ಪಬ್ಲಿಕ್ ಪ್ರಾವಿಡೆಂಟ್ ಫಂಡ್, ವಾಲಂಟರಿ ಪ್ರಾವಿಡೆಂಟ್ ಫಂಡ್, ನ್ಯಾಷನಲ್ ಪೆನ್ಷನ್ ಸಿಸ್ಟಂ; ಇವುಗಳಲ್ಲಿ ಯಾವುದರಲ್ಲಿ ಹೂಡಿಕೆ ಉತ್ತಮ?

|

Updated on: Oct 10, 2023 | 12:59 PM

Comparison of PPF, VPF and NPS: ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್), ವಾಲಂಟರಿ ಪ್ರಾವಿಡೆಂಟ್ ಫಂಡ್ (ವಿಪಿಎಫ್) ಮತ್ತು ನ್ಯಾಷನಲ್ ಪೆನ್ಷನ್ ಸಿಸ್ಟಂ (ಎನ್​ಪಿಎಸ್) ಇವು ಮೂರು ಕೂಡ ಸರ್ಕಾರದ ಬೆಂಬಲದಲ್ಲಿ ನಡೆಯುವ ಯೋಜನೆಗಳು. ಮೂರು ಕೂಡ ದೀರ್ಘಾವಧಿ ಹೂಡಿಕೆಗಳಿಗೆ ಅನುಕೂಲವಾಗಿರುವ ಯೋಜನೆಗಳಾಗಿವೆ. ಈ ಮೂರು ಸ್ಕೀಮ್​​ಗಳ ಬಗ್ಗೆ ಪರಿಚಯ ಇಲ್ಲಿದೆ...

ಪಬ್ಲಿಕ್ ಪ್ರಾವಿಡೆಂಟ್  ಫಂಡ್, ವಾಲಂಟರಿ ಪ್ರಾವಿಡೆಂಟ್ ಫಂಡ್, ನ್ಯಾಷನಲ್ ಪೆನ್ಷನ್ ಸಿಸ್ಟಂ; ಇವುಗಳಲ್ಲಿ ಯಾವುದರಲ್ಲಿ ಹೂಡಿಕೆ ಉತ್ತಮ?
ಹೂಡಿಕೆ
Follow us on

ನಮ್ಮ ಹಣಕಾಸು ಆರೋಗ್ಯ ಕಾಪಾಡಲು ಹಣದ ಉಳಿತಾಯ ಎಷ್ಟು ಮುಖ್ಯವೋ, ಆ ಉಳಿಸಿದ ಹಣವನ್ನು ವಿವಿಧ ಹೂಡಿಕೆಗಳ (investments) ಮೂಲಕ ಬೆಳೆಸುವುದೂ ಅಷ್ಟೇ ಮುಖ್ಯ. ಸ್ವಲ್ಪ ಜಾಣತನದಿಂದ ಯೋಜಿತ ರೀತಿಯಲ್ಲಿ ನಮ್ಮ ಹಣವನ್ನು ಹೂಡಿಕೆ ಮಾಡಿದರೆ ದೀರ್ಘಾವಧಿಯಲ್ಲಿ ಭರ್ಜರಿ ಲಾಭ ಮಾಡಬಹುದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ರಿಸ್ಕ್ ಎನಿಸಿದರೂ ಸಾಕಷ್ಟು ಲಾಭ ತರುತ್ತದೆ. ಆದರೆ, ಜಾಗತಿಕ ವಿದ್ಯಮಾನ, ಆರ್ಥಿಕ ಅನಿಶ್ಚಿತತೆ ಇತ್ಯಾದಿ ಕಾರಣಗಳಿಂದ ಷೇರುಪೇಟೆ ಅಲುಗಾಡುವುದರಿಂದ ಷೇರುಗಳ ಮೇಲೆ ಹೂಡಿಕೆ ಮಾಡಲು ಹಲವರು ಹಿಂಜರಿಯುತ್ತಾರೆ. ಇಂಥವರಿಗೂ ಕೂಡ ಹೂಡಿಕೆಗಳಿಗೆ ಕೆಲ ಒಳ್ಳೆಯ ಆಯ್ಕೆಗಳಿವೆ. ರೆಕರಿಂಗ್ ಡೆಪಾಸಿಟ್, ಫಿಕ್ಸೆಡ್ ಡೆಪಾಸಿಟ್ ಇತ್ಯಾದಿ ಬ್ಯಾಂಕಿಂಗ್ ಇನ್ವೆಸ್ಟ್​ಮೆಂಟ್ ಸ್ಕೀಮ್​ಗಳಿವೆ. ಗೋಲ್ಡ್ ಬಾಂಡ್, ಡೆಟ್ ಬಾಂಡ್ ಇತ್ಯಾದಿಗಳಿವೆ. ಪಿಪಿಎಫ್, ವಿಪಿಎಫ್, ಎನ್​ಪಿಎಸ್ ಇತ್ಯಾದಿ ದೀರ್ಘಾವಧಿ ಹೂಡಿಕೆ (long term investment) ಸಾಧನಗಳಿವೆ.

ಪಿಪಿಎಫ್, ವಿಪಿಎಫ್ ಮತ್ತು ಎನ್​ಪಿಎಸ್ ಪೈಕಿ ಯಾವುದು ಉತ್ತಮ?

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್), ವಾಲಂಟರಿ ಪ್ರಾವಿಡೆಂಟ್ ಫಂಡ್ (ವಿಪಿಎಫ್) ಮತ್ತು ನ್ಯಾಷನಲ್ ಪೆನ್ಷನ್ ಸಿಸ್ಟಂ (ಎನ್​ಪಿಎಸ್) ಇವು ಮೂರು ಕೂಡ ಸರ್ಕಾರದ ಬೆಂಬಲದಲ್ಲಿ ನಡೆಯುವ ಯೋಜನೆಗಳು. ಮೂರು ಕೂಡ ದೀರ್ಘಾವಧಿ ಹೂಡಿಕೆಗಳಿಗೆ ಅನುಕೂಲವಾಗಿರುವ ಯೋಜನೆಗಳಾಗಿವೆ. ಈ ಮೂರು ಸ್ಕೀಮ್​​ಗಳ ಬಗ್ಗೆ ಪರಿಚಯ ಇಲ್ಲಿದೆ…

ಇದನ್ನೂ ಓದಿ: ಬ್ಯಾಂಕ್ ಆಫ್ ಬರೋಡಾದಲ್ಲಿ ಠೇವಣಿ ದರ ಹೆಚ್ಚಳ; ಬೇರೆ ಬ್ಯಾಂಕುಗಳಲ್ಲಿ ಎಷ್ಟಿವೆ ಎಫ್​ಡಿ ಬಡ್ಡಿದರಗಳು?

ಪಬ್ಲಿಕ್ ಪ್ರಾವಿಡೆಂಟ್ ಫಂಡ್

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಿಶ್ಚಿತ ದರದಲ್ಲಿ ಆದಾಯ ವೃದ್ಧಿಸುವ ಸ್ಕೀಮ್. ರಿಸ್ಕ್ ತೆಗೆದುಕೊಳ್ಳಲು ಇಚ್ಛಿಸಿದವರಿಗೆ ಇದು ಸೂಕ್ತ. 15 ವರ್ಷಗಳ ಅವಧಿಯ ಈ ಯೋಜನೆಯಲ್ಲಿ ಹೂಡಿಕೆಗೆ ವಾರ್ಷಿಕವಾಗಿ ಶೇ. 7.1ರಷ್ಟು ಬಡ್ಡಿ ಸಿಗುತ್ತದೆ. ಇದರ ಜೊತೆಗೆ ತೆರಿಗೆ ಲಾಭವೂ ಇರುತ್ತದೆ. ನೀವು ಆದಾಯ ತೆರಿಗೆ ಪಾವತಿಸುವವರಾಗಿದ್ದರೆ, ಈ ಸ್ಕೀಮ್​ನಲ್ಲಿ ಹೂಡಿಕೆ ಮಾಡಿದ ಹಣಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು. ಇದರಿಂದ ನೀವು ಉಳಿಸುವ ಹಣ ಹಾಗೂ ಪಡೆಯುವ ಬಡ್ಡಿ ಎರಡೂ ಸೇರಿದರೆ ಗಮನಾರ್ಹ ಮೊತ್ತವಾಗುತ್ತದೆ.

ವಾಲಂಟರಿ ಪ್ರಾವಿಡೆಂಟ್ ಫಂಡ್

ಇದು ಉದ್ಯೋಗಿಗಳ ಇಪಿಎಫ್ ಸ್ಕೀಮ್​ಗೆ ಹೆಚ್ಚುವರಿಯಾಗಿರುವ ಒಂದು ಯೋಜನೆ. ಇಪಿಎಫ್​ನಲ್ಲಿ ನಿಮ್ಮ ಸಂಬಳದ ಶೇ. 12ರಷ್ಟು ಮೊತ್ತವನ್ನು ಮುರಿದುಕೊಂಡು ನಿಮ್ಮ ಇಪಿಎಫ್ ಖಾತೆಗೆ ವರ್ಗಾಯಿಸಲಾಗುತ್ತದೆ. ನೀವು ಇನ್ನೂ ಹೆಚ್ಚಿನ ಮೊತ್ತವನ್ನು ತೆಗೆದಿರಿಸಬೇಕೆಂದರೆ ವಿಪಿಎಫ್ ಅನುಕೂಲವಾಗುತ್ತದೆ. ಇದು ಸ್ವಯಂ ಇಚ್ಛೆಯಿಂದ ಪಿಎಫ್ ಖಾತೆಗೆ ನೀವು ನೀಡುವ ಕೊಡುಗೆ. ಎಷ್ಟು ಬೇಕಾದರೂ ನೀವು ಸಂಬಳದ ಭಾಗವನ್ನು ವಿಪಿಎಫ್​ಗೆ ಹಾಕಬಹುದು.

ಇದನ್ನೂ ಓದಿ: Investment Tips: ಒಂದು ಕೋಟಿ ರೂ ಕ್ರೋಢೀಕರಿಸಲು ತಿಂಗಳಿಗೆ ಎಷ್ಟು ಹೂಡಿಕೆ ಮಾಡಬೇಕು?

ಆದರೆ, ನೀವು ವಿಪಿಎಫ್ ಮೂಲಕ ಎಷ್ಟೇ ಕೊಡುಗೆ ನೀಡಿದರೂ ನೀವು ಕೆಲಸ ಮಾಡುವ ಕಂಪನಿಯ ಕೊಡುಗೆಯಲ್ಲಿ ಬದಲಾವಣೆ ಇರುವುದಿಲ್ಲ. ಒಟ್ಟಾರೆ ನಿಮ್ಮ ಪಿಎಫ್ ಖಾತೆಗೆ ಸರ್ಕಾರ ಶೇ. 8.15ರಷ್ಟು ಬಡ್ಡಿ ನೀಡುತ್ತದೆ. ಇವತ್ತಿನ ಮಟ್ಟಿಗೆ ಇದು ಉತ್ತಮ ಬಡ್ಡಿದರ. ಜೊತೆಗೆ, ಇದರಲ್ಲಿನ ಹೂಡಿಕೆಯ ಹಣಕ್ಕೆ ತೆರಿಗೆ ರಿಯಾಯಿತಿ ಕೂಡ ಲಭ್ಯ ಇರುತ್ತದೆ.

ನ್ಯಾಷನಲ್ ಪೆನ್ಷನ್ ಸಿಸ್ಟಂ

ಇದು ರಿಟೈರ್ಮೆಂಟ್ ಯೋಜನೆಯಾಗಿದೆ. 18ರಿಂದ 60 ವರ್ಷದೊಳಗಿನ ಯಾರು ಬೇಕಾದರೂ ಈ ಸ್ಕೀಮ್ ಪಡೆಯಬಹುದು. ಇದರಲ್ಲಿರುವ ಹಣವನ್ನು ಷೇರುಗಳ ಮೇಲೆ ಹೂಡಿಕೆ ಮಾಡಲಾಗುತ್ತದೆ. ಇದರಿಂದ ವರ್ಷಕ್ಕೆ ಶೇ. 10ರಿಂದ 15ರಷ್ಟು ರಿಟರ್ನ್ ಬರುವ ಸಾಧ್ಯತೆ ಹೆಚ್ಚಿರುತ್ತದೆ. 60 ವರ್ಷಕ್ಕೆ ನಿವೃತ್ತರಾದಾಗ ಅನುಕೂಲವಾಗಲೆಂದು ರೂಪಿಸಿರುವ ಈ ಯೋಜನೆಗೂ ಸರ್ಕಾರದ ಗ್ಯಾರಂಟಿ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ