AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹತ್ತು ಕೋಟಿ ರೂ ಹಣ ಸೇರಿಸಲು ಎಷ್ಟು ಸಮಯ ಮತ್ತು ಹೂಡಿಕೆ ಬೇಕು? ಇಲ್ಲಿದೆ ಡೀಟೇಲ್ಸ್

Steps and calculation to build Rs 10 crore corpus: ನೀವು ನಿವೃತ್ತರಾಗುವಷ್ಟರಲ್ಲಿ 10 ಕೋಟಿ ರೂ ಕಾರ್ಪಸ್ ನಿರ್ಮಿಸಿಕೊಳ್ಳಬೇಕಾ? ಆ ಬೃಹತ್ ಮೊತ್ತದ ಗುರಿಯನ್ನು ಮುಟ್ಟಲು ಎಷ್ಟು ಹೂಡಿಕೆ ಮತ್ತು ಎಷ್ಟು ಸಮಯ ಬೇಕಾಗಬಹುದು? ವಾರ್ಷಿಕ ಶೇ 12 ಸಿಎಜಿಆರ್​ನಲ್ಲಿ ಬೆಳೆಯಬಲ್ಲ ಮ್ಯೂಚುವಲ್ ಫಂಡ್​ಗಳಲ್ಲಿ ಎಷ್ಟು ಎಸ್​ಐಪಿ ಮಾಡಬಹುದು? ಇವೇ ಮುಂತಾದ ಲೆಕ್ಕಾಚಾರ ಇಲ್ಲಿದೆ.

ಹತ್ತು ಕೋಟಿ ರೂ ಹಣ ಸೇರಿಸಲು ಎಷ್ಟು ಸಮಯ ಮತ್ತು ಹೂಡಿಕೆ ಬೇಕು? ಇಲ್ಲಿದೆ ಡೀಟೇಲ್ಸ್
ಹಣImage Credit source: Unsplash
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 20, 2026 | 6:41 PM

Share

ನಿವೃತ್ತಿ ಎಂದರೆ ದುಡಿಮೆ ನಿಲ್ಲಿಸುವ ಸಮಯ. ಮನುಷ್ಯನ ದೈಹಿಕ ಬಲ ಮತ್ತು ಮನೋಬಲ ಇರುವವರೆಗೂ ದುಡಿಯುತ್ತಿರಬಹುದು. ನಿವೃತ್ತಿಯಷ್ಟರಲ್ಲಿ (retirement) ಮನುಷ್ಯನ ಆರ್ಥಿಕ ಭದ್ರತೆ (financial stability) ಉತ್ತಮವಾಗಿರುವುದು ಅಗತ್ಯ. ದುಡಿಮೆ ಇಲ್ಲದೆಯೇ ಬದುಕುವ ಹಣಕಾಸು ಬಲ ಇರಬೇಕು. ಆದರೆ, ಎಷ್ಟು ಹಣ ಬೇಕು ಎನ್ನುವುದು ಎಲ್ಲರಲ್ಲೂ ಇರುವ ಗೊಂದಲ.

ಇವತ್ತಿನ ಬೆಲೆ ಮಟ್ಟಕ್ಕೆ ಈಗ ನಿವೃತ್ತರಾಗುವವರಿಗೆ ಕನಿಷ್ಠ ಒಂದು ಕೋಟಿಯಾದರೂ ಬೇಕು. ಈ ಒಂದು ಕೋಟಿ ರೂ ಮುಂದಿನ 30 ವರ್ಷದಲ್ಲಿ ಹೊಂದುವ ಮೌಲ್ಯ ಸುಮಾರು 8 ಕೋಟಿ ರೂ ಇರಬಹುದು. ಅಂದರೆ, 30 ವರ್ಷದ ನಂತರ ನಿವೃತ್ತರಾಗುವವರು 8 ಕೋಟಿ ರೂ ಹೊಂದಿದರೆ ಅದು ಇವತ್ತಿನ 1 ಕೋಟಿ ರೂಗೆ ಸಮ. ಬೆಲೆ ಏರಿಕೆ, ತಕ್ಕಮಟ್ಟಿಗಿನ ಜೀವನ ಮಟ್ಟ ಬೇಕೆಂದರೆ ನಿವೃತ್ತಿಯ ವೇಳೆ 10 ಕೋಟಿ ರೂ ಇರುವುದು ಅಗತ್ಯ. ಈ 10 ಕೋಟಿ ರೂ ಸಂಪಾದಿಸಲು ಎಷ್ಟು ವರ್ಷ ಬೇಕು, ಎಷ್ಟು ಹೂಡಿಕೆ ಬೇಕು ಎನ್ನುವ ಲೆಕ್ಕಾಚಾರ ಇಲ್ಲಿದೆ…

ಇದನ್ನೂ ಓದಿ: ಹೂಡಿಕೆದಾರರನ್ನು ಸೆಳೆಯುತ್ತಿವೆ ವ್ಯಾಲ್ಯೂ ಮ್ಯೂಚುವಲ್ ಫಂಡ್​ಗಳು; ಏನಿವುಗಳ ವಿಶೇಷತೆ?

10 ಕೋಟಿ ರೂ ಕಾರ್ಪಸ್ ನಿರ್ಮಿಸುವ ಲೆಕ್ಕಾಚಾರ

ಶೇ. 12ರಷ್ಟು ವಾರ್ಷಿಕ ರಿಟರ್ನ್ ಕೊಡಬಹುದೆಂದು ನಿರೀಕ್ಷಿಸಬಹುದಾದ ಮ್ಯೂಚುವಲ್ ಫಂಡ್​ಗಳಲ್ಲಿ ಎಸ್​ಐಪಿ ಮಾಡುವುದು ಹೂಡಿಕೆಗೆ ಬೆಸ್ಟ್ ವಿಧಾನ. ನೀವು ತಿಂಗಳಿಗೆ 10,000 ರೂ ಎಸ್​ಐಪಿಯಲ್ಲಿ ಹಣ ತೊಡಗಿಸಿದರೆ ಅದು 10 ಕೋಟಿ ರೂ ಆಗಿ ಬೆಳೆಯಲು ಸುಮಾರು 39 ವರ್ಷ ಆಗುತ್ತದೆ.

ಅದೇ ನೀವು ತಿಂಗಳಿಗೆ 50,000 ರೂನಂತೆ ಹೂಡಿಕೆ ಮಾಡಿದರೆ ಅದು 10 ಕೋಟಿ ರೂ ಕಾರ್ಪಸ್ ಆಗಿ ಬೆಳೆಯಲು 25 ವರ್ಷ ಬೇಕಾಗುತ್ತದೆ. ಒಂದು ಲಕ್ಷ ರೂ ಎಸ್​ಐಪಿಯಿಂದ 20 ವರ್ಷದಲ್ಲಿ 10 ಕೋಟಿ ರೂ ನಿರ್ಮಿಸಬಹುದು. ನಿಮ್ಮ ದುಡಿಮೆಯ ಅವಧಿ ಎಷ್ಟಿದೆ ನೋಡಿಕೊಂಡು ಅದರ ಪ್ರಕಾರ ಹೂಡಿಕೆ ಮಾಡುತ್ತಾ ಹೋಗಬಹುದು.

ಇದನ್ನೂ ಓದಿ: ನಾಮಿನಿ ಹೆಸರಿಸದೆಯೇ ಹೂಡಿಕೆದಾರ ಮೃತಪಟ್ಟರೆ ಮ್ಯೂಚುವಲ್ ಫಂಡ್ ಹೂಡಿಕೆಗೆ ಏನಾಗುತ್ತದೆ?

ನೀವು ಇನ್ನೂ 20 ವರ್ಷ ಮಾತ್ರ ದುಡಿಯುತ್ತೀರಿ ಎಂದರೆ ತಿಂಗಳಿಗೆ ಒಂದು ಲಕ್ಷ ರೂ ಅನ್ನು ಎಸ್​ಐಪಿಯಲ್ಲಿ ಹಾಕುತ್ತಾ ಹೋಗಬಹುದು. ಆಗ 10 ಕೋಟಿ ರೂ ಮೊತ್ತ ನಿಮ್ಮದಾಗಲು ಸಾಧ್ಯ. ಹೂಡಿಕೆ ಅವಧಿ ಹೆಚ್ಚಿಸಿದಷ್ಟೂ ಹಣದ ಮ್ಯಾಜಿಕ್ ಕೆಲಸ ಮಾಡುತ್ತಾ ಹೋಗುತ್ತದೆ. ಉದಾಹರಣೆಗೆ, ನೀವು ತಿಂಗಳಿಗೆ ಒಂದು ಲಕ್ಷ ರೂ ಎಸ್​ಐಪಿ ಮಾಡಿದರೆ 20 ವರ್ಷದಲ್ಲಿ 10 ಕೋಟಿ ರೂ ಆಗುತ್ತದೆ. ಇನ್ನೂ 5 ವರ್ಷ ಹೂಡಿಕೆ ಮುಂದುವರಿಸಿದರೆ ಅದು 17 ಕೋಟಿ ರೂ ಆಗುತ್ತದೆ. ಮತ್ತೂ ಐದು ವರ್ಷ ಹೂಡಿಕೆ ಮುಂದುವರಿಸಿದರೆ 30 ಕೋಟಿ ರೂ ಕಾರ್ಪಸ್ ನಿರ್ಮಾಣ ಆಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ರಾತ್ರಿ ವೇಳೆಯೂ ಉಷ್ಣ ಅಲೆ, ಹೆಚ್ಚಲಿದೆ ತಾಪಮಾನ: ಹವಾಮಾನ ತಜ್ಞ ಮುನ್ಸೂಚನೆ
ರಾತ್ರಿ ವೇಳೆಯೂ ಉಷ್ಣ ಅಲೆ, ಹೆಚ್ಚಲಿದೆ ತಾಪಮಾನ: ಹವಾಮಾನ ತಜ್ಞ ಮುನ್ಸೂಚನೆ
ಕುಡಿದ ಮತ್ತಿನಲ್ಲಿ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ
ಕುಡಿದ ಮತ್ತಿನಲ್ಲಿ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ
ಬಳ್ಳಾರಿಯಲ್ಲಿ ಭಾರಿ ಬಿಸಿಲು, ತಾಪಮಾನ ತಾಳಲಾರದೆ ಮಡಿಕೆಗಳ ಮೊರೆ ಹೋದ ಜನ!
ಬಳ್ಳಾರಿಯಲ್ಲಿ ಭಾರಿ ಬಿಸಿಲು, ತಾಪಮಾನ ತಾಳಲಾರದೆ ಮಡಿಕೆಗಳ ಮೊರೆ ಹೋದ ಜನ!
ಕೇಂದ್ರ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಮೊಮ್ಮಗನಿಗೂ ಬಿಟ್​ಕಾಯಿನ್ ನಂಟು!
ಕೇಂದ್ರ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಮೊಮ್ಮಗನಿಗೂ ಬಿಟ್​ಕಾಯಿನ್ ನಂಟು!
ನಾನು ಸರ್ಕಾರ ಅಲ್ಲ, ಸಂಪುಟ ಸ್ಥಾನ ಮಾನ ನೀಡಿರೋದು ಗೌರವಕ್ಕೆ: ರಾಯರೆಡ್ಡಿ
ನಾನು ಸರ್ಕಾರ ಅಲ್ಲ, ಸಂಪುಟ ಸ್ಥಾನ ಮಾನ ನೀಡಿರೋದು ಗೌರವಕ್ಕೆ: ರಾಯರೆಡ್ಡಿ
ನಲಪಾಡ್ ಮನೆ ಮೇಲೆ ಇ.ಡಿ ದಾಳಿಗೆ ಕಾರಣವಾಯ್ತಾ 10 ಲಕ್ಷ ರೂ!
ನಲಪಾಡ್ ಮನೆ ಮೇಲೆ ಇ.ಡಿ ದಾಳಿಗೆ ಕಾರಣವಾಯ್ತಾ 10 ಲಕ್ಷ ರೂ!
ಕ್ರಿಕೆಟ್ ಬಾಲ್​ ಒಳಗೆ ಗಾಂಜಾ, ಮೊಬೈಲ್ ಇಟ್ಟು ಕೈದಿಗಳಿಗೆ ಸಪ್ಲೈ!
ಕ್ರಿಕೆಟ್ ಬಾಲ್​ ಒಳಗೆ ಗಾಂಜಾ, ಮೊಬೈಲ್ ಇಟ್ಟು ಕೈದಿಗಳಿಗೆ ಸಪ್ಲೈ!
ಸಿಎಂ ನಾಯ್ಡು ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವಾಗ ಕುಸಿದ ಬಿದ್ದ ಕಮಾಂಡೋ
ಸಿಎಂ ನಾಯ್ಡು ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವಾಗ ಕುಸಿದ ಬಿದ್ದ ಕಮಾಂಡೋ
ಕನ್ನಡಿಗ ಪೊಲೀಸ್​​ ಅಧಿಕಾರಿಗಳ ಮೇಲೆ ದೌರ್ಜನ್ಯ!, ಆರೋಪ ಯಾರ ಮೇಲೆ?
ಕನ್ನಡಿಗ ಪೊಲೀಸ್​​ ಅಧಿಕಾರಿಗಳ ಮೇಲೆ ದೌರ್ಜನ್ಯ!, ಆರೋಪ ಯಾರ ಮೇಲೆ?
ರಣಬಿಸಿಲಿನಿಂದ ರಕ್ಷಣೆಗೆ ಶ್ವಾನದಳಕ್ಕೆ ವಿಶೇಷ 'ಕೂಲ್' ಟ್ರೀಟ್ಮೆಂಟ್!
ರಣಬಿಸಿಲಿನಿಂದ ರಕ್ಷಣೆಗೆ ಶ್ವಾನದಳಕ್ಕೆ ವಿಶೇಷ 'ಕೂಲ್' ಟ್ರೀಟ್ಮೆಂಟ್!