Tips: ಕ್ರೆಡಿಟ್ ಕಾರ್ಡ್​ನಿಂದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವುದು ಹೇಗೆ? ಇಲ್ಲಿವೆ ಮೂರು ದಾರಿಗಳು

Transfer Money from Credit Card to Bank Account: ಕ್ರೆಡಿಟ್ ಕಾರ್ಡ್​ನಿಂದ ನಗದು ಹಣವನ್ನು ಪಡೆಯಬಹುದು, ಹಾಗೆಯೇ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಕೂಡ ಮಾಡಬಹುದು. ಬ್ಯಾಂಕ್​ನ ಮೊಬೈಲ್ ಆ್ಯಪ್ ಅಥವಾ ನೆಟ್​ಬ್ಯಾಂಕಿಂಗ್​ಗೆ ಲಾಗಿನ್ ಆಗಿ ಅಲ್ಲಿ ಕ್ರೆಡಿಟ್ ಕಾರ್ಡ್​ನಿಂದ ಹಣವನ್ನು ಖಾತೆಗೆ ವರ್ಗಾಯಿಸಬಹುದು. ಬ್ಯಾಂಕ್ ಕಚೇರಿಯಲ್ಲಿ ಅಥವಾ ಎಟಿಎಂನಲ್ಲೂ ಕ್ರೆಡಿಟ್ ಕಾರ್ಡ್​ನಿಂದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳಬಹುದು.

Tips: ಕ್ರೆಡಿಟ್ ಕಾರ್ಡ್​ನಿಂದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವುದು ಹೇಗೆ? ಇಲ್ಲಿವೆ ಮೂರು ದಾರಿಗಳು
ಕ್ರೆಡಿಟ್ ಕಾರ್ಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 14, 2024 | 6:47 PM

ಶಾಪಿಂಗ್ ಇತ್ಯಾದಿ ಕಾರ್ಯಕ್ಕೆ ಹಣ ವಹಿವಾಟಿಗೆ ಕ್ರೆಡಿಟ್ ಕಾರ್ಡ್ ಬಳಕೆ ಸಾಮಾನ್ಯ. ಇದರ ಜೊತೆಗೆ ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂನಲ್ಲಿ ಒಂದು ಮಿತಿಯಷ್ಟು ಪ್ರಮಾಣದಲ್ಲಿ ಹಣ ಡ್ರಾ (transfer money from credit card to bank account) ಮಾಡಬಹುದು. ಆದರೆ, ಕ್ರೆಡಿಟ್ ಕಾರ್ಡ್​ನಿಂದ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಕೂಡ ಮಾಡಬಹುದು. ಎಟಿಎಂನಿಂದ ಕ್ರೆಡಿಟ್ ಕಾರ್ಡ್​ನಲ್ಲಿ ನಗದು ಹಣ ಪಡೆದರೂ, ಅಥವಾ ಅಕೌಂಟ್​ಗೆ ಹಣ ವರ್ಗಾವಣೆ ಮಾಡಿದರೂ ಆ ಮೊತ್ತಕ್ಕೆ ಹೆಚ್ಚು ಬಡ್ಡಿ ವಿಧಿಸಲಾಗುತ್ತದೆ. ಶಾಪಿಂಗ್ ಮಾಡುವಾಗ ಕ್ರೆಡಿಟ್ ಕಾರ್ಡ್ ಬಳಸಿದರೆ ಆ ವೆಚ್ಚಕ್ಕೆ ನಿರ್ದಿಷ್ಟ ದಿನಗಳವರೆಗೆ ಬಡ್ಡಿ ಇರುವುದಿಲ್ಲ. ಆದರೆ, ಹಣದ ವಹಿವಾಟಿಗೆ ತತ್​ಕ್ಷಣದಿಂದಲೇ ಬಡ್ಡಿ ಅನ್ವಯ ಆಗುತ್ತದೆ. ಸಾಮಾನ್ಯವಾಗಿ ಈ ಬಡ್ಡಿ ಶೇ. 20ಕ್ಕಿಂತಲೂ ಹೆಚ್ಚಿರುತ್ತದೆ.

ನೆಟ್ ಬ್ಯಾಂಕಿಂಗ್ ಮೂಲಕ ಅಕೌಂಟ್​ಗೆ ಹಣ ವರ್ಗಾಯಿಸಿ…

  • ನಿಮ್ಮ ಬ್ಯಾಂಕ್​ನ ಮೊಬೈಲ್ ಆ್ಯಪ್​ಗೆ ಹೋಗಿ, ಅಥವಾ ನೆಟ್​ಬ್ಯಾಂಕಿಂಗ್ ಸೈಟ್​ಗೆ ಹೋಗಿ ಲಾಗಿನ್ ಆಗಿ.
  • ಅಲ್ಲಿ ‘ಆ್ಯಡ್ ಮನಿ’ ಅಥವಾ ‘ಟ್ರಾನ್ಸ್​ಫರ್ ಫಂಡ್ಸ್’ ಎಂಬ ಯಾವುದಾದರೂ ಆಯ್ಕೆಯನ್ನು ಆರಿಸಿಕೊಳ್ಳಿ.
  • ‘ಫ್ರಂ ಕ್ರೆಡಿಟ್ ಕಾರ್ಡ್’ ಅನ್ನು ಆಯ್ಕೆ ಮಾಡಿ. ಹಣದ ಮೊತ್ತವನ್ನು ನಮೂದಿಸಿ ಮುಂದುವರಿಯಿರಿ.
  • ಆ ಹಣ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ.

ಇದನ್ನೂ ಓದಿ: ನಿಮ್ಮ ಸಂಗಾತಿಗೆ ಪ್ರೀತಿಯಿಂದ ನೀಡಬಹುದಾದ ಹಣಕಾಸು ಗಿಫ್ಟ್​ಗಳು

ಎಟಿಎಂನಲ್ಲೂ ಹಣ ವರ್ಗಾವಣೆ ಸಾಧ್ಯ

  • ನಿಮ್ಮ ಕ್ರೆಡಿಟ್ ಕಾರ್ಡ್​ ಬ್ಯಾಂಕ್​ನ ಎಟಿಎಂ ಹೋಗಿ, ಅಲ್ಲಿ ಕಾರ್ಡ್ ಇನ್ಸರ್ಟ್ ಮಾಡಿ.
  • ಕ್ಯಾಷ್ ಅಡ್ವಾನ್ಸ್ ಆಯ್ಕೆ ಕಾಣಬಹುದು. ಅದನ್ನು ಆಯ್ಕೆ ಮಾಡಿ.
  • ನಿಮ್ಮ ಕ್ರೆಡಿಟ್ ಕಾರ್ಡ್​ಗೆ ಜೋಡಿತವಾಗಿರುವ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿ.
  • ಹಣ ನಮೂದಿಸಿ ವಹಿವಾಟು ಪೂರ್ಣಗೊಳಿಸಿ.

ಇದನ್ನೂ ಓದಿ: ಎಫ್​ಡಿ, ಮ್ಯೂಚುವಲ್ ಫಂಡ್​ಗಿಂತಲೂ ಹೆಚ್ಚು ಲಾಭ ಕೊಡುವ ಗೋಲ್ಡ್ ಬಾಂಡ್ ಖರೀದಿಸುವುದು ಹೇಗೆ? ಇಲ್ಲಿದೆ ಹಂತ-ಹಂತದ ವಿವರ

ಬ್ಯಾಂಕ್​ಗೆ ಹೋಗಿ ಹಣ ವರ್ಗಾವಣೆ ಮಾಡಿ

  • ಕ್ರೆಡಿಟ್ ಕಾರ್ಡ್ ನೀಡಿದ ಬ್ಯಾಂಕ್​ನ ಕಚೇರಿಗೆ ಹೋಗಿ ಅಲ್ಲಿ ಟ್ರಾನ್ಸ್​ಫರ್ ಫಾರ್ಮ್ ಪಡೆಯಿರಿ.
  • ನಿಮ್ಮ ಕ್ರೆಡಿಟ್ ಕಾರ್ಡ್ ನಂಬರ್, ಕಾರ್ಡ್​ನ ಎಕ್ಸ್​ಪೆರಿ ದಿನಾಂಕ, ಬ್ಯಾಂಕ್ ಹೆಸರು, ಶಾಖೆ, ಅಕೌಂಟ್ ನಂಬರ್ ಇತ್ಯಾದಿ ಮಾಹಿತಿ ತುಂಬಿ ಅರ್ಜಿ ಸಲ್ಲಿಸಿ.
  • ಬ್ಯಾಂಕ್ ವತಿಯಿಂದ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ