Investment Ideas: 2024ರಲ್ಲಿ ಎಲ್ಲೆಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸುರಕ್ಷಿತ ಮತ್ತು ಲಾಭಕಾರಿ? ಇಲ್ಲಿದೆ ಡೀಟೇಲ್ಸ್

Know Where to Invest In 2024: ಷೇರು ಮಾರುಕಟ್ಟೆ ಹೊಸ ದಾಖಲೆಯ ಎತ್ತರ ಮುಟ್ಟಿದೆ. ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಫಂಡ್​ಗಳು ಒಳ್ಳೆಯ ಲಾಭ ಮಾಡಿವೆ. ಆದರೆ, 2024ರಲ್ಲಿ ಲಾರ್ಜ್ ಕ್ಯಾಪ್ ಫಂಡ್​​ಗಳು ಹೆಚ್ಚು ಸುರಕ್ಷಿತ ಮತ್ತು ಲಾಭದಾಯಕವಾಗುವ ನಿರೀಕ್ಷೆ ಇದೆ. ನಿಮ್ಮ ಹಣದಲ್ಲಿ ಶೇ. 70ರಷ್ಟು ಹಣ ಲಾರ್ಜ್ ಕ್ಯಾಪ್ ಫಂಡ್​ಗಳಿಗೆ ಹೋಗಲಿ. ಉಳಿದವು ಡೆಟ್ ಫಂಡ್​ಗಳಲ್ಲಿ ಹೂಡಿಕೆಯಾಗಲಿ.

Investment Ideas: 2024ರಲ್ಲಿ ಎಲ್ಲೆಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸುರಕ್ಷಿತ ಮತ್ತು ಲಾಭಕಾರಿ? ಇಲ್ಲಿದೆ ಡೀಟೇಲ್ಸ್
ಹೂಡಿಕೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 18, 2024 | 2:40 PM

ಇವತ್ತು ಷೇರು ಮಾರುಕಟ್ಟೆ ಬಹಳ ಉಚ್ಛ್ರಾಯ ಸ್ಥಿತಿಯಲ್ಲಿದೆ. ಬಹಳಷ್ಟು ಹೂಡಿಕೆದಾರರ ಷೇರುಸಂಪತ್ತು ಅಚ್ಚರಿಪಡುವಷ್ಟು ಎತ್ತರಕ್ಕೇರಿದೆ. ಷೇರುಪೇಟೆಯಲ್ಲಿ ಹೂಡಿಕೆ ಮಾಡಲು ಈಗ ಯಾರಿಗಾದರೂ ಪ್ರೇರೇಪಣೆ ಆಗಬಹುದು. ಷೇರು ಮಾರುಕಟ್ಟೆಯನ್ನೇ ನೋಡಿದರೆ ಸ್ಮಾಲ್ ಕ್ಯಾಪ್ ಮತ್ತು ಮಿಡ್​ಕ್ಯಾಪ್ ಷೇರುಗಳು ಬಹಳ ಬೆಳೆದಿದ್ದು, ಹೂಡಿಕೆದಾರರಿಗೆ ಸಖತ್ ಲಾಭ ತಂದಿವೆ. ಒಂದು ಕಂಪನಿಗಳ ಷೇರು ಸಂಖ್ಯೆ ಮತ್ತು ಮೌಲ್ಯಕ್ಕೆ (market capital) ಅನುಗುಣವಾಗಿ ಅವುಗಳನ್ನು ಲಾರ್ಜ್ ಕ್ಯಾಪ್, ಸ್ಮಾಲ್ ಕ್ಯಾಪ್, ಮಿಡ್ ಕ್ಯಾಪ್ ಎಂದು ವರ್ಗೀಕರಿಸಲಾಗುತ್ತದೆ. ಇಲ್ಲಿ ಲಾರ್ಜ್ ಕ್ಯಾಪ್​ಗಿಂತ ಸಣ್ಣ ಹಾಗೂ ಮಧ್ಯಮ ಷೇರುಮೊತ್ತದ ಕಂಪನಿಗಳು 2023ರಲ್ಲಿ ಹೆಚ್ಚು ಬೆಳೆದಿವೆ. ಹಾಗಂತ 2024ರಲ್ಲೂ ಇದೇ ಟ್ರೆಂಡ್ ಇರುತ್ತಾ? ಬಹಳಷ್ಟು ತಜ್ಞರು 2024ರಲ್ಲಿ ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಷೇರುಗಳ ಬೆನ್ನತ್ತಬೇಡಿ ಎಂದು ಸಲಹೆ ನೀಡುತ್ತಿದ್ದಾರೆ. ಹಾಗಾದರೆ, ಈ ವರ್ಷ ನಿಮ್ಮ ಉಳಿತಾಯ ಹಣವನ್ನು ಎಲ್ಲಿ ಹೂಡಿಕೆ ಮಾಡುವುದು ಸೂಕ್ತ?

2024ರಲ್ಲಿ ನಿಮ್ಮ ಹೂಡಿಕೆ ಈ ರೀತಿ ಹಂಚಿರಬೇಕು…

ನಿಮ್ಮ ಹಣದಲ್ಲಿ ಹೆಚ್ಚಿನ ಮೊತ್ತವನ್ನು ಲಾರ್ಜ್ ಕ್ಯಾಪ್ ಷೇರುಗಳಲ್ಲಿ ಹಾಕಬಹುದು. ಅದಕ್ಕಾಗಿ ಉತ್ತಮವಾದ ಯಾವುದಾದರೂ ಲಾರ್ಜ್ ಕ್ಯಾಪ್ ಮ್ಯುಚುವಲ್ ಫಂಡ್ ಆಯ್ದುಕೊಳ್ಳಬಹುದು. ಉಳಿದ ಹಣವನ್ನು ಡೆಟ್ ಸಾಧನಗಳಲ್ಲಿ ಹಾಕಬಹುದು.

ಇದನ್ನೂ ಓದಿ: 40% EMI Rule: ನಿಮ್ಮ ಆದಾಯದಲ್ಲಿ ಸಾಲಕ್ಕೆ ಮಿತಿ ಎಷ್ಟಿರಬೇಕು? ನೆನಪಿರಲಿ 40 ಪರ್ಸೆಂಟ್ ರೂಲ್; ಈ ಗಡಿ ದಾಟದಿರಿ ಜೋಕೆ..!

ಇಲ್ಲಿ ಡೆಟ್ ಹೂಡಿಕೆಗಳಲ್ಲಿ ಫಿಕ್ಸೆಡ್ ಡೆಪಾಸಿಟ್, ಸರ್ಕಾರಿ ಬಾಂಡ್, ಎನ್​ಪಿಎಸ್ ಇತ್ಯಾದಿ ಇವೆ. ಹಾಗೆಯೇ, ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ, ಪೋಸ್ಟ್ ಆಫೀಸ್ ಠೇವಣಿ ಇತ್ಯಾದಿ ಸರ್ಕಾರಿ ಪ್ರಾಯೋಜಿತ ಸಣ್ಣ ಉಳಿತಾಯ ಯೋಜನೆಗಳೂ ಡೆಟ್ ಸೆಕ್ಯೂರಿಟೀಸ್​ನಲ್ಲಿ ಸೇರಿವೆ. ಇವುಗಳಲ್ಲಿ ಕೆಲ ಯೋಜನೆಗಳಲ್ಲಿ ನೀವು ಶೇ. 30ರಷ್ಟು ಹಣ ತೊಡಗಿಸಬಹುದು

ಉದಾಹರಣೆಗೆ, ನಿಮ್ಮ ಬಳಿ 5 ಲಕ್ಷ ರೂ ಇದೆ ಎಂದಿಟ್ಟುಕೊಳ್ಳಿ. ಇದರಲ್ಲಿ ಶೇ. 70ರಷ್ಟು ಹಣ, ಎಂದರೆ ಮೂರೂವರೆ ಲಕ್ಷ ರೂ ಹಣವನ್ನು ಲಾರ್ಜ್ ಕ್ಯಾಪ್ ಮ್ಯುಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಬಹುದು. ಉಳಿದ ಶೇ. 30ರಷ್ಟು ಅಂದರೆ ಒಂದೂವರೆ ಲಕ್ಷ ರೂನಷ್ಟು ಹಣವನ್ನು ಡೆಟ್ ಫಂಡ್​ಗಳಲ್ಲಿ ಹೂಡಿಕೆ ಮಾಡಬಹುದು. ಇಲ್ಲಿ ಈ ವರ್ಷ ಲಾರ್ಜ್ ಕ್ಯಾಪ್ ಯಾಕೆ ಬೇಕು ಎಂದರೆ 2023ರಲ್ಲಿ ದೊಡ್ಡ ಕಂಪನಿಗಳ ಷೇರುಗಳ ಬೆಲೆ ತೀರಾ ಹೆಚ್ಚೆನಿಸುವಷ್ಟು ಬೆಳೆದಿಲ್ಲ. ಅಂದರೆ ಓವರ್ ವ್ಯಾಲ್ಯೂಡ್ ಆಗಿಲ್ಲ. ಇವು ಇನ್ನಷ್ಟು ಬೆಳೆಯಲು ಅವಕಾಶ ಹೊಂದಿರುತ್ತವೆ.

ಇದನ್ನೂ ಓದಿ: SIP Magic: ದಿನಕ್ಕೆ 200 ರೂನಂತೆ ಎಸ್​ಐಪಿಯಲ್ಲಿ ಹೂಡಿಕೆ ಮಾಡಿದರೆ 25 ವರ್ಷಕ್ಕೆ ಎಷ್ಟು ಸಂಪಾದನೆ ಆಗಬಹುದು?

ಅಲ್ಪಾವಧಿ ಅಗತ್ಯಗಳಿಗೆ ಎಫ್​ಡಿ, ಆರ್​ಡಿ ಬಳಸಿ

ನಿಮಗೆ ಕಿರು ಅವಧಿಗೆ ಹಣದ ಅವಶ್ಯಕತೆ ಬೇಕಾಗುತ್ತದೆ ಎಂದಿದ್ದಾಗ ಫಿಕ್ಸೆಡ್ ಡೆಪಾಸಿಟ್ ಆಯ್ದುಕೊಳ್ಳಬಹುದು. ಅಥವಾ ಅಲ್ಪಾವಧಿ ಅಗತ್ಯಗಳಿಗೆ ಎಫ್​ಡಿಗಿಂತ ಪರ್ಯಾಯವಾಗಿ ರೆಕರಿಂಗ್ ಡೆಪಾಸಿಟ್ ಯೋಜನೆಗಳನ್ನೂ ಪಡೆಯಬಹುದು. ಬ್ಯಾಂಕ್​ನಲ್ಲಿ ನೀವು ಆರು ತಿಂಗಳಿಗೂ ಆರ್​ಡಿ ಪಡೆಯಬಹುದು. ತಿಂಗಳಿಗೆ ಇಂತಿಷ್ಟು ಹಣ ಉಳಿಸಿ ಆರ್​ಡಿಗೆ ಹೂಡಿಕೆ ಮಾಡಬಹುದು. ಹೀಗೆ ಮಾಡಿದಲ್ಲಿ ದೀರ್ಘಾವಧಿ ಹೂಡಿಕೆಗೆ ಹಣ ಮುಡಿಪಾಗಿಡಲು ಸಾಧ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ