ನವದೆಹಲಿ, ನವೆಂಬರ್ 19: ಸರ್ಕಾರದಿಂದ ನಡೆಸಲಾಗುವ ವಿವಿಧ ಸಣ್ಣ ಉಳಿತಾಯ ಯೋಜನೆಗಳು (small savings schemes) ಜನಸಾಮಾನ್ಯರಿಗೆ ವರದಾನವಾಗಿವೆ. ಉತ್ತಮ ವಾರ್ಷಿಕ ಬಡ್ಡಿದರ ಇರುವ ಈ ಸ್ಕೀಮ್ಗಳು ಸಾಮಾನ್ಯ ಜನರಲ್ಲಿ ಉಳಿತಾಯ ಪ್ರವೃತ್ತಿ ಬೆಳೆಸಲು ಮತ್ತು ಭವಿಷ್ಯದ ಹಣಕಾಸು ಭದ್ರತೆ ಒದಗಿಲು ಸಹಾಯವಾಗುತ್ತವೆ. ಈ ಸ್ಕೀಮ್ಗಳಿಗೆ ಸರ್ಕಾರ ಪ್ರತೀ ವರ್ಷವೂ ಬಡ್ಡಿದರ ಪರಿಷ್ಕರಿಸುತ್ತದೆ. ಹಣಕಾಸು ಸಚಿವಾಲಯದ ಅಡಿಗೆ ಬರುವ ಆರ್ಥಿ ವ್ಯವಹಾರಗಳ ಇಲಾಖೆ ಈ ಸಣ್ಣ ಉಳಿತಾಯ ಯೋಜನೆಗಳನ್ನು ನಿಭಾಯಿಸುತ್ತದೆ. ಈ ಇಲಾಖೆಯಿಂದ ಸದ್ಯಕ್ಕೆ 9 ಸಣ್ಣ ಉಳಿತಾಯ ಯೋಜನೆಗಳು ಚಾಲ್ತಿಯಲ್ಲಿವೆ. ಇತ್ತೀಚೆಗೆ ಮೂರು ಇಂಥ ಸ್ಕೀಮ್ಗಳಲ್ಲಿ ನಿಯಮಗಳನ್ನು ಸಡಿಲಿಸಲಾಗಿದೆ. ನವೆಂಬರ್ 9ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ಈ ಸ್ಕೀಮ್ಗಳಿಗೆ ಯಾವೆಲ್ಲಾ ಬದಲಾವಣೆ (rules changes) ತರಲಾಗಿದೆ ಎಂಬ ವಿವರ ಇಲ್ಲಿದೆ…
ನಿವೃತ್ತಿ ಹೊಂದಿದ ಬಳಿಕ ಆ ಹಣವನ್ನು ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ನಲ್ಲಿ ಒಂದು ತಿಂಗಳೊಳಗೆ ಹೂಡಿಕೆ ಮಾಡಿ ಖಾತೆ ತೆರೆಯಬೇಕು ಎಂಬ ನಿಯಮವನ್ನು ಸಡಿಲಿಸಲಾಗಿದೆ. ಈಗ ರಿಟೈರ್ಮೆಂಟ್ ಹಣ ಬಂದು 3 ತಿಂಗಳವರೆಗೂ ಎಸ್ಸಿಎಸ್ಎಸ್ ಖಾತೆ ತೆರೆಯಲು ಅವಕಾಶ ಇರುತ್ತದೆ.
ಇದನ್ನೂ ಓದಿ: ಎಸ್ಸಿಎಸ್ಎಸ್ನಿಂದ ನ್ಯಾಷನಲ್ ಸೇವಿಂಗ್ಸ್ವರೆಗೂ; ಪೋಸ್ಟ್ ಆಫೀಸ್ನಲ್ಲಿ ಅತ್ಯುತ್ತಮ ಉಳಿತಾಯ ಯೋಜನೆಗಳಿವು
ಪಬ್ಲಿಕ್ ಪ್ರಾವಿಡೆಂಟ್ ಫಂಡ್ನ ಅವಧಿ ಮುಂಚಿನ ಹಣ ಹಿಂಪಡೆಯುವಿಕೆಯ ನಿಯಮದಲ್ಲಿ ಬದಲಾವಣೆ ತರಲಾಗಿದೆ. ಪಿಪಿಎಫ್ ಮೆಚ್ಯೂರಿಟಿ ಅವಧಿಗೆ ಮುನ್ನ ಒಬ್ಬ ಖಾತೆದಾರ ಮೂರು ಕಾರಣಗಳಿಗೆ ಹಣ ವಿತ್ಡ್ರಾ ಮಾಡಲು ಅವಕಾಶ ಇದೆ.
ಈ ಮೂರರಲ್ಲಿ ಯಾವುದೇ ಕಾರಣವಿದ್ದರೂ ಪಿಪಿಎಫ್ ಹಣವನ್ನು ಮೆಚ್ಯೂರಿಟಿಗೆ ಮುನ್ನ ವಿತ್ಡ್ರಾ ಮಾಡಿಕೊಳ್ಳಬಹುದು. ಆದರೆ, ಆ ಕಾರಣಗಳಿಗೆ ಸೂಕ್ತವಾದ ದಾಖಲೆಗಳನ್ನು ಒದಗಿಸಬೇಕು. ಸುಮ್ಮನೆ ಕಾರಣ ಹೇಳಿ ಹಣ ಹಿಂಪಡೆಯಲು ಆಗುವುದಿಲ್ಲ.
ಇದನ್ನೂ ಓದಿ: ಎಸ್ಬಿಐ, ಎಚ್ಡಿಎಫ್ಸಿ ಬ್ಯಾಂಕುಗಳಲ್ಲಿ ಎಫ್ಡಿ ದರಗಳು ಎಷ್ಟಿವೆ? ಇಲ್ಲಿದೆ ಪಟ್ಟಿ
ಅಂಚೆ ಕಚೇರಿ ಉಳಿತಾಯ ಖಾತೆಗಳು ಒಂದರಿಂದ ಐದು ವರ್ಷದವರೆಗಿನ ವಿವಿಧ ಅವದಿ ಠೇವಣಿಯ ಆಯ್ಕೆಗಳಿವೆ. ಐದು ವರ್ಷದ ಅವಧಿಯ ಠೇವಣಿಯನ್ನು ನಾಲ್ಕು ವರ್ಷದ ಬಳಿಕ ಹಿಂಪಡೆಯುವ ಸಂದರ್ಭ ಬಂದರೆ, ಹಿಂದಿನ ನಿಯಮದ ಪ್ರಕಾರ ಮೂರು ವರ್ಷದ ಸ್ಕೀಮ್ನಲ್ಲಿರುವಷ್ಟು ಬಡ್ಡಿ ಮಾತ್ರವೇ ಅನ್ವಯ ಆಗುತ್ತಿತ್ತು. ಹೊಸ ನಿಯಮದ ಪ್ರಕಾರ ಐದು ವರ್ಷದ ಸ್ಕೀಮ್ಗೆ ಇರುವ ಬಡ್ಡಿಯೇ ಈ ಪ್ರೀಮೆಚ್ಯೂರ್ ವಿತ್ಡ್ರಾಯಲ್ ಮೊತ್ತಕ್ಕೆ ಅನ್ವಯ ಆಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ