AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Price on November 30: ಕೆಲವು ನಗರಗಳಲ್ಲಿ ಇಂದು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಬದಲಾವಣೆ; ಹೊಸ ದರ ಹೀಗಿದೆ

Fuel Price Today: ಇಂದು ಉತ್ತರ ಪ್ರದೇಶ, ಬಿಹಾರ ಮತ್ತು ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ದರದಲ್ಲಿ ಬದಲಾವಣೆಯಾಗಿದೆ.

Petrol Price on November 30: ಕೆಲವು ನಗರಗಳಲ್ಲಿ ಇಂದು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಬದಲಾವಣೆ; ಹೊಸ ದರ ಹೀಗಿದೆ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Nov 30, 2022 | 9:28 AM

Fuel Price on November 30: ಕಳೆದ 24 ಗಂಟೆಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಯಾವುದೇ ಗಮನಾರ್ಹ ಬದಲಾವಣೆಯಾಗಿಲ್ಲ. ಆದರೆ, ಸರ್ಕಾರಿ ತೈಲ ಕಂಪನಿಗಳು ಇಂದು ಬೆಳಿಗ್ಗೆ ಅನೇಕ ನಗರಗಳಲ್ಲಿ ಪೆಟ್ರೋಲ್ (Petrol Price) ಮತ್ತು ಡೀಸೆಲ್ (Diesel Price) ಚಿಲ್ಲರೆ ದರವನ್ನು ಬದಲಾಯಿಸಿವೆ. ಇಂದು ಉತ್ತರ ಪ್ರದೇಶ, ಬಿಹಾರ ಮತ್ತು ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ದರದಲ್ಲಿ ಬದಲಾವಣೆಯಾಗಿದೆ. ಆದರೆ, ದೆಹಲಿ-ಮುಂಬೈನಂತಹ ದೇಶದ 4 ಮಹಾನಗರಗಳಲ್ಲಿ ಸರ್ಕಾರಿ ತೈಲ ಕಂಪನಿಗಳು ಇಂಧನದ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಸರ್ಕಾರಿ ತೈಲ ಕಂಪನಿಗಳ ಪ್ರಕಾರ, ಇಂದು ಬೆಳಿಗ್ಗೆ ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ (ನೋಯ್ಡಾ-ಗ್ರೇಟರ್ ನೋಯ್ಡಾ) ಪೆಟ್ರೋಲ್ 6 ಪೈಸೆ ದುಬಾರಿಯಾಗಿ ಲೀಟರ್‌ಗೆ 96.59 ರೂ. ಮತ್ತು ಡೀಸೆಲ್ ಅನ್ನು ಲೀಟರ್‌ಗೆ 89.76 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಪೆಟ್ರೋಲ್ ಬೆಲೆ 10 ಪೈಸೆಯಷ್ಟು ಕಡಿಮೆಯಾಗಿದೆ. ಲಕ್ನೋದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 96.47 ರೂ. ತಲುಪಿದೆ. ಆದರೆ ಡೀಸೆಲ್ ಲೀಟರ್‌ಗೆ 10 ಪೈಸೆ ಇಳಿದು 89.66 ರೂ. ಆಗಿದೆ. ಗುರುಗ್ರಾಮದಲ್ಲೂ ಇಂದು ಪೆಟ್ರೋಲ್ 21 ಪೈಸೆಯಷ್ಟು ಅಗ್ಗವಾಗಿದ್ದು, ಲೀಟರ್‌ಗೆ 96.89 ರೂ.ಗೆ ಮಾರಾಟವಾಗುತ್ತಿದೆ. ಆದರೆ, ಡೀಸೆಲ್ ಬೆಲೆ 20 ಪೈಸೆಯಷ್ಟು ಅಗ್ಗವಾಗಿ 89.76 ರೂ.ಗೆ ತಲುಪಿದೆ. ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 42 ಪೈಸೆ ಇಳಿದು 107.38 ರೂ.ಗೆ ತಲುಪಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 40 ಪೈಸೆ ಇಳಿಕೆಯಾಗಿ 94.16 ರೂ.ಗೆ ತಲುಪಿದೆ.

ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಕೊನೆಯ ಬಾರಿಗೆ ದೇಶಾದ್ಯಂತ ಬದಲಾವಣೆಯಾಗಿದ್ದು, ಗ್ರಾಹಕರಿಗೆ ಸ್ವಲ್ಪ ಪರಿಹಾರವನ್ನು ನೀಡಲು ಕೇಂದ್ರವು ಇಂಧನದ ಮೇಲಿನ ತೆರಿಗೆಯನ್ನು ಕಡಿತಗೊಳಿಸಿತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇ 21ರಂದು ಪೆಟ್ರೋಲ್ ಮೇಲೆ ಲೀಟರ್​ಗೆ 8 ರೂ. ಮತ್ತು ಡೀಸೆಲ್ ಮೇಲೆ 6 ರೂ. ಅಬಕಾರಿ ಸುಂಕ ಕಡಿತ ಮಾಡುವುದಾಗಿ ಘೋಷಿಸಿದ್ದರು.

ಇದನ್ನೂ ಓದಿ: Petrol Price on November 25: ಈ ರಾಜ್ಯದಲ್ಲಿ ಇಂದು ಪೆಟ್ರೋಲ್ ಬೆಲೆ ಹೆಚ್ಚಳ; ಇಂದಿನ ಡೀಸೆಲ್ ದರ ಹೀಗಿದೆ

ಸುಮಾರು 6 ತಿಂಗಳಿನಿಂದ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಬದಲಾವಣೆ ಮಾಡದೇ ಇರುವುದು ಇದೇ ಮೊದಲು. ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್‌ನ ಹೊಸ ಬೆಲೆಗಳನ್ನು ಬಿಡುಗಡೆ ಮಾಡಲಾಗುತ್ತದೆ. ಆ ದಿನದ ಹೊಸ ದರಗಳು ಬೆಳಿಗ್ಗೆ 6 ಗಂಟೆಯಿಂದಲೇ ಅನ್ವಯವಾಗುತ್ತವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಅಬಕಾರಿ ಸುಂಕ, ಡೀಲರ್ ಕಮಿಷನ್, ವ್ಯಾಟ್ ಮತ್ತು ಇತರ ವಸ್ತುಗಳ ಸೇರ್ಪಡೆಯಿಂದಾಗಿ ಅದರ ಬೆಲೆ ಮೂಲ ಬೆಲೆಗಿಂತ ದ್ವಿಗುಣಗೊಳ್ಳುತ್ತದೆ. ಇದರಿಂದಾಗಿ ಪೆಟ್ರೋಲ್ ಡೀಸೆಲ್ ಬೆಲೆ ತುಂಬಾ ಹೆಚ್ಚಾಗಿತ್ತು.

ಭಾರತದ ಪ್ರಮುಖ ನಗರಗಳಲ್ಲಿ 6 ತಿಂಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರವಾಗಿದೆ. OPEC ರಾಷ್ಟ್ರಗಳು ಕಚ್ಚಾ ಉತ್ಪಾದನೆಯಲ್ಲಿ ಕಡಿತದ ಘೋಷಣೆ ಮಾಡಿದ ನಂತರ ಕಚ್ಚಾ ತೈಲದಲ್ಲಿ ಏರಿಳಿತಗಳಾಗಿತ್ತು. ನವೆಂಬರ್ 1ರಿಂದ ತೈಲ ಕಂಪನಿಗಳು ಪ್ರತಿ ಲೀಟರ್ ತೈಲಕ್ಕೆ 40 ಪೈಸೆ ಪರಿಹಾರವನ್ನು ನೀಡುವ ನಿರೀಕ್ಷೆಯಿತ್ತು. ಆದರೆ, ಕಂಪನಿಗಳು ಇದನ್ನು ಮಾಡಲಿಲ್ಲ. ದೇಶಿಯ ಮಾರುಕಟ್ಟೆಯಲ್ಲಿ ಸುಮಾರು 6 ತಿಂಗಳಿನಿಂದ ಪೆಟ್ರೋಲ್ -ಡೀಸೆಲ್ ಬೆಲೆ ಸ್ಥಿರವಾಗಿದೆ. ಇದು ಜನಸಾಮಾನ್ಯರಿಗೆ ನೆಮ್ಮದಿ ತಂದಿದೆ.

ದೆಹಲಿಯಲ್ಲಿ ಪೆಟ್ರೋಲ್ 96.65 ರೂ. ಮತ್ತು ಡೀಸೆಲ್ ಲೀಟರ್‌ಗೆ 89.82 ರೂ. ಆಗಿದೆ. ಮುಂಬೈನಲ್ಲಿ ಪೆಟ್ರೋಲ್ 106.31 ರೂ. ಮತ್ತು ಡೀಸೆಲ್ ಲೀಟರ್‌ಗೆ 94.27 ರೂ. ಚೆನ್ನೈನಲ್ಲಿ ಪೆಟ್ರೋಲ್ 102.63 ರೂ. ಮತ್ತು ಡೀಸೆಲ್ ಲೀಟರ್‌ಗೆ 94.24 ರೂ. ಕೊಲ್ಕತ್ತಾದಲ್ಲಿ ಪೆಟ್ರೋಲ್ 106.03 ರೂ. ಮತ್ತು ಡೀಸೆಲ್ ಲೀಟರ್‌ಗೆ 92.76 ರೂ. ನೊಯ್ಡಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.59 ರೂ. ಮತ್ತು ಡೀಸೆಲ್ 89.76 ರೂ. ಲಕ್ನೋದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.47 ರೂ. ಮತ್ತು ಡೀಸೆಲ್ 89.66 ರೂ. ಜೈಪುರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 108.48 ರೂ. ಮತ್ತು ಡೀಸೆಲ್ 93.72 ರೂ. ತಿರುವನಂತಪುರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 107.71 ರೂ. ಮತ್ತು ಡೀಸೆಲ್ 96.52 ರೂ. ಪಾಟ್ನಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 107.24 ರೂ. ಮತ್ತು ಡೀಸೆಲ್ 94.04 ರೂ. ಗುರುಗ್ರಾಮದಲ್ಲಿ 97.18 ರೂ. ಮತ್ತು ಡೀಸೆಲ್ ಲೀಟರ್‌ಗೆ 90.05 ರೂ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 101.94 ರೂ. ಮತ್ತು ಡೀಸೆಲ್ 87.89 ರೂ. ಭುವನೇಶ್ವರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 103.19 ರೂ. ಮತ್ತು ಡೀಸೆಲ್ 94.76 ರೂ. ಚಂಡೀಗಢದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.20 ರೂ. ಮತ್ತು ಡೀಸೆಲ್ 84.26 ರೂ. ಹೈದರಾಬಾದ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 109.66 ರೂ. ಮತ್ತು ಡೀಸೆಲ್ 97.82 ರೂ. ಆಗಿದೆ.

ಇದನ್ನೂ ಓದಿ: Petrol Price on November 21: ನೊಯ್ಡಾದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಅಗ್ಗ, ಲಕ್ನೋದಲ್ಲಿ ಕೊಂಚ ಏರಿಕೆ

ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (OMC ಗಳು) ಅಂತಾರಾಷ್ಟ್ರೀಯ ಮಾನದಂಡದ ಬೆಲೆಗಳು ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಇಂಧನ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. OMCಗಳಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL), ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಸೇರಿವೆ.

ಸರ್ಕಾರಿ ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಶೀಲಿಸಿದ ನಂತರ ದರವನ್ನು ನಿಗದಿಪಡಿಸುತ್ತವೆ. ನಿಮ್ಮ ನಗರದ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪ್ರತಿದಿನ SMS ಮೂಲಕ ಪರಿಶೀಲಿಸಬಹುದು. ನೀವು ಇಂಡಿಯನ್ ಆಯಿಲ್‌ನ ಗ್ರಾಹಕರಾಗಿದ್ದರೆ, ನೀವು RSP ಡೀಲರ್ ಕೋಡ್ ಅನ್ನು ಬರೆಯುವ ಮೂಲಕ 9224992249 ಸಂಖ್ಯೆಗೆ SMS ಕಳುಹಿಸಬಹುದು ಮತ್ತು ನೀವು HPCL ಗ್ರಾಹಕರಾಗಿದ್ದರೆ ನೀವು HPPRICE ಡೀಲರ್ ಕೋಡ್ ಅನ್ನು ಟೈಪ್ ಮಾಡುವ ಮೂಲಕ 9222201122 ಸಂಖ್ಯೆಗೆ SMS ಕಳುಹಿಸಬಹುದು. BPCL ಗ್ರಾಹಕರು ಡೀಲರ್ ಕೋಡ್ ಅನ್ನು ನಮೂದಿಸುವ ಮೂಲಕ 9223112222ಗೆ RSP ಕಳುಹಿಸಬಹುದು. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವ್ಯಾಟ್ ಮತ್ತು ಸರಕು ಸಾಗಣೆ ಶುಲ್ಕಗಳಂತಹ ಸ್ಥಳೀಯ ತೆರಿಗೆಗಳಲ್ಲಿನ ವ್ಯತ್ಯಾಸವು ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಎಕ್ಕ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅಶ್ವಿನಿ ಪುನೀತ್​ ರಾಜ್​​ಕುಮಾರ್
‘ಎಕ್ಕ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅಶ್ವಿನಿ ಪುನೀತ್​ ರಾಜ್​​ಕುಮಾರ್
ತಾಲೂಕು ಕಚೇರಿಯ ಗ್ರೇಡ್ 2 ತಹಸೀಲ್ದಾರ್​ಗೆ ನೀರಿಳಿಸಿದ ಸಚಿವ ಭೈರೇಗೌಡ
ತಾಲೂಕು ಕಚೇರಿಯ ಗ್ರೇಡ್ 2 ತಹಸೀಲ್ದಾರ್​ಗೆ ನೀರಿಳಿಸಿದ ಸಚಿವ ಭೈರೇಗೌಡ
ಯಾವ್ಯಾವುದಕ್ಕೆ ಎಷ್ಟೆಷ್ಟು ಲಂಚ ಅಂತ ಕಚೇರಿಯಲ್ಲಿ ದರಪಟ್ಟಿ ಲಗತ್ತಿಸಿ! ಸಚಿವ
ಯಾವ್ಯಾವುದಕ್ಕೆ ಎಷ್ಟೆಷ್ಟು ಲಂಚ ಅಂತ ಕಚೇರಿಯಲ್ಲಿ ದರಪಟ್ಟಿ ಲಗತ್ತಿಸಿ! ಸಚಿವ
ಕಚೇರಿಗೆ ದಿಢೀರ್ ಭೇಟಿ: ಅಧಿಕಾರಿಗಳು, ನೌಕರರಿಗೆ ಕೃಷ್ಣಭೈರೇಗೌಡ ಕ್ಲಾಸ್
ಕಚೇರಿಗೆ ದಿಢೀರ್ ಭೇಟಿ: ಅಧಿಕಾರಿಗಳು, ನೌಕರರಿಗೆ ಕೃಷ್ಣಭೈರೇಗೌಡ ಕ್ಲಾಸ್
ಕುಮಾರಸ್ವಾಮಿ ಮತ್ತು ಜೋಶಿಯವರನ್ನು ಚರ್ಚೆಗೆ ಕರೆಯುತ್ತಿದ್ದೇನೆ: ಪ್ರದೀಪ್
ಕುಮಾರಸ್ವಾಮಿ ಮತ್ತು ಜೋಶಿಯವರನ್ನು ಚರ್ಚೆಗೆ ಕರೆಯುತ್ತಿದ್ದೇನೆ: ಪ್ರದೀಪ್
ಈ ಬಾರಿ 11 ದಿನ ಮೈಸೂರು ದಸರಾ ಆಚರಣೆ: ವಿಶೇಷತೆ ಏನು ಗೊತ್ತಾ?
ಈ ಬಾರಿ 11 ದಿನ ಮೈಸೂರು ದಸರಾ ಆಚರಣೆ: ವಿಶೇಷತೆ ಏನು ಗೊತ್ತಾ?
ಡಿಎನ್​ಎ ಮೂಲಕ 211 ಜನರ ಗುರುತು ಪತ್ತೆ, 189 ಮೃತದೇಹಗಳ ಹಸ್ತಾಂತರ:ಡಾ. ರಾಕೇ
ಡಿಎನ್​ಎ ಮೂಲಕ 211 ಜನರ ಗುರುತು ಪತ್ತೆ, 189 ಮೃತದೇಹಗಳ ಹಸ್ತಾಂತರ:ಡಾ. ರಾಕೇ
ಅಕ್ಕಿ ಸಾಗಿಸುತ್ತಿದ್ದ ಸರಕು ಸಾಗಣೆ ವಾಹನದಲ್ಲಿ 41 ಮೂಟೆಗಳು ಪತ್ತೆ
ಅಕ್ಕಿ ಸಾಗಿಸುತ್ತಿದ್ದ ಸರಕು ಸಾಗಣೆ ವಾಹನದಲ್ಲಿ 41 ಮೂಟೆಗಳು ಪತ್ತೆ
ಒಂಟೆ ಮೇಲೆ ಮಲಗಿ ಎಕ್ಸ್​ಪ್ರೆಸ್​ವೇನಲ್ಲಿ ಸವಾರಿ ಹೊರಟ ಕುಡುಕ
ಒಂಟೆ ಮೇಲೆ ಮಲಗಿ ಎಕ್ಸ್​ಪ್ರೆಸ್​ವೇನಲ್ಲಿ ಸವಾರಿ ಹೊರಟ ಕುಡುಕ
ಯಶ್ ಲುಕ್​ನಲ್ಲಿ ಬಂದ ತುಕಾಲಿ ಸಂತೋಷ್; ನಗುವಿನ ಹೊಳೆ
ಯಶ್ ಲುಕ್​ನಲ್ಲಿ ಬಂದ ತುಕಾಲಿ ಸಂತೋಷ್; ನಗುವಿನ ಹೊಳೆ