ನವದೆಹಲಿ, ಅಕ್ಟೋಬರ್ 24: ಸ್ಟೇಟ್ ಬ್ಯಾಂಕ್ ಇಂಡಿಯಾ ಇತ್ತೀಚೆಗೆ ಹೊಸ ಫಿಕ್ಸೆಡ್ ಡೆಪಾಸಿಟ್ ಪ್ಲಾನ್ವೊಂದನ್ನು ಆರಂಭಿಸಿದೆ. 444 ದಿನಗಳ ಅವಧಿಯ ‘ಅಮೃತ್ ವೃಷ್ಟಿ’ ಠೇವಣಿ ಯೋಜನೆ ಇತ್ತೀಚೆಗೆ ಶುರುವಾಗಿದೆ. ಭಾರತೀಯ ನಾಗರಿಕರು ಮಾತ್ರವಲ್ಲ ಅನಿವಾಸಿ ಭಾರತೀಯರೂ ಕೂಡ ಈ ಪ್ಲಾನ್ನಲ್ಲಿ ಹೂಡಿಕೆ ಮಾಡಬಹುದು. ಜುಲೈ 15ರಿಂದ ಚಾಲನೆಗೊಂಡಿರುವ ಈ ಠೇವಣಿ ಯೋಜನೆ 2025ರ ಮಾರ್ಚ್ 31ರವರೆಗೂ ಲಭ್ಯ ಇರುತ್ತದೆ.
ಎಸ್ಬಿಐ ಅಮೃತ್ ವೃಷ್ಟಿ ಫಿಕ್ಸೆಡ್ ಡೆಪಾಸಿಟ್ ಪ್ಲಾನ್ನಲ್ಲಿ ಕನಿಷ್ಠ ಹೂಡಿಕೆ 1,000 ರೂ ಇದೆ. ಅದಕ್ಕಿಂತ ಹೆಚ್ಚು ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು.
ಈ ಪ್ಲಾನ್ನಲ್ಲಿ ವರ್ಷಕ್ಕೆ ಶೇ. 7.25ರ ದರದಲ್ಲಿ ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರ ಠೇವಣಿಗಳಿಗೆ ಶೇ. 7.75ರ ವಾರ್ಷಿಕ ದರ ಇದೆ. ಡೆಪಾಸಿಟ್ ಅವಧಿ 444 ದಿನ ಇರುತ್ತದೆ. ಒಂದೂವರೆ ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿ ಪ್ಲಾನ್ ಇದು.
ಇದನ್ನೂ ಓದಿ: ರೆಗ್ಯುಲರ್ ಆದಾಯ ಕೊಡುವ ಮ್ಯೂಚುವಲ್ ಫಂಡ್ ಎಸ್ಡಬ್ಲ್ಯುಪಿ ಹೇಗೆ ಕೆಲಸ ಮಾಡುತ್ತೆ ನೋಡಿ
ಇಲ್ಲಿ ಬಡ್ಡಿ ಆದಾಯಕ್ಕೆ ಟಿಡಿಎಸ್ ಅನ್ವಯ ಆಗುತ್ತದೆ. ಅಂದರೆ, ನಿಮ್ಮ ಒಟ್ಟಾರೆ ವಾರ್ಷಿಕ ಆದಾಯ ಯಾವ ಟ್ಯಾಕ್ಸ್ ಸ್ಲಾಬ್ನಲ್ಲಿ ಬೀಳುತ್ತದೋ ಆ ತೆರಿಗೆ ದರ ಅನ್ವಯ ಆಗುತ್ತದೆ. ಟಿಡಿಎಸ್ ಕಡಿತ ಬಳಿಕ ಉಳಿದ ಬಡ್ಡಿಹಣ ನಿಮ್ಮ ಖಾತೆಗೆ ಬರುತ್ತದೆ.
ಎಸ್ಬಿಐ ಅಮೃತ್ ವೃಷ್ಟಿ ಠೇವಣಿ ಯೋಜನೆಯಲ್ಲಿ ನೀವು 5 ಲಕ್ಷ ರೂವರೆಗಿನ ಠೇವಣಿ ಇರಿಸಿದ್ದು, 444 ದಿನದೊಳಗೆ ಅದನ್ನು ಹಿಂಪಡೆದರೆ ಶೇ. 0.5ರಷ್ಟು ಪೆನಾಲ್ಟಿ ಕಟ್ಟಬೇಕಾಗುತ್ತದೆ. ಉದಾಹರಣೆಗೆ, 2 ಲಕ್ಷ ರೂ ಡೆಪಾಸಿಟ್ ಇಟ್ಟಿದ್ದು, ಅದನ್ನು ಅವಧಿಗೆ ಮುನ್ನ ಹಿಂಪಡೆದರೆ 1,000 ರೂ ದಂಡ ಕಟ್ಟಬೇಕಾಗುತ್ತದೆ.
ಇನ್ನು, 5 ಲಕ್ಷ ರೂಗಿಂತ ಮೇಲ್ಪಟ್ಟ ಹಾಗೂ 3 ಕೋಟಿ ರೂ ಒಳಗಿನ ಡೆಪಾಸಿಟ್ಗಳನ್ನು ಅವಧಿಗೆ ಮುನ್ನ ವಿತ್ಡ್ರಾ ಮಾಡಿದರೆ ಶೇ. 1ರಷ್ಟು ದಂಡ ಕಟ್ಟಬೇಕು.
ಈ ಪೆನಾಲ್ಟಿ ಅಂಶವು ಕೇವಲ ಅಮೃತ್ ವೃಷ್ಟಿ ಪ್ಲಾನ್ಗೆ ಮಾತ್ರವಲ್ಲ, ಎಸ್ಬಿಐನ ಎಲ್ಲಾ ಫಿಕ್ಸೆಡ್ ಡೆಪಾಸಿಟ್ ಪ್ಲಾನ್ಗಳಿಗೂ ಅನ್ವಯ ಆಗುತ್ತದೆ.
ಇದನ್ನೂ ಓದಿ: ಎನ್ಪಿಎಸ್ ಯೋಜನೆ: ತಿಂಗಳಿಗೆ 21,000 ರೂ ಉಳಿಸಿ, 2 ಲಕ್ಷ ರೂ ಮಾಸಿಕ ಆದಾಯ ಸೃಷ್ಟಿಸಿ
ಎಲ್ಲಾ ಎಫ್ಡಿಗಳಂತೆ ಅಮೃತ್ ವೃಷ್ಟಿ ಪ್ಲಾನ್ ಅನ್ನು ಆನ್ಲೈನ್ನಲ್ಲೇ ಸುಲಭವಾಗಿ ಮಾಡಬಹುದು. ಎಸ್ಬಿಐನ ಯೋನೋ ಆ್ಯಪ್, ನೆಟ್ ಬ್ಯಾಂಕಿಂಗ್ ಜಾಲತಾಣಕ್ಕೆ ಹೋಗಿ ಲಾಗಿನ್ ಆದರೆ ಅಲ್ಲಿ ನೀವು ಫಿಕ್ಸೆಡ್ ಡೆಪಾಸಿಟ್ ಸೆಕ್ಷನ್ನಲ್ಲಿ ಅಮೃತ್ ವೃಷ್ಟಿ ಪ್ಲಾನ್ ಆಯ್ಕೆ ಮಾಡಿಕೊಂಡು ಮುಂದುವರಿಯಬಹುದು. ಆನ್ಲೈನ್ನಲ್ಲಿ ಬೇಡವೆಂದರೆ, ಎಸ್ಬಿಐನ ನಿಮ್ಮ ಬ್ರ್ಯಾಂಚ್ ಕಚೇರಿಗೆ ಹೋಗಿ ಅಲ್ಲಿ ಎಫ್ಡಿ ತೆರೆಯಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ