Investment Tips: ಒಂದು ಕೋಟಿ ರೂ ಕ್ರೋಢೀಕರಿಸಲು ತಿಂಗಳಿಗೆ ಎಷ್ಟು ಹೂಡಿಕೆ ಮಾಡಬೇಕು?

How to become crorepati: ಮ್ಯುಚುವಲ್ ಫಂಡ್ ಎಸ್​ಐಪಿ ವಿಚಾರದಲ್ಲಿ 15 X 15 X 15 ಸೂತ್ರವೊಂದನ್ನು ತಜ್ಞರು ಮುಂದಿಡುತ್ತಾರೆ. ಇದು ಕೋಟ್ಯಧಿಪತಿ ಆಗಿಸುವಂತಹ ಸೂತ್ರ. ನೀವು ತಿಂಗಳಿಗೆ 15,000 ರೂಗಳಂತೆ ಎಸ್​ಐಪಿಗೆ ಹಣ ತೊಡಗಿಸಿಕೊಳ್ಳುತ್ತಾ ಹೋದರೆ 15 ವರ್ಷದಲ್ಲಿ ನಿಮ್ಮ ಸಂಪತ್ತು ಒಂದು ಕೋಟಿ ರೂ ಗಡಿ ಮುಟ್ಟುತ್ತದೆ. ಇದು ನಿಜವಾಗಬೇಕಾದರೆ ನಿಮ್ಮ ಹೂಡಿಕೆ ಶೇ. 15ರ ವಾರ್ಷಿಕ ದರದಲ್ಲಿ ಬೆಳೆಯಬೇಕು.

Investment Tips: ಒಂದು ಕೋಟಿ ರೂ ಕ್ರೋಢೀಕರಿಸಲು ತಿಂಗಳಿಗೆ ಎಷ್ಟು ಹೂಡಿಕೆ ಮಾಡಬೇಕು?
ಹೂಡಿಕೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 05, 2023 | 12:01 PM

ಎಲ್ಲಾರೂ ಮಾಡುವುದು ಹೊಟ್ಟೆಗಾಗಿ… ಅನ್ನೋ ಗಾದೆ ಮಾತು ಯಾವತ್ತಿಗೂ ನಿಜವೇ. ಕೊನೆಯವರೆಗೂ ನಮ್ಮ ಹೊಟ್ಟೆಪಾಡು ಉಳಿಯಬೇಕಾದರೆ ಹಣ ಸಂಪಾದನೆ ಬಹಳ ಮುಖ್ಯ. ಹಣ ಸಂಪಾದನೆ, ಹಣ ಉಳಿತಾಯ ಮತ್ತು ಹಣ ಹೂಡಿಕೆ (Investment) ಈ ಮೂರು ಅಂಶಗಳು ಬಹಳ ಅಗತ್ಯ. ಬಹಳಷ್ಟು ಹಣ ಇದ್ದವರು ಮೊದಲ ಅಂಶ ಕೈಬಿಟ್ಟರೂ ನಡೆದೀತು, ಆದರೆ ಕೊನೆಯ ಎರಡು ಅಂಶಗಳು ತೀರಾ ಮುಖ್ಯ. ಹಣ ಹೂಡಿಕೆಗೆ ಇವತ್ತು ಹಲವು ಆಯ್ಕೆಗಳಿವೆ. ಅದರಲ್ಲಿ ಮ್ಯುಚುವಲ್ ಫಂಡ್ ಎಸ್​ಐಪಿಗಳು (Mutual Fund SIP) ಪ್ರಮುಖವಾದುವು. ಈಕ್ವಿಟಿ ಅಥವಾ ಷೇರುಗಳಲ್ಲಿ ನೇರವಾಗಿ ಹೂಡಿಕೆ ಮಾಡಲು ಆಗದವರು ಸರಳವಾಗಿ ಎಸ್​ಐಪಿಯೊಂದನ್ನು ಆರಿಸಿಕೊಂಡು ಹೂಡಿಕೆ ಮಾಡಬಹುದು.

15 X 15 X 15 ಸೂತ್ರ

ಮ್ಯುಚುವಲ್ ಫಂಡ್ ಎಸ್​ಐಪಿ ವಿಚಾರದಲ್ಲಿ 15 X 15 X 15 ಸೂತ್ರವೊಂದನ್ನು ತಜ್ಞರು ಮುಂದಿಡುತ್ತಾರೆ. ಇದು ಕೋಟ್ಯಧಿಪತಿ ಆಗಿಸುವಂತಹ ಸೂತ್ರ. ಎಸ್​ಐಪಿ ಸರಾಸರಿಯಾಗಿ ಶೇ. 15ರಷ್ಟು ವಾರ್ಷಿಕ ರಿಟರ್ನ್ ನೀಡುತ್ತದೆಂದು ನಿರೀಕ್ಷಿಸಬಹುದು. ಅದರಂತೆ ನೀವು ತಿಂಗಳಿಗೆ 15,000 ರೂಗಳಂತೆ ಎಸ್​ಐಪಿಗೆ ಹಣ ತೊಡಗಿಸಿಕೊಳ್ಳುತ್ತಾ ಹೋದರೆ 15 ವರ್ಷದಲ್ಲಿ ನಿಮ್ಮ ಸಂಪತ್ತು ಒಂದು ಕೋಟಿ ರೂ ಗಡಿ ಮುಟ್ಟುತ್ತದೆ. ಇದು ಸಾಧ್ಯವಾಗಬೇಕಾದರೆ ಎಸ್​ಐಪಿ ಇರುವ ಮ್ಯುಚುವಲ್ ಫಂಡ್ ವರ್ಷಕ್ಕೆ ಶೇ. 15ರ ದರದಲ್ಲಿ ಲಾಭ ತರಬೇಕು.

ಇದನ್ನೂ ಓದಿ: Mutual fund: 3 ವರ್ಷದಿಂದ ಶೇ. 44ರಷ್ಟು ವಾರ್ಷಿಕ ದರದಲ್ಲಿ ಲಾಭ ತಂದಿದೆ ಎಸ್​ಬಿಐನ ಈ ಮ್ಯುಚುವಲ್ ಫಂಡ್

ಕಾಂಪೌಂಡಿಂಗ್ ಎಫೆಕ್ಟ್

ಹೂಡಿಕೆಯಲ್ಲಿ ಇನ್ನೂ ಒಂದು ಪ್ರಮುಖ ಅಂಶ ಇದೆ. ಅದು ಕಾಂಪೌಂಡಿಂಗ್ ಎಫೆಕ್ಟ್. ನಿಮ್ಮ ಸಾಲಕ್ಕೆ ಬಡ್ಡಿ, ಚಕ್ರಬಡ್ಡಿ ಬೀಳುವಂತೆ, ಹೂಡಿಕೆಯಲ್ಲೂ ಕೂಡ ನಿಮ್ಮ ಹಣಕ್ಕೆ ಬರುವ ಲಾಭ, ಆ ಲಾಭಕ್ಕೂ ಲಾಭ ಹೀಗೆ ಹಣ ಬೆಳೆಯುತ್ತಾ ಹೋಗುತ್ತದೆ.

ಇದನ್ನೂ ಓದಿ: ನಿವೃತ್ತಿ ಬಳಿಕ ಪಿಂಚಣಿ ಸಿಗಲ್ಲವಾ? ವೃದ್ಧಾಪ್ಯದಲ್ಲಿ ಉತ್ತಮ ಮಾಸಿಕ ಆದಾಯ ಸೃಷ್ಟಿಸಲು ಏನು ಮಾಡಬೇಕು?

ನೀವು ಮ್ಯುಚುವಲ್ ಫಂಡ್ ಎಸ್​ಐಪಿಯಲ್ಲಿ ಹೆಚ್ಚೆಚ್ಚು ಅವಧಿ ಹೂಡಿಕೆ ಮಾಡಿದಷ್ಟೂ ಹಣ ಬೆಳೆಯುವ ವೇಗ ಹೆಚ್ಚುತ್ತಾ ಹೋಗುತ್ತದೆ. ನಿಮ್ಮ ಹೂಡಿಕೆ ಮೊತ್ತ ದ್ವಿಗುಣಗೊಳ್ಳುವ ಅವಧಿ ಕಡಿಮೆ ಆಗುತ್ತಾ ಹೋಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ