Petrol Diesel Price Today | ದೆಹಲಿ: ಕೇಂದ್ರ ಸರ್ಕಾರವು ನಿನ್ನೆ ಬುಧವಾರ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಕೆಲವೇ ಗಂಟೆಗಳ ನಂತರ ದೀಪಾವಳಿಯ ಹಬ್ಬದ ಹಿಂದಿನ ದಿನದಂದು ಗ್ರಾಹಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಅಬಕಾರಿ ಸುಂಕದ ಕಡಿತದಿಂದ ಪೆಟ್ರೋಲ್ (Petrol Price), ಡೀಸೆಲ್ ದರದಲ್ಲಿ ಇಳಿಕೆಯಾಗಿದೆ. ಹಾಗಿರಿವಾಗ ಇಂದು ಗುರುವಾರ (ನವೆಂಬರ್ 4) ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ (Diesel price) ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.
ಕೇಂದ್ರ ಸರ್ಕಾರ ದೇಶದ ಜನರಿಗೆ ದೀಪಾವಳಿ ಉಡುಗೊರೆ ನೀಡುತ್ತಿದ್ದ ಬೆನ್ನಲ್ಲೇ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ತೆರಿಗೆಯನ್ನು 7 ರೂಪಾಯಿಗಳಷ್ಟು ಇಳಿಕೆ ಮಾಡಲು ನಿರ್ಧರಿಸಿತು. ಇದು ವಾಹನ ಸವಾರರಿಗೆ ಖುಷಿ ನೀಡುವ ವಿಚಾರ. ನಿರಂತರವಾಗಿ ಏರುತ್ತಲೇ ಇದ್ದ ಪೆಟ್ರೋಲ್, ಡೀಸೆಲ್ ದರದಿಂದ ವಾಹನ ಸವಾರರು ಬೇಸರ ಹೊರಹಾಕಿದ್ದರು. ದೀಪಾವಳಿ ಹಬ್ಬದಂದು ಇಂಧನ ದರ ಇಳಿಕೆ ಆಗಿರುವುದು ಸರ್ಕಾರದಿಂದ ಭರ್ಜರಿ ಗಿಫ್ಟ್ ಸಿಕ್ಕಂತಾಗಿದೆ.
ಕೇಂದ್ರ ಸರ್ಕಾರ ಪೆಟ್ರೋಲ್ ದರದಲ್ಲಿ 5 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರದಲ್ಲಿ 10 ರೂಪಾಯಿ ಇಳಿಕೆ ಮಾಡಿದೆ. ಕರ್ನಾಟಕ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 7 ರೂಪಾಯಿಯಷ್ಟು ಕಡಿಮೆ ಮಾಡಲು ನಿರ್ಧಾರ ಕೈಗೊಂಡಿದೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಟ್ವೀಟ್ ಕೂಡಾ ಮಾಡಿದ್ದಾರೆ.
ಶ್ರೀ @narendramodi ಅವರ ನೇತೃತ್ವದ ಕೇಂದ್ರ ಸರಕಾರ ಡೀಸಲ್ ಮೇಲೆ 10 ರೂ ಹಾಗೂ ಪೆಟ್ರೋಲ್ 05 ರೂ ಕಡಿಮೆ ಗೊಳಿಸಿದ್ದು ಸ್ವಾಗತಾರ್ಹ ಜನರಿಗೆ ದೀಪಾವಳಿಯ ಉಡಗೊರೆ ಕೊಟ್ಟಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು,
1/3— Basavaraj S Bommai (@BSBommai) November 3, 2021
ಶ್ರೀ @narendramodi ಅವರ ನೇತೃತ್ವದ ಕೇಂದ್ರ ಸರಕಾರ ಡೀಸಲ್ ಮೇಲೆ 10 ರೂ ಹಾಗೂ ಪೆಟ್ರೋಲ್ 05 ರೂ ಕಡಿಮೆ ಗೊಳಿಸಿದ್ದು ಸ್ವಾಗತಾರ್ಹ ಜನರಿಗೆ ದೀಪಾವಳಿಯ ಉಡಗೊರೆ ಕೊಟ್ಟಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು,
1/3— Basavaraj S Bommai (@BSBommai) November 3, 2021
ರಾಷ್ಟ್ರ ರಾಜಧಾನಿಯಲ್ಲಿ ನಿನ್ನೆ ಬುಧವಾರ ಲೀಟರ್ ಪೆಟ್ರೋಲ್ ದರ 110 ರೂಪಾಯಿ ಆಗಿದ್ದರೆ ಲೀಟರ್ ಡೀಸೆಲ್ ದರ 105 ರೂಪಾಯಿ ಇತ್ತು. ಅಬಕಾರಿ ಸುಂಕ ಕಡಿತದಿಂದ ಲೀಟರ್ ಪೆಟ್ರೋಲ್ ದರ 105 ರೂಪಾಯಿಗೆ ಹಾಗೂ ಲೀಟರ್ ಡೀಸೆಲ್ ದರ 88.04 ರೂಪಾಯಿಗೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 113.93 ರೂಪಾಯಿ ಇದೆ. ಇಳಿಕೆಯಿಂದ ಲೀಟರ್ ಪೆಟ್ರೋಲ್ ಬೆಲೆ ಸುಮಾರು 95.50 ರೂಪಾಯಿಗೆ ಇಳಿಕೆ ಆಗಲಿದೆ. ಅದೇ ರೀತಿ ಲೀಟರ್ ಡೀಸೆಲ್ ದರ 104.50 ರೂಪಾಯಿ ಇದೆ. ಲೀಟರ್ ಡೀಸೆಲ್ ದರ 81.50 ರೂಪಾಯಿಗೆ ಇಳಿಕೆ ಆಗಲಿದೆ.
ಇನ್ನು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯಲ್ಲಿ ನಿನ್ನೆ ಲೀಟರ್ ಪೆಟ್ರೋಲ್ ದರ 114.83 ರೂಪಾಯಿ ಹಾಗೂ ಲೀಟರ್ ಡಿಸೇಲ್ ದರ 105.35 ರೂಪಾಯಿ ಇತ್ತು. ಇಂದು ಲೀಟರ್ ಪೆಟ್ರೋಲ್ ದರ 108.54 ರೂಪಾಯಿ ಹಾಗೂ ಡಿಸೇಲ್ ದರ 92.88 ರೂಪಾಯಿಗೆ ಇಳಿಕೆ ಆಗಲಿದೆ. ಅದೇ ರೀತಿ ಹಾಸನದಲ್ಲಿ ಲೀಟರ್ ಪೆಟ್ರೋಲ್ ದರ 107.44 ರೂ. ಹಾಗೂ ಲೀಟರ್ ಡೀಸೆಲ್ ದರ 91.71 ರೂಪಾಯಿಗೆ ಇಳಿಕೆ ಆಗಿದೆ.
ಅದೇ ರೀತಿ, ಬೆಳಗಾವಿಯಲ್ಲಿ ಲೀಟರ್ ಪೆಟ್ರೋಲ್ ದರ ನಿನ್ನೆ 113.67 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ ನಿನ್ನೆ 104.30 ರೂಪಾಯಿ ಇತ್ತು. ಇಂದು ಲೀಟರ್ ಪೆಟ್ರೋಲ್ ದರ 107.38 ರೂ. ಹಾಗೂ ಲೀಟರ್ ಡೀಸೆಲ್ ದರ 91.82 ರೂಪಾಯಿಗೆ ಇಳಿಕೆ ಆಗಿದೆ.
ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.
ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.
ಇದನ್ನೂ ಓದಿ:
ವಿವಿಧ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ:
https://tv9kannada.com/business/petrol-price-today.html
ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ:
https://tv9kannada.com/business/diesel-price-today.htm
Published On - 7:31 am, Thu, 4 November 21