Petrol Diesel Price on August 12: ದೇಶದ ಎಲ್ಲೆಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಅಗ್ಗ, ಎಲ್ಲೆಲ್ಲಿ ದುಬಾರಿ ತಿಳಿಯಿರಿ

|

Updated on: Aug 12, 2024 | 7:03 AM

ಪ್ರತಿದಿನದಂತೆ ಸೋಮವಾರ(ಆಗಸ್ಟ್​ 12) ಕೂಡ ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್, ಡೀಸೆಲ್ ದರಗಳನ್ನು ಬಿಡುಗಡೆ ಮಾಡಿವೆ. ಕಳೆದ ಎರಡು ವರ್ಷಗಳಿಂದ ಇಂಧನ ದರ ಸ್ಥಿರವಾಗಿದೆ. ಕರ್ನಾಟಕ ಹಾಗೋ ಗೋವಾದಲ್ಲಿ ಮಾತ್ರ ಹೆಚ್ಚಳ ಮಾಡಲಾಗಿತ್ತು. ಮಾರ್ಚ್​​ ತಿಂಗಳಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಬೆಲೆಯನ್ನು 2 ರೂ.ಗಳಷ್ಟು ಇಳಿಕೆ ಮಾಡಿತ್ತು.

Petrol Diesel Price on August 12: ದೇಶದ ಎಲ್ಲೆಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಅಗ್ಗ, ಎಲ್ಲೆಲ್ಲಿ ದುಬಾರಿ ತಿಳಿಯಿರಿ
ಪೆಟ್ರೋಲ್
Image Credit source: HT
Follow us on

ಪ್ರತಿದಿನವೂ ಪೆಟ್ರೋಲ್, ಡೀಸೆಲ್ ಬೆಲೆಗಳು ನವೀಕರಣಗೊಳ್ಳುತ್ತವೆ, ಆಗಸ್ಟ್​ 12ರಂದು ಕಚ್ಚಾತೈಲ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಗುರುಗ್ರಾಮಕ್ಕಿಂತ ನೋಯ್ಡಾದಲ್ಲಿ ಇಂಧನ ಬೆಲೆ ಸ್ವಲ್ಪ ಅಗ್ಗವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್​ಗೆ 79.66 ಡಾಲರ್ ಆಗಿದ್ದರೆ, ಡಬ್ಲ್ಯೂಟಿಐ ಕಚ್ಚಾತೈಲ ಪ್ರತಿ ಬ್ಯಾರೆಲ್​ಗೆ 76.84 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ. ಬಹುತೇಕ ಕಡೆ ಬೆಲೆಗಳು ಸ್ಥಿರವಾಗಿವೆ.

ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 94.72 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 87.62 ರೂ.
ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 103.44 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 89.97 ರೂ.
ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 104.95 ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 91.76 ರೂ.
ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100.75 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 92.34 ರೂ.

ನೋಯ್ಡಾ: ಪ್ರತಿ ಲೀಟರ್ ಪೆಟ್ರೋಲ್ ರೂ 94.83 ಮತ್ತು ಡೀಸೆಲ್ ಲೀಟರ್‌ಗೆ ರೂ 87.96
ಗುರುಗ್ರಾಮ: ಪೆಟ್ರೋಲ್ ಲೀಟರ್‌ಗೆ 95.19 ಮತ್ತು ಡೀಸೆಲ್ ಲೀಟರ್‌ಗೆ 88.05 ರೂ.
ಬೆಂಗಳೂರು: ಪೆಟ್ರೋಲ್ ಲೀಟರ್‌ಗೆ 102.86 ಮತ್ತು ಡೀಸೆಲ್ ಲೀಟರ್‌ಗೆ 88.94 ರೂ.
ಚಂಡೀಗಢ: ಪ್ರತಿ ಲೀಟರ್ ಪೆಟ್ರೋಲ್ 94.24 ರೂ. ಮತ್ತು ಡೀಸೆಲ್ ಲೀಟರ್ ಗೆ 82.40 ರೂ
ಹೈದರಾಬಾದ್: ಪೆಟ್ರೋಲ್ ಲೀಟರ್‌ಗೆ 107.41 ರೂ. ಮತ್ತು ಡೀಸೆಲ್ ಲೀಟರ್‌ಗೆ 95.65 ರೂ.
ಜೈಪುರ: ಪೆಟ್ರೋಲ್ ಲೀಟರ್‌ಗೆ 104.88 ಮತ್ತು ಡೀಸೆಲ್ ಲೀಟರ್‌ಗೆ 90.36 ರೂ.
ಪಾಟ್ನಾ: ಪೆಟ್ರೋಲ್ ಲೀಟರ್‌ಗೆ 105.18 ಮತ್ತು ಡೀಸೆಲ್ ಲೀಟರ್‌ಗೆ 92.04 ರೂ.

ಮತ್ತಷ್ಟು ಓದಿ: Petrol Diesel Price on August 10: ದೇಶದ ಬಹುತೇಕ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ

ಪೆಟ್ರೋಲ್ ಮತ್ತು ಡೀಸೆಲ್ ಇತ್ತೀಚಿನ ದರಗಳನ್ನು ಪರಿಶೀಲಿಸುವುದು ಹೇಗೆ?
ನಿಮ್ಮ ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ಇತ್ತೀಚಿನ ದರಗಳನ್ನು ನೀವು SMS ಮೂಲಕ ತಿಳಿದುಕೊಳ್ಳಬಹುದು. ನೀವು ಫೋನ್‌ನಲ್ಲಿ RSP ಸ್ಪೇಸ್ ಪೆಟ್ರೋಲ್ ಪಂಪ್‌ನ ಡೀಲರ್ ಕೋಡ್ ಅನ್ನು ಟೈಪ್ ಮಾಡಬಹುದು ಮತ್ತು ಸಂದೇಶವನ್ನು 92249 92249 ಗೆ ಕಳುಹಿಸಬಹುದು.

ಉದಾಹರಣೆಗೆ, ನವದೆಹಲಿಗಾಗಿ, RSP 102072 ಅನ್ನು ನಮೂದಿಸಿ ಮತ್ತು ನಮೂದಿಸಿದ ಸಂಖ್ಯೆಗೆ ಸಂದೇಶವನ್ನು ಕಳುಹಿಸಿ. ಇಂಡಿಯನ್ ಆಯಿಲ್‌ನ ವೆಬ್‌ಸೈಟ್‌ನಿಂದ ನಿಮ್ಮ ನಗರದ ಪೆಟ್ರೋಲ್ ಪಂಪ್‌ನ ಡೀಲರ್ ಕೋಡ್ ಅನ್ನು ನೀವು ಪರಿಶೀಲಿಸಬಹುದು.

ಪೆಟ್ರೋಲ್, ಡೀಸೆಲ್ ನಿಖರ ಬೆಲೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಯಗಳನ್ನು ಆಧರಿಸಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯನ್ನು ಪರಿಶೀಲಿಸಿದ ನಂತರ ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ನಿರ್ಧರಿಸುತ್ತವೆ.

 

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ