ಎಸ್ಬಿಎಂ ಬ್ಯಾಂಕ್ನಲ್ಲಿ ಕೇವಲ 2,000 ರೂನಷ್ಟು ನಿಶ್ಚಿತ ಠೇವಣಿ (fixed deposit) ಇಟ್ಟರೆ ಒಂದು ಸ್ಟೆಪ್ ಅಪ್ ಕ್ರೆಡಿಟ್ ಕಾರ್ಡ್ (Step up credit card) ಪಡೆಯುವ ಅವಕಾಶ ಸಿಗುತ್ತದೆ. ಕಳಪೆ ಕ್ರೆಡಿಟ್ ಸ್ಕೋರ್ ಕಾರಣಕ್ಕೆ ಕ್ರೆಡಿಟ್ ಕಾರ್ಡ್ನಿಂದ ವಂಚಿತರಾಗಿರುವ ಜನರಿಗೆ ಇದು ಅನುಕೂಲವಾಗಬಹುದು. ಫಿಕ್ಸೆಡ್ ಡೆಪಾಸಿಟ್ ಅನ್ನೇ ಅಡಮಾನದಂತೆ ಪರಿಗಣಿಸಿ ಈ ಬ್ಯಾಂಕು ವಿಶೇಷ ಕ್ರೆಡಿಟ್ ಕಾರ್ಡ್ ಅನ್ನು ನೀಡುತ್ತದೆ. ಈ ಸ್ಪೆಪಪ್ ಕ್ರೆಡಿಟ್ ಕಾರ್ಡ್ಗೆ ಪೈಸಾಬಜಾರ್ ಸಂಸ್ಥೆ ಕೋಬ್ರ್ಯಾಂಡಿಂಗ್ ಪಾರ್ಟ್ನರ್ ಆಗಿದೆ.
ಕಳಪೆ ಕ್ರೆಡಿಟ್ ಸ್ಕೋರ್ ಹೊಂದಿರುವವರು ಸುಲಭವಾಗಿ ಕ್ರೆಡಿಟ್ ಕಾರ್ಡ್ ಪಡೆಯಬಹುದು. ಉತ್ತಮ ನಿರ್ವಹಣೆ ಮೂಲಕ ಕ್ರೆಡಿಟ್ ಸ್ಕೋರ್ ಉತ್ತಮಪಡಿಸಿಕೊಳ್ಳುವ ಅವಕಾಶ ಸಿಗುತ್ತದೆ.
ಎಸ್ಬಿಎಂನಲ್ಲಿ ಇಡಲಾಗುವ ಠೇವಣಿಗೆ ಉತ್ತಮ ಬಡ್ಡಿದರ ಸಿಗುತ್ತದೆ. ಶೇ. 8.2ರವರೆಗೂ ವಾರ್ಷಿಕ ಬಡ್ಡಿ ದರ ಇದೆ. ಎಫ್ಡಿ ಮೂಲಕ ಇರಿಸುವ ನಿಮ್ಮ ದುಡ್ಡಿಗೆ ಬಡ್ಡಿ ಲಾಭದ ಜೊತೆಗೆ ಕ್ರೆಡಿಟ್ ಕಾರ್ಡ್ ಸೌಲಭ್ಯವೂ ದೊರಕಿದಂತಾಗುತ್ತದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ನ ಬೇರೆ ಬೇರೆ ಸ್ಕೀಮ್ಗಳಲ್ಲಿ ಬಡ್ಡಿ ಎಷ್ಟು ಸಿಗುತ್ತೆ? ಇಲ್ಲಿದೆ ಡೀಟೇಲ್ಸ್
ಎಸ್ಬಿಎಂ ಬ್ಯಾಂಕ್ ಅನ್ನು ಹಿಂದಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಂದು ತಪ್ಪಾಗಿ ತಿಳಿಯುವ ಸಾಧ್ಯತೆ ಹೆಚ್ಚು. ಅದು ಎಸ್ಬಿಐ ಜೊತೆ ವಿಲೀನವಾಗಿದೆ. ಇದು ಮಾರಿಷಸ್ ಮೂಲದ ಸ್ಟೇಟ್ ಬ್ಯಾಂಕ್ ಆಫ್ ಮಾರಿಷಸ್ನ ಭಾರತೀಯ ಅಂಗ ಸಂಸ್ಥೆಯಾಗಿದೆ. ಎಸ್ಬಿಎಂ ಹೋಲ್ಡಿಂಗ್ಸ್ ಮಾರಿಷಸ್ ದೇಶದ ಷೇರು ಮಾರುಕಟ್ಟೆಯಲ್ಲಿ ಮೂರನೇ ಅತಿದೊಡ್ಡ ಸಂಸ್ಥೆಯೂ ಹೌದು.
ಎಸ್ಬಿಐ ಇಂಡಿಯಾದ ಮುಖ್ಯ ಕಚೇರಿ ಮುಂಬೈನಲ್ಲಿದೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಇದರ ಶಾಖೆಗಳಿವೆ. ಇದರ ವೆಬ್ಸೈಟ್ ಲಿಂಕ್ ಇಲ್ಲಿದೆ: www.sbmbank.co.in/
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ನಿಂದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವುದು ಹೇಗೆ? ಇಲ್ಲಿವೆ ಮೂರು ದಾರಿಗಳು
ಠೇವಣಿಗಳಿಗೆ ಅತಿಹೆಚ್ಚು ಬಡ್ಡಿ ನೀಡುವ ಬ್ಯಾಂಕುಗಳಲ್ಲಿ ಎಸ್ಬಿಎಂ ಒಂದು. ಇದರ 3 ವರ್ಷ 2 ದಿನದ ಠೇವಣಿಗೆ ಶೇ. 8.20ರಷ್ಟು ಬಡ್ಡಿ ಸಿಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ