ ಶೇ. 7.1 ಬಡ್ಡಿ ಸಿಗುತ್ತದೆ. ಇದು ತೀರಾ ದೊಡ್ಡ ಬಡ್ಡಿ ಅಲ್ಲವಾದರೂ ಬಹಳ ವರ್ಷಗಳ ಕಾಲ ಟ್ಯಾಕ್ಸ್ ಬೆನಿಫಿಟ್ ಕೊಡುತ್ತದೆ. ಇದರ ಕನಿಷ್ಠ ಹೂಡಿಕೆ ಅವಧಿ 15 ವರ್ಷ ಇರುವುದರಿಂದ ದೀರ್ಘಾವಧಿ ಇನ್ವೆಸ್ಟ್​ಮೆಂಟ್ ಎನಿಸಿದೆ. ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗೂ ಹೂಡಿಕೆಗೆ ಅವಕಾಶ ಇರುತ್ತದೆ. 15 ವರ್ಷಕ್ಕೆ ಮೆಚ್ಯೂರ್ ಆಗುತ್ತದಾದರೂ ಹೂಡಿಕೆಯನ್ನು ಐದೈದು ವರ್ಷ ವಿಸ್ತರಿಸಿಕೊಂಡು ಹೋಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ