Fuel Price: ದೀಪಾವಳಿ ಗಿಫ್ಟ್ ಕೊಟ್ಟ ಸರ್ಕಾರ; ಪೆಟ್ರೋಲ್, ಡೀಸೆಲ್ ಬೆಲೆ ಮಧ್ಯರಾತ್ರಿಯಿಂದಲೇ ಇಳಿಕೆ!
Petrol, Diesel Rate: ಡೀಸೆಲ್ ಮೇಲೆ ಅಬಕಾರಿ ಸುಂಕ 10 ರೂ. ಕಡಿತ ಮಾಡಲಾಗಿದೆ. ಪೆಟ್ರೋಲ್ ಮೇಲೆ ಅಬಕಾರಿ ಸುಂಕ 5 ರೂ. ಕಡಿತಗೊಳಿಸಲಾಗಿದೆ. ಇಂದು ಮಧ್ಯ ರಾತ್ರಿಯಿಂದಲೇ ನೂತನ ದರ ಅನ್ವಯ ಆಗಲಿದೆ.
ದೆಹಲಿ: ದೇಶದ ಜನತೆಗೆ ಸರ್ಕಾರ ದೀಪಾವಳಿ ಉಡುಗೊರೆ ಕೊಟ್ಟಿದೆ. ಪೆಟ್ರೋಲ್, ಡೀಸೆಲ್ ಬೆಲೆ ಮಧ್ಯರಾತ್ರಿಯಿಂದಲೇ ಇಳಿಕೆ ಆಗಲಿದೆ. ಡೀಸೆಲ್ ಮೇಲೆ ಅಬಕಾರಿ ಸುಂಕ 10 ರೂಪಾಯಿ ಕಡಿತ ಮಾಡಲಾಗಿದೆ. ಪೆಟ್ರೋಲ್ ಮೇಲೆ ಅಬಕಾರಿ ಸುಂಕ 5 ರೂಪಾಯಿ ಕಡಿತಗೊಳಿಸಲಾಗಿದೆ. ಇಂದು (ನವೆಂಬರ್ 3) ಮಧ್ಯರಾತ್ರಿಯಿಂದಲೇ ನೂತನ ದರ ಅನ್ವಯ ಆಗಲಿದೆ. ಅಬಕಾರಿ ಸುಂಕ ಕಡಿತದಿಂದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಆಗಿದೆ.
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಜನಸಾಮಾನ್ಯರ ಮೇಲೆ ಭಾರಿ ಹೊರೆಯಾಗಿತ್ತು. ದಿನಬಳಕೆಯ ವಸ್ತುಗಳ ದರವೂ ಹೆಚ್ಚಳವಾಗಿತ್ತು. ಇದೀಗ ದೀಪಾವಳಿಯ ಸಂದರ್ಭದಲ್ಲಿ ಇಂಧನ ದರ ಇಳಿಕೆ ಮಾಡಲಾಗಿದೆ. ನಾಳೆ (ನವೆಂಬರ್ 4) ರಿಂದಲೇ ಹೊಸ ದರ ಅನ್ವಯವಾಗಲಿದೆ. ಪೆಟ್ರೋಲ್ ಮೇಲೆ 5 ರೂಪಾಯಿ ಹಾಗೂ ಡೀಸೆಲ್ ಮೇಲೆ 10 ರೂಪಾಯಿ ಅಬಕಾರಿ ಸುಂಕ ಕಡಿತಗೊಳಿಸಲಾಗಿದೆ. ಅದರಂತೆ ಇಂಧನ ದರ ಕೂಡ ಕಡಿಮೆ ಆಗಲಿದೆ ಎಂದು ಮಾಹಿತಿ ಲಭ್ಯವಾಗಿದೆ.
ಪೆಟ್ರೋಲ್, ಡೀಸೆಲ್ ಮೇಲೆ ಅಬಕಾರಿ ಸುಂಕ ಕಡಿತ ಹಿನ್ನೆಲೆ ಪೆಟ್ರೋಲ್, ಡೀಸೆಲ್ ಮೇಲೆ ವ್ಯಾಟ್ (VAT) ಕಡಿತಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಒತ್ತಾಯಿಸಿದ್ದಾರೆ. ಎಲ್ಲಾ ರಾಜ್ಯಗಳಿಗೆ ಇಂಧನದ ಮೇಲಿನ ವ್ಯಾಟ್ ಕಡಿತಗೊಳಿಸುವಂತೆ ಒತ್ತಾಯಿಸಿದ್ದಾರೆ.
ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಕಳೆದ ವರ್ಷ 19.98 ರೂಪಾಯಿಗಳಿಂದ 32.9 ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಇದೀಗ ಅಬಕಾರಿ ಸುಂಕವನ್ನು ಮತ್ತೆ ಇಳಿಕೆ ಮಾಡಲಾಗಿದೆ. ಬಳಿಕ ಸತತವಾಗಿ ಇಂಧನ ದರ ಏರಿಕೆ, ಅಡುಗೆ ಅನಿಲ ದರ ಏರಿಕೆಯಿಂದ ಜನಜೀವನ ಸಂಕಷ್ಟಕ್ಕೀಡಾಗಿತ್ತು. ಇತ್ತೀಚೆಗಷ್ಟೇ ಎಲ್ಪಿಜಿ ಸಿಲಿಂಡರ್ ದರದಲ್ಲಿ 266 ರೂಪಾಯಿ ಏರಿಕೆ ಮಾಡಲಾಗಿತ್ತು. ಇದೀಗ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಜನರಿಗೆ ಕೊಂಚ ಸಮಾಧಾನ ತಂದಿದೆ.
ಇಂದು (ನವೆಂಬರ್ 3) ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ಇಲ್ಲಿದೆ ವಿವರ: Petrol Price Today: ಸತತ ಏಳು ದಿನಗಳಿಂದ ಏರಿಕೆ ಕಂಡಿದ್ದ ಪೆಟ್ರೋಲ್ ಡೀಸೆಲ್ ದರದಲ್ಲಿ ಇಂದು ಯಾವುದೇ ಏರಿಳಿತಗಳಿಲ್ಲ!
ಇದನ್ನೂ ಓದಿ: Shocking Video: ಪಟಾಕಿಗೆ ಬೆಂಕಿ ಹೊತ್ತಿಸಿ ಪೆಟ್ರೋಲ್ ಬಂಕ್ ಮೇಲೆ ಎಸೆದ ಯುವಕರು; ಆಮೇಲೇನಾಯ್ತು?
Published On - 8:11 pm, Wed, 3 November 21