ಕೇಂದ್ರ ಸರ್ಕಾರ ನಡೆಸುತ್ತಿರುವ ಕೆಲ ಪ್ರಮುಖ ಹೂಡಿಕೆ ಸ್ಕೀಮ್ಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯೂ (Sukanya Samriddhi Yojana) ಒಂದು. ಹೆಣ್ಮಕ್ಕಳಿಗೆಂದು ರೂಪಿಸಿರುವ ಸ್ಕೀಮ್ ಇದು. 10 ವರ್ಷದೊಳಗಿನ ಹೆಣ್ಮಗುವಿನ ಹೆಸರಿನಲ್ಲಿ ಪೋಷಕರು ಈ ಯೋಜನೆಯ ಅಡಿ ಖಾತೆ ತೆರೆಯಬಹುದು. ವರ್ಷಕ್ಕೆ 250 ರೂನಿಂದ ಆರಂಭವಾಗಿ 1.5 ಲಕ್ಷ ರೂವರೆಗೆ ಹಣವನ್ನು ಈ ಸ್ಕೀಮ್ನಲ್ಲಿ ಒಬ್ಬರಿಗೆ ಹೂಡಿಕೆ (Investment) ಮಾಡಲು ಅವಕಾಶ ಇದೆ. ಹೆಣ್ಮಗುವಿನ ಓದು, ಮದುವೆ ಇತ್ಯಾದಿ ಭವಿಷ್ಯದ ಖರ್ಚು ವೆಚ್ಚ ಹಾಗೂ ಆಕೆಯ ಹಣಕಾಸು ಭದ್ರತೆಗೆಂದು ಈ ಸ್ಕೀಮ್ ರೂಪಿಸಲಾಗಿದೆ.
ಸರ್ಕಾರ ಸದ್ಯ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ವರ್ಷಕ್ಕೆ ಶೇ. 8ರಷ್ಟು ಬಡ್ಡಿ ಒದಗಿಸುತ್ತದೆ. ಈ ಯೋಜನೆಯಲ್ಲಿ ಮಾಡಲಾಗುವ ಹೂಡಿಕೆಗೆ ತೆರಿಗೆ ವಿನಾಯಿತಿ ಇರುತ್ತದೆ. ಈ ಸ್ಕೀಮ್ 21 ವರ್ಷಕ್ಕೆ ಮೆಚ್ಯೂರ್ ಆಗುತ್ತದೆ. ಅಥವಾ ಹೆಣ್ಮಗು ಮದುವೆಯಾಗುವವರೆಗೂ ಸ್ಕೀಮ್ ಚಾಲ್ತಿಯಲ್ಲಿರುತ್ತದೆ.
ನೀವು ತಿಂಗಳಿಗೆ 21 ರೂನಷ್ಟು ಅಲ್ಪ ಮೊತ್ತದ ಹೂಡಿಕೆ ಮಾಡಬಹುದು. ಈ ಕನಿಷ್ಠ ಮೊತ್ತದ ಹೂಡಿಕೆಯನ್ನು ತೊಡಗಿಸಿದರೆ, ಅಂತಿಮವಾಗಿ 1,12,242 ರೂ ಸಿಗುತ್ತದೆ.
ನೀವು ದಿನಕ್ಕೆ 100 ರೂ ಹಣವನ್ನು ಇದಕ್ಕಾಗಿ ಎತ್ತಿ ಇಟ್ಟುಕೊಳ್ಳಲು ನಿರ್ಧರಿಸಿರುತ್ತೀರಿ. ಆಗ ತಿಂಗಳಿಗೆ 3,000 ರೂ ಮತ್ತು ವರ್ಷಕ್ಕೆ 36,000 ರೂ ಹೂಡಿಕೆ ಸಾಧ್ಯವಾಗುತ್ತದೆ. 21 ವರ್ಷ ಬಳಿಕ ಮೆಚ್ಯೂರಿಟಿ ಆದಾ ನಿಮ್ಮ ಹೂಡಿಕೆ ಮೊತ್ತ 16 ಲಕ್ಷ ರೂಗೂ ಹೆಚ್ಚಿರುತ್ತದೆ.
ಇದನ್ನೂ ಓದಿ: ಪಿಪಿಎಫ್ ಸೇರಿದಂತೆ ಸರ್ಕಾರದ ಕೆಲ ಸಣ್ಣ ಉಳಿತಾಯ ಯೋಜನೆಗಳ ನಿಯಮದಲ್ಲಿ ಸಕಾರಾತ್ಮಕ ಬದಲಾವಣೆ
ನೀವು ತಿಂಗಳಿಗೆ 1,000 ರೂ, ಅಥವಾ ವರ್ಷಕ್ಕೆ 12,000 ರೂ ಹೂಡಿಕೆ ಮಾಡಿದರೆ 5.38 ಲಕ್ಷ ರೂ ರಿಟರ್ನ್ ಸಿಗುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತಿಂಗಳಿಗೆ 5,000 ರೂನಂತೆ, ಅಥವಾ ವರ್ಷಕ್ಕೆ 60,000 ರೂ ಹೂಡಿಕೆ ಮಾಡಿದರೆ 27 ಲಕ್ಷ ರೂ ರಿಟರ್ನ್ ಸಿಗುತ್ತದೆ.
ಈ ಎಸ್ಎಸ್ವೈ ಸ್ಕೀಮ್ನಲ್ಲಿ ತಿಂಗಳಿಗೆ 10,000 ರೂ ಹಣ ಹೂಡಿಕೆ ಮಾಡಿದರೆ, ವರ್ಷಕ್ಕೆ 1,20,000 ರೂ ಹೂಡಿಕ ಆಗುತ್ತದೆ. 21 ವರ್ಷ ಹೂಡಿಕೆ ಬಳಿಕ 54 ಲಕ್ಷ ರೂ ಮೊತ್ತ ಕಲೆಹಾಕಿರುತ್ತದೆ.
ನೀವು ಒಂದು ವೇಳೆ ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ವರ್ಷದ ಗರಿಷ್ಠ ಹೂಡಿಕೆ ಮಿತಿಯಾದ 1.5 ಲಕ್ಷ ರೂ ಹಣವನ್ನು ಪ್ರತೀ ವರ್ಷ ಕಟ್ಟುತ್ತಾ ಹೋದರೆ, ಅಂದರೆ ತಿಂಗಳಿಗೆ 12,500 ರೂ ಹಣವನ್ನು ಇದಕ್ಕಾಗಿ ತೆಗೆದಿರಿಸುತ್ತಾ ಹೋದರೆ ಮೆಚ್ಯೂರಿಟಿ ಬಳಿಕ ಒಟ್ಟು ಮೊತ್ತ 67 ಲಕ್ಷ ರೂಗೂ ಹೆಚ್ಚಿರುತ್ತದೆ.
ಇದನ್ನೂ ಓದಿ: ಎಸ್ಸಿಎಸ್ಎಸ್ನಿಂದ ನ್ಯಾಷನಲ್ ಸೇವಿಂಗ್ಸ್ವರೆಗೂ; ಪೋಸ್ಟ್ ಆಫೀಸ್ನಲ್ಲಿ ಅತ್ಯುತ್ತಮ ಉಳಿತಾಯ ಯೋಜನೆಗಳಿವು
ಈ ಸ್ಕೀಮ್ನಲ್ಲಿ ನೀವು ಗರಿಷ್ಠ ಹೂಡಿಕೆ ಮಾಡಿದರೆ 21 ವರ್ಷದಲ್ಲಿ 67 ಲಕ್ಷ ರೂ ಹಣವನ್ನು ರಿಟರ್ನ್ ಆಗಿ ಪಡೆಯಲು ಸಾಧ್ಯವಾಗುತ್ತದೆ. ಸುರಕ್ಷಿತ ಹೂಡಿಕೆಗೆ ಉತ್ತಮ ಸ್ಕೀಮ್ಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯೂ ಒಂದು ಎಂಬುದು ಚರ್ಚಾರ್ಹ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ