Investment: ದಿನಕ್ಕೆ ಕೇವಲ 170 ರೂ ಉಳಿಸಿ ಕೋಟ್ಯಾಧೀಶರಾಗುವುದು ಹೇಗೆ? ವ್ಯವಸ್ಥಿತವಾಗಿ ಹೂಡಿಕೆ ಮಾಡಿ

|

Updated on: Jan 22, 2024 | 12:20 PM

Know How To Become Crorepati: ಪಿಪಿಎಫ್, ಎಫ್​ಡಿ, ಆರ್​ಡಿ, ಮ್ಯುಚುವಲ್ ಫಂಡ್, ಗೋಲ್ಡ್ ಬಾಂಡ್ ಇತ್ಯಾದಿ ಹಲವು ಹೂಡಿಕೆ ಆಯ್ಕೆಗಳು ಇವತ್ತು ನಮ್ಮೆದುರು ಇವೆ. ನೀವು ದಿನಕ್ಕೆ 170 ರೂ, ಅಥವಾ ತಿಂಗಳಿಗೆ 5,000 ರೂ ಉಳಿಸಿ, ಅದನ್ನು ಹೂಡಿಕೆಗೆ ಬಳಸಬಲ್ಲಿರಾದರೆ ನಿವೃತ್ತಿ ವೇಳೆಗೆ ಕೋಟ್ಯಾಧೀಶ್ವರ ಆಗಬಹುದು. ಶೇ. 12ರಷ್ಟು ವಾರ್ಷಿಕ ರಿಟರ್ನ್ ತರುವ ಎಸ್​ಐಪಿಯಲ್ಲಿ ಹಣ ತೊಡಗಿಸಿದರೆ 6 ಕೋಟಿ ರೂ ಒಡೆಯರಾಗಬಹುದು.

Investment: ದಿನಕ್ಕೆ ಕೇವಲ 170 ರೂ ಉಳಿಸಿ ಕೋಟ್ಯಾಧೀಶರಾಗುವುದು ಹೇಗೆ? ವ್ಯವಸ್ಥಿತವಾಗಿ ಹೂಡಿಕೆ ಮಾಡಿ
ಹೂಡಿಕೆ
Follow us on

ಇವತ್ತು ಸಾಕಷ್ಟು ಹೂಡಿಕೆ ಆಯ್ಕೆಗಳಿವೆ. ರಿಸ್ಕ್ ಇಲ್ಲದ ಹೂಡಿಕೆಗಳಿವೆ. ಹೈರಿಸ್ಕ್ ಹೈ ರಿಟರ್ನ್ ಇರುವ ಹೂಡಿಕೆಗಳೂ ಇವೆ. ಚಿನ್ನ, ಭೂಮಿ (real estate) ಆಯ್ಕೆಗಳೂ ಇವೆ. ರಿಸ್ಕೇ ಇಲ್ಲದ ಹೂಡಿಕೆಗಳಲ್ಲಿ ಚಿನ್ನ, ಭೂಮಿಯನ್ನು ಸೇರಿಸಬಹುದು. ಅತ್ಯಂತ ಕಡಿಮೆ ರಿಸ್ಕ್ ಇರುವ ಹೂಡಿಕೆಗಳಲ್ಲಿ ಪಿಪಿಎಫ್ ಇತ್ಯಾದಿ ಸಣ್ಣ ಉಳಿತಾಯ ಯೋಜನೆಗಳು, ಎಫ್​ಡಿ, ಆರ್​ಡಿ, ಗವರ್ನ್ಮೆಂಟ್ ಬಾಂಡ್, ಸಾವರೀನ್ ಗೋಲ್ಡ್ ಬಾಂಡ್ ಇತ್ಯಾದಿಗಳು ಸೇರುತ್ತವೆ. ಇನ್ನು ತುಸು ಹೆಚ್ಚು ರಿಸ್ಕ್ ಇರುವ ಹೂಡಿಕೆಗಳಲ್ಲಿ ಮ್ಯುಚುವಲ್ ಫಂಡ್​ಗಳಿವೆ. ಹೈ ರಿಸ್ಕ್ ಇರುವ ಮತ್ತು ಹೆಚ್ಚು ರಿಟರ್ನ್ ಪಡೆಯುವ ಅವಕಾಶ ನೀಡುವ ಹೂಡಿಕೆಯಲ್ಲಿ ಈಕ್ವಿಟಿ (equity investment) ಇದೆ.

ತಿಂಗಳಿಗೆ 5,000 ರೂ ವಿನಿಯೋಗಿಸುವಾದರೆ ಎಲ್ಲಿ ಹೂಡಿಕೆ ಮಾಡಬಹುದು?

ದಿನಕ್ಕೆ 170 ರೂ ಅಥವಾ ತಿಂಗಳಿಗೆ 5,000 ರೂ ಹಣ ಉಳಿಸಿ ಹೂಡಿಕೆಗೆ ವಿನಿಯೋಗಿಸಬಹುದಾದರೆ ದೀರ್ಘಾವಧಿಯಲ್ಲಿ ಒಂದು ಕೋಟಿ ರೂ ಆದಾಯವನ್ನು ಸುಲಭವಾಗಿ ಪಡೆಯಬಹುದು. ಇವತ್ತು ಎಫ್​ಡಿಗಳಿಗೆ, ಪಿಪಿಎಫ್ ಇತ್ಯಾದಿಗಳಿಗೆ ಕನಿಷ್ಠ ಶೇ. 6.5ರಷ್ಟು ಬಡ್ಡಿ ಸಿಗುತ್ತದೆ. ಬಹಳ ಸುರಕ್ಷಿತವಾದ ಈ ಹೂಡಿಕೆಯಲ್ಲಿ ನೀವು ತಿಂಗಳಿಗೆ 5,000 ರೂನಂತೆ ತೊಡಗಿಸಿದರೆ, 10 ವರ್ಷದಲ್ಲಿ ನಿಮ್ಮ ಹಣ 8.46 ಲಕ್ಷ ರೂ ಆಗುತ್ತದೆ. ಮತ್ತೂ 10 ವರ್ಷ ಹಾಗೇ ಹೂಡಿಕೆ ಮುಂದುವರಿಸಿದರೆ 24 ಲಕ್ಷ ರೂ ಆಗುತ್ತದೆ. ಇನ್ನೂ 10 ವರ್ಷ ಮುಂದುವರಿದರೆ ಹಣವು 55 ಲಕ್ಷ ರೂ ಆಗುತ್ತದೆ. ಹಾಗೇ ಒಟ್ಟು ಹೂಡಿಕೆ ಅವಧಿ 40 ವರ್ಷ ಆದಲ್ಲಿ 1.14 ಕೋಟಿ ರೂ ರಿಟರ್ನ್ ನಿಮಗೆ ಸಿಗುತ್ತದೆ. ಈ 40 ವರ್ಷದಲ್ಲಿ ನೀವು ಕಟ್ಟಿರುವ ಹಣ 24 ಲಕ್ಷ ರೂ ಆಗಿರುತ್ತದೆ.

ಇದನ್ನೂ ಓದಿ: Investment Ideas: 2024ರಲ್ಲಿ ಎಲ್ಲೆಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸುರಕ್ಷಿತ ಮತ್ತು ಲಾಭಕಾರಿ? ಇಲ್ಲಿದೆ ಡೀಟೇಲ್ಸ್

ಮ್ಯೂಚುವಲ್ ಫಂಡ್ ಎಸ್​ಐಪಿಯಿಂದ ಎಷ್ಟು ರಿಟರ್ನ್?

ಮ್ಯೂಚುವಲ್ ಫಂಡ್​ನಲ್ಲಿ ಮಾಡುವ ಹೂಡಿಕೆಯು ಮಾರುಕಟ್ಟೆ ರಿಸ್ಕ್ ಮೇಲೆ ಅವಲಂಬಿತವಾಗಿರುತ್ತದೆ. ಒಂದು ವೇಳೆ ನೀವು ಹೂಡಿಕೆ ಮಾಡಿದ ಮ್ಯೂಚುವಲ್ ಫಂಡ್ 40 ವರ್ಷದಲ್ಲಿ ವಾರ್ಷಿಕ ಶೇ. 12ರಷ್ಟು ದರದಲ್ಲಿ ಬೆಳೆಯಿತು ಎಂದಿಟ್ಟುಕೊಳ್ಳಿ. ನಿಮ್ಮ 5,000 ಮಾಸಿಕ ಹೂಡಿಕೆ 40 ವರ್ಷದಲ್ಲಿ 5.94 ಕೋಟಿ ರೂ ಆಗುತ್ತದೆ.

ನಿಮ್ಮ ಅದೃಷ್ಟಕ್ಕೆ ಮ್ಯುಚುವಲ್ ಫಂಡ್ ವಾರ್ಷಿಕ ಶೇ. 15ರ ದರದಲ್ಲಿ ಬೆಳೆದಲ್ಲಿ ನಿಮ್ಮ ಸಂಪತ್ತು 15 ಕೋಟಿ ರೂ ಆಗುತ್ತದೆ. ಅಕಸ್ಮಾತ್ ಫಂಡ್ ಶೇ. 10ರ ದರದಲ್ಲಿ ಬೆಳೆದಲ್ಲಿ 40 ವರ್ಷದ ಬಳಿಕ ನಿಮಗೆ ಸಿಗುವ ರಿಟರ್ನ್ 3.18 ಕೋಟಿ ರೂ ಆಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ