Valentine’s Day Gifts: ನಿಮ್ಮ ಸಂಗಾತಿಗೆ ಪ್ರೀತಿಯಿಂದ ನೀಡಬಹುದಾದ ಹಣಕಾಸು ಗಿಫ್ಟ್​ಗಳು

Best Financial Gifts for Life Partners: ವ್ಯಾಲಂಟೈನ್ಸ್ ಡೇ ದಿನ ಹೂವು, ಉಂಗುರ ಇತ್ಯಾದಿಗೆ ಮಾತ್ರವೇ ಗಿಫ್ಟ್ ಸೀಮಿತವಾಗಬೇಕೆಂದಿಲ್ಲ, ಬೇರೆ ನಾನಾ ಉಡುಗೊರೆಗಳ ಆಯ್ಕೆ ಇರುತ್ತದೆ. ನಿಮ್ಮ ಸಂಗಾತಿಗೆ ಹಣಕಾಸು ಭದ್ರತೆ ಒದಗಿಸುವ ಯಾವುದಾದರೂ ಒಂದು ಯೋಜನೆಯನ್ನು ಗಿಫ್ಟ್ ಆಗಿ ನೀಡಿದರೆ ಸಾರ್ಥಕ ಎನಿಸಬಹುದು. ಇನ್ಷೂರೆನ್ಸ್, ಗೋಲ್ಡ್ ಬಾಂಡ್, ಎಮರ್ಜೆನ್ಸಿ ಫಂಡ್ ಹೀಗೆ ಯಾವುದಾರೂ ಹಣಕಾಸು ಪ್ಲಾನಿಂಗ್ ಮಾಡಿ ಗಿಫ್ಟ್ ಆಗಿ ನೀಡಿ.

Valentine's Day Gifts: ನಿಮ್ಮ ಸಂಗಾತಿಗೆ ಪ್ರೀತಿಯಿಂದ ನೀಡಬಹುದಾದ ಹಣಕಾಸು ಗಿಫ್ಟ್​ಗಳು
ಹಣಕಾಸು ಗಿಫ್ಟ್​
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 14, 2024 | 12:05 PM

ಇವತ್ತು ಫೆಬ್ರುವರಿ 14, ವ್ಯಾಲಂಟೈನ್ಸ್ ಡೇ. ವ್ಯಾಲಂಟೈನ್ಸ್ (Valentine’s Day) ಯಾರು ಏನು ಎನ್ನುವ ಹಿನ್ನೆಲೆಗಿಂತ ಈ ದಿನ ಹುಡುಗ ಮತ್ತು ಹುಡುಗಿಯರಿಗೆ ಪ್ರೇಮ ನಿವೇದನೆಯ ಸಮಯ. ಕೇವಲ ಕಾಲೇಜು ಹುಡುಗ ಮತ್ತು ಹುಡುಗಿಯರಿಗೆ ಮಾತ್ರ ಸೀಮಿತ ಅಲ್ಲ ಈ ದಿನದ ಸಂಭ್ರಮ, ದಂಪತಿ ಸೇರಿದಂತೆ ಯಾವುದೇ ಜೋಡಿಯೂ ಮನಬಿಚ್ಚಿ ಪ್ರೀತಿ ತೋರ್ಪಡಿಸಬಹುದು. ಹೆಣ್ಮಕ್ಕಳಿಗೆ ಉಂಗುರವನ್ನೋ, ಹೂವನ್ನೋ, ನೆಕ್​ಲೇಸ್ ಅನ್ನೋ, ಬಟ್ಟೆಬರೆಯನ್ನೋ ಕೊಟ್ಟು, ರೋಮ್ಯಾಂಟಿಕ್ ಡಿನ್ನರ್ ಮತ್ತು ಡ್ಯಾನ್ಸ್ ಪಾರ್ಟಿಗೆ ಹೋಗಿ ಖುಷಿಪಡಿಸಬಹುದು. ಇದರ ಜೊತೆಗೆ ನಿಮ್ಮ ಸಂಗಾತಿಯ ಜೀವನಕ್ಕೆ ಭದ್ರತೆ ಹೆಚ್ಚಿಸುವಂತಹ ಗಿಫ್ಟ್ ಕೊಟ್ಟರೆ ಪ್ರೀತಿ ಇನ್ನಷ್ಟು ಗಾಢಗೊಳ್ಳುತ್ತದೆ.

ಹಣಕಾಸು ಗಿಫ್ಟ್ ಎಂದರೆ ಒಂದಷ್ಟು ಹಣವನ್ನು ಕೊಡುವುದಲ್ಲ. ನಿಮ್ಮ ಸಂಗಾತಿಗೆ ಯಾವ ಹಣಕಾಸು ಯೋಜನೆಯ ಅಗತ್ಯ ಇದೆ ಎಂಬುದನ್ನು ಗ್ರಹಿಸಿ ಅದನ್ನು ನೀಡುವುದು ಬಹಳ ಸಂದರ್ಭೋಚಿತ ಎನಿಸುತ್ತದೆ.

ಇನ್ಷೂರೆನ್ಸ್ ಯೋಜನೆಗಳು

ನಿಮ್ಮ ಸಂಗಾತಿಗೆ ಸರಿಯಾದ ಲೈಫ್ ಇನ್ಷೂರೆನ್ಸ್ ಅಥವಾ ಹೆಲ್ತ್ ಇನ್ಷೂರೆನ್ಸ್ ಇಲ್ಲದಿದ್ದಲ್ಲಿ ಅದನ್ನು ಮೊದಲು ಮಾಡಿಸಿ. ನೀವಿನ್ನೂ ಅವಿವಾಹಿತರಾಗಿದ್ದರೆ ನಿಮ್ಮ ಪ್ರೇಮಿಗೆ ನಿಮ್ಮ ಕೈಯಿಂದಲೇ ಸಾಧ್ಯವಾದರೆ ಇನ್ಷೂರೆನ್ಸ್ ಪಾಲಿಸಿ ಮಾಡಿಸಲು ನೆರವಾಗಿ ಮೊದಲ ಪ್ರೀಮಿಯಮ್ ನೀವೇ ಕಟ್ಟಬಹುದು.

ಇದನ್ನೂ ಓದಿ: ಫೋನ್ ಮಾಡಿದ್ದು ಅಂಬಾನಿ ಅಂತ ನಂಬದ ನೀತಾ; ಶ್ರೀಮಂತ ಮತ್ತು ಮಧ್ಯಮವರ್ಗದ ಜೋಡಿಯ ಸ್ವಾರಸ್ಯಕರ ಪ್ರೇಮಕಥೆ

ಗೋಲ್ಡ್ ಬಾಂಡ್

ಚಿನ್ನದ ಆಭರಣಗಳನ್ನು ಗಿಫ್ಟ್ ಆಗಿ ಕೊಡುವುದು ಚೆನ್ನ. ಆದರೆ, ಗೋಲ್ಡ್ ಸ್ಕೀಮ್​ಗಳನ್ನು ಸಂಗಾತಿಗೆ ಗಿಫ್ಟ್ ಆಗಿ ನೀಡಿದರೆ ಇನ್ನೂ ಚೆನ್ನ. ಈಗ ಬಹಳ ರೀತಿಯ ಗೋಲ್ಡ್ ಸ್ಕೀಮ್​ಗಳಿವೆ. ಸಾವರನ್ ಗೋಲ್ಡ್ ಬಾಂಡ್, ಗೋಲ್ಡ್ ಇಟಿಎಫ್, ಗೋಲ್ಡ್ ಫಂಡ್, ಡಿಜಿಟಲ್ ಗೋಲ್ಡ್ ಯೋಜನೆಗಳಿವೆ. ನಿಮ್ಮ ಸಂಗಾತಿಯ ಹೆಸರಿನಲ್ಲಿ ಸಾವರನ್ ಗೋಲ್ಡ್ ಬಾಂಡ್​ನಲ್ಲಿ ಹೂಡಿಕೆ ಮಾಡಿ. ಈಗ ಫೆಬ್ರುವರಿ 16ರವರೆಗೂ ಅವಕಾಶ ಇದೆ.

ಮ್ಯೂಚುವಲ್ ಫಂಡ್

ಮ್ಯುಚುವಲ್ ಫಂಡ್​ನಲ್ಲಿ ನಿಮ್ಮ ಸಂಗಾತಿಯ ಹೆಸರಿನಲ್ಲಿ ಹೂಡಿಕೆ ಮಾಡಿ. ಎಸ್​ಐಪಿ ಮಾಡುವುದಾದರೆ ಇವತ್ತಿನಿಂದಲೇ ಅದನ್ನು ಆರಂಭಿಸಿ. ಯಾವುದಕ್ಕೋ ಹಣ ವ್ಯಯಿಸುವ ಬದಲು ಮ್ಯುಚುವಲ್ ಫಂಡ್ ಇತ್ಯಾದಿ ಮೂಲಕ ಷೇರುಪೇಟೆಯಲ್ಲಿ ಹಣ ತೊಡಗಿಸಿಕೊಳ್ಳುವುದು ಉತ್ತಮ.

ತುರ್ತು ನಿಧಿ

ಅನಿರೀಕ್ಷಿತ ಸಂದರ್ಭಗಳ ಅನಿರೀಕ್ಷಿತ ವೆಚ್ಚ ಎದುರಿಸಲು ತುರ್ತು ನಿಧಿಯ ಅವಶ್ಯಕತೆ ಇರುತ್ತದೆ. ಇಲ್ಲವಾದರೆ ಸಕಾಲಕ್ಕೆ ಹಣ ಒದಗಿಬರದೇ ಹೋಗಬಹುದು. ನಿಮ್ಮ ಸಂಗಾತಿಗೆ ನೀವು ತುರ್ತು ನಿಧಿ ನಿರ್ಮಿಸಿಕೊಡಬಹುದಾ ಯೋಚಿಸಿ. ಇದರಿಂದ ಅವರು ನಿರಾಳವಾಗಿರಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಎಫ್​ಡಿ, ಮ್ಯೂಚುವಲ್ ಫಂಡ್​ಗಿಂತಲೂ ಹೆಚ್ಚು ಲಾಭ ಕೊಡುವ ಗೋಲ್ಡ್ ಬಾಂಡ್ ಖರೀದಿಸುವುದು ಹೇಗೆ? ಇಲ್ಲಿದೆ ಹಂತ-ಹಂತದ ವಿವರ

ಹಣಕಾಸು ಜಾಗೃತಿ

ನಿಮ್ಮ ಸಂಗಾತಿಗೆ ಹಣಕಾಸು ಜಾಗೃತಿ ಮೂಡಿಸಬಲ್ಲ ಪುಸ್ತಕಗಳನ್ನು ಗಿಫ್ಟ್ ಆಗಿ ನೀಡಬಹುದು. ಇಂದು ಮಾರುಕಟ್ಟೆಯಲ್ಲಿ ಸಾಕಷ್ಟು ಒಳ್ಳೊಳ್ಳೆಯ ಪುಸ್ತಕಗಳಿವೆ. ಇಂಟೆಲಿಜೆಂಟ್ ಇನ್ವೆಸ್ಟರ್, ದಿ ವಾರನ್ ಬಫೆಟ್ ವೇ ಇತ್ಯಾದಿ ಪುಸ್ತಕಗಳು ಒಬ್ಬ ವ್ಯಕ್ತಿಯ ಹಣಕಾಸು ಪರಿಸ್ಥಿತಿಗೆ ಉತ್ತಮ ತಿರುವು ನೀಡಬಲ್ಲುವು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?